ರಾಣಿ ಆಜ್ಞೆ

ರಾಣಿ ಆಜ್ಞೆ

ಚಿತ್ರ

 ಜೂನ್ ೨೦ ಆದರೂ ಬೆಂಗಳೂರಲ್ಲಿ ಮಳೆಯ ಸುಳಿವೇ ಇಲ್ಲ! ಯಾಕೆ? ಬಹಳ ಯೋಚನೆ ಮಾಡಿದೆ. ನನ್ನಲ್ಲಿರುವ ಎಲ್ಲಾ ಕಡತಗಳನ್ನು ತೆಗೆದು ಪರಿಶೀಲಿಸಿದಾಗ ಗೊತ್ತಾಯ್ತು!-
ಕಡು ಬಿಸಿಲ ಟೈಮಲ್ಲಿ ಬರೆದಿಟ್ಟಿದ್ದ ಬರಹವನ್ನು ಇನ್ನೂ ನಾನು ಸಂಪದಕ್ಕೆ ಹಾಕಿರಲಿಲ್ಲ! ಮಳೆಗಾಲ ಪ್ರಾರಂಭಕ್ಕೆ ಮೊದಲೇ ಸಂಪದದಲ್ಲಿ ಹಾಕಬೇಕೆಂದಿದ್ದೆ. ಆಗಿರಲಿಲ್ಲ. ಈಗ ಉತ್ತಿದ್ದೇನೆ. ನೀವೆಲ್ಲಾ ಓದಿ, ಪ್ರತಿಕ್ರಿಯೆಯ ಮಳೆ ಹರಿಸಿದರೆ, ಬಾಹರ್ ಭೀ ಭರ್ಜರಿ ಬಾರಿಶ್ ಬರುವುದು. :)
 ನನಗೆ ಇನ್ನೂ ಒಂದು ಡೌಟು ಇತ್ತು. ಅದನ್ನೂ ಪರಿಶೀಲಿಸಿಬಿಡೋಣ ಅಂತ ನಮ್ಮ "ಸ್ಕೈಲಿಶ್ ಅಪಾರ್ಟ್ಮೆಂಟಿ"ನ  "ಸ್ಕೈ ಲೆವೆಲ್"ಗೆ ಹೋಗಿ, ಮೋಡಗಳ ಬಳಿ, ಕವಿಗಳ ನಾಲ್ಕು ಮಾತು- "ಎಲ್ಲಿ ಹೋಗುವಿರಿ, ನಿಲ್ಲಿ ಮೋಡಗಳೆ, ನಾಲ್ಕು ಹನಿಯ ಚೆಲ್ಲಿ...." ರಾಗವಾಗಿ ಹೇಳಿದೆ. ಮೋಡಗಳು ಇನ್ನೂ ವೇಗವನ್ನು ಹೆಚ್ಚಿಸಿ, "ಜಯಲಲಿತಾ" ದಿಕ್ಕಿಗೆ ಓಡಿದವು. ಮೋಡಗಳನ್ನೇ ಸೆಳೆಯುವ ಶಕ್ತಿ ಇರುವವಳಿಗೆ ಮೋದಿ ಪಕ್ಷ ಇನ್ಯಾವ ಲೆಕ್ಕ.. ಛೇ. ನಮ್ಮಲ್ಲೂ ಅಂತ ಜನನಾಯಕಿಯರು ಇಲ್ಲವೇ..
ನನ್ನ ಪ್ರಯತ್ನ ನಾನು ಮಾಡುವೆ-ಸುಡು ಬೇಸಿಗೆಯಲ್ಲಿ ಬರೆದ ಲೇಖನಇಲ್ಲಿದೆ. ಓದಿ-
 ಯಾವ ಪುಣ್ಯಾತ್ಮ ನೆಟ್ಟದ್ದೋ,  ನಾನು ಕೆಲಸಕ್ಕೆ ಹೋಗಿ ಬರುವ ರಸ್ತೆಯುದ್ದಕ್ಕೂ, ಎರಡೂ ಪಕ್ಕದಲ್ಲಿ ದೊಡ್ಡದೊಡ್ಡ ಹೂವಿನ ಮರಗಳು ಇದೆ. ಬಿಸಿಲ ಝಳ ಅಷ್ಟೊಂದು ಬಾಧಿಸದಂತೆ ರಕ್ಷಣೆಯನ್ನೂ, ಜತೆಗೆ ಕೆಂಪು, ಹಳದಿ, ನೇರಳೆ..ಬಣ್ಣಬಣ್ಣದ ರಾಶಿ ರಾಶಿ ಹೂಗಳು ಕಣ್ಣಿಗೆ ತಂಪನ್ನೂ ನೀಡುತ್ತಿದೆ.
 ಒಂದು ದಿನ ಪತ್ನಿಯ ಜತೆ, ಸ್ಕೂಟರಲ್ಲಿ ಈ ರಸ್ತೆಯಲ್ಲಿ ಹೋಗುವಾಗ, ಕೆಂಪು ಹೂ ಗೊಂಚಲು ನನ್ನ ತಲೆ ಮೇಲೆ ಬಿತ್ತು.
ತಲೆಯನ್ನು ಜೋರಾಗಿ ಅಲ್ಲಾಡಿಸಿದಾಗ, ಅದು ಇನ್ನೂ ಕೂದಲೊಳಗೆ ಸೇರಿಕೊಂಡಿತು! (ಹೆಲ್ಮೆಟ್ ಹಾಕದಿದ್ದ ತಪ್ಪಿಗೆ ಶಿಕ್ಷೆ) ಹೂ ತೆಗೆಯಲು ನಾನು ಬಲಗೈ ಎತ್ತಿದರೆ ಸ್ಕೂಟರ್ ಡೈರೆಕ್ಷನ್ ಬದಲಿಸಿ ಎಡಕ್ಕೆ ಹೋಗಲು ಪ್ರಾರಂಭಿಸುವುದು. ಹೆಂಡತಿ ನನ್ನ ಭುಜದ ಮೇಲಿಂದ ಕೈ ತೆಗೆದರೆ, ಸ್ಕೂಟರ್ ಹಿಂದಿನ ಚಕ್ರದಲ್ಲಿ ಓಡಿ "ವೀಲಿಂಗ್" ಮಾಡಿದೆ ಎಂದು ಫೈನ್ ಹಾಕುವರು. ಅದಕ್ಕೆ ಈಗೇನೂ ಮಾಡುವುದು ಬೇಡ, ನಗುವವರು ನಗಲಿ, ಸಿಗ್ನಲ್ ಬಳಿ ನಿಂತಾಗಲೇ ತೆಗೆಯುವ ಅಂತ ಸ್ಕೂಟರ್ ಓಡಿಸಿದೆ.
 "ಭುಜದುದ್ದಕ್ಕೂ ಕೂದಲು, ಜತೆಗೆ ಕೆಂಪು ಹೂ, ಹಿಂದಿನಿಂದ ನೋಡಲು ಹಳೇ ಕಾಲದ ಹೆಂಗಸರಂತೆ ಕಾಣಿಸುತ್ತೀರಿ" ಅಂದು ನಕ್ಕಳು ನನ್ನಾಕೆ.
"ಅಲ್ವೇ, ರಸ್ತೆ ಬದಿಯಲ್ಲಿ ಹೂಮರಗಳು, ಹೂ ಬೀಳುವುದು, ನೋಡುವಾಗ ನಿನಗೇನನಿಸುತ್ತದೆ?" ಅಂದೆ.
"ಬೆಳಗ್ಗೆ ರಸ್ತೆ ಗುಡಿಸುವವಳಿಗೆ ತುಂಬಾ ಕೆಲಸ.."
"ಅದಲ್ವೇ. ಬೇರೆ.."
"ಯಾಕಿನ್ನೂ ಕಾರ್ಪೋರೇಶನ್‌ನವರು ಈ ಮರಗಳನ್ನು ಕಡಿದಿಲ್ಲ?"
"ಕಾರ್ಪೊರೇಶನ್ ಬುದ್ಧಿ ನಿನಗೂ ಬಂತು. ಅದಲ್ಲ. ಹಿಂದಿನ ಕಾಲದಲ್ಲಿ, ಮಹಾರಾಜರು  ಹೋಗುವಾಗ, ರಸ್ತೆಯುದ್ದಕ್ಕೂ ಇಕ್ಕೆಲದಲ್ಲಿ ನಾರಿಯರು ನಿಂತು, ಹೂವನ್ನು ಹಾಕುತ್ತಿದ್ದರಲ್ಲ, ಹಾಗೇ. ಈ ಮರಗಳು ಚಾಮರ ಬೀಸಿ, ಹೂವಿನ ಅಭಿಷೇಕ ಮಾಡುತ್ತಿವೆ." ಅಂದೆ.
"ಅಹುದು ಸಾರಥಿ. ಈ ಸ್ಕೂಟರ್ ಎಂಬ ರಥವನ್ನು ಸೀರೆ ಅಂಗಡಿ ಕಡೆ ತಿರುಗಿಸು. ಇದು ರಾಣಿ ಆಜ್ಞೆ" ಅನ್ನುವುದಾ!?

Rating
No votes yet

Comments

Submitted by nageshamysore Sat, 06/21/2014 - 06:42

ಗಣೇಶ್ ಜಿ ನಮಸ್ಕಾರ. ಜನನಾಯಕಿಯಾಗಬಲ್ಲ ರಾಣಿವಾಸದ ತಾಕತ್ತಿರುವವರನ್ನು ನೀವು ನಿಮ್ಮ ಪಿಲಿಯನ್ ರೈಡರ್ ಮಾಡಿಕೊಂಡುಬಿಟ್ಟಿದ್ದೀರಾ - ಸಾಲದೆನ್ನುವಂತೆ ಜಯಲಲಿತ ರ ಜನಿಗಳಂತಹ ಕನ್ನಡ ನಾಡಿಗರನ್ನು ಪರನಾಡಿಗೆ ದಾನ ಕೊಟ್ಟುಬಿಟ್ಟಂತಾಗಿದೆ ಅದೆ ಅಭ್ಯಾಸಬಲ ಮೋಡಕ್ಕೂ ತಾಕಿಕೊಂಡುಬಿಟ್ಟಿದೆಯೇನೊ! ಅದೇನೆ ಇದ್ದರೂ ಸಾಲು ಮರದ ಪುಷ್ಪವೃಷ್ಟಿ ಇನ್ನೂ ಅಷ್ಟಿಷ್ಟಾದರೂ ಉಳಿದಿರುವ ಸಂತೋಷಕ್ಕೆ ಮಳೆ ಬಂದರೂ ಬಂದೀತು!

Submitted by ಗಣೇಶ Mon, 06/23/2014 - 00:10

In reply to by nageshamysore

:) ಧನ್ಯವಾದ ನಾಗೇಶರೆ, ನಿಮ್ಮ ಹಾಗೂ ಸಪ್ತಗಿರಿವಾಸಿ, ಕವಿನಾಗರಾಜರ ಪ್ರತಿಕ್ರಿಯೆಯಿಂದಾಗಿ ಮೂರು ಹನಿ ಮಳೆನೂ ಬಂತು, ಜತೆಗೆ ಮೋಡಗಳು ಒಟ್ಟಾಗಿ ನಾಳೆ ಬೆಳಗ್ಗೆ ಬಾರಿಶ್‌ಲಿವೆ - http://www.accuweather.com/en/in/bangalore/204108/morning-weather-foreca... ಅಂತೆ!
>>ಸಾಲದೆನ್ನುವಂತೆ ಜಯಲಲಿತ ರಜನಿಗಳಂತಹ ಕನ್ನಡ ನಾಡಿಗರನ್ನು ಪರನಾಡಿಗೆ ದಾನ ಕೊಟ್ಟುಬಿಟ್ಟಂತಾಗಿದೆ
-ಸಾಲದಕ್ಕೆ ನನ್ನಂತಹ ಉತ್ತಮ ಸಿಂಗರ್‌ನ್ನೂ ತಮಿಳುನಾಡಿಗೆ ಸರ್ಕಾರಿ ಖರ್ಚುವೆಚ್ಚದಲ್ಲಿ ಅಟ್ಟುವ ತಯಾರಿ ನಡೆಸಿದ್ದಾರಲ್ಲಾ :(
(ಕವಿನಾಗರಾಜರ ಪ್ರತಿಕ್ರಿಯೆ ನೋಡಿ)

Submitted by venkatb83 Sat, 06/21/2014 - 18:51

ಗಣೇಶ್ ಅಣ್ಣಾ ನಮಸ್ಕಾರ -
ಹೇಗಿದೀರಾ ಮಾರಾರೆ ...!!
ಎಂಚುಲ್ಲಾರ್?
ವನಸ್ ಆಂಡಾ?
ದಿನ ನಿತ್ಯ ಆ ರಸ್ತೆಯಲ್ಲಿ ಒಂದು ಸಲವಾದರೂ ಹೋಗು -ಬರುವವರಲ್ಲಿ ನಾನೂ ಒಬ್ಬ ... ನನ್ನ ಮೇಲೆ ಯಾವತ್ತೂ ಹೂ ಮಳೆ ಆಗಲಿಲ್ಲ ...!! ಕಾರಣ ????
ನಮದು ಸಮೂಹ ಸಾರಿಗೆ ವಾಹನ ..ಮೇಲೆ ಟಾಪ್ ಕ್ಲೋಜ್....!! ಇನ್ನೆಲ್ಲಿ ಹೂ ಮಳೆ ..ಏನೋ ಮಳೆ ಬಂದರೆ ತಲೆ ಮೇಲೆ ಹನಿ ನೀರಾವರಿ ಸಿಂಚನ ಆಗಬಹುದು ...
ಚಿತ್ರ ನೋಡಿದಾಗ ಇದು ಎಚ್ ಎಂ ಟಿ ರೋಡ್ ಅನಿಸಿದೆ .. ಇದು ಬ್ರೀಜ್ ನಿಂದ ಮಾಥುಲ್ಲ ಗ್ರೌಂಡ್ ಗೆ ಮುಂಚೆ ತೆಗೆದ ಹಾಗಿದೆ ...!! ಅಲ್ಲಿಗೆ -ನೀವು ಇರುವುದು ಎಲ್ಲಿ ಎಂದೂ ಗೊತ್ತಾಯ್ತು ..... !! ಈಗ ಅಪಾರ್ಟ್ಮೆಂಟ್ ಮುಂದೆ ಕಾದು ಕುಳಿತು ಕೆಂಪು ಕೈನಲ್ಲಿ ...... ದು ..!!
ಪುಟ್ಟ ಬರಹವಾದರೂ ಇದಕ್ಕ್ಕಿರುವ ನಗಿಸೋ ಶಕ್ತಿ ಅಲ್ಲಗಳೆಯೋ ಹಾಗಿಲ್ಲ...
ಅದರಲ್ಲೊ ಅಕ್ಕವರ 'ಬ್ಯಾಲೆನ್ಸ್'ಕಾಪಾಡುವಿಕೆ ....:()))))
"ಭುಜದುದ್ದಕ್ಕೂ ಕೂದಲು"
;())))
ಸೂಪರ್ರೋ .....................ರ್
ಶುಭವಾಗಲಿ
\|/

Submitted by ಗಣೇಶ Mon, 06/23/2014 - 00:20

In reply to by venkatb83

ವ್ಹಾ ..ತುಳು ಕಲ್ತರ್! ಈರ್ ಒಣಸ್‌ದ ನೆನಪ್ ಮಲ್ತ್‌ದು ಇತ್ತೆ ಪಿರ ಬಡವಾವೊಂದುಂಡುಯೆ! ಫ್ರಿಡ್ಜ್‌ಡ್ ಎಂಚಿನಾಂಡಲಾ ಒರಿತ್ತ್ಂಡಾಂದು ತೂವೊಡಿತ್ತೆ. :)
ಯಸ್. ಎಚ್.ಎಂ.ಟಿ ರೋಡೇ.. ಸಪ್ತಗಿರಿವಾಸಿಯವರೆ, ಕರೆಕ್ಟ್ ಪ್ಲೇಸ್ ಸಹ ಹೇಳಿದಿರಿ! ನೀವು ಬಸ್ಸಲ್ಲಿರುವಾಗ ಉಳಿದವರಂತೆ ಮೊಬೈಲಲ್ಲಿ ಮುಳುಗದೇ ಸುತ್ತಲೂ ಗಮನಿಸುವಿರಿ ಎಂದು ಲೇಕ್‌ಗೆ ಕೊಟ್ಟ ಪ್ರತಿಕ್ರಿಯೆಯಲ್ಲೇ ಗೊತ್ತಾಗಿತ್ತು. ಈಗ ಪುನಃ ಸಾಬೀತು ಮಾಡಿದಿರಿ. ಸ್ಕೂಟರ್..ಭುಜದುದ್ದಕ್ಕೂ ಕೂದಲು..ನಿಮ್ಮ ಗಮನಕ್ಕೆ ಬೀಳುವ ಮೊದಲೇ ಹೇರ್‌ಕಟ್ ಮಾಡಬೇಕು. :)

Submitted by kavinagaraj Sun, 06/22/2014 - 09:03

ಗಣೇಶರೇ, ಮೋಡಗಳು ಜಯಲಲಿತಾ ದಿಕ್ಕಿಗೆ ಓಡಿದ್ದು ನಿಮ್ಮ ಹಾಡನ್ನು ಕೇಳಿದ ನಂತರ ಅಲ್ಲವೇ? ಪರೀಕ್ಷೆ ಮಾಡಿಬಿಡೋಣ. ನೀವು ತಮಿಳುನಾಡಿಗೆ ಹೋಗಿ ಹಾಡು ಹೇಳಿದರೆ ಆ ಮೋಡಗಳು ಬೆದರಿ ಕರ್ನಾಟಕಕ್ಕೆ ಬಂದು ತಂಪು ಮಾಡಿಯಾವು! ಈ ಸಂಬಂಧದ ಖರ್ಚು-ವೆಚ್ಚಗಳನ್ನು ಕರ್ನಾಟಕ ಸರ್ಕಾರವೇ 'ಕಾವೇರಿದ' ಗಲಾಟೆಗೆ ಅಂಜಿ ಭರಿಸುವ ಸಾಧ್ಯತೆಯೂ ಇದೆ.

Submitted by ಗಣೇಶ Mon, 06/23/2014 - 00:29

In reply to by kavinagaraj

:) :) ಕವಿನಾಗರಾಜರೆ, ಒಳ್ಳೆ ಐಡಿಯಾ. ಯು ಟರ್ನ್ ತೆಗೆದುಕೊಳ್ಳದೇ ಅಲ್ಲಿಂದಲೂ ಬೆದರಿ ಅಂಡಮಾನ್‌ಗೆ ಹೋದರೇ..? ಖರ್ಚು ವೆಚ್ಚ "ಬಡ್ಡಿ" ಸಹಿತ ವಸೂಲು ಮಾಡಿಯಾರು.