ಕರೆಂಟ್ ಮೋಹನ್

ಕರೆಂಟ್ ಮೋಹನ್

ಕೇರಳದಲ್ಲಿ ನೆಲೆಸಿರುವ ರಾಜ್  ಮೋಹನ್ ನಾಯರ್ ಎಂಬ ವ್ಯಕ್ತಿಯ ದೇಹದ ಮೂಲಕ ೨೩೦ ವೋಲ್ಟ್ ವಿದ್ಯುತ್ ಹರಿದರೂ ಯಾವುದೇ ತೊಂದರೆ ಆಗದ ಅದ್ಭುತವೊಂದನ್ನು ಕೆಲ ದಿನಗಳ ಹಿಂದೆ ನ್ಯೂಸ್ ನೇಶನ್ ಎಂಬ ಹಿಂದಿಯ ಸುದ್ದಿ ವಾಹಿನಿಯಲ್ಲಿ ತೋರಿಸಿದರು.  ಇವರು ೧೧ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಹತ್ತಿ ತಂತಿಯನ್ನು ಕೈಯಲ್ಲಿ ಹಿಡಿದರೂ ಏನೂ ಆಗಲಿಲ್ಲವಂತೆ.  ಹೀಗಾಗಿ ಇವರಲ್ಲಿ ಇಂಥ ಅದ್ಭುತ ಶಕ್ತಿ ಇರುವುದು ಬೆಳಕಿಗೆ ಬಂತು ಎಂದು ಇವರು ಹೇಳುತ್ತಾರೆ.  ಟಿವಿ ಕಾರ್ಯಕ್ರಮದಲ್ಲಿ ಇವರು ಪ್ಲಗ್ಗಿನಿಂದ ವಿದ್ಯುತ್ ತಂತಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಕೈಯಲ್ಲಿ ಹಿಡಿದಿರುವ ಇನ್ನೊಂದು ತಂತಿಯನ್ನು ಬಲ್ಬಿಗೆ ಜೋಡಿಸಿ ಬಲ್ಬು ಉರಿಸುತ್ತಾರೆ.  ಅವರ ದೇಹದ ಮೂಲಕ ಹರಿಯುವ ಕರೆಂಟಿನ ಮೂಲಕ ಟೇಬಲ್ ಫ್ಯಾನ್ ತಿರುಗುತ್ತದೆ.  ಅವರ ದೇಹದ ಮೂಲಕ ಹರಿದುಬಂದ ವಿದ್ಯುತ್ತಿನಿಂದ ಹೀಟರಿನಲ್ಲಿ ಕೋಳಿಮಾಂಸವನ್ನು ಬೇಯಿಸಿ ತೋರಿಸಿದರು.  ವೋಲ್ಟ್ ಮೀಟರ್ ಮೂಲಕ ಅಳೆದು ನೋಡಿದಾಗ ಇವರ ದೇಹದಲ್ಲಿ ೨೩೦ ವೋಲ್ಟ್ ವಿದ್ಯುತ್ ಹರಿಯುತ್ತಿರುವುದನ್ನು ತೋರಿಸಿತು.  ಸಾಮಾನ್ಯವಾಗಿ ಒಂದು ಆಂಪಿಯರ್ ವಿದ್ಯುತ್ತಿನ ಹತ್ತನೇ ಒಂದು ಭಾಗ ವಿದ್ಯುತ್ ಮಾನವ ದೇಹದ ಮೂಲಕ ಹರಿದರೂ ಅದು ವ್ಯಕ್ತಿಯನ್ನು ಕೊಲ್ಲಬಲ್ಲದು.  ಆದರೆ ಕರೆಂಟ್ ಮೋಹನ್ ಅವರ ದೇಹದ ಮೂಲಕ ೧೦ ಆಂಪಿಯರ್ ವಿದ್ಯುತ್ ಹರಿದರೂ ಏನೂ ಆಗದೆ ಇರುವುದು ಅಚ್ಚರಿಯ ಸಂಗತಿ.  ಇದು ಹೇಗೆ ಸಾಧ್ಯ ಎಂದು ವಿವರಿಸಲು ವಿಜ್ಞಾನಿಗಳು, ವೈದ್ಯಕೀಯ ತಜ್ಞರೂ ವಿಫಲರಾಗಿದ್ದಾರೆ ಎಂದು ಟಿವಿ ವರದಿಗಾರರು ತಿಳಿಸಿದರು.  ಈ ಕುರಿತ ವೀಡಿಯೊ ದೃಶ್ಯಗಳು ಯುಟ್ಯೂಬಿನಲ್ಲೂ ಲಭ್ಯವಿದೆ.  ಯೂಟ್ಯೂಬಿನಲ್ಲಿ ಕರೆಂಟ್ ಮೋಹನ್ ಎಂದು ಹಾಕಿದರೆ ವೀಡಿಯೊ ಬರುತ್ತದೆ.  ಆಸಕ್ತರು ನೋಡಬಹುದು.  ಇವರು ಈ ರೀತಿ ಮಾಡಿ ಸಾರ್ವಜನಿಕ ಪ್ರದರ್ಶನ ಕೊಡುವುದನ್ನು ಕೇರಳ ಸರಕಾರ ನಿಷೇಧಿಸಿದೆಯಂತೆ ಏಕೆಂದರೆ ಇದನ್ನು ಅನುಸರಿಸಿ ಮಕ್ಕಳು ಇನ್ನಿತರರು ಅಪಾಯಕ್ಕೆ ಈಡಾಗಬಹುದು ಎಂಬ ದೃಷ್ಟಿಯಿಂದ. 

Comments