ಗ್ರಹಿಕೆ

ಗ್ರಹಿಕೆ

ಒಮ್ಮೆ ಯಾರೋ ಸ್ನೇಹಿತರನ ನೋಡೋಕ್ಕೆ ಅಂತ ಸಿಟಿ ಬಸ್ ಸ್ಟ್ಯಾಂಡ್ ಗೆ ಹೋಗಿದೆ. ನನ್ನ ಸ್ನೇಹಿತ ಕಾಲ್ ಮಾಡಿ ನಾನು ಬರುವುದು ಸ್ವಲ್ಪ ಲೇಟ್ ಆಗುತ್ತೆ ಅಂತ ಹೇಳಿದ. ಅದಕ್ಕೆ ನಾನು ಅವನು ಬರುವಷ್ಟರಲ್ಲಿ ಕಾಫಿ ಕುಡಿಯೋಣ ಅಂತ ಹೋಟೆಲ್ ಗೆ ಹೋದೆ. ಹೋಟೆಲ್ನ ಸರ್ವಿಸ್ ವಿಭಾಗದಲ್ಲಿ ಹೋಗಿ ಕುಳಿತ್ತೆ. ಕಾಫಿ ಗೆ ವೈಟರ್ ಕರೆದು ಆರ್ಡರ್ ಮಾಡಿದೆ. ಪಕ್ಕದ ಯಾವುದೊ ದೊಡ್ಡ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ನಡೀತಾ ಇತ್ತು. ಅಲ್ಲಿ ಒಂದು ಫ್ಲೋರ್ ಗೆ ಪೇಂಟಿಂಗ್ ಕೆಲಸ ನಡೀತಾ ಇತ್ತು.ನಾನು ಹೋಟೆಲ್ ಒಳ್ಳಗೆ ಹೋಗಿದನ ಒಬ್ಬ ವ್ಯಕ್ತಿ ನೋಡಿದ , ನೋಡಿ ಅವನು ನಾನು ಇದ್ದ ಟೇಬಲ್ ಬಳ್ಳಿ ಬಂದ.

"ಏನು ಹರೀಶ್ ಸಾಹೇಬರ ಪಯಣ ಈ ಕಡೆ ಬಂದಿದೆ ಇವತ್ತು , ಬಹಳ ದಿನ ಆಯಿತು ನಿನ್ನ ನೋಡಿ , ಕ್ಷೇಮವಾಗಿ ಇದೀ ತಾನೇ " ಅಂತ ನನ್ನ ಟೇಬಲ್ ಮುಂದೆ ನಿಂತು ಆ ವ್ಯಕ್ತಿ ಹೇಳಿದ. ನಾನು ಯಾರಪ್ಪ ನನ್ನ ಹೆಸರು ಕರೆದು , ಅದರಲ್ಲೂ ಏಕವಚನದಲ್ಲಿ ಕರೀತ್ತಾ ಇರುವವರು ಅಂತ ತಲೆ ಎತ್ತಿ ಆ ವ್ಯಕ್ತಿನ ನೋಡಿದೆ.

ಹಳೆ ಬಟ್ಟೆ , ಶರ್ಟ್ ಪ್ಯಾಂಟ್ , ಮೈ ಕೈ , ತಲೆ ಎಲ್ಲವು ಪೇಯಿಂಟ್ ಆಗಿತು. ನನ್ನಗೆ ಅವನ ಮುಖ ಗುರುತು ಸಿಗಲ್ಲಿಲ. ಇವನು ಯಾರೋ ತಲೆ ಹರಟೆ ಅಂತ ಅಂದುಕೊಂಡು ಸುಮ್ಮನೆ ಆದೆ. ಅವನ್ನ ನ ನೋಡಿಯು ನೋಡದ ಹಾಗೆ ತಲೆ ಬಾಗಿಸಿ ಸುಮ್ಮನೆ ಕೂತೆ. ಮತ್ತೆ ಅದೇ ವ್ಯಕ್ತಿ

"ದೊಡ್ಡವರಿಗೆ ನಮ್ಮ ನೆನಪು ಆಗಿಲ ಅಂತ ಕಾಣುತ್ತೆ " ಅಂತ ಹೇಳುತ್ತಾ ನನ್ನ ಮುಂದಿನ ಚೇರ್ ನಲ್ಲಿ ಆಸಿನವಾದ.

"ಲೋ ಅಣ್ಣ ಇನ್ನೊಂದು ಕಾಫಿ , ಒಂದು ಪ್ಲೇಟ್ ಇಡ್ಲಿ ತಗೊಂಡು ಬಾರೋ " ಅಂತ ಸಪ್ಲಯೆರ್ ಗೆ ಕರೆದು ಹೇಳಿದ ಆ ವ್ಯಕ್ತಿ. " ಲೋ ಹರೀಶ್ ಇನ್ನು ನನ್ನ ನೆನಪು ಆಗಲಿಲವೇನೋ , ನಿನ್ನಗೆ , ನಾನು ಸಂತೋಷ್ ನಿನ್ನ ಪ್ರೈಮರಿ ಸ್ಕೂಲ್ ಫ್ರೆಂಡ್ , ಕಾಲೋನಿ ನಲ್ಲಿ ಇದೆ , ಅವನೇ ಕಣ್ಣೋ ನಾನು" ಅಂತ ಹೇಳಿದ.

ನನ್ನಗೆ ಒಳ್ಳ ಒಳ್ಳಗೆ ಇವನು ಯಾರೋ ತರಲೆ ದುಡ್ಡು ಸಾಲ ಕೇಳೋಕೋ ಇಲ್ಲ ಅವನ ಬಿಲ್ ಕಟ್ಟಿಸೋಕೋ ಇದ್ದಾನೆ ಅಂತ ಕಾಣಿಸುತ್ತೆ ಅಂದು ಕೊಂಡು ಅವನ ಬಳ್ಳಿ ಏನು ಮಾತು ಆಡದೆ ಸುಮ್ಮನೆ ಆದೆ. ಅವನೇ ಅದು ಇದು ಮಾತಾಡುತ್ತ ಇಡ್ಲಿ ಕಾಫಿ ಎಲ್ಲ ಮುಗಿಸಿದ , ನಾನು ಕಾಫಿ ಮುಗಿಸಿ ಫ್ರೆಂಡ್ ಕಾಲ್ ಗೆ ಕಾಯುತ್ತ ಇದ್ದೆ. ಫ್ರೆಂಡ್ ಅಷ್ಟರಲ್ಲಿ ಕಾಲ್ ಮಾಡಿ ತಾನು ಬಂದಿದೀನಿ ಅಂತ ಹೇಳಿದ. ನಾನು ಬಿಲ್ ಕೊಡಲು ಹೇಳಿದೆ. ನನ್ನ ಮುಂದೆ ಇದ್ದ ವ್ಯಕ್ತಿ ಬಿಲ್ ಕೇಳಿದ. ವೈಟರ್ ಬಿಲ್ ತಂದು ಟೇಬಲ್ ಮೇಲೆ ಇಟ್ಟು ಹೋದ. ನನ್ನ ಮುಂದೆ ಇದ್ದ ವ್ಯಕ್ತಿ ಎರಡು ಬಿಲ್ ತೆಗೆದು ಕೊಂಡು " ಲೋ ಬಿಡೋ ನಾನೇ ಕೊಡುತ್ತೀನಿ" ಅಂತ ಹೇಳುತ್ತಾ ಬಿಲ್ ಕೈ ಅಲ್ಲಿ ಇಟ್ಟು ಕೊಂಡು ಕೌಂಟರ್ ಬಳ್ಳಿ ಹೋದ.

ನಾನು "ಹಲೋ ನೀವು ಯಾಕೆ ನನ್ನ ಬಿಲ್ ಕೊಡುತ್ತಿರ , ನನ್ನ ಬಿಲ್ ನಾನೇ ಕೊಡುತ್ತೀನಿ , ನಿಮ್ಮ ಬಿಲ್ಲು ಕೂಡ ಕೊಡಿ ಇಲ್ಲಿ " ಅಂತ ಹೇಳುತ್ತಾ ಕೌಂಟರ್ ಬಳ್ಳಿ ಹೋದೆ . ಕಾಷಿಎರ್ ಅಷ್ಟರಲ್ಲಿ ಅವನ ಕೈ ಇಂದ ಬಿಲ್ ತೆಗೆದು ಕೊಂಡು ಬಿಟ್ಟಿದ. ಆ ವ್ಯಕ್ತಿ ಬಿಲ್ ಕೊಟ್ಟು " ಬಾರಯ್ಯ ಆಚೆ ಹೋಗಿ ಜಗಳ ಆಡೋಣ " ಅಂತ ನನ್ನ ಕೈ ಹಿಡಿದು ಎಳೆದು ಕೊಂಡು ಹೊರಗೆ ಬಂದ. ನನ್ನ ಫ್ರೆಂಡ್ ಅಷ್ಟರಲ್ಲಿ ಹೋಟೆಲ್ ಹತ್ತಿರ ಬಂದ . ನನ್ನ ಫ್ರೆಂಡ್ ಆ ವ್ಯಕ್ತಿ ನ ಉದೇಶಿಸಿ
" ಸಾರ್ ನೀವು ಇಲ್ಲಿ , ನಿಮ್ಮ ಭೇಟಿ ಆಗಿದು ನನ್ನ ತುಂಬಾ ಖುಷಿ ಆಯಿತು " ಅಂತ ಹೇಳುತ್ತಾ ನನ್ನ ಕಡೆ ನೋಡಿ
"ಮಾಮ ಇವರು ಕೇಶವ ಮೂರ್ತಿ ಅಂತ , ದೊಡ್ಡ ಕಂಟ್ರಾಕ್ಟರ್ , ಸಿರಿವಂತರು ಕೂಡ , ಇವರ ಆಫೀಸ್ ಅಲ್ಲೇ ನಾನು ಕೆಲಸ ಮಾಡುತ ಇರೋದು , ಎಷ್ಟೇ ಇದರು ಇವರಿಗೆ ಸ್ವಲ್ಪ ಕೂಡ ಜಂಬ ಇಲ್ಲ , ತಾನು ಮೆಟ್ಟಿದ ದಾರಿ ನ ಮರೆತ್ತಿಲ್ಲ ಇವರು , ಇವಗಲು ಮಾಮೂಲಿ ಕೆಲಸಗಾರನಂತೆ ಪೇಂಟಿಂಗ್ ಮಾಡುತ್ತಾ ಮೈ ಬಗ್ಗಿಸಿ ದುಡಿತ್ತಾರೆ " ಅಂತ ಹೇಳಿದ.

ಅದಕ್ಕೆ ಆ ವ್ಯಕ್ತಿ "ನಿಮ್ಮ ಫ್ರೆಂಡ್ ಹರೀಶ್ ನನ್ನಗೆ ಕ್ಲಾಸ್ಮೇಟ್ ಆಗಿದವನು , ಆದರೆ ಅವನು ನನ್ನ ಮರೆತಿದ್ದಾನೆ , ನನ್ನ ವೇಷ ನೋಡಿ ಅನುಮಾನ ಪಟ್ಟಿದಾನೆ , ಇರಲ್ಲಿ ಬಿಡೋ , ಯಾರೇ ಆದರು ನನ್ನ ಈ ವೇಷದಲ್ಲಿ ನೋಡಿ ಅನುಮಾನ ಪಡೋದು ಸಹಜ , ಸರಿ ಇಬ್ಬರು ಎಲ್ಲೋ ಹೊರಟ್ಟಿರುವ ಹಾಗೆ ಇದೆ ಬನ್ನಿ ನನ್ನ ಕಾರ್ ಅಲ್ಲೇ ಡ್ರಾಪ್ ಮಾಡುತ್ತೀನಿ ಅಂತ ಹೇಳಿದ .

ನನ್ನಗೆ ಏನು ಹೇಳಬೇಕು ಅಂತ ತೋಚದೆ ಸುಮ್ಮನೆ ಅವಕ್ಕಾಗಿ ನಿಂತು ಬಿಟ್ಟೆ .

ಮನುಷ್ಯ ಇನ್ನೋಬರು ವೇಷ ಭೂಷಣ ನೋಡಿ ಅವರ ಯೋಗ್ಯತೆ ಅಳಿಯಬಾರದು. ವೇಷ ಭೂಷಣ ಸತ್ಯ ಹೇಳೋದಿಲ್ಲ ಅನ್ನೋ ನನ್ನ ತಪ್ಪು ಗ್ರಹಿಕೆನ ಹೋಗಲಾಡಿಸುವ ಪ್ರಯತ್ನ ಈ ಅನುಭವದಿಂದ ಮಾಡುವಂತೆ ಆಗಿದೆ.

                                                 

                                                                                                      ಬರೆದ ಬಡಪಾಯಿ
                                                                                                                 ಹರೀಶ್ ಎಸ್ ಕೆ

Comments

Submitted by nageshamysore Thu, 01/30/2014 - 02:42

ಹರೀಶರೆ ನಮಸ್ಕಾರ. ಬಾಹ್ಯರೂಪ ನಮ್ಮನ್ನು ಎಷ್ಟೋಬಾರಿ ಏಮಾರಿಸುವುದು ನಿಜ. ಆದರೆ ನಿಜವಾದ ದೊಡ್ಡ ಮನುಷ್ಯರು ತಾವು ಬೆಳೆದ ಬಂದ ದಾರಿ ಮರೆತಿರುವುದಿಲ್ಲ. ನಿಮ್ಮ ಬರಹ ಸರಳತೆ ದೌರ್ಬಲ್ಯವಲ್ಲವೆಂದು ನೆನಪಿಸಿತು. ಧನ್ಯವಾದಗಳು.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು