ಮುಕುಂದೂರು ಸ್ವಾಮಿಗಳು-01
1966 ನೇ ಇಸವಿ. ಬೆಳೆಗೆರೆಯ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದಲ್ಲಿ ಕೃಷ್ಣ ಶಾಸ್ತ್ರಿಗಳು ವಸತಿ ಪಡೆದು ಅಲ್ಲೇ ವಾಸವಿರ್ತಾರೆ.ಒಂದು ದಿನ ಧ್ಯಾನಕ್ಕೆ ಕುಳಿತಿದ್ದಾರೆ.ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಆಶ್ರಮದ ಮುಂದೆ ನಿಂತಂತೆ ದೃಶ್ಯ ಕಾಣುತ್ತಿದ್ದಾರೆ. ಇವರ ಎದುರಿಗೆ ಕೋಪೀನ ಮಾತ್ರವನ್ನೇ ಧರಿಸಿದ್ದ ಸ್ವಾಮಿಗಳು ಜಟ್ಟಿಯಂತೆ ನಿಂತಿದ್ದಾರೆ. " ಕರೆಯೋ ಅವನ್ಯಾರು ನನ್ನೊಡನೆ ಬರ್ತಾನೆ ಕುಸ್ತೀಗೇ!."...ನಗುತ್ತಾ ಸ್ವಾಮಿಗಳು ಹೇಳುತ್ತಿದ್ದಾರೆ.
- " ಏನ್ ಸ್ವಾಮಿ ನಾನು ನಿಮ್ಮನ್ನು ಎಷ್ಟು ದಿನಗಳಿಂದ ನೋಡ್ತಾ ಇದ್ದೀನಿ. ನೀವು ಇದ್ದಂತೇ ಇದ್ದೀರಲ್ಲಾ!" .........ಶಾಸ್ತ್ರಿಗಳು ಕೆಳಿದಂತೆ!
-ಇವನೆಲ್ಲಿ ಬದಲಾಗ್ತಾನೋ, ಇವನು ಹಿಂಗೇ ಇರ್ತಾನೆ!!...ಅಂತಾ ಹೇಳಿ ದಂತೆ...........
ಅಷ್ಟರಲ್ಲಿ ಧ್ಯಾನದ ಸ್ಥಿತಿಯಿಂದ ಶಾಸ್ತ್ರಿಗಳು ಹೊರಬರುತ್ತಾರೆ.
ಮನಸ್ಸಿನಲ್ಲಿ ಏನೋ ತವಕ. ಸ್ವಾಮಿಗಳನ್ನು ನೋಡಿಕೊಂಡು ಬರಬೇಕೆಂದು ಯೋಚಿಸುತ್ತಾರೆ. ಮರುದಿನ ಭಾನುವಾರ.ಹೊರಡಲು ಸಿದ್ಧವಾಗಿದ್ದಾರೆ. ಸ್ನೇಹಿತರಾದ ಮಾಧವರಾಯರು ಪತ್ರಿಕೆಯೊಂದನ್ನು ಹಿಡಿದುಕೊಂಡು ಬರುತ್ತಾರೆ. ಸ್ವಾಮೀಜಿಯವರು ನಿಧನರಾದ ಸುದ್ಧಿಯು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಚಿತ್ರ ಸಮೇತ ಪ್ರಕಟವಾಗಿದೆ!!!!
ಅದೇ ಸಮಯ!! ನಿನ್ನೆ ದಿನ ಯಾವ ಸಮಯದಲ್ಲಿ ಶಾಸ್ತ್ರಿಗಳು ಧ್ಯಾನದ ಸ್ಥಿತಿಯಲ್ಲಿದ್ದಾಗ ದರ್ಶನ ಕೊಟ್ಟಿದ್ದರೋ, ಅದೇ ಸಮಯದಲ್ಲಿ ತಮ್ಮ ಭೌತಿಕ ದೇಹವನ್ನು ತ್ಯಜಿಸಿದ್ದಾರೆ!!!!
-------------------------------------------------------------
ಇಲ್ಲೆರಡು ಚಿತ್ರಗಳಿವೆ. ಒಂದು ಸ್ವಾಮಿಗಳ ಅಮೃತಶಿಲಾ ಮೂರ್ತಿ. ಮತ್ತೊಂದರಲ್ಲಿ ಕೃಷ್ಣಶಾಸ್ತ್ರಿಗಳನ್ನು ಭೇಟಿ ಮಾಡಿದ ಆ ಘಳಿಗೆ! ಹೌದು ಶಾಸ್ತ್ರಿಗಳನ್ನು ಭೇಟಿಯಾಗುವುದು ಸ್ವಲ್ಪ ತಡ ವಾಗಿದ್ದರೂ ಮತ್ತೊಮ್ಮೆ ಅಂತಾ ಅವಕಾಶ ಸಿಗುತ್ತಿರಲಿಲ್ಲ. ತಮ್ಮ ಕಾರ್ ನಲ್ಲೇ ಕರೆದುಕೊಂದು ಹೋದ MCF ನ ಮಾಲತೀ ಭಗಿನಿ ಜೊತೆಯಲ್ಲಿದ್ದಾರೆ.ಅವರಿಗೊಂದು ಥ್ಯಾಂಕ್ಸ್ ಹೇಳಲೇ ಬೇಕು.
-----------------------------------------------------------------
"ಇವನು ಹಿಂಗೇ ಇರ್ತಾನೆ" ಅನ್ನೋದರಲ್ಲೂ ಅಧ್ಯಾತ್ಮವಿದೆ. ಈ ಭೌತಿಕ ಶರೀರವನ್ನು ಈಗ ತ್ಯಜಿಸ್ತಾ ಇದೀನಿ. ಆದರೆ ಆತ್ಮಕ್ಕೆಲ್ಲಿಯ ಸಾವು! ಆತ್ಮಕ್ಕೆ ಸಾವಿಲ್ಲ .ನಿಮ್ಮ ನಡುವೆ ಯಾವಾಗಲೂ ಇರ್ತೀನಿ.ಅನ್ನೋದೇ ಆ ಮಾತಿನ ಗೂಢಾರ್ಥ.
Comments
ಉ: ಮುಕುಂದೂರು ಸ್ವಾಮಿಗಳು-01
ಉತ್ತಮ ವಿಚಾರ! ಧನ್ಯವಾದ, ಶ್ರೀಧರ್.