ಹಕ್ಕಿಗಳ ಮಾತು

ಹಕ್ಕಿಗಳ ಮಾತು

ಹಕ್ಕಿಗಳ ಮಾತು

ಹಕ್ಕಿಗಳು ಜೊತೆಯಾಗಿ ಹಾರಾಡುತಿರುವಾಗ
ಪಕ್ಕನೆರಗಿದ ನೋಟವವರ ಮಾತಾದಾಗ ||ಪ||

    ನೋಡಲ್ಲಿ ನಾಗರಿಕ ಮಾನವರ ದಂಡಿಹುದು
    ಬೇಡದುದ್ಯೋಗಗಳ ಮಾಡುತ್ತಲಿರುವವರು
    ಕಾಡ ಕಡಿದೀಡಾಡಿ ನಾಡ ಕಟ್ಟುವೆವೆನುತ
    ಕಾಡಿಲ್ಲ ನಾಡಿನಲಿ ಗೋಳಿಡುತಲಿಹರು ||1||

ಬೇಡ ಬಾರಿತ್ತ ನೋಡಿಲ್ಲಾದ ಪಾಡುಗಳ
ಕೇಡಿನಲಿ ನಿಸ್ತಂತು ಜಾಲದ ತರಂಗಗಳ
ಸುಳಿಗಳಲಿ ಒದ್ದಾಡಿ ಭ್ರಮೆಭಯದಿ ತತ್ತರಿಸಿ
ನೆಲೆ ಇರದಲಾಗಿರುವರೆಮ್ಮವರು ರೋಸಿ ||2||

    ವನ್ಯ ಸಂಕುಲವೆಲ್ಲ ಸಂಕಟದೊಳಿರುವಾಗ
    ಅನ್ನವಿನ್ನೆಲ್ಲೆಂದು ದೆಸೆಯರಸುತಿರುವಾಗ
    ನಗರಗಳ ತೊಟ್ಟಿಯಲಿ ರಾಶಿರಾಶಿಯು ಬೇಕೆ
    ಲಗುಬಗೆಯಲುಂಡೀರಿ ಗಬ್ಬು ವಿಷ ಜೋಕೆ ||3||

ತಣ್ಣನೆಯ ನೀರೆಂದು ಹೊಳೆಯೊಳಗೆ ಧುಮುಕದಿರಿ
ಹುಣ್ಣಾಗುವುದು ಮೈಗೆ ಕುಡಿವುದಂತಿರಲಿ
ಕೊಡುಬೇಗ ಮರಣವನು ನರಳಿಸದಿರೆಂದೆನುತ
ಬಿಡುಗಡೆಯ ಮಾರ್ಗವನೆ ನೋಡುತಿಹವು ||4||

*****
  - ಸದಾನಂದ 

Rating
No votes yet

Comments

Submitted by kavinagaraj Fri, 04/25/2014 - 08:55

ಮನ ಮಾಲಿನ್ಯ ಮತ್ತು ಪರಿಸರ ಮಾಲಿನ್ಯದ ಕಿರುನೋಟ! ಚೆನ್ನಾಗಿದೆ, ಸದಾನಂದರೇ.