ನಾ ನಿನ್ನ ನೋಡಿದಾಗ
ಕವನ
ನಲ್ಲೆ ನಿನ್ನ ಮಾತೆಲ್ಲ ಕವನಗಳ ಪದಗಳು
ನಿನ್ನ ತುಟಿಯ ಕಿರುನಗೆಯು ಕವಿತೆಗಳ ಸಾಲುಗಳು
ಏನೆಂದು ವರ್ಣಿಸಿ ಬರೆಯಲಿ ಸಾಲುತಿಲ್ಲ ಪುಟಗಳು
ಕವಿಯ ಕಣ್ಣಿಗೆ ಬೀಳದಿರು ನನ್ನ ಚೆಲುವೆ
ಹೊಗಳಿ ವಶಪಡಿಸಿಕೊಂಡಾನು ಸಾಹಿತ್ಯದೊಳಗೆ
ಮನೆಯಿಂದ ಹೊರಗೆ ನೀ ಬರಬೇಡ ಹೂವೆ
ಮುತ್ತು ಬಿಟ್ಟಾವು ಹಿಂಡು ದುಂಬಿಗಳು ಮಕರಂದದ ಸವಿಗೆ
ಚಿತ್ರಕಾರನ ಕೈಗೆ ಸಿಗಬೇಡ ನೀನು
ಬಂಧಿಸಿಕೊಂಡಾನು ಅವನ ಕುಂಚದ ಕಲೆಯೊಳಗೆ
ಗೆಜ್ಜೆಕಾಲಿನಿಂದ ನೀನು ಎಂದೂ ನರ್ತಿಸಬೇಡ
ತಿರುಗೊ ಭೂಮಿ ಮರೆತು ನರ್ತಿಸಿ ಬಿಟ್ಟಾದು ನಿನ್ನ ಜೊತೆಗೆ
ಶಿಲ್ಪಿಗಾರನ ಎದುರು ನೀ ಎಂದಿಗೂ ಬರಬೇಡ
ಮೋಹಿಸಿ ಬಿಟ್ಟಾನು ಮೂರ್ತಿಮಾಡಿ ಮನದ ಒಳಗೆ
ಲತೆಯಂತೆ ಬಳುಕಿ ನಡೆದಾಡಲೆ ಬೇಡ
ಸ್ಥಿರವಾಗಿ ನಿಂತಿರುವ ಮರಗಿಡಗಳು ನಡೆದು ಬಿಟ್ಟಾವು ನಿನ್ನ ಜೊತೆಗೆ
ಸಂಗೀತಗಾರ ಇರುವಾಗ ನೀನಲ್ಲಿ ಸುಳಿಯಬೇಡ
ಸೆರೆಯಾಗಿಸಿಕೊಂಡಾನು ಅವನ ರಾಗ, ತಾಳ ಲೀಲೆಯ ಒಳಗೆ
ಚಂದ್ರ ಬಂದಾಗ ನೀನು ಮುಖ ತೋರಿಸಲೇ ಬೇಡ
ನಿನ್ನನ್ನು ಹಿಡಿದುಕೊಳ್ಳಲು ಇಳಿದು ಬಿಟ್ಟಾನು ಕೆಳಗೆ.
ಚಿತ್ರ್
Comments
ಉ: ನಾ ನಿನ್ನ ನೋಡಿದಾಗ
ಸೊಗಸಾದ ವರ್ಣನೆ, ಚೆನ್ನಾಗಿದೆ ,,,,
ನಾ ಹೆಗೆ ಬರೆಯಲಿ ಕವಿತೆ
ನಿನ್ನ ನೆನೆಯಲು ನನ್ನನ್ನೆ ಮರೆತೆ!
ನಿನ್ನ ವರ್ಣನೆಗೆಲ್ಲಿಯಾ ಕೊರತೆ
ಆದರು ಪದಗಳನ್ನೆ ನಾನು ಮರೆತೆ!
ನಾ ನಿನ್ನ ನೋಡಿದಾಗ
ನಾ ನಿನ್ನ ನೋಡಿದಾಗ!