ಚುಟುಕಿನ ನಗೆ - ಬಗೆ

ಚುಟುಕಿನ ನಗೆ - ಬಗೆ

ಕವನ

ಬರಿಯಬೇಕ್ರಿ ಚುಟುಕು ಮತ್ತೋಬ್ಬರು ನಗುವಂತೆ
ಇರಬೇಕ್ರಿ ಜಗದಾಗ ನಾವು ಮತ್ತೋಬ್ಬರಿಗೆ ಮುಳ್ಳಾಗದಂತೆ
ಹುಟ್ಟಿದ್ದಾಗ ನಾವು ಅಳತಿವಂತೆ
ಸತ್ತಾಗ ನಾವು ಅಳಸ್ತಿವಂತೆ
ಜೀವನ ಬರೀ ಮುರ್ದಿನದ ಸಂತೆ ಅಂತೆ
ಇಷ್ಟದ್ರಾಗ ಬಹಳ ವದ್ದಾಡತ್ತಿವಂತೆ
ಗೋತ್ತಿಲ್ಲ ನಮಗ ಎಲ್ಲಿ ಹುಟ್ತಿವಂತೆ
ಹಾಗೆ ಗೋತ್ತಿಲ್ಲ ನಮಗ ಎಲ್ಲಿ ಸಾಯ್ತಿವಂತೆ
ದಯವಿಟ್ಟು ಇರಿ ನೀವು ಸದಾ ನಗುವಂತೆ
ಹಾಗೆ ದಯವಿಟ್ಟು ಇರಿ ನೀವು ಸದಾ ಮತ್ತೋಬ್ಬರಿಗೆ ನಗಿಸ್ತಿರುವಂತೆ
ನಮ್ಮ ಈ ಜೀವನ ಬರೀ ಅಂತೆ ಕಂತೆಗಳ ಒಂದು ಸುಂದರ ಸಂತೆ ಅಂತೆ.

ಇಂತಿ ನಿಮ್ಮ ಕಿರು ಕವಿ,

ಸಿದ್ದರಾಮ ಏನ್. ಕೋರಪಳ್ಳಿ
ಅಲ್ಸ್ತೊಂ ಮತ್ತು
ಶಹಬಾದ ಬಸವಸಮಿತಿ ಶಹಬಾದ
ಶಾಂತನಗರ - ಭಂಕುರ್ ಶಹಬಾದ
ಚಿತ್ತಪುರ್, ಗುಲ್ಬರ್ಗಾ, ಕರ್ನಾಟಕ, ಭಾರತ, ಏಷ್ಯ, ಭೂಮಿ ಕೋನೆಗೆ ನೆನಪು

 

ಚಿತ್ರ್

Comments

Submitted by siddu.korpalli Tue, 03/18/2014 - 17:28

ನನಗೆ ತಿಳಿದ ಪ್ರಕಾರ ಪ್ರತಿಕ್ರಿಯೇ ಇಲ್ಲದಿದ್ದರೆ ಕವನ ಅಥವಾ ಹೋಸ ಸೇರ್ಪಡೆಗೆ ಹೆಚ್ಚಿಗೆ ಅರ್ಥವೇ ಇಲ್ಲ. ನನಗೆ ನಿಜವಾಗಲು ಬರೆಯಲು ಕಷ್ಟವಾಗುತ್ತಿದೆ. ಬಿಟ್ಟರೆ ಬಿಡು ಎನ್ನ ಬಹುದು ಆದರೆ ?????????