ನಯಾಗರಾದಲ್ಲಿ ನೀರು ಕಲ್ಲಾಗಿತ್ತು

ನಯಾಗರಾದಲ್ಲಿ ನೀರು ಕಲ್ಲಾಗಿತ್ತು

ಇದೇ ತಿಂಗಳು ಮೊದಲ ಕೆಲವು ವಾರಗಳಲ್ಲಿ polar vortexನಿಂದಾಗಿ ಅಮೇರಿಕ, ಕೆನಡಾದಲ್ಲಿ ಚಳಿ ಅತಿರೇಕಕ್ಕೆ ಹೋಗಿತ್ತೆಂಬುದು ನಿಮಗೆಲ್ಲ ತಿಳಿದೇ ಇದೆ. ಆಗ ನಯಾಗರ ‍ಹೇಗಿತ್ತು ಎಂಬುದನ್ನು ಬಿಬಿಸಿ ವರದಿ ಮಾಡಿದೆ. ನೋಡಿ:

Rating
No votes yet

Comments

Submitted by H A Patil Mon, 01/27/2014 - 20:25

ಹರಿ ನಾಡಿಗ ರವರಿಗೆ ವಂದನೆಗಳು
ಮಂಜಾಗಿ ತನ್ನ ಹರಿಯುವಿಕೆಯನ್ನು ನಿಲ್ಲಿಸಿ ನಿಂತ ನಯಾಗಾರ ಚಿತ್ರ ಖುಷಿ ನೀಡಿತು. ನಯಾಗಾರಾದ ಅಪರೂಪದ ದರ್ಶನ ಮಾಡಿಸಿದ್ದೀರಿ ಧನ್ಯವಾದಗಳು.

Submitted by nageshamysore Tue, 01/28/2014 - 01:57

ನಾಡಿಗರೆ ನಮಸ್ಕಾರ. ಭೀಕರತೆಯ ಭೀಷಣ ಸೌಂದರ್ಯ ಕಲ್ಲಾಗಿ ವಿಶ್ರಾಂತಿ ಪಡೆದು ಸುಧಾರಿಸಿಕೊಳ್ಳುತ್ತಿರುವ ರೀತಿ ಚೆನ್ನಾಗಿದೆ. ಅದು ಕರಗಿ ಮಾಯವಾಗುವ ಮೊದಲೆ ಪದಗಳಲಿ ಹಿಡಿದ ಬಗೆ ಈ ಕೆಳಗಿನ ಸಾಲುಗಳಲ್ಲಿ...
ಕಲ್ಲು ಕರಗುವ ಹೊತ್ತು...
________________
ಬದುಕು
ನಿಂತ ನೀರಲ್ಲ
ನಿರಂತರ ಹರಿವಿನ
ಅನಂತ ಪ್ರಜ್ಞೆ ಎಂದೆ;
ನೋಡಿಲ್ಲಿ
ಹೇಗೆ ಕಲ್ಲಾಗಿದೆ?
ನಿಂತ ನೀರಾಗಿದ್ದರು ಸಾಕಿತ್ತು
ಕನಿಷ್ಠ ಮುಳುಗೇಳಬಹುದಿತ್ತು
ಹೀಗೆ ಕಲ್ಲು ಮನಸಾದರೆ
ಮಾಡುವುದೇನು?
ಹೇಳು,
ಹೇಗೆ ಬೆಚ್ಚಗಾಗಿಸಲಿ ನಿನ್ನ ?
ಮುಚ್ಚಟೆಯಿಂದ ಗರಿ ಬಿಚ್ಚಲು
ತೆರೆದ ರೆಕ್ಕೆಯಲಿ ಹಾರಲು
ಮತ್ತದೆ ಆಕ್ರೋಶ
ರಭಸೋತ್ಸಾಹದಲಿ;
ಗುಟ್ಟುಗಳೆಲ್ಲ ಕೊಚ್ಚಿ
ಸ್ವಚ್ಛವಾಗಲಿರಬೇಕು ಚಲನೆ,
ಅಂತರಾಳದ ಸಂಚಲನೆ..
ಕೊಚ್ಚಿಹೋದರು ಕೊನೆಗೆತ್ತೆಸೆದಲ್ಲಿ
ನೆಲ ಜೀವಜಲ ಟಿಸಿಲೊಡೆಸಬಹುದು.
ಹೀಗೆ ಮುನಿದು ಕಲ್ಲಾಗಿ
ಮೌನವಾದರೆ
ಸುಂದರ ಚಿತ್ರವೇನೊ ನಿಜ..
ಜೀವಂತಿಕೆ ಮಾತ್ರ ತಾಜಾ
ಅದ ಕಟ್ಟಿಕೊಡಲೆಂದರೆ
ನೀರ್ಗಲ್ಲು ಕರಗಿ ನೀರಾಗಬೇಕು
ಹೃದಯ ಕರಗಿ ನೀರೆಯಾಗಬೇಕು
ನೀನೀಗ ಬರಿ ಸುಂದರ
ಬಿಳಿ ಸೀರೆಯುಟ್ಟ ವಿಧವೆ..
ಕಾದಿದೆ ಕುತೂಹಲ
ಕರಗಿಬಿಡುವೆ ತೊಡುವೆ
ಮುತ್ತೈದೆಯ ಒಡವೆ
ಮತ್ತದೆ ಉಕ್ಕಿಬಿಕ್ಕುವ
ಹಳೆ ಗೊಡವೆಯಲಿ
ಬೆಚ್ಚಿಸುವ ರೊಚ್ಚಿನ
ಗಡಗಡವೆ !

Submitted by H A Patil Tue, 01/28/2014 - 20:07

ನಾಗೇಶ ಮೈಸೂರು ಮತ್ತು ಗುಣಶೇಖರ ಮೂರ್ತಿಯವರಿಗೆ ವಂದನೆಗಳು
ಹರಿ ನಾಡಿಗರು ನೀಡಿದ ನಯಗಾರದ ನೀರು ಹೆಪ್ಪುಗಟ್ಟಿದ ಚಿತ್ರಕ್ಕೆ ನೀವು ಕವನಗಳ ಜುಗಲ್ ಬಂದಿ ಮೂಲಕ ನೀಡಿದ ಪ್ರತಿಕ್ರಿಯೆ ಚೆನ್ನಾಗಿದೆ. ಅರ್ಥಪೂರ್ಣ ಕವನಗಳನ್ನು ನೀಡಿದ್ದೀರಿ ಧನ್ಯವಾದಗಳು.