ಮಾಡಿದ್ದುಣ್ಣೋ ಮಹರಾಯ
ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು |
ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||
ಒಂಬತ್ತು ಬಾಗಿಲಿನ ದೇವಮಂದಿರ
ಮಂದಿರದ ಅಧಿಪತಿಯೆ ಸತ್ಯಸುಂದರ |
ಸುತ್ತೆಲ್ಲ ಹರಿದಿಹುದು ನವರಸಧಾರಾ
ಮಾಯೆಯ ಮುಸುಕಿನಲಿ ಜೀವನಸಾರ || ೧ ||
ಮಂದಿರದ ಒಳಗಿಹುದು ಕಾಣದ ಪಾತ್ರೆ
ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |
ದೇವನ ಲೆಕ್ಕದಲಿ ದೋಷವೆಂಬುದಿಲ್ಲ
ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||
ಮಾಡಿದ ಕರ್ಮವದು ಬೆನ್ನನು ಬಿಡದು
ಧನಕನಕ ಬಂಧು ಬಳಗ ನೆರವಿಗೆ ಬರದು |
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು || ೩ ||
-ಕ.ವೆಂ.ನಾ.
*************
ಪ್ರೇರಣೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ | ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)
ಅರ್ಥ: ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು, ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ (ಕರ್ಮಫಲವಿಪಾಕ) ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ.
Comments
ಉ: ಮಾಡಿದ್ದುಣ್ಣೋ ಮಹರಾಯ
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು
In reply to ಉ: ಮಾಡಿದ್ದುಣ್ಣೋ ಮಹರಾಯ by partha1059
ಉ: ಮಾಡಿದ್ದುಣ್ಣೋ ಮಹರಾಯ
:)
ಉ: ಮಾಡಿದ್ದುಣ್ಣೋ ಮಹರಾಯ
ನಾವು ಬೆಳೆಸಿದ ಮರದ ಪಲ ನಾವೆ ತಿನ್ನ ಬೇಕು
ನಾವು ಮಾಡಿದಡಿಗೆಯನ್ನು ನಾವೇ ಉಣ್ಣ ಬೇಕು
ನಾವು ನೆಟ್ಟ ಮುಳ್ಳ ಗಿಡ ನಮ್ಮ ಕಾಲಡಿಗೆ
ನಾವು ಮಾಡಿದ ಪಾಪ ನಮ್ಮ ಸಂತತಿಗೆ ....ನೆನಪಿಗೆ ಬಂದ ಸಾಲುಗಳು ( " ನೀ " ಎನ್ನುವ ಕಡೆ " ನಾವು " ಎಂದು ಸೇರಿಸಿದ್ದೇನೆ)
ಸುಂದರ ಸಾಲುಗಳು ನಾಗರಾಜ್ ರವರೇ ........................ಸತೀಶ್
In reply to ಉ: ಮಾಡಿದ್ದುಣ್ಣೋ ಮಹರಾಯ by sathishnasa
ಉ: ಮಾಡಿದ್ದುಣ್ಣೋ ಮಹರಾಯ
ವಂದನೆ, ಸತೀಶರೇ. 'ಉದ್ಧರೇದಾತ್ಮನಾತ್ಮಾನಾಮ್'!'
ಉ: ಮಾಡಿದ್ದುಣ್ಣೋ ಮಹರಾಯ
ಸತ್ಯಂ ಶಿವಂ ಸುಂದರಂ :-)
In reply to ಉ: ಮಾಡಿದ್ದುಣ್ಣೋ ಮಹರಾಯ by nageshamysore
ಉ: ಮಾಡಿದ್ದುಣ್ಣೋ ಮಹರಾಯ
ಹಿತಮ್! ದನ್ಯವಾದ, ನಾಗೇಶರೇ. :)
In reply to ಉ: ಮಾಡಿದ್ದುಣ್ಣೋ ಮಹರಾಯ by kavinagaraj
ಉ: ಮಾಡಿದ್ದುಣ್ಣೋ ಮಹರಾಯ
ಮಾಯೆಯ ಮುಸುಕಿನಲಿ ಜೀವನಸಾರ... ಪ್ರತಿಪಂಕ್ತಿಯೂ ಅದ್ಭುತ ಸರ್.
In reply to ಉ: ಮಾಡಿದ್ದುಣ್ಣೋ ಮಹರಾಯ by Dhaatu
ಉ: ಮಾಡಿದ್ದುಣ್ಣೋ ಮಹರಾಯ
ವಂದನೆ, ಧಾತುರವರೇ.
ಉ: ಮಾಡಿದ್ದುಣ್ಣೋ ಮಹರಾಯ
ಕವಿನಾರವರಿಗೆ, ಲಕ್ಷ್ಮೀಕಾಂತ ಇಟ್ನಾಳರ ವಂದನೆಗಳು. ಕವನ ಗಹನಾರ್ಥಗಳ, ಗೂಡಾರ್ಥಗಳ ಎಳೆಗಳ ಹೆಣಿಕೆ. ಬಿಡಿಸಿದಷ್ಟೂ ಬಿಡಿಸಿಕೊಳ್ಳುತ್ತದೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ. ಧನ್ಯವಾದಗಳು.
In reply to ಉ: ಮಾಡಿದ್ದುಣ್ಣೋ ಮಹರಾಯ by lpitnal
ಉ: ಮಾಡಿದ್ದುಣ್ಣೋ ಮಹರಾಯ
ಮೆಚ್ಚುಗೆಗೆ ವಂದನೆಗಳು ಲಕ್ಷ್ಮೀಕಾಂತ ಇಟ್ನಾಳರೇ.