ಶ್ರೀ ವಿಜಯನಾರಾಯಣ ಸ್ವಾಮಿ ದೇಗುಲ !

ಶ್ರೀ ವಿಜಯನಾರಾಯಣ ಸ್ವಾಮಿ ದೇಗುಲ !

ಚಾಮರಾಜನಗರಜಿಲ್ಲೆಗೆ ಸೇರಿರುವ ಗುಂಡ್ಲುಪೇಟೆ ಚಾಮರಾಜ
ನಗರದಿಂದ 31 ಕಿ.ಮೀ ಮತ್ತು ಮ್ಯಸೂರಿನಿಂದ 60 ಕಿ.ಮೀ ದೂರ
ದಲ್ಲಿದೆ. ಈ ಪಟ್ಟಣದ ಆಕರ್ಷಣೆಯೆಂದರೆ ಶ್ರೀ ವಿಜಯನಾರಾಯಣ
ಸ್ವಾಮಿ ದೇಗುಲ ! ಇದು ಹಳೆಯ ಬಸ್ ನಿಲ್ದಾಣದ ಬಳಿಯಿದೆ .ತಲಕಾಡಿನ
ಗಂಗರಸರ ಆಳ್ವಿಕೆಯಲ್ಲಿ ನಿರ್ಮಿತವಾಗಿರುವ ಈ ದೇಗುಲ ಸುಂದರವಾಗಿದೆ.
11 ನೇ ಶತಮಾನದಿಂದ 15 ನೇ ಶತಮಾನದವರೆಗೆ ವಿವಿಧ ಹಂತಗಳಲ್ಲಿ
ಗಂಗರು,ಹೊಯ್ಸಳರು. ವಿಜಯನಗರ ಅರಸರಿಂದ ಕಣಶಿಲೆಯಲ್ಲಿ
ನಿರ್ಮಿತವಾಗಿದೆ. ಇದು ಏಕ ಕೂಟ ದೇಗುಲವಾಗಿದ್ದು ಪೂರ್ವ
ದಿಕ್ಕಿಗಿದೆ.ಗರ್ಭಗ್ರುಹ, ಶುಖಕ್ನಾೇನಷಸಿ.ನವರಂಗ,ಮುಖಮಂಟಪಗಳನ್ನು
ಹೊಂದಿದೆ .ವಿಜಯನಾರಾಯಣ ಸ್ವಾಮಿ ವಿಗ್ರಹವನ್ನು ಹೊಯ್ಸಳರ
ರಾಜ ವಿಷ್ಣುವರ್ಧನ ಪ್ರತಿಷ್ಠಾಪಿಸಿದನೆಂದು ಪ್ರತೀತಿ. ಅನಂತ,ಗರುಡ
ವಿಷ್ವಕ್ಷೇನ. ಹನುಮ ವಿಗ್ರಹಗಳಿವೆ. ದ್ವಾರದಲ್ಲಿ ಸ್ಯನಿಕರು ಸಿಂಹಗಳ ಮೇಲೆ
ಸವಾರಿ ಮಾಡುತ್ತಿರುವ ಶಿಲ್ಪಗಳಿದ್ದು ಚಿತ್ತಾಕರ್ಷವಾಗಿದೆ. !
-ನಾನಾ.ಕೊಳ್ಳೇಗಾಲ !

Comments

Submitted by H A Patil Sat, 02/08/2014 - 08:22

ನಾಗರಾಜು ನಾನಾ ರವರಿಗೆ ವಂದನೆಗಳು
ವಿಜಯ ನಾರಾಯಣಸ್ವಾಮಿ ದೇಗುಲದ ಕುರಿತು ಅದರ ಇತಿಹಾಸ ಮತ್ತು ಮಹತಿಯನ್ನು ಸರಳವಾಗಿ ಸಂಕ್ಷೀಪ್ತವಾಗಿ ಸವಿವರವಾಗಿ ನಿರೂಪಿಸಿದ್ದೀರಿ. ಇಂತಹ ಮಾಹಿತಿಗಳು ದೇವಳಗಳ ಇತಿಹಾಸವನ್ನು ತಿಳಿಯಲಕು ಸಹಕಾರಿಯಾಗುತ್ತವೆ. ಧನ್ಯವಾದಗಳು.