ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ.......ನ್ನೆನು

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ.......ನ್ನೆನು

ಪ್ರಾರ್ಥನೆ : 

ಕರುಣಾಳು, ಬಾ, ಬೆಳಕೆ,ಮುಸುಕಿದೀ ಮಬ್ಬಿನಲಿ,
ಕೈಹಿಡಿದು ನಡೆಸೆನ್ನನುಇರುಳು ಕತ್ತಲೆಯ ಗವಿ; ಮನೆದೂರ; ಕನಿಕರಿಸಿ
ಕೈಹಿಡಿದು ನಡೆಸೆನ್ನನು
ಹೇಳಿ ಕನ್ನಡಿಯಿಡಿಸು; ಬಲುದೂರ ನೋಟವನು
ಕೇಳಿದೊಡನೆಯೆ-ಸಾಕು ನನಗೊಂದು ಹೆಜ್ಜೆ.

ಮುನ್ನ ಇಂತಿರದಾದೆ; ನಿನ್ನಬೇಡದೆ ಹೋದೆ,
ಕೈಹಿಡಿದು ನಡಸು ಎನುತ
ನನ್ನ ದಾರಿಯ ನಾನೆ ನೋಡಿಹಿಡಿದೆನು:-ಇನ್ನು
ಕೈಹಿಡಿದು ನಡಸು ನೀನು.
ಮಿರುಗುಬಣ್ಣಕೆ ಬೆರೆತು, ಭಯಮರೆತು ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ.

ಇಷ್ಟುದಿನ ಸಲಹಿರುವೆ ಮೂರ್ಖನನು ;ಮುಂದೆಯೂ
ಕೈಹಿಡಿದು ನಡಸದಿಹೆಯಾ ?
ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ ?
ಬೆಳಗಾದ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳೆಕೊಂಡ ದಿವ್ಯ ಮುಖ ನಗುತ ?

- ನ್ಯುಮನ್, (೧೮೦-೧-೧೮೯೦, ('ಲೀಡ್, ಕೈಂಡ್ಲಿ ಲೈಟ್')

 

Comments