ಮರೆಯಾದವಳು

ಮರೆಯಾದವಳು

ಚೆನ್ನಾಗಿ ನಿದ್ದೆ ಬಂದಿರುವಾಗಲೇ ಇದರ ಕಾಟವೆಂದು ಬೈದುಕೊಳ್ಳುತ್ತ ಜಲಧಾರೆ ಹರಿಸಲು ಎದ್ದು ಹೊರಗಡೆ ಇರುವ ಬಚ್ಚಲು ಮನೆಗೆ ಬಂದೆ. ಭಾರ ಇಳಿಸಿಕೊಂಡ ನಂತರ ಇದರಲ್ಲಿರುವ ಸುಖ ಬೇರೆ ಯಾವುದರಲ್ಲೂ ಸಿಗಲಿಕ್ಕಿಲ್ಲವೇನೊ ಎಂಬ ಅನುಭವ ಮನವರಿಕೆಯಾಯಿತು. ಮತ್ತೆ, ಬಂದ ದಾರಿ ಹಿಡಿದು ಹಾಸಿಗೆಗೆ ಹೋಗದೆ, ಬೆಳದಿಂಗಳನ್ನು ಸವಿಯ ಬೇಕೆನಿಸಿತು. ಹುಣ್ಣಿಮೆ ಇನ್ನೊಂದೆರೆಡು ದಿನ ಮುಂದಿತ್ತೋ ಏನೊ, ಗೊತ್ತಿಲ್ಲ. ಬೆಳದಿಂಗಳು ಮಾತ್ರ ಸೂಜಿಯೂ ಕೂಡ ಕಣ್ಣಿಗೆ ಕಾಣುವಷ್ಟು ನಿಚ್ಚಳವಾಗಿತ್ತು. ಪ್ರಕೃತಿ ತನ್ನ ಸೌಂದರ್ಯ ಸವಿಯಲು ಎಡೆಮಾಡಿಕೊಟ್ಟಲ್ಲಿ ನಾನು ಹಿಂಜರಿದವನಲ್ಲ. ಹಾಗೆ, ಅದನ್ನು ಹುಡುಕಿಕೊಂಡು ಹೊರಟವನೂ ಅಲ್ಲ. ಇವತ್ತಿನ ಬೆಳದಿಂಗಳ ರಾತ್ರಿ ನನ್ನನ್ನು ಪರ್ಯಾಯಾಲೋಚನೆ ಇಲ್ಲದೆ ಬರಸೆಳೆದುಕೊಂಡಿತು. ಬೆಳದಿಂಗಳ ಹಿತಾನುಭವ ಸವಿಯಲು ಮೈಯನ್ನು ಮುರಿಯುತ್ತ, ಮೇಲೆ ಚಂದ್ರನನ್ನು ನೋಡುತ್ತ, ರೋಮಾಂಚನವನ್ನು ಅನುಭವಿಸುತ್ತ, ಪಕ್ಕದಲ್ಲಿ ಯಾರಾದರೂ ಇದ್ದಿದ್ದರೆ ಇದನ್ನೆಲ್ಲ ಹೇಳಿ ಖುಷಿ ಪಡಬಹುದಿತ್ತಲ್ಲ... ಎನ್ನುತ್ತ ನಿಂತೆ. ಒಂದೈದು ನಿಮಿಷ ನಿಂತ ಮೇಲೆ ಏನೊ ಒಂದು ಅಭಾವ ನನ್ನನ್ನು ಭಾದಸಿತು. ಅದು ನನ್ನ ಎಂದಿನ ಕನಸು. ನಾನು, ಪಕ್ಕದಲ್ಲಿ ಅಪಾರ ಪ್ರೀತಿಯಲ್ಲಿ ತೇಲಿಸುವ ನನ್ನ ಹುಡುಗಿ. ಸುತ್ತ ಬೆಳದಿಂಗಳು, ಕೆಳಗೆ ಹಾಸಿಗೆಯಾಗಿ ಮರಳು, ಮೇಲೆ ಇಡಿ ಜಗತ್ತೇ ನಮ್ಮದೆನ್ನುವ ಅನುಭೂತಿಯನ್ನು ನೀಡುವ ಚಂದ್ರ. ಇವೆಲ್ಲದರ ಮಧ್ಯೆ ನಾವಿಬ್ಬರೂ ಸಮಾಧಿ ಸ್ಥಿತಿಯನ್ನು ತಲುಪಬೇಕೆನ್ನುವ ಮಹದಾಸೆ.
         ಇನ್ನೂ ಜೀವಂತವಾಗಿರುವ ನನ್ನ ಆಸೆಯನ್ನು ತೀರಿಸಲು ಜೊತೆಗಾತಿ ದೊರೆತಿಲ್ಲ ಎಂದು ಹೇಳುವುದಕ್ಕೆ ವಿಷಾಧಿಸುತ್ತೇನೆ. ನನ್ನದೊಂದು ಪ್ರಶ್ನೆ ಇದೇ ಸಮಯದಲ್ಲಿ ಇಣುಕುತ್ತಿದೆ, ಕೇಳಿಬಿಡುತ್ತೇನೆ. ಕವಿಗಳು ಇಲ್ಲವೆ ಮದುವೆ ಆದವರು, ಹೆಂಡತಿ ಜೊತೆ ಇರದಾಗ ವಿರಹವೇದನೆ ಎಂದು ಬರೆಯುತ್ತಾರೆ ಮತ್ತು ನರಳುತ್ತಾರೆ. ಆದರೆ ಅಂತಹ ವಿರಹವೇದನೆಯೇ ಜೀವನವಾಗಿರುವಾಗ ನಮ್ಮಂತಹ ಅವಿವಾಹಿತ ಗಂಡಸರ ವೇದನೆ ಯಾವುದು? ಹೋಗಲಿ ಬಿಡಿ, ನನ್ನ ಮಹದಾಸೆಯಿಂದ ಬೆಳದಿಂಗಳ ಸವಿಯುವ ನನ್ನ ಮನಸ್ಸಿಗೆ ಸ್ವಾರಸ್ಯ ಕಾಣಲಿಲ್ಲ. ಹೀಗೆ ನಿಂತು ನಿದ್ದೆ ಹಾಳುಮಾಡಿಕೊಳ್ಳುವುದಕ್ಕಿಂತ, ಹೋಗಿ ದಬ್ಬಾಕಿಕೊಳ್ಳುವುದೇ ಮೇಲೆಂದು ಹೊರಡಲು ಹೆಜ್ಜೆ ಮುಂದಿಟ್ಟೆ, ಹಾಗೆ ತಟಸ್ಥನಾದೆ. ಹತ್ತಿರದಲ್ಲಿಯೇ ಕೇಳುವ ಗೆಜ್ಜೆಯ ಹೆಜ್ಜೆ ಸದ್ದು ನನ್ನನ್ನು ಆ ಕಡೆ ನೋಡುವಂತೆ ಮಾಡಿತು. ಆಕೃತಿಯನ್ನು ನೋಡಿ ನನ್ನನ್ನೇ ನಾ ನಂಬದಾದೆ. ನಡುರಾತ್ರಿ ಒಂದು ಚೆಲುವಾದ ಹೆಣ್ಣು, ನಿರ್ಜನತೆಯಿಂದ ನಿಶಬ್ದ ಮಡುಗಟ್ಟಿದ ಸಮಯದಲ್ಲಿ ಎದುರಿಗೆ ಬಂದಾಗ ಹೇಗಾಗ ಬೇಡ?
         ಮನಸ್ಸಿನಲ್ಲಿಯೇ ಅಂದುಕೊಂಡೆ “My dream comes true ” ಯಾವಾಗಲೋ ಬಾಯಿಪಾಠ ಮಾಡಿದ ಇಂಗ್ಲೀಷ ಗಾದೆ ತನ್ನಿಂದ್ತಾನೆ ಬಾಯಿಂದ ಉದುರಿತ್ತು. ಮನೆಯ ಗೇಟಿನ ಮುಂದೆ ನಿಂತು ನೋಡುತ್ತಿದ್ದೆ, ಚೆಲುವೆ ಓಣಿಯ ದಾರಿ ಹಿಡಿದು ಬರುತ್ತಿದ್ದಳು. ನನಗೂ, ಅವಳಿಗೂ ಎರಡು ಮಾರು ಅಂತರ ಅಷ್ಟೆ. ಅವಳನ್ನೇ ದಿಟ್ಟಿಸುತ್ತಿದ್ದೆ. ಅವಳೊ, ಅಳುಕದೆ, ಅಂಜದೆ ಮುನ್ನಡೆಯುತ್ತಿದ್ದಳು. ಅದೇ ಸಂದರ್ಭದಲ್ಲಿ ಗಾಂಧೀಜಿ ಹೇಳಿದ ಮಾತು ನೆನಪಾಗಿ, ಹೌದು- ಅರ್ಧರಾತ್ರಿಯಲ್ಲಿ ಹೆಣ್ಣೊಂದು ಹೀಗೆ ಓಡಾಡುತ್ತಿರುವುದನ್ನು ನೋಡಿ, ಗಾಂಧೀಜಿ ಹೀಗೇ ಕಲ್ಪಿಸಿಕೊಂಡಿರಬಹುದೆಂದುಕೊಂಡು, ಮತ್ತೆ ಅವಳೆಡೆಗೆ ನೋಡುತ್ತ ಹಿಂಬಾಲಿಸಿದೆ. ಅದರ ಪರಿವೇ ಇಲ್ಲದೆಂಬಂತೆ ಅವಳು ದಾರಿ ಸವೆಸುತ್ತಿದ್ದಳು. ಮೌನದ ಗಾಢತೆ ಎಷ್ಟಿತ್ತೆಂದರೆ ಅವಳ ಗೆಜ್ಜೆಯ ಸದ್ದು ಮಾರ್ದನಿಸುತ್ತಿತ್ತು. ಅವಳು ಆ ಸರಿಹೊತ್ತಿನಲ್ಲಿ ನನಗೆ ಸಾಕ್ಷಾತ್ ಮೋಹಿನಿಯಂತೆ ಕಂಡಳು. ನಾನೇನೂ ಅವಳನ್ನು ಮುಖಾಮುಖಿ ಬೇಟಿಯಾಗಿರಲಿಲ್ಲ. ಆದರೆ ಬೇರೆಯವರು ಹೇಳುವುದು ಕೇಳಿದ್ದೆ ಮತ್ತು ಸಿನಿಮಾದಲ್ಲಿ ನೋಡಿದ್ದೆ. ಇವತ್ತು ಅವಳನ್ನು ಹಿಂಬಾಲಿಸುತ್ತಿದ್ದೇನೆ. ಅವಳಿಗೆ ಸಮೀಪವಾಗಿ... ಎಷ್ಟೆಂದರೆ ಅವಳ ಪಾರದರ್ಶಕ ರವಿಕೆಯೊಳಗಿಂದ ದೇಹದ ಅವಯವಗಳು ಸ್ಪಷ್ಟವಾಗಿ ಕಾಣುತ್ತಿವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬಿಳಿ ಬಣ್ಣದ ಮೇಲುಡುಪು, ಅದೇ ಮೊಣಕಾಲವರೆಗೂ ಬಂದಿದೆ. ಕೆಳಗಡೆ..., ಮೊಣಕಾಲಿಂದ ಕೆಳಗಡೆ ನಾನಷ್ಟು ಗಮನ ಕೊಡಲಿಲ್ಲ. ಬಿಳಿ ಬಣ್ಣದ ಮೇಲುಡುಪು ತೊಂಬತ್ತು ಪ್ರತಿಶತ ಪಾರದರ್ಶಕವಾಗಿದೆ. ಸಾಮಾನ್ಯವಾಗಿ ಎಲ್ಲರೂ ಒಳುಡುಪು ಧರಿಸಿವಂತೆ, ಇವಳು ಧರಿಸಿಲ್ಲ. ಈಗ ತಾನೆ ಗುಲಾಬಿಯ ಕೊಳದಲ್ಲಿ ಮಿಂದೆದ್ದು ಬಂದಂತೆ ಸ್ವಚ್ಚಂದವಾಗಿ ಅವಳ ಮೈ ಸುವಾಸನೆ ಭರಿತವಾಗಿದೆ. ವಕ್ಷಸ್ಥಳವಂತೂ ಉಬ್ಬಿ, ತೊಟ್ಟುಗಳು ಅದಾವುದೊ ರಭಸದಲ್ಲಿ ನಿಮಿರಿ ಕಪ್ಪು ದ್ರಾಕ್ಷಿಯಂತೆ ಕಣ್ಣನ್ನು ಕುಕ್ಕುತ್ತಿವೆ. ಬೆನ್ನು ಕೋಮಲತೆ ತುಂಬಿ, ನೀಳಾಕಾರವಾಗಿ ಬಂದು ಸೊಂಟದ ಭಾಗದಲ್ಲಿ ಎರಡು ನಿರಿಗೆಗಳು ಬಿದ್ದಿವೆ. ಸೊಕ್ಕಿದ ಕಿನ್ನರಿಯ ಇಂಚಿಂಚು ಬಿಡದೆ ನೋಡುತ್ತ ಸಾಗುತ್ತಿದ್ದರೆ, ಕಾಮ ನೆತ್ತಿಗೇರಿ ಹುಚ್ಚು ಹಿಡಿಯುದೊಂದೇ ಬಾಕಿ. ಆದರೂ ಅವಳನ್ನೇ ಹಿಂಬಾಲಿಸುತ್ತಿದ್ದೆ ಬಂಡ ದೈರ್ಯದಿಂದ. ಆಗಲೇ ಗೊತ್ತಾಗಿದ್ದು ಕಾಮಕ್ಕೆ ಕಣ್ಣುಕೊಟ್ಟವನು ಯಾವುದಕ್ಕೂ ಕಣ್ಣು ಬಿಡೋದಿಲ್ಲವೆಂದು. ಇವತ್ತೇನಾಗುತ್ತೊ ಆಗಿಯೆ ಬಿಡಲಿ ಅಂತಂದುಕೊಂಡು, ಅವಳೆಡೆಗೆ ಸರಿದೆ. ತಕ್ಷಣದಲ್ಲಿ ನನ್ನ ಕಣ್ಣುಗಳಿಗೆ ಕತ್ತಲಾವರಿಸಿತು. ಒಂದು ಕ್ಷಣ ಏನೂ ತೋಚದಾಗಿ ನಿಂತುಬಿಟ್ಟೆ. ಕಣ್ಣುಗಳನ್ನು ಕಳೆದುಕೊಂಡ ಭಾವ ನನ್ನನ್ನು ಆವರಿಸಿತು. ಆದರೆ ಹಾಗಾಗಲಿಲ್ಲ, ಕಣ್ಣುಗಳು ಕತ್ತಲಿಗೆ ಕ್ರಮೇಣ ಒಗ್ಗಿಕೊಂಡವು. ಹೌದು, ಆವಾಗ ಕರೆಂಟು ಹೋಗಿತ್ತು... ಒಂದೈದು ನಿಮಿಷ ಹಾಗೇ ನಿಂತುಕೊಂಡೆ, ಅವಳ ಯೋಚನೆ ಬಂದು, ಇಷ್ಟೊತ್ತಿಗಾಗಲೇ ಹೋಗಿರಬಹುದೆಂದುಕೊಂಡೆ. ಹೋಗಿರಲಾರಳು, ಅವಳೂ ನನ್ನಂತೆ ಮನುಷ್ಯಳು, ನಾನೇ ಹೀಗೆ ನಿಂತಿರುವಾಗ ಅವಳ್ಹೇಗೆ ಹೋಗುತ್ತಾಳೆ? ಎಂದುಕೊಂಡು ಸಮಾಧಾನ ಮಾಡಿಕೊಂಡೆ. ನಾನು ಹೊರಗಡೆ ನಿಂತಾಗ ಬೆಳದಿಂಗಳಿತ್ತಲ್ಲ, ಈಗೇಕೆ ಬೆಳಕು ಕಾಣುತ್ತಿಲ್ಲ? ಅನ್ನುವಷ್ಟರಲ್ಲಿ ಕರೆಂಟು ಬಂತು. ಮೇಲೆ ನೋಡಿದೆ ದೊಡ್ಡ ಮರವಿದೆ, ಅದರ ನೆರಳಿಗೆ ಪೂರ್ಣ ಕತ್ತಲಾವರಿಸಿದೆ. ಜೊತೆಗೆ ಇಕ್ಕಟ್ಟಾಗಿದ್ದ ಓಣಿಯಲ್ಲಿ ಮನೆಗಳ ನೆರಳು ರಸ್ತೆಗೆ ಚಾಚಿದೆ.
         ಸರಿ, ನನ್ನಿಂದ ಎರಡು ಇಲ್ಲಾ ಮೂರು ಹೆಜ್ಜೆ ದೂರದಲ್ಲಿದ್ದ ಹುಡುಗಿಯಡೆಗೆ ಕಣ್ಣು ಹಾಯಿಸಿದರೆ, ಯಾರೂ ಇಲ್ಲ... ಅದೆಲ್ಲಿ ಮಾಯವಾದಳು? ನನಗೆ ಆಶ್ಚರ್ಯದ ಜೊತೆಗೆ ಭಯನೂ ಆಯಿತು. ಕತ್ತಲಲ್ಲಿ ಗಂಡಸಾದ ನಾನೇ ಸುಮ್ಮನೆ ನಿಂತಿರುವಾಗ, ಒಂದು ಎಕ್ಹಚಿತ್ ಹುಡುಗಿ ಅದ್ಹೇಗೆ ಕಣ್ಣು ಕಾಣದಂತಹ ಕತ್ತಲಲ್ಲಿ ನಡೆದು ಹೋಗಲು ಸಾಧ್ಯ... ಸಿನಿಮಾಗಳಲ್ಲಿ ತೋರಿಸುವಂತೆ, ನಾಯಕಿ ಒಮ್ಮೆಲೆ ಕತ್ತಲಾದಾಗ ನಾಯಕನನ್ನು ಬಂದು ತಬ್ಬಿಕೊಳ್ಳುವಂತೆ, ಇವಳೂ ನನ್ನನ್ನು ತಬ್ಬಿಕೊಳ್ಳಬಹುದಲ್ಲ ಎಂಬ ಆಸೆ ಯಾವುದೊ ಮೂಲೆಯಲ್ಲಿತ್ತು! ಆದರೂ ಅವಳು ಹತ್ತಿರಕ್ಕೆ ಬರಲಿಲ್ಲ, ತಬ್ಬಿಕೊಳ್ಳಲಿಲ್ಲ. ಅವಳು ಯಾರು ಅಂತ ನನಗೆ ಗೊತ್ತಿಲ್ಲ. ಅವಳಿಗೂ ಅಷ್ಟೇ ನಾನೊಬ್ಬ ಅಪರಿಚಿತ. ಆದರೆ ಇಂತಹ ಕಷ್ಟ ಕಾಲದಲ್ಲಿ ಅದೆಲ್ಲ ಲೆಕ್ಕಕ್ಕೆ ಬರಲ್ಲ. ಇದೆಲ್ಲ ಕಣ್ಣ ಮುಂದೆ ಘಟಿಸುತ್ತಿದ್ದರೆ ಅಧಿರನಾಗದೆ ಇರಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದು ಕೊಣೆಗೆ ರಬಸವಾಗಿ ಬಂದೆ, ಸರಸರನೆ ಬಾಗಿಲಿಕ್ಕಿ ಹಾಸಿಗೆಗೆ ಹೋದರೆ ನಿದ್ದೆ ಮಾತ್ರ ಬರುತ್ತಿಲ್ಲ. ಹೇಗೆ ಬಂದೀತು... ಅನಪೇಕ್ಷಿತವಾಗಿ ಸಿಕ್ಕ ಒಂದು ಹೆಣ್ಣು ತನ್ನ ವೈಯ್ಯಾರವನ್ನೆಲ್ಲ ತೆರೆದಿಟ್ಟು ಪ್ರದರ್ಶಿಸಿದರೆ ವಯಸ್ಸಿನ ನನ್ನಂತವನು ಏನಾಗಬೇಡ? ಇನ್ನೊಂದು ನನ್ನನ್ನು ಕಾಡುತ್ತಿರುವ ಭಯ, ಅವಳು ಕರೆಂಟು ಬರುವಷ್ಟರಲ್ಲಿ ಮಾಯವಾಗಿದ್ದು.
         ಯೋಚಿಸುತ್ತ ಮಲಗಿಕೊಂಡವನಿಗೆ ನಿದ್ದೆ ಯಾವಾಗ ಹತ್ತಿತೋ ಗೊತ್ತಿಲ್ಲ. ಬೆಳಗು ನನಗೂ ಆಯಿತು. ಅದು ಮಿತ್ರನ ಫೋನ್ ಘಂಟೆಯಿಂದ. ಎದ್ದೆ, ಮುಂಜಾವಿನಲ್ಲಿ ಹಳ್ಳಿ ಹೆಣ್ಣು ಮಕ್ಕಳಂತೆ, ಬೆಂಗಳೂರಿನ ಹೆಂಗಸರು ಬೇಗ ಎದ್ದು ರಂಗೋಲಿಯಂತೂ ಹಾಕೋದಿಲ್ಲ. ಏಕೆಂದರೆ ಬೆಳಗಿನ ಕೆಲಸವನ್ನು ಮಲಗುವ ಮುನ್ನ ಮಾಡಿರುತ್ತಾರೆ. ಹಾಗಾಗಿ ಬೆಳಗಾದರೂ ಓಣಿ ನಿರ್ಜಿವದಿಂದ ಕೂಡಿದೆ. ಕಿಟಕಿಯಲ್ಲಿ ನಿಂತು ಹೊರ ನೋಡುತ್ತಿದ್ದೆ. ಆಶ್ಚರ್ಯ! ನಿನ್ನೆ ರಾತ್ರಿ ನೋಡಿದ ಹುಡುಗಿ. ದಿಟ್ಟು ಅವಳೆ. ಅದೇ ಬಿಳಿ ಮೇಲುಡುಗೆ, ಕೆಳಗೆ ಕಪ್ಪು ಫೈಜಾಮ. ನಿನ್ನೆಯ ಸ್ವಚ್ಚಂದತೆ ಅವಳಲ್ಲಿ ಕಾಣುತ್ತಿಲ್ಲ. ಕೂದಲೂ ಅಸ್ಥವ್ಯಸ್ಥವಾಗಿವೆ. ಮುಖ ಕಳಾಹೀನವಾದರೂ ಸುಖದ ಛಾಯೆ ಎದ್ದು ತೋರುತ್ತಿದೆ. ಪಾರದರ್ಶಕ ಉಡುಗೆ ಮಾಯವಾಗಿ, ಅದರ ಮೇಲೆ ಗಂಡಸರು ಹಾಕುವ ಜರ್ಕಿನ್ ಹಾಕಿದ್ದಾಳೆ. ಗೇಟ್ ಲ್ಲಿ ನಿಂತು ಯಾರಿಗೊ ಹೋಗಿ ಬರುತ್ತೇನೆಂಬಂತೆ ಕೈ ಮಾಡುತ್ತಿದ್ದಾಳೆ... ಮಿಂಚಿನಂತೆ ತಲೆಯಲ್ಲಿ ಸೂಚನೆಯೊಂದು ಹೊಳೆಯಿತು, ಅವಳು ಬಂದಿದ್ದು ಗೆಳೆಯನ ಜೊತೆ ರಾತ್ರಿ ಕಳೆಯಲೆಂದು... ಅವರಿಬ್ಬರೂ ಸ್ಕೂಟರ್ ಹತ್ತಿ ಹೋದರು,... ನಾನು ಅವರನ್ನು ನೋಡುತ್ತ ನಿಂತಾಗ ಅದೆಂತದೊ ಭಾವ ನನ್ನನಾವರಿಸಿತು.....   

                                                       

Comments

Submitted by kavinagaraj Wed, 03/19/2014 - 09:33

ಕಥೆಯಲ್ಲಿನ ಕೆಲವು ಹೊಂದಾಣಿಕೆಗಳನ್ನು ಬಿಗಿಗೊಳಿಸಿದ್ದರೆ ಚೆನ್ನಿತ್ತು. ಮೋಹಿನಿ ಎಂಬ ಭಾವ ಮೂಡಿಸಿದ್ದು, ಇದ್ದಕ್ಕಿದ್ದಂತೆ ಮರೆಯಾದದ್ದು, ಹತ್ತಿರದಲ್ಲೇ ಹೋದರೂ ಅವಳು ಗಮನಿಸದಿದ್ದದ್ದು, ಇತ್ಯಾದಿಗಳ ಕೊಂಡಿಗಳನ್ನು ಬಿಗಿಗೊಳಿಸುವಂತೆ ಮಾಡಿದರೆ ಉತ್ತಮವಾಗುತ್ತದೆ. ಒಳ್ಳೆಯ ಪ್ರಯತ್ನ, ಶುಭವಾಗಲಿ.

Submitted by Dhaatu Wed, 03/19/2014 - 11:32

In reply to by kavinagaraj

ಸರ್, ನಿಮ್ಮ ಪ್ರತಿಕ್ರಿಯೆಗೆ ನಾನು ಋಣಿ. ನಾನೂ ಬರೆಯಬೇಕೆಂಬ ಮನದ ಒತ್ತಾಸೆಯಿಂದ ಲೇಖನಿಯನ್ನು ಹಿಡಿದವನು ನಾನು. ಹಿಂದೆ ಗುರು ಇಲ್ಲ ಮುಂದೆ ಗುರಿಯೂ ಅಸ್ಪಷ್ಟ. ಹೀಗೆ ಯೋಚಿಸುವಾಗಲೆ ಸಂಪದ ನನ್ನ ಕಣ್ಣಿಗೆ ಗೋಚರಿಸಿದಾಗ ನನಗೆ ಅಮವಾಸ್ಯೆಯ ದಿನ ಚಂದ್ರನನ್ನು ಕಂಡಷ್ಟು ಸಂತೋಷವಾಯಿತು. ಅದಕ್ಕಾಗಿ ಸಂಪದ ತಂಡಕ್ಕೆ ಮತ್ತು ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಹೀಗೇ ನಿಮ್ಮ ಸಲಹೆ, ಸೂಚನೆಗಳನ್ನು ನಿರೀಕ್ಷಿಸುತ್ತೇನೆ.