ಕಿರು ಚಿತ್ರ
ಹಿನ್ನೆಲೆಯಲ್ಲಿ ಧ್ವನಿ: ಒಂದ್ನಿಮಿಷ, ಇವರೂ ನಮಗೆ ಬೇಕಾದವರೆ, ಬನ್ನಿ ಸ್ವಲ್ಪ ಮಾತಾಡಿಸಿ ಮುಂದೆ ಹೋಗಣ...
(ವ್ಯಕ್ತಿ-2: ನನ್ನು ಬ್ಯಾಕ್ ಶಾಟ್ ಯಿಂದ ಕವರ್ ಮಾಡುವುದು)
ಬೆಂಗಳೂರಿನ ಬೀದಿಯಲ್ಲಿ ಒಬ್ಬ 50 ವರ್ಷ ಆಸುಪಾಸಿನ ವ್ಯಕ್ತಿ ಪತ್ರಿಕೆಯೊಂದನ್ನು ಓದುತ್ತ ಹೋಗುತ್ತಿರುವುದು, ಆ ವ್ಯಕ್ತಿಯನ್ನು ನೋಡಿದ ಇನ್ನೊಬ್ಬ, ಪರಿಚಿತನಂತೆ ಬಂದು ಅವನನ್ನು ತಡೆದು ಮಾತನಾಡಿಸುತ್ತಾನೆ.
ವ್ಯಕ್ತಿ-1: (ಪತ್ರಿಕೆಯನ್ನು ಓದುತ್ತ...) ನಾಲ್ಕು ಹುಡುಗಿಯರು ಒಬ್ಬ ಯುವಕನನ್ನು ಅಪಹರಿಸಿ, ಬೆಂಗಳೂರಿನ ಹೊರವಲಯಕ್ಕೆ ಎತ್ತುಕೊಂಡು ಹೋಗಿ ಶೀಲಹರಣ. (ಸ್ವಗತ –ಅಭಿವೃದ್ಧಿ ಅಂದ್ರೆ ಇದೇ ಇರಬೇಕು!)
(ಮುಂದಿನ ಅಂಕಣ ಓದುತ್ತ...) ಅರ್ಜಿ ಆಹ್ವಾನ: ಮಾನ್ಯ ಮಂತ್ರಿಗಳಿಗೆ ಕುಳಿತಲ್ಲಿಯೇ ನಿದ್ದೆ ಮಾಡುವ ಕಾಯಿಲೆ ಇರುವುದರಿಂದ ಅವರನ್ನು ನಿದ್ದೆ ಮಾಡದಂತೆ ತಡೆಯಲು, ಎಚ್ಚರದಿಂದಿರುವ ಯುವಕರು ಈ ಕೆಳಕಂಡ ವಿಳಾಸಕ್ಕೆ ಅರ್ಜಿಯನ್ನು ಕಳೆಸಬಹುದು. (ಸ್ವಗತ -ನಗಬೇಕು ಅನ್ನಿಸ್ತಿದೆ ಆದರೆ ನಗುನೇ ಬರ್ತಿಲ್ಲ...)
ವ್ಯಕ್ತಿ-2: ಓ... ನಂಜೇಗೌಡ್ರು, ಏನಿಲ್ಲಿ...
ವ್ಯಕ್ತಿ-1: (ಅವನೆಡೆಗೆ ನೋಡುತ್ತ) ನಮಸ್ಕಾರ... ರಮೇಶಪ್ಪ ನವರಿಗೆ, ಚೆನ್ನಾಗಿದಿರಾ...
ವ್ಯಕ್ತಿ-2: ಏನೋ,,, ಹಾಗನ್ನೋದು
ವ್ಯಕ್ತಿ-1: ಕುಟುಂಬನೆಲ್ಲ ಬೆಂಗಳೂರಿಗೆ ವರ್ಗಾವಣೆ ಮಾಡಿದರಂತೆ ಹೌದೆ...
ವ್ಯಕ್ತಿ-2: ಹೌದು ಗೌಡ್ರೆ, ಮತ್ತೆ ನಿಮ್ಮ ದೊಡ್ಡ ಮಗ ಏನು ಮಾಡ್ತಾವ್ನೆ...
ವ್ಯಕ್ತಿ-1: ಇಲ್ಲೇ ಯಾವುದೊ ಕಂಪನಿಲೀ ಕೆಲಸ ಮಾಡ್ಕೊಂಡವನೆ... ಅವನ ಹತ್ರನೇ ಬಂದಿದ್ದು...
ವ್ಯಕ್ತಿ-2: ಅಂತೂ ಮಗನ್ನ ಬೆಂಗಳೂರಿಗೆ ಸೇರಿಸಿದ್ರಿ, ಮತ್ತೇ ಮಳೆ-ಬೆಳೆ ಹೇಗೆ ಊರ ಕಡೆ...
ವ್ಯಕ್ತಿ-1: ಅಯ್ಯೊ ಬಿಡು ರಮೇಶಪ್ಪ ಮಳೆ-ಬೆಳೆ ಚೆನ್ನಾಗಿದ್ದಿದ್ರೆ ಮಗನ್ನೇಕೆ ಈ ಹಾಳಾದ ಬೆಂಗಳೂರಲ್ಲಿ ಬಿಡ್ತಿತಿದ್ದೆ...
ವ್ಯಕ್ತಿ-2: ಅದು ಸರಿಬಿಡಿ
ಅವರು ಮಾತಾಡುತ್ತಿರುವಾಗಲೇ ಹಿನ್ನೆಲೆಯಿಂದ ಧ್ವನಿ: ಕಾಲಾಮಾನವನ್ನು ಬದಲಾಯಿಸುವುದು ನಮ್ಮ ಕೈಯಲ್ಲಿ ಆಗೋ ಮಾತಲ್ಲ. ಅದೇ ಶಾಶ್ವತ. ನಾವೆಲ್ಲ ನಿಮಿತ್ಯ ಮಾತ್ರ. ಅದು ಕರೆದುಕೊಂಡು ಹೋದಂತೆ ಹೋಗುವುದು ನಮ್ಮ ಧರ್ಮ ಮತ್ತು ಕರ್ಮ. ಇದೇ ಅದರ ಮರ್ಮ.
Comments
ಉ: ಕಿರು ಚಿತ್ರ
ಸಂಪದಿಗರೇ,
ಕಿರು ಚಿತ್ರಕ್ಕಾಗುವಷ್ಟು ಚಿತ್ರಕಥೆಯನ್ನು ಚಿತ್ರಿಸಿದ್ದೆ. ಅದರಲ್ಲಿ ಬರುವ ಒಂದು ದೃಶ್ಯವನ್ನು ಇಲ್ಲಿ ಕಾಣಿಸುತ್ತಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಕಳಿಸಿ.
ಉ: ಕಿರು ಚಿತ್ರ
ಸಂಕ್ಷಿಪ್ತವಾಯಿತು. ಸಂದೇಶ ಸ್ಪಷ್ಟವಾಗಬೇಕು. ಉತ್ತಮ ಪ್ರಯತ್ನ. ಮುಂದುವರೆಸಿರಿ.
In reply to ಉ: ಕಿರು ಚಿತ್ರ by kavinagaraj
ಉ: ಕಿರು ಚಿತ್ರ
ಸರ್, ಕಿರು ಚಿತ್ರವಾದ್ದರಿಂದ ಸಾಧ್ಯವಾದಷ್ಟು ಸಂಕ್ಷಿಪ್ತತೆಗೆ ಪ್ರಯತ್ನಿಸಿದೆ. ಮತ್ತೊಮ್ಮೆ ಪರಿಶಿಲಿಸುತ್ತೇನೆ. ಇನ್ನೊಂದು ವಿಚಾರ ನಿಮಗೆ ಹೇಳಬೇಕಾಗಿರುವುದು- ಮೊನ್ನೆ ಮರೆಯಾದವಳು ಎಂಬ ನನ್ನ ಬರಹಕ್ಕೆ ನೀವು ಕೊಟ್ಟ ಸಲಹೆ ನನಗೆ ಬಹಳ ಸಹಕಾರಿಯಾಯಿತು. ನೀವು ಗುರುತಿಸಿದ ಅಂಶಗಳನ್ನು ಪರೀಕ್ಷಿಸಿದಾಗ ನಾನು ಮಾಡಿದ ಎಡವಟ್ಟು ಸ್ಪಷ್ಟವಾಗಿ ಗಮನಕ್ಕೆ ಬಂತು. ತಿದ್ದುಪಡಿಮಾಡಲು ಅಣಿಯಾಗುತ್ತಿದ್ದೇನೆ. ತುಂಬ ಧನ್ಯವಾದಗಳು ಸರ್.
ಉ: ಕಿರು ಚಿತ್ರ
ನಿಮ್ಮ ಕಿರು ಚಿತ್ರದ ಉದ್ದೆಶ ಸ್ಪಶ್ಟವಾಗಿ ಅರ್ಥವಾಗಲಿಲ್ಲ,,,,,,(ಬಹುಷಹ ಅದೇ ಕುತುಹಲ ಇರಬಹುದು),,,,,
1) 1ನೇ ವ್ಯಕ್ತಿ "ನಡೆದು" ಪೇಪರ್ ಓದುತ್ತಾ ಹೊಗುವುದು ಸರಿ ಕಾಣಲಿಲ್ಲ,,,,ಆತ ನಿಂತಲ್ಲಿಯೆ ಅಥವಾ ಕುಳಿತಲ್ಲಿಯೆ ಓದಿದರೆ ಚೆನ್ನ,(ಅಭಿಪ್ರಾಯ ಅಷ್ಟೆ,,,,ತಪ್ಪಿದ್ದರೆ ತಿದ್ದಿ)
ಉಳಿದಂತೆ ಎಲ್ಲವೂ ಚೆನ್ನಾಗಿದೆ ಅನ್ನಿಸಿತು,,,,,ಕಿರು ಚಿತ್ರಕ್ಕೆ ಶುಭ ಹಾರೈಕೆಗಳು,,,
ನವೀನ್ ಜೀ ಕೇ
In reply to ಉ: ಕಿರು ಚಿತ್ರ by naveengkn
ಉ: ಕಿರು ಚಿತ್ರ
ನವೀನ್ ಅವರೆ,
ಉದ್ದೇಶ ಮಾತ್ರ ಸ್ಪಷ್ಟ. ಪ್ರತಿ ದೃಶ್ಯಕ್ಕೂ ಅರ್ಥವಿರಬೇಕೆಂದು ಸಾಧ್ಯವಾದಷ್ಟು ಸಂಕ್ಷಿಪ್ತತವಾಗಿ ಚಿತ್ರಕಥೆಯನ್ನು ಚಿತ್ರಿಸಿದ್ದೇನೆ. ಯಾವುದೊ ಒಂದು ಹಂತದಲ್ಲಿ ಬರುವ ದೃಶ್ಯವಾದ್ದರಿಂದ ನಿಮಗೆ ಹಾಗೆ ಅನ್ನಿಸಲೂಬಹುದು. ಇನ್ನು 1ನೇ ವ್ಯಕ್ತಿ ಪಾದಚಾರಿ ದಾರಿಯಲ್ಲಿ ಪೇಪರ್ ಓದುತ್ತಿರುವ ಉದ್ದೇಶವಿಷ್ಟೆ; ಬೆಳೆಯುತ್ತಿರುವ ಬೆಂಗಳೂರನ್ನು ಬ್ರಿಡ್ಜ ಮೇಲೆ ಓಡುವ ಮೆಟ್ರೊದಿಂದ ಹಿಡಿದು ಅದೇ ಪಾದಚಾರಿ ರಸ್ತೆಯಲ್ಲಿ ಬೀಕ್ಷೆ ಬೇಡುತ್ತಿರುವ ಬೀಕ್ಷುಕನ್ನು ಸೆರೆಹಿಡಿಯಲು ಮತ್ತು ಒಬ್ಬ ವ್ಯಕ್ತಿ ತನಗೆ ಪರಿಚಯವಿರುವ ಇನ್ನೊಬ್ಬ ವ್ಯಕ್ತಿಯನ್ನು ರಸ್ತೆಯಲ್ಲಿಯೇ ನೋಡುವುದು ಸರ್ವೆಸಾಮಾನ್ಯವಾದ್ದರಿಂದ ಹಾಗೆ ಚಿತ್ರಿಸಿದೆ. ನಿಮ್ಮ ಪ್ರತಿಕ್ರಿಯೆ ನನಗೆ ಆತ್ಮವಿಶ್ವಾಸ ತುಂಬುವಲ್ಲಿ ಸಹಾಯವಾಯಿತು ಧನ್ಯವಾದಗಳು ಮತ್ತು ನಿಮ್ಮ ಶುಭಹಾರೈಕೆಗೆ ನನ್ನ ವಂದನೆಗಳು.