ಸ್ವಾರ್ಥದ ಗುಣ (ಶ್ರೀ ನರಸಿಂಹ 81)
ನೀಡಿದುದು ನೆನಪಿನಲಿರುವುದು ಸ್ವಾರ್ಥ ತುಂಬಿದ ಮನಕೆ
ಪಡೆದುದ ಶೀಘ್ರದಲಿ ಮರೆವ ಗುಣವೆ ತುಂಬಿಹುದು ಅದಕೆ
ಪರರ ದುಃಖಗಳಿಗೆ ಮರುಗದು ಸ್ವಾರ್ಥ ತುಂಬಿದ ಮನವು
ಬೇಕಿಹುದನು ಬಿಡದೆ ಪಡೆಯಲೆತ್ನಿಸುವುದೆ ಅದರ ಗುಣವು
ನೀನೊಬ್ಬನೆ ಜಗದೊಳಿದ್ದು ಬಾಳಲು ಸಾಧ್ಯವಾಗುವುದೇನು
ಎಲ್ಲರೊಡನೆ ಹೊಂದಿಕೆಯಿಂದಲಿ ಬಾಳಬೇಕಿ ಜಗದಿ ನೀನು
ಸ್ವಾರ್ಥಿಯಾದೊಡೆ ಒಂಟಿಯಾಗಿರಬೇಕಿಹುದು ನೀ ಜಗದಲಿ
ಸ್ವಾರ್ಥವ ತೊರೆದು ತೃಪ್ತಿಯಲಿರಲಾಗ ನೆಮ್ಮದಿ ಬಾಳಿನಲಿ
ಸ್ವಾರ್ಥವ ತೊರೆದು ಪರರೊಳಗೆ ನಿಂತು ಅವರಂತೆ ನೀ ನೋಡು
ಮೆಚ್ಚುವನು ಶ್ರೀ ನರಸಿಂಹ ಪರಹಿತ ಬಯಸಿ ಕರ್ಮಗಳ ಮಾಡು
Rating
Comments
ಉ: ಸ್ವಾರ್ಥದ ಗುಣ (ಶ್ರೀ ನರಸಿಂಹ 81)
ಸ್ವಾರ್ಥದ ಮಹಿಮೆಯೇ ಇದು!
In reply to ಉ: ಸ್ವಾರ್ಥದ ಗುಣ (ಶ್ರೀ ನರಸಿಂಹ 81) by kavinagaraj
ಉ: ಸ್ವಾರ್ಥದ ಗುಣ (ಶ್ರೀ ನರಸಿಂಹ 81)
ನಿಜ ನಾಗರಾಜ್ ರವರೇ, ಧನ್ಯವಾದಗಳೊಂದಿಗೆ....ಸತೀಶ್