ಸಾಲುಗಳು - 7 (ನನ್ನ ಸ್ಟೇಟಸ್)
ಸಾಲುಗಳು - 7 (ನನ್ನ ಸ್ಟೇಟಸ್)
54.
ನಮ್ಮ ಮನವೊಂದು ಮಾತ್ರ ಹೆಚ್ಚು ಹೆಚ್ಚು ಆಳಕ್ಕೆ ಇಳಿದಷ್ಟು ನಿಗೂಡವಾಗುತ್ತ ಹೋಗುತ್ತದೆ.
55.
ತೀರ ಪ್ರಾಮಾಣಿಕವಾಗಿ ಕೆಲಸಮಾಡಲು ಹೊರಟಾಗ ಮೈಮೇಲೆ ಎರಗುವ ಅಪಾಯಗಳನ್ನು ಅಪಾದನೆಗಳನ್ನು ತೊಂದರೆಗಳನ್ನು ಎದಿರುಸುವ ಶಕ್ತಿಯೂ ಇರಬೇಕು
56.
ಮೋದಿಯವರ ಚಹಾ,
ಮತ್ತೆ ಲಾಲುರವರ ಚಹಾ,
ರಾಹುಲ್ ಹಾಲು ಇವೆಲ್ಲ
ಚುನಾವಣೆಯಲ್ಲಿ ಕೆಲಸ ಮಾಡುತ್ತ ?
.
.
.
.
.
ಮಲ್ಯಾರ ಪೇಯದ ಮುಂದೆ ??
57.
ಅದೇನೊ ದೆವ್ವ ಅನ್ನುವಾಗಲು
ಜನಕ್ಕೆ ಮೋಹಿನಿಯೆ ಆಗಬೇಕು,
ಗಂಡು ದೆವ್ವ ಅಂದರೆ ಯಾರಿಗೂ ಆಸಕ್ತಿಯೂ ಇರಲ್ಲ
ಹೆಣ್ಣೆ ನಿನಗೆ ಶರಣು!
---------------------------------------------------------------------------------------
ಚಿತ್ರ ೧. ಸ್ನೇಕ್ ವಾಕಿಂಗ್
https://www.facebook.com/photo.php?fbid=594162847320907&set=a.3961519971...
ಚಿತ್ರ ೨. 'ಸಿಂಹ' ನಿಮಗೊಂದು ಕಡೆಯ ನಮನ
https://www.facebook.com/photo.php?fbid=588643044550623&set=a.1885301578...
Comments
ಉ: ಸಾಲುಗಳು - 7 (ನನ್ನ ಸ್ಟೇಟಸ್)
ಪಾರ್ಥ ಸಾರಥಿಯವರಿಗೆ ವಂದನೆಗಳು
ಮನದ ಆಳದ ಗಹನತೆಯನ್ನು ಅಳೆಯಲಾಗದು , ಪ್ರಾಮಾಣಿಕತೆ ಎನ್ನುವುದೇ ಹಾಗೆ ಅದು ತುಂಬ ಕಷ್ಟದ ಹಾದಿ, ಮಲ್ಯರ ಅಲ್ಕೊಹಾಲ್ ಮುಂದೆ ಚಹಾ ಕಾಪಿ ಮತ್ತು ಹಾಲು ಏನು ಮಾಡಲಾರವು, ಹೆಣ್ಣು ಎಂದರೇನೆ ಹಾಗೆ ಅದು ದೇವಿಯಿರಲಿ ದೆವ್ವವಿರಲಿ ಅದರ ಪ್ರಭಾವ ಒಂದು ಕೈ ಜಾಸ್ತಿಯೆ ಇರುತ್ತದೆ. ಸಾಲುಗಳು ಸತ್ವಪುರ್ಣವಾಗಿ ಮೂಡಿ ಬರುತ್ತಿವೆ, ಧನ್ಯವಾದಗಳು.
ಉ: ಸಾಲುಗಳು - 7 (ನನ್ನ ಸ್ಟೇಟಸ್)
ಪಾರ್ಥರೇ. ನಿಮ್ಮ ಮೋಹಿನಿ ಕಾಟಕ್ಕೆ ಮೋಹನ ಏಕೆ ಬರಬಾರದೆಂದು ಕೇಳಿದ್ದು ನಿಮಗೆ ಈ ರಚನೆಗೆ ಪ್ರೇರಿಸಿರಬೇಕು. ಹೌದಾದರೆ, ರಾಯಲ್ಟಿ ಕೊಡಬೇಕು!