ಏಳು ವರ್ಷಗಳು!

ಏಳು ವರ್ಷಗಳು!

ಸಂಪದದಲ್ಲಿ ಬರೆಯತೊಡಗಿ ಏಳು ವರ್ಷಗಳಾದುವು ಎಂದು ಕ್ಯಾಲೆಂಡರ್ ಹೇಳುತ್ತಿದೆ. ಏಳು ವರ್ಷ ಅಂದರೆ ಯಾರ ಜೀವನದಲ್ಲಾದರೂ ಒಂದು ಮುಖ್ಯವಾದ ಭಾಗವೇ! ಇಲ್ಲಿ ಬರೆಯುತ್ತ ನನ್ನ ಬರವಣಿಗೆ ಎಷ್ಟೋ ಸುಧಾರಿಸಿದೆ ಅನ್ನುವುದೂ, ಮತ್ತೆ ಸಂಪದದ ಮೂಲಕ ಅನೇಕ ಮಿತ್ರರನ್ನೂ ಪಡೆದುಕೊಂಡ ಸಂತಸ ನನ್ನದು!

 

ಎಲ್ಲ ಸಂಪದಿಗರಿಗೂ ಧನ್ಯವಾದಗಳು.

‍‍‍‍‍‍‍‍‍_‍ ಹಂಸಾನಂದಿ

Rating
No votes yet

Comments

Submitted by kavinagaraj Sat, 03/01/2014 - 09:44

ಶುಭಾಶಯಗಳು, ಅಭಿನಂದನೆಗಳು. ನೀವು ಬರೆದಿದ್ದನ್ನು ನೋಡಿ ನಾನೂ ಸಂಪದಕ್ಕೆ ಬಂದ ದಿನಾಂಕವನ್ನು ಪರಿಶೀಲಿಸಿದೆ. ನಿನ್ನೆಗೆ ಸರಿಯಾಗಿ ನಾಲ್ಕು ವರ್ಷಗಳಾದವು. ಇಂದಿನಿಂದ ಐದನೆಯ ವರ್ಷ ಆರಂಭವಾಗಿದೆ. ನಿಮ್ಮೊಡನೆ ನಾನೂ ಸಂಪದಿಗರಿಗೆ ದನ್ಯವಾದ ಸಲ್ಲಿಸುತ್ತಿದ್ದೇನೆ.

Submitted by partha1059 Sat, 03/01/2014 - 10:40

In reply to by kavinagaraj

ಹಂಸಾನಂದಿಯವರಿಗೆ ಹಾಗು ಕವಿ ನಾಗರಾಜರಿಗೆ
ತಮ್ಮಿಬ್ಬರಿಗೂ ನನ್ನ ಹಾಗು
ಸಂಪದ ಓದುಗರ ಪರವಾಗಿ ಅಭಿನಂದನೆಗಳು
ಪಾರ್ಥಸಾರಥಿ

Submitted by nageshamysore Sat, 03/01/2014 - 11:22

In reply to by kavinagaraj

ಮಾರ್ಚ್ ಹನ್ನೊಂದಕ್ಕೆ ನನಗು ಸಂಪದದಲ್ಲಿ ಒಂದು ವರ್ಷ : ಏಳು - ನಾಲ್ಕು - ಒಂದು : ಹಳೆ ಬೇರು ಹೊಸ ಚಿಗುರಿನ ಹೆಸರಿಗೆ ಸರಿಯಾಗಿ ಹೊಂದಿಕೆಯಾಗುವಂತೆ :-)
ಹಂಸಾನಂದಿಯವರಿಗೆ ಮತ್ತು ಕವಿ ನಾಗರಾಜರಿಗೆ ನನ್ನ ಅಭಿನಂದನೆಗಳು ಸಹ :-)