ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ

ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ

ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ

ಹೊಸ ಸರ್ಕಾರವೊಂದು ಚುನಾವಣೆಯ ನಂತರ ಅಧಿಕಾರ ವಹಿಸಿಕೊಳ್ಳುವಾಗ ಗೋಪ್ಯತೆಯ ಪ್ರಮಾಣವಚನ ಸಮಾರಂಭವನ್ನು ಏರ್ಪಡಿಸಲಾಗುತ್ತದೆ.  ಆದರೆ ಇದನ್ನು ನಮ್ಮ ಮಾಧ್ಯಮಗಳು 'ಪಟ್ಟಾಭಿಷೇಕ' ಎಂಬ ಹೆಸರಿನಲ್ಲಿ ಕರೆಯುವುದು ಎಷ್ಟರ ಮಟ್ಟಿಗೆ ಸರಿ?  ಪಟ್ಟಾಭಿಷೇಕ ಎಂಬುದು ರಾಜಸತ್ತೆಯಲ್ಲಿ ರಾಜನು ಅಧಿಕಾರದ ಪಟ್ಟಕ್ಕೆ ಏರುವಾಗ ಏರ್ಪಡಿಸುವ ಸಮಾರಂಭ.  ಇಂದು ರಾಜಸತ್ತೆಯಿಂದ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡು ೬೫ ವರ್ಷಗಳು ಸಂದಿವೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುವಂಶೀಯವಾಗಿ ಅಧಿಕಾರ ತಂದೆಯಿಂದ ಮಗನಿಗೆ ವರ್ಗಾವಣೆ ಆಗುವುದಿಲ್ಲ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಗದಿತ ಅವಧಿಗೆ ಚುನಾವಣೆ ನಡೆಸಿ ಸರ್ಕಾರವನ್ನು ಮುನ್ನಡೆಸುವ ನಾಯಕನ ಆಯ್ಕೆ ಮಾಡಲಾಗುತ್ತದೆ.  ಹೀಗಾಗಿ ಪ್ರಮಾಣವಚನ ಸಮಾರಂಭವನ್ನು ಪಟ್ಟಾಭಿಷೇಕ ಎಂಬ ಹೆಸರಿನಿಂದ ಕರೆದು ಜನತೆಯನ್ನು ಗುಲಾಮಗಿರಿಗೆ ದೂಡದಿರಿ.

(ಚಿತ್ರ ಕೃಪೆ: ಗೂಗಲ್ ಇಮೇಜಸ್)

Comments

Submitted by abdul Fri, 05/23/2014 - 13:05

'ಮಾಡಿದ್ದುಣ್ಣೋ ಮಹಾರಾಯ' ಗಾದೆಯನ್ನು ಕೇಳಿರಲೇಬೇಕು, ಅಲ್ಲವೇ?

ರಾಹುಲ್ ಗಾಂಧಿಯವರನ್ನು "ಯುವರಾಜ", "shehzada" ಎಂದು ಜರೆಯುವಾಗ, ಎದುರಾಳಿ ವಿರುದ್ಧ ಪ್ರಯೋಗಿಸಿದ ಭಾಷೆ ತಮ್ಮ ಮೇಲೂ boomerang ಆಗಬಹುದು ಎನ್ನುವ ಪ್ರಜ್ಞೆ ಇದ್ದಿದ್ದರೆ ತಾವು ಈ ಪುಟ್ಟ ಲೇಖನ ಬರೆಯುವ ಅವಶ್ಯಕತೆ ಇರಲಿಲ್ಲ.