ಸುಮ್ನೆ ಹೀಗೆ-೨೦

ಸುಮ್ನೆ ಹೀಗೆ-೨೦

ಮಾವು ಸವಿಯುವಾಗ
ಬೇವನುಣಿಸಿದವರ ನೆನಪು
ಮೃಷ್ಟಾನ್ನವನ್ನುಣ್ಣುವಾಗ
ಗಂಜಿಯೂಟದ  ಮೆಲುಕು

ನೀಡಬೇಕು ಮನಕೂ ತರಬೇತಿ
ಬದುಕಸವಿನನುಭವಿಸಲು ಪೂರ್ತಿ

Rating
No votes yet

Comments

Submitted by nageshamysore Fri, 02/21/2014 - 02:18

ಪ್ರೇಮಾಶ್ರೀಯವರೆ, ಸುಮಾರು ದಿನಗಳ ಅಂತರದ ನಂತರ ಮತ್ತೊಂದು ಸೊಗಸಾದ "ಸುಮ್ನೆ ಹೀಗೆ" ...
.
ಮನಕೆ ತರಬೇತಿ ಕೊಟ್ಟಿದ್ದರೆ - ಕಷ್ಟ ಸುಖ ಸಮನಾಗಿ ಗ್ರಹಿಸುವ ಸಹಿಷ್ಣುತೆ ಮೈಗೂಡುತ್ತದೆ. ಚೆನ್ನಾಗಿದೆ :-)

Submitted by kavinagaraj Wed, 02/26/2014 - 09:01

ಬೇವಿರುವದರಿಂದಲೇ ಮಾವಿನ ರುಚಿ ಜಾಸ್ತಿ!
ಹಸಿವಿದ್ದಾಗ ಗಂಜಿಯೂಟವೂ ಮೃಷ್ಟಾನ್ನವೇ!!
ಚೆನ್ನಾಗಿದೆ, ಪ್ರೇಮಾಶ್ರೀಯವರೇ.