"ಓ ಕನಸ" ಕಾಡುವೆ ಏಕೆ"?

"ಓ ಕನಸ" ಕಾಡುವೆ ಏಕೆ"?

ನಾನು ಎಂದೂ ಊಹಿಸಿದ  ಆ ಚಿತ್ರಣ,

ನನ್ನ ಕನಸಿನಲ್ಲಿ ಮೂಡುವುದು ಏಕೆ,

ಬೆಚ್ಚಿಬೀಳುವ ಹಾಗೆ ಮಾಡುವುದು,

ಕತ್ತಲೆಯಲ್ಲಿ ಮೂಡುವ  ಆ ಘಟನೆ,

ಕೆಲವೊಮ್ಮೆ ಅರಿಯದೆ ಬರುವ ಪಾತ್ರಧಾರಿಗಳು, 

ಈ ಜನ್ಮದಲ್ಲಿ ಅವರು  ನನ್ನ ಸಂಬಂಧಿಕರಲ್ಲ,

ಈ ಯುಗದಲ್ಲಿ ನಂಬುವವರು ಯಾರು,

ಈ ನನ್ನ ಕನಸನ್ನು,ತಿಳಿಯದಾಗಿದೆ,

ಇದು ನನ್ನ ಸುಪ್ತ ಮನಸ್ಸಿನ ಕಲ್ಪನೆಯೊ ಗೊತ್ತಿಲ್ಲ,

ಓ ಕನಸೆ ಕಾಡುವೆ ಏಕೆ?.

 

Rating
No votes yet

Comments

Submitted by H A Patil Fri, 01/24/2014 - 19:33

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
' ಓ ! ಕನಸೆ ಕಾಡುವೆ ಏಕೆ ?' ಒಂದು ಸರಳ ಆದರೆ ಗಂಭೀರವಾಗಿ ಯೋಚಿಸುವಂತೆ ಮಾಡುವ ಕವನ. ನಿಮ್ಮ ಕನಸು ನಿಮ್ಮ ಸುಪ್ತ ಮನಸಿನ ಅಭಿವ್ಯಕ್ತಿಯೂ ಇರಬಹುದು, ಆದರೂ ನೀವು ಕನಸು ಕುರಿತು ದಾಖಲಿಸುವ ಪರಿ ಸಂತಸ ಉಕ್ಕಿಸುತ್ತದೆ. ಅಲ್ಲ ಸ್ವಾಮಿ ಕಾಡದಿದ್ದರೆ ಅದನ್ನು ಕನಸೆಂದಾದರೂ ಏಕೆ ಕರೆಯಬೇಕು. ಸುಂದರ ಕವನ ನೀಡಿದ್ದೀರಿ ಧನ್ಯವಾದಗಳು.

Submitted by nageshamysore Sat, 02/08/2014 - 17:25

ರವೀಂದ್ರರೆ, ಕನಸಲಿ ನಡೆಯುವ / ಕಾಣುವ ಕೆಲವು ವರ್ಣನೆಗಳು ವಿವರಣೆಯಾಳಕ್ಕೆ ಮೀರಿದ ಅನುಭೂತಿಯ ವಸ್ತುಗಳು. ಸುಖದನುಭವವೊ ಕರಾಳತೆಯ ಸ್ವಪ್ನವೊ - ಎರಡೂ ವಿಚಿತ್ರವೆ. ಆ ಅಪರಿಚಿತತೆಯ ಭಾವವನ್ನು ಬಿಂಬಿಸುವ ಕವನ - ಚೆನ್ನಾಗಿದೆ :-)