ಜರ್ಮನಿಯ ಕಲಾವಿದನ ಕಣ್ಣಲ್ಲಿ ಬೆಂಗಳೂರ ಆಟೋ

ಜರ್ಮನಿಯ ಕಲಾವಿದನ ಕಣ್ಣಲ್ಲಿ ಬೆಂಗಳೂರ ಆಟೋ

ಜರ್ಮನ್ ಕಲಾವಿದ ಕ್ಸೇವರ್ ಕ್ಸೈಲಫನ್ ಬೆಂಗಳೂರ ಆಟೋ ನೋಡಿ ರೆಡಿ ಮಾಡಿರುವ ಪುಟ್ಟ ಅನಿಮೇಶನ್ ವಿಡಿಯೋ ನೋಡಿ.
ನಿಮಗೇನನ್ನಿಸಿತು? ತಿಳಿಸಿ.

Rating
No votes yet

Comments

Submitted by venkatb83 Thu, 01/23/2014 - 13:32

ವಿದೇಶಿಗರಿಗೆ ಇಲ್ಲಿಯ ಜನನಿಬಿಡ ಪ್ರದೇಶಗಳು -ಜನ ಜೀವನ -ಟ್ರಾಫಿಕ್ಕು ಸಾರಿಗೆ ಇತ್ಯಾದಿ ಕುತೂಹಲದ ವಸ್ತುಗಳು -ಈ ವಿಡ್ಯೋದಲ್ಲಿ ಕೆಲವೇ ನಿಮಿಷಗಳಲ್ಲಿ ಒಬ್ಬ ಆಟೋ ಡ್ರೈವರನ ದೈನಂದಿನ ಜೀವನದ ಹಲವು ಅಂಶಗಳು ಚೆನ್ನಾಗಿ ಮೂಡಿ ಬಂದಿವೆ ..
ದಾರಿ ಮಧ್ಯೆ ಆಟೋ ಕೆಟ್ಟು ನಿಲ್ಲುವ - ಆಟೋ ನಿಲ್ಲಿಸಿ ಅದರಲ್ಲೇ ಮಲಗುವ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತಿವೆ ..
ಹಂಚಿಕೊಂಡದ್ದಕ್ಕೆ ನನ್ನಿ
ಶುಭವಾಗಲಿ
\|/

Submitted by partha1059 Thu, 01/23/2014 - 17:58

ಅತಿ ಉತ್ತಮ‌ ಚಿತ್ರ . ನಮ್ಮಲ್ಲಿ ಪರಿಣಾಮಕಾರಿ ಅನಿಮೇಷನ್ ವಿಡಿಯೋಗಳು ಕಡಿಮೆ ಅನ್ನಿಸುತ್ತೆ ಅಲ್ಲವೇ? . ಜೀವನದ‌ ಹಲವು ಮುಖಗಳನ್ನು ಈ ಮೂಲಕ‌ ಸೆರೆಹಿಡಿಯಬಹುದು

Submitted by nageshamysore Thu, 01/23/2014 - 21:07

ನಾಡಿಗರೆ ನಮಸ್ಕಾರ. ಅನಿಮೇಶನ್ ತುಂಬಾ ಚೆನ್ನಾಗಿದೆ. ಅದರ ಎಳೆ ಹಿಡಿದು ಒಂದು ತೆಳು ಹಾಸ್ಯದ ಕವನ ಹೆಣೆದು ಹಾಕಿದ್ದೇನೆ :-)
.
ಬಾಡ್ಗೆ ಆಟೊ, ಜರ್ಮನ್ ಥಾಟು !
_________________________
.
ಆಟೋ ರಾಜನ ಜೀವನ ಚಿತ್ರ
ಜರ್ಮನ್ನನ ಕಣ್ಣಲ್ಲಿ ಕಂಡಂತೆ ಹತ್ರ
ಬೆಂಗ್ಳೂರಿನ ತುಡುಗು ಆಟೊ ಪಿಡುಗು
ಮೂರೇ ಚಕ್ರ ದಬಾಯಿಸ್ಕೊಂಡ್ ನುಗ್ಗು ||
.
ಬಸ್ಸು ಸ್ಕೂಟರು ಸೈಕಲ್ಲು ಕಾರು
ರಸ್ತೆ ಮಧ್ಯ ಹಸು ಮಲ್ಗೊ ತಕರಾರು
ಬೆಳ್ಬೆಳಿಗ್ಗೆನೆ ದಮ್ಮು, ಆಟೋಲೆನೆ ಟ್ರಿಮ್ಮು
ಸ್ಟಾರ್ಟಾಗಿ ಹೊರಟಾಂದ್ರೆ, ಸ್ಮಾರ್ಟಾಗಿ ಜುಮ್ಮು ||
.
ಲೇನಲ್ಲಿ ಸಂದೀಲಿ, ಸಿಕ್ದಂಗೆ ತೂರು
ಯಾಕಪ್ಪ ಚೌಕಾಶಿ, ಕಾಣ್ಸಲ್ವ ಮೀಟ್ರು
ಐಟೀನೊ, ಬಿಟಿನೊ, ಸಿಟಿ, ಚಿಕನ್ನು, ಚಿಲ್ರನ್ನು
ಟ್ರಾಫಿಕ್ನಲ್ಲೇನೆ ಆಡ್ಕೊಂತ, ಗಂಟೆಗಟ್ಲೆ ಸಿಕ್ಬಿದ್ರೂನು ||
.
ಸ್ಟ್ಯಾಂಡಲ್ಲು ಪೇಪರು, ರೆಸ್ಟಿಂಗು ರೇರು
ತಾತ ಅಜ್ಜಿ ಹುಡ್ಗ ಹುಡ್ಗಿ ರೆಸ್ಟೆಲ್ಲಿ ಪೀಕವರು
ರೈಡಿಂಗಲೆ ಹಾಡಕ್ಕೊಂಡು, ಫಾರಿನ್ಚಡ್ಡಿ ಗಿರಾಕಿ
ಸರಿಯಾದ್ ಟೈಮಲಿ ಕೈ ಕೊಡ್ತಲ್ಲ, ಕೆಟ್ನಿಲ್ತಲ್ಲ ಬಾಕಿ ||
.
ಆಚೆ ಗ್ಯಾರೇಜ್ಸುಂದ್ರಣ್ಣ, ಜಲ್ದಿ ಸ್ವಲ್ಪ ಬಾಪ್ಪ
ಪೇಟ್ರೋಲ್ಯಾಕೆ ಲೀಕಾಗೈತೆ ಮುಚ್ಬೇಕಲ್ಲ ಪೈಪ
ಸ್ಪ್ಯಾನರು ನಟ್ಟು ಬೋಲ್ಟು ಕುಸ್ತಿ ನೆಟ್ಗಾಯ್ತಲ್ಲ ಸದ್ಯ
ಓಡ್ತಿರಲಣ್ಣ ನೋಡ್ಕೋಳೋಣ ಬಾಡ್ಗೆ ಹೊಡೀತಾ ದರಿದ್ರ ||
.
ಕತ್ಲಾಗ್ತಿದ್ರೆ ಕ್ಲಬ್ಬು ಪಬ್ಬು ಮಬ್ಬು ತಬ್ಬು ಜಾಸ್ತಿ
ಗಿರಾಕಿ ಸುದ್ದಿ ನಮಗ್ಯಾಕೆ, ತಳ್ಳೊಗಾಡಿ ಬಾಯಾಡ್ತಿ
ಬಾರಲ್ ಹತ್ಲಿ, ನೇತಾಡ್ತ ಸುತ್ಲಿ, ಬಾಡ್ಗೆ ಕೊಟ್ರೆ ಸಾಕಪ್ಪ
ಆಯ್ತಂದ್ರೆ ಕಲೆಕ್ಷನ್ ರೆಕ್ಸ್ ಜಾಕೀಚಾನು, ಟಾಕೀಸಲ್ಲಿ ನಾನಪ್ಪ ||
.
ಬಾಯ್ಲೊಂದ್ಸಾಂಗು, ಡ್ರೈವಿಂಗ್ಲೆ ಸ್ಮೋಕಿಂಗು
ಖಾಲಿ ಸೆಕೆಂಡ್ ಶೊ ರೋಡಲಿ , ನಾನೆ ಕಿಂಗೂ
ಮನೆ ಮುಂದೆನೆ ಠಿಕಾಣ, ಆಟೋಲೇನೆ ಮಲಗೋಣ
ಬೆಳಗೆಬ್ಸೊ ಗಿರಾಕಿ ಬಾಡ್ಗೆ ಜಮಾಯ್ಸಿ, ತಿರ್ಗಾ ಅದೆ ಪುರಾಣ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು