ಅಡುಗೆಯ ಸಂಭ್ರಮ

ಅಡುಗೆಯ ಸಂಭ್ರಮ

ಅಮ್ಮ ಅಪ್ಪ ತಿಂಗಳುಗಟ್ಟಲೆ ಟ್ರಿಪ್ ಎಂದುಕೊಂಡು ಹೋದರೆ ನಮಗೆಲ್ಲ ಊಟ ತಿಂಡಿ ಕಥೆ ಮುಗಿಯಿತು. ಹೊರಗೆ ತಿನ್ನುವಂತಿಲ್ಲ, ಮನೇಲಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಪರಿಸ್ಥಿತಿ. ಹೊರಗೆ ತಿಂದರೆ ಜ್ವರ ಗ್ಯಾರಂಟಿ, ಮನೇಲಿ ಅಡುಗೆ ಮಾಡುವಷ್ಟು ಸಮಯ ಇಲ್ಲ, ಜೊತೆಗೆ ಸೋಮಾರಿತನ ಎಂದೆಲ್ಲ (ಎಲ್ಲದಕ್ಕಿಂತ ಮಿಗಿಲಾಗಿ ಸರಿಯಾಗಿ ಅಡುಗೆ ಮಾಡೋಕೆ ಬರಲ್ಲ ಅನ್ನೋದು). ಆದರೆ ಈ ಬಾರಿ ಧೈರ್ಯ ಮಾಡಿ ಒಂದು ಗ್ಯಾಸ್ ಸ್ಟೌ ತಂದೇ ಬಿಟ್ಟೆ. ಅಣ್ಣನ ಮನೆಗೆ ಹೋಗಬೇಕಿಲ್ಲದೆ ನಾನೇ ಅಡುಗೆ ಮಾಡಿಕೊಳ್ಳಬಹುದೆಂದು ಸಂತಸದಿಂದ ಬೀಗಿದೆ. ಆದರೆ ಆ ಸ್ಟೌನಲ್ಲಿ ಮೊದಲ ಬಾರಿ ಅಡುಗೆ ಮಾಡಿ ಅದು ಏನೇನೋ ಆದಾಗ ಸಂಭ್ರಮ ಎಲ್ಲ ಕರಗಿ ಹೋಯ್ತು.

ಒಂದೆರಡು ದಿನಗಳಲ್ಲಿ ಮುಂಚಿನಂತೆ at least ತಿನ್ನಲು ಯೋಗ್ಯವಾದ ಅಡುಗೆ ಮಾಡುವಷ್ಟು progress ಸಾಧಿಸಿದೆ. ಕೆಲಸಗಳ ಬ್ಯಾಕ್ ಲಾಗ್ ಉಳಿದವು. ನಿತ್ಯ ಸುಮಾರು ಹೊತ್ತು ಅಡುಗೆ ಮಾಡೋಕೆ ಕಳೆಯೋ ಹಾಗಾಯ್ತು. ಸ್ವಲ್ಪ ದಿನಗಳಲ್ಲಿ ಅಡುಗೆ ಮಾಡುವ ಸ್ಪೀಡು ಉತ್ತಮವಾಯ್ತು. ಹಾಗೆಯೇ ತಿಂಡಿ ಅಮ್ಮ ಮಾಡುವಂತೆಯೇ ಮಾಡಲು ಪ್ರಯತ್ನಿಸಿದೆ. ಸಿಕ್ಕಾಪಟ್ಟೆ ಬೋರು ಹೊಡೆಸಿತು ಸರಿಯಾಗಿ ಬರದೆ. ಒಂದೊಂದು ಸಾರಿ ಮಾಡಿದ ಅಡುಗೆ ತಿನ್ನಲೂ ಬಾರದಂತಾಗಿ ಹೋಟೆಲಿಗೇ ಹೋಗಬೇಕಾಯ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅಮ್ಮ ಮಾಡುವಂತೆಯೇ ಶಾವಿಗೆ ಉಪ್ಪಿಟು ಸುಮಾರು ೮ನೇ ಸಲ ಪ್ರಯತ್ನಿಸಿದೆ. ಜ್ಯಾಕ್ ಪಾಟ್! ಅಮ್ಮ ಮಾಡುವ ಹಾಗೆಯೇ ಬಂದಿತ್ತು! ಸಂಭ್ರಮ ಹೇಳತೀರದು!

ಇಷ್ಟು ದಿನ ಬರದದ್ದು ಈಗೇನು ಅಮ್ಮ ಮಾಡುವಂತೆಯೇ ರುಚಿಯಾಗಿ ಆದದ್ದು? ಕೆಳಗೆ ಅಣ್ಣನ ಮನೆಯಲ್ಲಿ ಅಮ್ಮ ಉಪ್ಪಿಟ್ಟಿಗೆಂದು ರೆಡಿ ಮಾಡಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಪುಡಿಯೊಂದನ್ನು ತಂದು ಚಿಟುಕಿಸಿದ್ದು, ಅಷ್ಟೇ!

Rating
No votes yet

Comments