ಚಿತ್ರ ಚಾವಡಿ !

Submitted by nagaraju Nana on Sun, 05/04/2014 - 15:54

ಕೊಳ್ಳೇಗಾಲದ ಚಿಕ್ಕ ಪರಿವಾರ ಬೀದಿಯಲ್ಲಿ ಚಿತ್ರಚಾವಡಿ ಇದೆ.
ಅದು ಅಪೂರ್ವ ಭಿತ್ತಿ ಚಿತ್ರಗಳನ್ನು ಹೊಂದಿದೆ.ಈ ಚಾವಡಿಯನ್ನು
ಪಾಳೆಯಗಾರ ಮನೆತನದ ನಾಲ್ಕು ಪ್ರಮುಖ ವ್ಯಕ್ತಿಗಳು ಜನರಿಗೆ
ನ್ಯಾಯ ದೊರಕಿಸಿಕೊಡಲು ಕಟ್ಟಿಸಿರುವರು. ಜನರು ಧರ್ಮದಲ್ಲಿ
ನಂಬಿಕೆ ಇಟ್ಟಿರಲೆಂದು ಇಲ್ಲಿನ ಗೋಡೆಗಳ ಮೇಲೆ ದಭಿತ್ತಿ ಚಿತ್ರಗಳನ್ನು
ಬರೆಸಿದ್ದಾರೆ. ಈ ಚಾವಡಿಯು ಆಯತಾಕಾರದಲ್ಲಿದ್ದು 7ಮೀಟರ್
ಉದ್ದ ಮತ್ತು5 ಮೀಟರ್.ಅಗಲವಿದೆ.ಮಂಗಳೂರು ಹೆಂಚು
ಹೊದಿಸಿದೆ.ಚಾವಡಿಯ ಮುಂಭಾಗದಲ್ಲಿ ನಾಲ್ಕು ಮರದ ಕಂಬಗಳಿದ್ದು
ಸಿಂಹದ ತಲೆ ಮತ್ತು ಚಿತ್ತಾರಗಳನ್ನು ಹೊಂದಿದೆ.ಚಾವಡಿಯ
ಒಳಭಾಗದಲ್ಲಿ ಎರಡು ಮರದ ಕಂಬಗಳಿದ್ದು ಚಿತ್ತಾರಗಳನ್ನು
ಹೊಂದಿದೆ.ಮೇಲೆ ಅಷ್ಟಾಕಾರದವಿನ್ಯಾಸವಿದ್ದು ಅದರಲ್ಲಿ
ನಾಲ್ಕು ಮೂಲೆಗಳಲ್ಲಿ ಹೂವಿನ ವಿನ್ಯಾಸದೊಳಗೆ ನಾಲ್ವರು
ದೇವ ಮಾನವರಚಿತ್ರಗಳಿವೆ.ಅದರ ಸುತ್ತ ತಾವರೆ ಹೂವಿನ
ಆಕಾರದೊಳಗೆ ನಾಲ್ಕು ಮಾನವರ ಚಿತ್ರಗಳಿವೆ.ಈ ಮಾನವರ
ತಲೆಗಳನ್ನು ಚಾವಡಿಯ ಸಂಸ್ಥಾಪಕರದ್ದು ಎನ್ನುತ್ತಾರೆ.
ಎಡ ಬದಿಯ ಗೋಡೆಯಲ್ಲಿ ಟಿಫ್ಫುಸುಲ್ತಾನ ಬ್ರಿಟಿಷರ
ವಿರುದ್ದ ಯುದ್ದ ಮಾಡುತ್ತಿರುವ ಚಿತ್ರ,,ರಾಮ ಮತ್ತು ರಾವಣರ
ಯುದ್ದ.,ಅರ್ಜುನ ಮತ್ತು ಕ್ರಿಷ್ಣ ರಣರಂಗದಲ್ಲಿರುವ ಚಿತ್ರ.
ಗಳಿವೆ. ಮಧ್ಯದ ಗೋಡೆಯಲ್ಲಿ ಶಿವ ಪಾರ್ವತಿಯ ಕಲ್ಯಾಣ
ಗೊಲ್ಲಕ್ರಿಷ್ಣ,ಗಜಲಕ್ಷ್ಮಿ ಕಾಳಿಂಗ ಮರ್ದನ.ರಾಮ ಪಟ್ಟಾಭಿಷೇಕ
ಚಿತ್ರಗಳಿವೆ.ಬಲಬದಿಯಲ್ಲಿಶೇಷಶಯನ ವಿಷ್ಣು..
ಮುಮ್ಮಢಿ ಕ್ರಿಷ್ಣ ರಾಜ ಒಡೆಯರ್ ದರ್ಬಾರ್ ಚಿತ್ರಗಳಿವೆ.
ಈ ಚಿತ್ರಗಳು ಹಾಳಾಗುತ್ತಿವೆ.ಪ್ರಾಚ್ಯವಸ್ತು ಸಂಗ್ರಹಾಲಯದವರು
ಸಂರಕ್ಷಿಸ ಬೇಕಾಗಿದೆ.
-ನಾನಾ,ಕೊಳ್ಳೇಗಾಲ.