ನಾನು ದೇಶ
ಪಟಿಂಗ ರಾಯನು
ಕುಡಿದ ಕೊಳಾಯಿಗಟ್ಟಲೆ
ಶುದ್ದ ನೀರೆಲ್ಲ ಅವನ ಗಟ್ಟಿ
ಹೊಟ್ಟೆಯೊಳಗೆ ಜೀರ್ಣವಾಗಿ
ಅದರಿಂದ ಕೆಳಗಿಳಿದು
ಉಳಿದ ಹನಿ ಮೂತ್ರ ಚಿಮುಕಿಸಿ
ನನ್ನ ಉದ್ದಾರ ಮಾಡುತ್ತೇನೆ
ಎಂದು ಬೀಗಿದ,,,
ಕಾಯುತ್ತಿದ್ದಾರೆ ನನ್ನ ಜನ
ಕಪ್ಪು ಕಣ್ಣುಗಳಲ್ಲಿ
ನನ್ನ ಜನರ ಕಣ್ಣುಗಳಲ್ಲಿರುವುದೆಲ್ಲ
ಬರಿಯ ಬೆತ್ತಲೆ ಆಕಾಶದ ಛಾಯೆ,,,
ನಾನು ಸತ್ತು ಸ್ವರ್ಗಕ್ಕೆ ಸೇರುವ
ತವಕದಲ್ಲಿದ್ದೇನೆ
ಮೂಕವಾದ ನನ್ನ ಜನ
ಬೇಡುವುದು ಯಾರನ್ನು ??
ಬಡಾಯಿ ಕೊಚ್ಚಿ
ಕೊಚ್ಚೆಯೊಳಗೆ ಮೀನು ಹುಡುಕಿದ
ಪಟಿಂಗನ ಮೋಡಿಗೆ
ಒಳಗಾದ ನನ್ನ ಜನ ,,
ಬೇರೆ ಬದುಕನ್ನೇ ಮರೆತಂತಿದೆ
ಬೆಚ್ಚಗಿರುವವರು ತಣ್ಣಗೆ ನಗುತಿಹರು
ಬಡವ ಬಿಚ್ಚಿ ಹಾಕಿದ ಅಂಗಿಯ
ಗುಂಡಿಯನೂ ಹಾಕಲು ಯೋಗ್ಯತೆ
ಇಲ್ಲದ ಪಟಿಂಗ
ಬಡವನಿಗೆ ಗುಂಡಿ ತೋಡಿ
ಮುಚ್ಚಿಹನು ,,,
ಆಗಲು ಬೆಚ್ಚಗಿರುವವರು ತಣ್ಣಗೆ ನಗುತಿಹರು,,,
ಕೆಚ್ಚೆದೆಯಲ್ಲಿ ಹೋರಾಡುವ ದಿಟ್ಟ ತನಕ್ಕೆ
ಕುತಂತ್ರದಲ್ಲೇ ಕೊಚ್ಚಿ ಕೊಚ್ಚಿ
ಹಾಕಿಸಿದ ಪಟಿಂಗ
ಮಂತ್ರ ಮುಗ್ಧ ನನ್ನ ಜನ ಅವನ ಹೊಗಳಿ,,,
ಅಬ್ಬ ಎಂತಹ ಮೂರ್ಖ ನನ್ನ ಜನ
ಹೊತ್ತು ಸಾಗಿದ್ದೇನೆ ನಾನು
ಬೆತ್ತಲಾಗಿ.ಮುಚ್ಚು ಮರೆಯಿಲ್ಲದೆ
ವ್ಯವಸ್ಥೆಗೆ "ಅ"ವನು ಸೇರಿದರೆ
ಅವ್ಯವಸ್ಥೆ
ಗುಳಿ ಕಣ್ಣುಗಳ, ತೆಳು ಹೊಟ್ಟೆಯ
ಅನ್ನ ಬೇಡುವ ಜನರನು ನೋಡಿ
ನಕ್ಕಿಹನು ಪಟಿಂಗ,
ಅವರಿಗೂ ಮೂತ್ರ ಕುಡಿಸುವ ಹುನ್ನಾರ
ನನ್ನ ಜನ, ನನ್ನ ಜನ, ನನ್ನ ಜನ,,,,,
ನಾನು ಸತ್ತು ಸ್ವರ್ಗ ಸೇರಿದರೆ
ಎಲ್ಲಿ ನನ್ನ ಜನ!!!
ತಿಂದುಂಡು ಭೋಗಿಸಿ, ತೇಗಿಸಿ,
ಹಳಸಿದ್ದನ್ನು, ಹಂಚಿ
ದಾನಿ ಎಂದು ಬೀಗುವ ಪಟಿಂಗ
ಇನ್ನೂ,,, ಸರಿಗಾಣುವುದು ಎಂದು
ಬಾಯಿ ಕಳೆದು ಆಕಾಶ ನೋಡಿದರೆ ಏನು ಬಂತು ?
ಸತ್ತು ಸ್ವರ್ಗ ಸೇರಿ ನನ್ನೊಂದಿಗೆ
ನಾನು ದೇಶ
ಬರೆದವನು ನನ್ನ ಮುದ್ದು ಮೂರ್ಖ ಜನರ ಪ್ರತಿನಿಧಿ,,
-----ಜೀ ಕೇ ನ
Comments
ಉ: ನಾನು ದೇಶ
ನವೀನ್, ಅನ್ಯಾಯ, ಅತ್ಯಾಚಾರಗಳ ವಿರುದ್ಧದ ದನಿ ಕಂಡರೂ, ನಿರಾಶಾವಾದ ಇಣುಕುತ್ತಿದೆ. ಕತ್ತಲೆಯ ನಂತರ ಬೆಳಕು ಬರಲೇಬೇಕು, ಬರುತ್ತದೆ. ಏನು ಮಾಡಲಿ, ನಾನೊಬ್ಬ ಆಶಾವಾದಿಯಾಗಿ ನನಗೆ ಅನ್ನಿಸುವುದೇ ಇದು! ನಿಮ್ಮ ಒಳ ಆಶಯವೂ ಇದೇ ಅಲ್ಲವೆ?
In reply to ಉ: ನಾನು ದೇಶ by kavinagaraj
ಉ: ನಾನು ದೇಶ
ಖಂಡಿತಾ ಕವಿಗಳೇ,,,, ನೀವು ಹೇಳಿದ್ದೆ ನನ್ನ ಒಳ ಆಶಯ,,,, ಖಂಡಿತಾ ಅದೇ ಬೆಳಕು ನಮ್ಮ ದೇಶಕ್ಕೆ ಬೇಕು,,, ಕಾದು ನೋಡೋಣ,,,, ಪ್ರತಿಕ್ರಿಯೆಗೆ ಧನ್ಯವಾದಗಳು,,