ಭಗತಸಿಂಹನ ನೆನೆದು . .

ಭಗತಸಿಂಹನ ನೆನೆದು . .

ಚಿತ್ರ

ಭರತಮಾತೆಯ ವರಸುಪುತ್ರರೇ ಜೀವ ಜ್ಯೋತಿಯನುರಿಸಿರಿ |

ಕಾಳ ಕತ್ತಲೆ ದೂರ ಸರಿಸಲು ಜೀವ ಒತ್ತೆಯನಿರಿಸಿರಿ ||ಪ||

 

ನಿನ್ನ ಬದುಕಿನ ತೈಲ ಸುರಿದಿಹೆ ಹಣತೆ ನಿರತವು ಉರಿಯಲು |

ರುಧಿರವಾಗಿದೆ ಜೀವಸೆಲೆಯು ನಾಡತೋಟಕೆ ಭದ್ರ ಬಲವು |

ನಿನ್ನ ಬಾಳಿನ ರಸವ ಹೀರಿ ಅರಳಿ ನಕ್ಕಿದೆ ಕುಸುಮವು || 

 

ಮೈಯ ಕೊಡವಿ ಮೇಲಕೆದ್ದು ವೈರಿಗಳ ಬಡಿದಟ್ಟಿಹೆ |

ಕರಗಳೆ ಕರವಾಳವಾಗಿ ಎದ್ದು ತೊಡೆಯನು ತಟ್ಟಿಹೆ |

ನಾಡಿನೊಳಿತಿಗೆ ಮಿಡಿದು ಮಡಿದಿಹೆ ಧನ್ಯ ನೀ ಅನನ್ಯನೆ ||

 

ಠೇಂಕಾರದ ಹೂಂಕಾರಕೆ ಗಿರಿಯೆ ಗಡಗಡ ನಡುಗಿದೆ |

ಹರಿದ ರಕುತವೆ ಬಣ್ಣದೋಕಳಿ ಚಿತ್ರ ಬಿಡಿಸಿದೆ ನಭದಲಿ |

ನೆಲವದಲ್ಲವು ಅಮರನಾಗು ನಿನ್ನ ನಾಡದು ಮೇಲಿದೆ ||

 

ಪ್ರಾಣಕಿಂತಲು ನಾಡಮಾನವೆ ಹಿರಿದು ಎಂದಿಹ ಧೀರನು |

ತೃಪ್ತ ಭಾವದಿ ನಗೆಯ ಸೂಸುತ ಹೆಜ್ಜೆ ಹಾಕಿಹ ಶೂರನು |

ಕೋಟಿ ತರುಣರ ಎದೆಯ ತಟ್ಟಲಿ ನಿನ್ನದೀ ಬಲಿದಾನವು ||

 

ಧೀರ ಭೂಮಿ ವೀರ ಭೂಮಿ ಪುಣ್ಯ ಭೂಮಿ ಭಾರತ |

ತರುಣರೆಲ್ಲರು ಭಗತರಾಗಲು ದೇಶ ಮೆರೆವುದು ಶಾಶ್ವತ |

ದುಷ್ಟ ಶಕ್ತಿಯ ಮೆಟ್ಟಿ ನಿಲುವ ಶಕ್ತಿ ಬರುವುದು ನಿಶ್ಚಿತ ||

-ಕ.ವೆಂ.ನಾ.

[ಲಗತ್ತು ಚಿತ್ರ: ಭಗತಸಿಂಗನ ನೆನಪಿನ ಅಂಚೆ ಸ್ಟಾಂಪು]

Rating
No votes yet

Comments

Submitted by lpitnal Mon, 03/24/2014 - 21:33

ಹಿರಿಯರಾದ ಕವಿನಾರವರೇ, ಭಗತ ಸಿಂಗನ ನೆನೆವ ಪದ್ಯ ತುಂಬ ಹೃದ್ಯವಾಗಿ ಪಡಿಮೂಡಿದೆ. ಧನ್ಯವಾದ ಸರ್.

Submitted by lpitnal Mon, 03/24/2014 - 21:34

ಹಿರಿಯರಾದ ಕವಿನಾರವರೇ, ಭಗತ ಸಿಂಗನ ನೆನೆವ ಪದ್ಯ ತುಂಬ ಹೃದ್ಯವಾಗಿ ಪಡಿಮೂಡಿದೆ. ಧನ್ಯವಾದ ಸರ್.