ಒಡನಾಡಿ (ಹಮ್ ದಮ್) ಮೂಲ : ಗುಲ್ಜಾರ್ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ಒಡನಾಡಿ (ಹಮ್ ದಮ್) ಮೂಲ : ಗುಲ್ಜಾರ್ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

        ಒಡನಾಡಿ   (ಹಮ್ ದಮ್)
ಮೂಲ : ಗುಲ್ಜಾರ್ ಸಾಹಬ್     

ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ಆ ತಿರುವಿನಲ್ಲಿ, ಮುದಿ ಮರವೊಂದಿದೆ, ಕಂಡಿದ್ದೀಯಾ?
ಗೊತ್ತಿರದೇನು? ಬಹಳ ವರ್ಷಗಳಿಂದ ನನಗದು ಗೊತ್ತು

ಸಣ್ಣಾಂವ ಇದ್ದಾಗ, ಮಾವಿನಕಾಯಿ ಬೀಳಿಸಲು
ಕೋಲು ಹಿಡಿದು, ಅದರ ಭುಜದ ಮೇಲೆ ಹತ್ತಿದ್ದೆನೊಮ್ಮೆ,
ಯಾವ ರೆಂಬೆಯ ನೋವಿಗೆ, ಕಾಲು ತಾಗಿತ್ತೊ
‘ಧಡ್’ ಎಂದು ನನಗೆ ಬೀಳಿಸಿತ್ತು,
ಬಲು ಸಿಟ್ಟಲ್ಲಿ ಎಸೆದಿದ್ದೆ ಕಲ್ಲು, ನಾನು ಅದರತ್ತ,

ನೆನಪಿದೆ ಇನ್ನೂ, ನನ್ನ ಮದುವೆಯಲ್ಲಿ, ಎಳೆದಳಿರು ನೀಡಿ
ಮದುವೆ ಚಪ್ಪರದ ಹೋಮಕುಂಡವನ್ನು, ಬೆಚ್ಚಗಿರಿಸಿತ್ತು ಅದು,
ಮತ್ತೆ, ಗರ್ಭಿಣಿಯಿದ್ದ ನನ್ನಾಕೆಗೆ, ನಿತ್ಯ ಮಧ್ಯಾಹ್ನ ಹೊತ್ತು
ಹುಳಿಮಾವು ಒಗೆಯುತಿತ್ತು, ಬಯಕೆಯ ದಿನಗಳಲ್ಲಿ, ಅದು

ವಯಸ್ಸಾದಂತೆ,ಹೂವು,ಎಲೆ,ತಲೆಯಿಂದ ಬೋಳಾದವು,
ನನ್ನವಳು ಉರಿದು ಬೀಳುತಿದ್ದಳು, ಹೇಳುವಾಗೊಮ್ಮೆ, ಮಗನ ಮುಂದೆ
‘ಹಾಂ, ಅದೇ ಮರದಿಂದ ಬಂದಿರುವೆ ನೀನು, ಆ ಮರದ ಫಲ ನೀನೋ’
ಈಗಲೂ ಉರಿಯುತ್ತೇನೆ, ನಾನೂ, ಆ ತಿರುವಿನಲ್ಲಿ ತೆರಳುವಾಗೊಮ್ಮೆ,
ಕೀಟಲಿಸಿ ಕೇಳುತ್ತದೆ, ‘ಏನೋ, ತಲೆಮೇಲಿನ ಎಲೆಗೂದಲೆಲ್ಲೋ?’

ಬೆಳಗಿನಿಂದ ಕಡಿಯುತ್ತಿಹರು, ಆ ರಸ್ತೆ ಮಾಡುವವರು ಅದನ್ನು
ತಿರುವಿನಡೆ ಹೋಗಿ, ನೋಡುವ ಧೈರ್ಯ, ಸಾಲುತ್ತಿಲ್ಲ ಇನ್ನೂ!

 

ಚಿತ್ರ ಕೃಪೆ : ಅಂತರ್ಜಾಲ

 

Rating
No votes yet

Comments

Submitted by lpitnal Mon, 03/24/2014 - 09:45

ಕವಿನಾ ಸರ್, ಈ ಗೀತೆಯ ಮೂಲವನ್ನು ನೀಡಲು ತಿಳಿಸಿದ್ದು ಸರಿಯಾಗಿದೆ. ಇಲ್ಲಿದೆ ನೋಡಿ ಸರ್. ಈ ಕವನದ ಸಾಲುಗಳು ಮೂಲದಲ್ಲಿ.
ಹಮ್ ದಮ್ - ಗುಲ್ಜಾರ್ ಸಾಹಬ್
ಮೋಡ ಪೆ ದೇಖಾ ಹೈ ವೊ ಬೂಢಾ ಸಾ ಏಕ್ ಪೇಡ್ ಕಭೀ?
ಮೇರಾ ವಾಕಿಫ್ ಹೈ, ಬಹುತ್ ಸಾಲೋಂ ಸೆ ಮೈಂ ಉಸೇ ಜಾನತಾ ಹೂಂ
ಜಬ್ ಮೈಂ ಛೋಟಾ ಥಾ ತೊ ಇಕ್ ಆಮ್ ಉಡಾನೆ ಕೆ ಲಿಯೇ
ಪಾರಲೀ ದೀವಾರ ಸೆ ಕಂಧೋಂ ಪೆ ಚಢಾ ಥಾ ಉಸಕೆ
ಜಾನೆ ದುಖತೀ ಹುಯೀ ಕಿಸ್ ಶಾಖ ಸೆ ಜಾ ಪಾಂವ ಲಗಾ
ಧಾಡ ಸೆ ಫೇಂಕ್ ದಿಯಾ ಥಾ ಮುಝೆ ನೀಚೇ ಉಸನೆ
ಮೈಂ ಖುನ್ನಾಸ್ ಮೇ ಬಹುತ್ ಫೇಂಕೆ ಥೆ ಪತ್ಥರ ಉಸ ಪರ್
ಮೇರೀ ಶಾದೀ ಪೆ ಮುಝೆ ಯಾದ ಹೈ ಶಾಖೇಂ ದೇಕರ
ಮೇರೀ ವೇಡಿ ಕಾ ಹವನ ಗರ್ಮ ಕಿಯಾ ಥಾ ಉಸನೆ
ಔರ ಜಬ್ ಹಾಮಿಲಾ ಥೀ ‘ಬಿಬಾ’ ತೊ ದೊಪಹರ ಮೇಂ ಹರ ದಿನ್
ಮೇರಿ ಬೀವಿ ಕಿ ತರಫ್ ಕೈರಿಯಾಂ ಫೇಂಕಿ ಥೀ ಉಸೀ ನೆ
ವಕ್ತ್ ಕೆ ಸಾಥ ಸಭೀ ಫೂಲ್ ಸಭೀ ಪತ್ತಿ ಗಯೆ
ತಬ್ ಭೀ ಜಲ್ ಜಾತಾ ಥಾ ಜಬ್ ಮುನ್ನೆ ಸೆ ಕಹತೀ ‘ಬಿಬಾ’
‘ಹಾಂ ಉಸೀ ಪೇಡ ಸೆ ಆಯಾ ಹೈ ತು, ಪೇಡ ಕಾ ಫಲ್ ಹೈ’
ಅಬ್ ಭೀ ಜಲ್ ಜಾತಾ ಹೂಂ, ಜಬ್ ಮೋಡ ಸೆ ಗುಜರತೇ ಮೇಂ ಕಭೀ
ಖಾಸಕರ ಕಹತೇ ಹೈ, ‘ಕ್ಯೂಂ ಸರ ಕೆ ಸಭೀ ಬಾಲ ಗಯೇ?’
‘ಸುಬಹ ಸೆ ಕಾಟ ರಹೇ ಹೈಂ ವೋ ‘ಕಮೀಟಿ’ ವಾಲೆ
ಮೋಡ ತಕ್ ಜಾನೆ ಕಿ ಹಿಮ್ಮತ ನಹೀಂ ಹೋತೀ ಮುಝಕೊ’