ತಳಂಗರೆ ಶಿಲಾಶಾಸನ
ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ.
ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ ಇಚ್ಛೆಯೇನೆಂದು ಜಯಸಿಂಹ ರಾಜ ಕೇಳಿದಾಗ ಅವಳು ನಿರ್ಜನವಾದ ಕಲ್ಲು ಮುಳ್ಳುಗಳಿಂದ ಕೂಡಿದ ಬರಪೀಡಿತ ಪ್ರದೇಶವೊಂದಕ್ಕಾಗಿ ಬೇಡಿದಳು. ಮಾತಿಗೆ ತಪ್ಪದ ಜಯಸಿಂಹ ರಾಜ ಅವಳು ಬಯಸಿದಂತೆ ರಾಜಧಾನಿಯಿಂದ ಬಲು ದೂರದಲ್ಲಿದ್ದ ನಿರ್ಜನ ಪ್ರದೇಶವೊದನ್ನು ಅವಳಿಗೆ ಉಡುಗೊರೆಯಾಗಿ ನೀಡಿದನು ಅವಳಿಗೆ ನೀಡಿದನು.
ಮೋಚಿಕಬ್ಬೆ ಆ ಭೂಮಿಯನ್ನು ಸ್ವಚ್ಛವಾಗಿಸಿ ನೀರಾವರಿಗಾಗಿ ಕಾಲುವೆಯೊಂದನ್ನು ಅಲ್ಲಿಗೆ ಹರಿಯುವಂತೆ ಮಾಡಿದಳು. ನೀರಿನ ಉಳಿತಾಯಕ್ಕಾಗಿ ಯೋಜನೆಗಳನ್ನು ಹಾಕಿ ಬರಪೀಡಿತ ಭೂಮಿಯನ್ನು ಜನವಾಸಕ್ಕೂ ಕೃಷಿಗೂ ಯೋಗ್ಯವಾಗುವಂತೆ ಪರಿವರ್ತಿಸಿದಳು. ಉದ್ಯಾನಗಳನ್ನೂ ಹಂಚಿನ ಮನೆಗಳನ್ನೂ ನಿರ್ಮಿಸಿ ಅದನ್ನು ಜನರ ಉಪಯೋಗಕ್ಕಾಗಿ ಮೋಚಿಕಬ್ಬೆ ದಾನ ಕೊಟ್ಟಳು.
ಮೇಲ್ಕಂಡ ಶಿಲಾಶಾಸನದಿಂದಲೇ ತಿಳಿದುಬರುವಂತೆ ಆ ಭೂಮಿ ಕಳ್ಳಕಾಕರ ಆಡುಂಬೊಲವಾಯಿತು. ರಾಣಿ ಮೋಚಿಕಬ್ಬೆ ಕೊಲೆ ಕಳ್ಳತನದಂಥ ಅಪರಾಧಗಳನ್ನು ಎಸಗಿದವರಿಗೆ ತಾತ್ಕಾಲಿಕ ಕ್ಷಮಾದಾನವನ್ನೂ ನೀಡಿದ್ದಳು. ರಾಣಿ ಮನುಷ್ಯರ ಮನಸ್ಸನ್ನು ಬಲ್ಲವಳಾಗಿದ್ದಳು. ಅಪರಾಧಗಳನ್ನು ಎಸಗಲು ಪ್ರೇರಣೆಯೊದಗಿಸುವ ವಿಚಾರಗಳನ್ನು ಅರಿತುಕೊಂಡು ಅಪರಾಧಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅನುವಾಗುವ ತಾಣವೊದನ್ನು ರಾಣಿ ಮೋಚಿಕಬ್ಬೆ ಒದಗಿಸಿದಳು. ಶಿಲಾಶಾಸನ ಮುಂದುವರಿದು ಅಪರಾಧಿಗಳು ಅಧಿಕಾರಿಗಳಿಗೆ ಶರಣಾದರೆಂದೂ ರಾಣಿ ಮೋಚಿಕಬ್ಬೆಯಿಂದಲಾಗಿ ರಾಜ್ಯದಲ್ಲಿ ಶಾಂತಿ ನೆಲಸುವಂತಾಯಿತೆಂದೂ ಸಾರುತ್ತದೆ.
ಹೆಚ್ಚಿಗೆ ಓದಲು
* http://www.kamat.com/jyotsna/blog/blog.php?BlogID=452
Comments
ಉ: ತಳಂಗರೆ ಶಿಲಾಶಾಸನ
ಶಿಲಾಶಾಸನದ ಫೋಟೋ ಹಾಕಿದ್ದರೆ ಲೇಖನಕ್ಕೆ ಕಳಶವಿಟ್ಟಂತಾಗುತ್ತದೆ. ಉತ್ತಮ ವಿಚಾರ. ಧನ್ಯವಾದ, ಯುಗಾದಿ ಶುಭಾಶಯಗಳು.
In reply to ಉ: ತಳಂಗರೆ ಶಿಲಾಶಾಸನ by kavinagaraj
ಉ: ತಳಂಗರೆ ಶಿಲಾಶಾಸನ
ನಾಗರಾಜ್ ಸರ್, ಧನ್ಯವಾದಗಳು. ಶಾಸನವನ್ನು ನಾನು ನೋಡಲಿಲ್ಲ. ಮುಂದಿನ ಬಾರಿ ಊರಿಗೆ ಹೋದಾಗ ನೋಡಲು ಸಿಗುವುದಿದ್ದರೆ ಫೋಟೋ ತೆಗೆದು ಇಲ್ಲಿ ಲಿಂಕ್ ಹಾಕುವೆ.
In reply to ಉ: ತಳಂಗರೆ ಶಿಲಾಶಾಸನ by kpbolumbu
ಉ: ತಳಂಗರೆ ಶಿಲಾಶಾಸನ
ನಾಗರಾಜ್ ಸರ್, ಶಾಸನ ಇರುವ ಸ್ಥಳ ಈಗ ತಳಂಗರೆ ಮಸೀದಿಯ ಭಾಗವಾಗಿದೆ. ನೋಡಲು ವಿಶೇಷ ಅನುಮತಿ ಬೇಕಾಗುತ್ತದೆ. ಈ ಸಾರಿ ನೋಡಲು ಸಾಧ್ಯವಾಗಲಿಲ್ಲ. ಈ ಶಾಸನದ ವಿವರಗಳು ಪಿ. ಗುರುರಾಜ ಭಟ್ಟರು ಮತ್ತು ಕೆ.ವಿ. ರಮೇಶ್ ಅವರು ಬರೆದಿರುವ ತುಳುನಾಡಿನ ಪ್ರಾಚೀನ ಇತಿಹಾಸದ ಕುರಿತ ಪುಸ್ತಕಗಳಲ್ಲಿ ದೊರೆಯುತ್ತವೆ.