"ಹೀಗೇಕಾಯಿತು?"
ನಡು ನೆತ್ತಿಯ ಮೇಲೆ
ಸುಡು ಸೂರ್ಯ
ನನ್ನ ಬಿಸಿ ರಕ್ತ
ಇನ್ನಷ್ಟು ಬಿಸಿಯಾಯ್ತು,,
ಇಳಿ ಸಂಜೆಯಲಿ
ಆತ ತಂಪಾದ
ಜನ ಗುಂಪೆರೆದರು
ತಂಪಿನ ಕೆಂಪನು
ಕಣ್ತುಂಬಿಕೊಳ್ಳಲು
ಮರುದಿನ ಮತ್ತೆ ಬರುವನೆಂದು ಗೊತ್ತಿದ್ದರೂ.....
ಬಾಳ ಸಂಜೆಯಲಿ
ನಾನು ತಣ್ಣಗಾದೆ,
ಜನ ಮಣ್ಣೆರೆದರು
ದೇಹದ ದುರ್ಗಂದವ
ದೂರವಿಡಲು
ಮತ್ತೆಂದು ಬರಲಾರನೆಂದು ಗೊತ್ತಿದ್ದರು.....
"ಹೀಗೇಕಾಯಿತು?" ಅವಲೋಕಿಸಿದೆ
ಆತ, ತನ್ನ ಸುಟ್ಟುಕೊಂಡು ಬೆಳಕು ನೀಡಿದ್ದ ....
ನಾನು, ಬೆಳಕಿನಲ್ಲಿ ಅದೆಷ್ಟೋ ಜನರ ತನು ಸುಟ್ಟಿದ್ದೆ....
ರಾಜಕಾರಣಿಯಾಗಿದ್ದೆ,
ರಾಜ್ಯದವರ ಮನ ಕದಿಯುವುದರ ಬದಲು "ಮನಿ" ಕದ್ದಿದ್ದೆ,
--- ನವೀನ್ ಜೀ ಕೇ
Comments
ಉ: "ಹೀಗೇಕಾಯಿತು?"
ನವೀನ್ ಕವನ ಚೆನ್ನಾಗಿದೆ
ಕಡೆಯಲ್ಲಿ ಮನಿ ಅನ್ನುವದರಲ ಬದಲು ಹಣ ಅನ್ನುವದನ್ನೆ ಬಳಸಿದ್ದರೆ
ಕವನದ ಭಾವಕ್ಕೆ ಯಾವ ಕೊರತೆಯು ಬರುತ್ತಿರಲಿಲ್ಲ,(ನನ್ನ ಅಭಿಪ್ರಾಯವಷ್ಟೆ)
ಅಭಿನಂದನೆಗಳೊಡನೆ
In reply to ಉ: "ಹೀಗೇಕಾಯಿತು?" by partha1059
ಉ: "ಹೀಗೇಕಾಯಿತು?"
+ 1 - 'ಮನ' ಮತ್ತು 'ಹಣ' ಪ್ರಾಸಬದ್ದವಾಗಿಯೂ ಇದೆ :-)
In reply to ಉ: "ಹೀಗೇಕಾಯಿತು?" by nageshamysore
ಉ: "ಹೀಗೇಕಾಯಿತು?"
ನಾಗೆಶ್ ಸರ್, ಪ್ರತಿಕ್ರಿಯೆಗೆ ಧನ್ಯವಾದಗಳು,,,, ಪ್ರೊತ್ಸಾಹಪೂರ್ವಕ ತಿದ್ದುವಿಕೆಗೆ ವಿನಮ್ರನಾಗಿದ್ದೇನೆ,,,
ಧನ್ಯವಾದಗಳು ಸರ್
In reply to ಉ: "ಹೀಗೇಕಾಯಿತು?" by partha1059
ಉ: "ಹೀಗೇಕಾಯಿತು?"
ಪಾರ್ಥ ಸರ್, ನಿಮ್ಮ ಅಭಿಪ್ರಾಯ ಸರಿ ಇದೆ,,,, ಪ್ರೋತ್ಸಾಹ ನೀಡಿ ತಿದ್ದಿದ್ದಕ್ಕೆ ಬಹಳ ಖುಷಿಆಗಿದೆ,,,,
ಧನ್ಯವಾದಗಳು ಪಾರ್ಥ ಸರ್
ಉ: "ಹೀಗೇಕಾಯಿತು?"
ಚೆನ್ನಾಗಿದೆ ನೀವು ಬಳಸಿದ ಸಾಲುಗಳು
In reply to ಉ: "ಹೀಗೇಕಾಯಿತು?" by Anil Kumar1392980523
ಉ: "ಹೀಗೇಕಾಯಿತು?"
ಪ್ರತಿಕ್ರಿಯೆಗೆ ಧನ್ಯವಾದಗಳು ಅನಿಲರೇ,,
ಉ: "ಹೀಗೇಕಾಯಿತು?"
ಭಾವ ಚೆನ್ನಾಗಿದೆ. ಮರ ಸುಡುಬಿಸಿಲಿನಲ್ಲಿ ನಿಂತು ಒಣಗುತ್ತದೆ, ಆದರೆ ತನ್ನ ಅಡಿಯಲ್ಲಿ ನಿಂತವರಿಗೆ ತಂಪು ನೆರಳು ಕೊಡುತ್ತದೆ. ಮನುಷ್ಯ ಆ ಮರವನ್ನೇ ಕಡಿಯುತ್ತಾನೆ!
In reply to ಉ: "ಹೀಗೇಕಾಯಿತು?" by kavinagaraj
ಉ: "ಹೀಗೇಕಾಯಿತು?"
ಕವಿಗಳಿಗೆ ನಮಸ್ತೆ,,,,,, ನಿಮ್ಮ ಪ್ರತಿಕ್ರಿಯೆ ಭಾವನೆಗೆ ಪೂರಕವಾಗಿದೆ,,, ನೀವು ಹೇಳಿದಂತೆ ಮನುಷ್ಯ ಎಲ್ಲವನ್ನು ನಾಶ ಮಾಡಿ, ಏನನ್ನೊ ಕಂಡು ಹಿಡಿದೆ ಎಂದು ಬೀಗುವವನು,,,ಮನ+ನಾಶ= ಮನುಷ್ಯ ಇರಬೇಕು,,,,
In reply to ಉ: "ಹೀಗೇಕಾಯಿತು?" by naveengkn
ಉ: "ಹೀಗೇಕಾಯಿತು?"
ಮನ+ನಾಶ= ಮನುಷ್ಯ............ಇದು ನನಗೆ ಇಷ್ಟವಾಯಿತು