ಟಿಪ್ಪುವಿನ ಜನ್ಮಸ್ಥಳ
"ಮೈಸೂರ ಹುಲಿ" ಟಿಪ್ಪು ಸುಲ್ತಾನ್ ಹುಟ್ಟಿದ ಸ್ಥಳ ದೇವನಹಳ್ಳಿ. ಬೆಂಗಳೂರಿಂದ ಕೇವಲ ೩೫ ಕಿ.ಮೀ. ದೂರದಲ್ಲಿದೆ. ಈವಾಗ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಉತ್ತಮ ರಸ್ತೆ ನಿರ್ಮಾಣಗೊಂಡಿರುವುದರಿಂದ ಯಾವುದೇ ಅಡೆತಡೆ ಇಲ್ಲದೇ ಮುಕ್ಕಾಲು ಗಂಟೆಯೊಳಗೆ ಅಲ್ಲಿಗೆ ತಲುಪಬಹುದು. ಬೈಕಲ್ಲಿ ಹೋಗುವಿರಾದರೆ ಏರ್ಪೋರ್ಟ್ ರಸ್ತೆಯ ಟೋಲ್ಗೇಟ್ನ ಫೀಸು ಸಹ ಸದ್ಯಕ್ಕೆ ಕೊಡಲಿಕ್ಕಿಲ್ಲ.
ಹೈವೇಯಿಂದ ದೇವನಹಳ್ಳಿ ರಸ್ತೆಗೆ ತಿರುಗಿ, ಸ್ವಲ್ಪ ಮುಂದೆ ಹೋಗುವಾಗಲೇ ಟಿಪ್ಪುವಿನ ಸುಂದರ ಪುತ್ಥಳಿ ಕಾಣಿಸುವುದು- ೧೯೯೭ರಲ್ಲಿ ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅನಾವರಣಗೊಳಿಸಿದ್ದು. ಅದೇ ರಸ್ತೆಯಲ್ಲಿ ಸ್ವಲ್ಪ ಮುಂದಕ್ಕೆ ಹೋದರೆ, ಎಡಕ್ಕೆ ನಾಲ್ಕು ಕಂಬಗಳ ಕಮಾನಿನ ಕಟ್ಟಡ ಕಾಣಿಸುವುದು. ಅದೇ ಟಿಪ್ಪು ಹುಟ್ಟಿದ ಸ್ಥಳ ಎನ್ನಲಾಗಿದೆ.
ಇದನ್ನು ನಮ್ಮ ಈಗಿನ ಆಯಿಲ್ ಮಂತ್ರಿ ವೀರಪ್ಪಮೊಯ್ಲಿಯವರು ಆಯಿಲ್ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿಪಡಿಸುವರು ಎಂಬ ನ್ಯೂಸ್ ಪತ್ರಿಕೆಯಲ್ಲಿ ಬಂದಿತ್ತು. http://www.udayavani.com/news/414936L15-%E0%B2%9F-%E0%B2%AA-%E0%B2%AA--%... (....
ಟಿಪ್ಪುಸುಲ್ತಾನರ ಜನ್ಮ ಸ್ಥಳ ಹಾಗೂ ಕೋಟೆಯನ್ನು ಮತ್ತಷ್ಟು ಐತಿಹಾಸಿಕ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು. >> ಮತ್ತಷ್ಟು ಐತಿಹಾಸಿಕ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸುವುದು ಹೇಗೆ ಎಂದು ಅರ್ಥವಾಗಲಿಲ್ಲ :) ಆಯಿಲ್ ಕಂಪನಿಯವರು ಗ್ಯಾಸ್ ಮತ್ತು ಆಯಿಲ್ ಕಡಿಮೆದರದಲ್ಲಿ ಸರಿಯಾದ ಸಮಯಕ್ಕೆ ಸಪ್ಲೈ ಮಾಡಿದರೆ ಸಾಕಿತ್ತು. :) )
ಇಲ್ಲಿಂದ ಕೇವಲ ೧೫೦ ಮೀ. ದೂರದಲ್ಲಿ ಮರೆಯಲು ಸಾಧ್ಯವಿಲ್ಲದಷ್ಟು ಆಕರ್ಷಕ ದೇವನಹಳ್ಳಿ ಕೋಟೆ ಇದೆ. ಅಲ್ಲಿನ ಪರಿಚಯ ನಿಮಗೆ ಮಾಡುವೆ. ಬನ್ನಿ ಹೋಗೋಣ..
ಟಿಪ್ಪು ಸುಲ್ತಾನ್ ಬಗ್ಗೆ ಲಾವಣಿ ಹಾಡು ಇದೆ ಎಂದು ಕೇಳಿದ್ದೆ. ಸಿಗಲಿಲ್ಲ. ಇದೊಂದು ಕವ್ವಾಲಿ ಹಾಡು ಕೋಟೆ ತಲುಪುವವರೆಗೆ ಕೇಳಿ... http://www.youtube.com/watch?v=FnUy8G-1Xm0
Comments
ಉ: ಟಿಪ್ಪುವಿನ ಜನ್ಮಸ್ಥಳ
ಪುಣ್ಯಪುರುಷರು : ೩೦. ಟಿಪ್ಪು ಸುಲ್ತಾನ
ಇಲಿಯಾಗಿ ನೂರು ವರ್ಷ ಬಾಳೂದು ಬ್ಯಾಡಂತ
ಹುಲಿಯಾಗಿ ಮೂರು ವರ್ಷ ಬಾಳೂದು ಪಾಡಂತ
ವೀರ ಟೀಪು ಹೇಳಿದ ಮಾತ
ಅವನಿಗೆ ಒಲದಿದ್ದ ರಂಗನಾಥ ||
ಹಿಂದು ಮುಸ್ಲಿಂ ಒಂದೇ ಅಂತ
ನೀತಿ ಮಾರ್ಗವ ಅರಿತ
ಪ್ರಜರಲ್ಲಿ ತಾ ಬೆರತ
ಸುಖ-ದುಃಖವನ್ನ ಅರಿತ
ಟೀಪು ಮಾಡಿದ ಪ್ರಜಾಹಿತ
ಅವನಿಗೆ ಒಲದಿದ್ದ ರಂಗನಾಥ|| ೧ ||
ರಾಜಕಾರಣ ಧೂರ್ತ
ಸಮರದಲ್ಲಿ ಸಮರ್ಥ
ಭುಜಬಲ ಸಾಮರ್ಥ್ಯ
ದೇಶದಲ್ಲಿ ಪ್ರಖ್ಯಾತ
ದೇಹ ದೇಶ ಭಕ್ತಿ ಭರಿತ
ಅವನಿಗೆ ಒಲಿದಿದ್ದ ರಂಗನಾಥ|| ೨ ||
ಕಂಪನಿ ಸರಕಾರ ಬಂತ
ನಮ್ಮ ಸೈನ್ಯ ನಿಮ್ಮಲ್ಲೆಂತ
ಕರಾರಿಗೆ ಒಪ್ಪಂತ
ಭಾಳ ಒತ್ತಾಯ ತಂತ
ಟೀಪು ಒಪ್ಪುದಿಲ್ಲ ಅಂತ ನಿಂತ
ಅವನಿಗೆ ಒಲಿದಿದ್ದ ರಂಗನಾಥ|| ೩ ||
ಇಂಗ್ಲೀಷರೊಡನೆ ಕಾದುತ್ತ
ದೇಶ ರಕ್ಷಣಾ ಮಾಡುತ್ತಾ
ವೀರತನ ತೋರುತ್ತ
ವೈರಿಯನ್ನು ಹಣಿಯುತ್ತ
ಟೀಪು ಕುಣಿಯುತ ನಿಂತ
ಅವನಿಗೆ ಒಲಿದಿದ್ದ ರಂಗನಾಥ|| ೪ ||
ದೇಶದ್ರೋಹಿ ಮಾಡಿದ ಘಾತಾ |
ಮೈಸೂರ ಹುಲಿ ತಾ ಸೋತಾ |
ಮಕ್ಕಳನ್ನು ಅಡವು ಇಡುತಾ |
ಖಡ್ಗ ಹಿರಿದು ಕಾದುತ ನಿಂತಾ |
ಟೀಪು ಪ್ರಾಣ ಬಿಟ್ಟ ಕಾದುತ್ತ |
ಅವನಿಗೆ ಒಲಿದಿದ್ದ ರಂಗನಾಥ|| ೫ ||
ಹಾಡಬೇಕ ವೀರ ಗೀತ
ಮಾಡಬೇಕ ದೇಶ ಹಿತ
ಒಲಿತಾನ ರಂಗನಾಥ
ಇದನ್ನ ಕೇಳು ನೀ ಮತ್ತ
ನುಡಿಯುತ್ತ ನುಡಿಯುತ್ತ |
ಶ್ರೀರಂಗನಾಥಗೆ ನಮಿಸುತ್ತ|| ೬ ||
ರಚನೆ : ಎ.ಜಿ. ನೀಲಗಾರ
ಕೃತಿ : ಜಾನಪದ ಝೇಂಕಾರ
In reply to ಉ: ಟಿಪ್ಪುವಿನ ಜನ್ಮಸ್ಥಳ by partha1059
ಉ: ಟಿಪ್ಪುವಿನ ಜನ್ಮಸ್ಥಳ
ಪಾರ್ಥರೆ, ಟಿಪ್ಪು ಬಗ್ಗೆ ಒಂದು ಕನ್ನಡ ಹಾಡು ಹಾಕೋಣ ಅಂತ ಹುಡುಕಾಡಿದ್ದೆ... ನೀವು ನೋಡಿದರೆ ಅರೆಕ್ಷಣದಲ್ಲಿ ಸೇರಿಸಿದಿರಿ. ತುಂಬಾ ಧನ್ಯವಾದಗಳು.
ಉ: ಟಿಪ್ಪುವಿನ ಜನ್ಮಸ್ಥಳ
ವಾಹ್..ಮತ್ತೊಂದು ಸ್ಥಳಿಯ ಪ್ರವಾಸ ಮತ್ತು ಸ್ಥಳ ಪರಿಚಯ! ಖರ್ಚಿಲ್ಲದೆ ತೋರಿಸುತ್ತಿರುವ ಸುತ್ತಲ ಅಪರೂಪದ 'ಸೈಟ್ ಸೀಯಿಂಗ್'ಗೆ ನಾನೂ ರೆಡಿ :-)
In reply to ಉ: ಟಿಪ್ಪುವಿನ ಜನ್ಮಸ್ಥಳ by nageshamysore
ಉ: ಟಿಪ್ಪುವಿನ ಜನ್ಮಸ್ಥಳ
:) ನಾಗೇಶರೆ, ನೀವೂ ಖರ್ಚಿಲ್ಲದೇ ವಿದೇಶ ಸುತ್ತಿಸುತ್ತಿರುವಿರಿ. ಥಾಯ್ಲ್ಯಾಂಡ್ ಸುತ್ತಿ ಆದ ಕೂಡಲೇ ದೇವನಹಳ್ಳಿ ಕೋಟೆ ಸುತ್ತೋಣ..
**********
ಟಿಪ್ಪುವಿನ ಮೂರ್ತಿ ಸ್ಥಾಪಿಸಿ (ಚಿತ್ರ ೨), ಕೆಳಗೆ ಆತನ ಬಗ್ಗೆ ವಿವರವಿಲ್ಲ. ಕೆಳಗಿರುವುದೆಲ್ಲಾ ರಾಜಕಾರಣಿಗಳ ಹೆಸರು. ಕೋಟೆ ಗೋಡೆ ಮೇಲೆ ತಮ್ಮ ಹಾಗೂ ಪ್ರೇಮಿಯ ಹೆಸರು ಬರೆದು ಪ್ರಸಿದ್ಧರಾಗುವವರಿಗೂ ಇವರಿಗೂ ವ್ಯತ್ಯಾಸವೇನೂ ಇಲ್ಲ.
ಉ: ಟಿಪ್ಪುವಿನ ಜನ್ಮಸ್ಥಳ
ಗಣೇಶರೇ, ಮತ್ತಷ್ಟು ಐತಿಹಾಸಿಕ(?)ವಾಗಿಸುವತ್ತ ಪ್ರಯತ್ನಗಳು ಎಡೆಬಿಡದೆ ಸಾಗಿವೆ, ಜಾಹಿರಾತು ಇಲ್ಲದೆಯೇ!! ಸುಂದರ ಚಿತ್ರಗಳು!
In reply to ಉ: ಟಿಪ್ಪುವಿನ ಜನ್ಮಸ್ಥಳ by kavinagaraj
ಉ: ಟಿಪ್ಪುವಿನ ಜನ್ಮಸ್ಥಳ
ದೇವನಹಳ್ಳಿ ಏರ್ಪೋರ್ಟ್ನಿಂದಾಗಿ ಸಮೀಪದ ಜಮೀನಿಗೆ ಬಹಳ ಬೇಡಿಕೆ. ಟಿಪ್ಪು ಜನ್ಮಸ್ಥಳದ ನೆನಪಿಗೆ ನಾಲ್ಕು ಕಂಬಗಳ ಕಮಾನು ಮಾತ್ರ ಉಳಿದಿದೆ. ಅದೂ ಉಳಿದಿರುವ ಕೋಟೆಯೂ ಇತಿಹಾಸ ಪುಟ ಸೇರುವುದೋ..
ಕವಿನಾಗರಾಜರಿಗೆ ಧನ್ಯವಾದಗಳು.