ಸಾಹಿತ್ಯ‌ ಕ್ಷೇತ್ರದಲ್ಲಿ ಮೂಡಿಬಂದ‌ 'ಶೇಕ್ಸ್-ಪಿಯರ್' ನ‌ ಅದ್ಭುತ‌ ಕಲ್ಪನೆಗಳು

ಸಾಹಿತ್ಯ‌ ಕ್ಷೇತ್ರದಲ್ಲಿ ಮೂಡಿಬಂದ‌ 'ಶೇಕ್ಸ್-ಪಿಯರ್' ನ‌ ಅದ್ಭುತ‌ ಕಲ್ಪನೆಗಳು

ಮಾನವನ ದೈನಂದಿನ ಮನೋರಂಜನೆಗಳ ಮೌಲ್ಯಯುತ ನಡವಳಿಕೆಗಳಲ್ಲಿ ಸಾಹಿತ್ಯ ಕ್ಷೇತ್ರದ ಮಹತ್ವದ ಘಟ್ಟ. ಇತಿಹಾಸದ ಪೌರಾನಿಕವಾದ ದ್ರಿಶ್ಯಗಳನ್ನು ಆಧುನಿಕ ಸಮಾಜದ ಅತೀ ವಿಶಾಲತೆಯಲ್ಲಿ ಜೀವನದ ನವ-ನವೀನ ಮಧುಕರವಾದ ವ್ಯೆಶಿಷ್ಟ್ಯಗಳಿಂದ ಕೂಡಿದ ಚಿತ್ರ-ವಿಚಿತ್ರಾದಿ ಘಟನೆಗಳನ್ನು ಭೋಗದಿಂದಲೋ, ಮರುಕದಿಂದಲೋ,ತಾಳ್ಮೆಯಿಂದಲೋ ಎದುರಿಸುವ ಪ್ರಶ್ನಾತ್ಮಕ ಸಮಾಜದಲ್ಲಿ ಪ್ರಾಚೀನವಾದ ಅತೀ ಮಹತ್ತರವಾದ ವ್ಯಶಿಷ್ಟ್ಯಪೂರ್ಣವಾದ ದಾಖಲೆಗಳ ಲಿಖಿತಯುಗಗಳನ್ನೇ ಕಣ್ಣೆದುರಿಗೆ ತಂದಿರಿಸಿ ಹುಳಿ,ಖಾರ,ಸಿಹಿ,ಕಹಿಗಳನ್ನು ಒಟ್ಟಿಗೆ ಮೆಟ್ಟಿ ನಿಂತಿದೆ ಸಾಹಿತ್ಯ.ಇಂತಹ ಸಾಹಿತ್ಯಗಳು ಹಲವು ವಿಶೇಷಗಳಲ್ಲಿ ಪ್ರೇಮ ಮತ್ತು ಪೋಷಣೆಗೆ ಮಹತ್ವದ ಸ್ಥಾನ. ಎಲ್ಲಾ ಸಾಹಿತ್ಯಗಳು ಇವೆರಡರ ಬೆನ್ನಲ್ಲೇ ಬಂದು ನಿಲ್ಲುತ್ತದೆ. ಮೊದಲನೆಯದು ಕೇವಲ ಮನೋರಂಜನೆಯ ದಾಟಿಯಲ್ಲಿದ್ದರೆ ಎರಡನೆಯದು ತತ್ವದ, ಧರ್ಮದ ಬೆನ್ನಲ್ಲಿ ಬಂದು ನಿಲ್ಲುತ್ತದೆ. ಇವೆರಡರಲ್ಲಿ ತತ್ವವನ್ನೂ, ಧರ್ಮವನ್ನೂ ಪ್ರತಿನಿಧಿಸುವ ಪೋಷಣೆಯ ಸಾಹಿತ್ಯಗಳೇ ಅತೀ ಮಧುರ ಮತ್ತು ಅತೀ ಉತ್ಸಾಹದಾಯಕ.

ಇಂತಹ ಪೋಷಣೆಯನ್ನು ಅಳವಡಿಸಿದ ಅತೀ ರೋಮಾಂಚಿತವಾಗಿ ಓದುಗರ ಮನಸ್ಸನ್ನೂ, ನೋಡುಗರ ನೋಟವನ್ನೂ ಬೆರಗಾಗಿಸಿ ಶುದ್ದ ಬೆಪ್ಪುತಕ್ಕಡಿಯಲ್ಲಿ ತೇಲಿಸಿ ಎದೆ ಥ್ರಿಲ್ ಎನಿಸುವ ಕೇವಲ ಕೆಲವೇ ಸಾಹಿತ್ಯಗಳಲ್ಲಿ ಅತೀ ಪ್ರಾಚೀನವಾದ ಎಲ್ಲೂ ಎಗ್ಗಿಲ್ಲದಂತೆ ವಿಶಾಲವಾಗಿ ಕಾಲೂರಿಕೊಂಡು ಬಂದ ಆಂಗ್ಲಕವಿ ಶೇಕ್ಸ್-ಪಿಯರ್ ನ ಸಾಹಿತ್ಯಗಳಿಗೆ ಅತೀ ಮುಗಿಲೆತ್ತರದ ಸ್ಥಾನ. ಸಾಹಿತ್ಯ ಕ್ಷೇತ್ರದಲ್ಲಿ ಮೂಡಿಬಂದ ಶೇಕ್ಸ್-ಪಿಯರ್ ನ ಅತೀ ಮಧುರತೆಯಿಂದ ಕೂಡಿದ ಅದ್ಬುತ ಕಲ್ಪನೆಗಳು ನಿಜಕ್ಕೂ ಅದೆಸ್ಟು ರೋಮಾಂಚಕ, ಅದೆಸ್ಟು ಮಧುರ. ಆ ನಾಟಕಗಳನ್ನು ಅತೀ ಕ್ಷಿಪ್ರವಾಗಿ, ಪ್ರಬಲವಾಗಿ ಆಡಿ ತೋರಿಸಿದರೆ ನೋಡುಗರ ನೋಟವೆಲ್ಲಾ ಅದರಿಂದ ಹಿಂದೆ ಸರಿಯುವುದಿಲ್ಲ. ಅವರ ಮನಸ್ಸು ನಾಟಕದೆಡೆಗೆ ತೇಲಿಹೋಗಿ ಉಳಿಯುವುದು ಮಾತ್ರ ಕಲ್ಲು ದೇಹ.

ಶೇಕ್ಸ್-ಪಿಯರ್ ಅತೀ ಪ್ರಾಚೀನ ಕಾಲದವನು. ಹಲವಾರು ಶತಮಾನಗಳ ಹಿಂದಿನ ಅವನ ನಾಟಕಗಳು ಇಂದಿನ ಕಾಲದಲ್ಲಿ ಸ್ವಲ್ಪವೂ ಎಗ್ಗಿಲ್ಲದಂತೆ ಹೋಲಿಕೆಯಾಗಿ ನಿಲ್ಲುತ್ತದೆ. ಅವನ ಕಲ್ಪನೆಗಳಲ್ಲಿ ಅದೆಷ್ಟು ನಿಖರತೆಯಿರುತ್ತದೆ, ಅದೆಸ್ಟು ತೇಜಸ್ಸು, ಓದುವಾಗ ಅದೆಸ್ಟು ಮಧುರವೆನಿಸುತ್ತದೆ. ನಿಜಕ್ಕೂ ಅವನಂತೆ ಆ ಪರಿಯ ಕಲ್ಪನೆಗಳಿಗೆ ಯಾರೂ ದಕ್ಕಲಾರರು. ಹಾಗೆ ಮೂಡಿಬಂದಿದೆ ಅವನ ಕ್ರಿತಿಗಳು. ಅವನ ನಾಟಕಗಳು ಯಾವ ಕಾಲಕ್ಕೂ, ಯಾವ ಗಲಿಗೆಗೂ ಸರಿದೂಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಒಂದು ಭಂಡಾಯವನ್ನೇ ಎಬ್ಬಿಸಿಬಿಟ್ಟ ಎಂದರೆ ತಪ್ಪಾಗಲಾರದು. ಇಂದಿಗೂ ಅವನ ಕ್ರಿತಿಗಳಿಗೆ, ಅವನ ನಾಟಕಗಳಿಗೆ ಹೋಲಿಕೆಯಾಗುವ, ಅದರೆದುರು ನಿಲ್ಲಬಹುದಾದಂತಹ ಅತೀ ತೇಜಮಯವಾದಂತಹ ಪೋಷಣೆಯ ಸಾಹಿತ್ಯ ಮೂಡಿಬಂದಿಲ್ಲ. ಅವನ ಕಲ್ಪನೆಗಳು ಇಲ್ಲದ ಪ್ರಪಂಚದಿಂದಲೇ ಹೆಕ್ಕಿತಂದು ಓದುಗರನ್ನು ಕಲ್ಪನೆಯ ಲೋಕದಲ್ಲಿ ಮತಿಭ್ರಮಣೆಯಾಗಿ ಮಾಡಿದೆ ಎಂದರೆ ತಪ್ಪಾಗಲಾರದು.

ಆ ತರದ ಅವನ ನಾಟಕಗಳು ಇಂದೂ ರಂಗಮಂಟಪದಲ್ಲಿ ಪ್ರಬಲವಾಗಿ ಕಾಣಿಸಿಕೊಳ್ಳುತ್ತದೆ. ಅವನ ನಾಟಕಗಳು ಯಾವ ಅಭಿರುಚಿಯ ಜನರಿಗೂ ಬೇಸರ ತರಿಸಲಾರದು. ಆದ್ದರಿಂದಲೇ ಶೇಕ್ಸ್-ಪಿಯರ್ ಸಾಹಿತ್ಯ ಕ್ಷೇತ್ರದಲ್ಲಿ ಅತೀ ಎತ್ತರಕ್ಕೆ ಬೆಳೆದುಬಿಟ್ಟ. ಅವನ ಕಲ್ಪನೆಗಳು ನಿಜಕ್ಕೂ ದೈವಲೀಲೆಯಂತದ್ದೋ, ಅದೇ ಅವನಿಗೆ ಪೋಷಣೆ ನೀಡಿದೆ ಎನ್ನುತ್ತಾರೆ ಜನರು. ¥sóÁ್ರನ್ಸ್ ನಲ್ಲಿ ಹುಟ್ಟಿ-ಬೆಳೆದ ಆ ಹುಡುಗ ಸಾಹಿತ್ಯ ಕ್ಷೇತ್ರದಲ್ಲಿ ಎಂದೂ ಅಳಿಸಲಾಗದಂತೆ ಕಾಲೂರಿಬಿಟ್ಟ. ಅವನ ನಾಟಕಗಳು ಹೆಚ್ಚಾಗಿ ರಾಜಾಶ್ರಯಗಳಿಗೆ, ರಾಜಕೀಯ ಸ್ಥಿತಿಗತಿಗಳಿಗೆ ಮೀಸಲಾಗಿವೆ. ಕೆಲವು ನಾಟಕಗಳು ಮನುಷ್ಯನ ಚಿತ್ತಾರವನ್ನು ಬುಡಮೇಲುಗೊಳಿಸಿ ಕಲ್ಪನೆಯ ಲೋಕದಲ್ಲಿ ತೇಲುವಂತೆ ಮಾಡುತ್ತದೆ.

ಹಲವಾರು ನಾಟಕಗಳನ್ನು ರಚಿಸಿದ. ಕೆಲವು ನಾಟಕಗಳು ದೊರಕದಿದ್ದರೂ ದೊರೆತ ಪ್ರತೀ ನಾಟಕಗಳು ವಿಶಿಷ್ಟವಾದ ಮಹತ್ವವನ್ನು ಪಡೆದಿದೆ. `ದಿ ಸಮ್ಮರ್ ನೈಟ್ ಡ್ರೀಮ್', `ಹಾಮ್ಲೆಟ್', `ಕಿಂಗ್ ಲಿಯರ್', `ಜೂಲಿಯಸ್ ಸೀಸರ್', `ರೋಮಿಯೋ-ಜೂಲಿಯೆಟ್', ಅವನನ್ನು ಮುಗಿಲೆತ್ತರೆಕ್ಕೇರಿಸಿತು. ದಿ ಸುಮ್ಮರ್ ನೈಟ್ ಡ್ರೀಮ್ ಪ್ರಕ್ರಿತಿಯ ನೈಜತೆಯ ವಾತಾವರಣವನ್ನು ಅತ್ಯಂತ ತಿಳಿಗೊಳಿಸಿ ಹೊಸ ಆಕರ್ಷಣೆಯನ್ನು ಮೂಡಿಸುತ್ತಾ ಎಲ್ಲರ ಉತ್ಸಾಹವನ್ನು ಬೆಳೆಸುತ್ತದೆ. ಅಥೆನ್ಸ್ ಮತ್ತು ಹತ್ತಿರದ ಒಂದು ಅರಣ್ಯದಲ್ಲಿ ನಡೆಯುವ ಜನರ ವಿವಿಧ ಭಂಗಿಯ ಬದಲಾವಣೆಯ ಅಭಿರುಚಿಗಳು ಎಲ್ಲರಲ್ಲೂ ಆಕರ್ಷಣೆಯನ್ನು ಮೂಡಿಸುತ್ತದೆ. ಹರ್ಮಿಯಳ ಪ್ರೇಮಿಗಳಾದ ಲೈಸ್ಯಾಂಡರ್ ಮತ್ತು ಡೆಮೆಟ್ರಿಯಸ್ ತಮ್ಮೊಳಗಿನ ಪ್ರೇಮವನ್ನು ಬಿಗಿಗೊಳಿಸುವ ಪ್ರಯತ್ನ ಒಂದು ವೇಳೆಯಲ್ಲಿ ನಡೆದರೆ ಪಕ್ ನ ಛೇಷ್ಟೆಯ ಮನ್ಮಥನ ಮುತ್ತೈದೆ ಮೊಗ್ಗಿನ ರಸದ ಪ್ರಭಾವದಿಂದ ಹೆಲೆನ ಳ ಮೇಲೆ ಅವರ ಪ್ರೀತಿಯ ಪ್ರಭಾವ ಭೀರುವಂತೆ ಮಾಡುತ್ತದೆ. ಪ್ರಕ್ರಿತಿಯ ನೈಜತೆಯು ಇಲ್ಲಿ ಸಂಪೂರ್ಣವಾಗಿ ವ್ಯಕ್ತವಾಗುತ್ತದೆ.

`ಹಾಮ್ಲೆಟ್' ಹೆಸರೇ ಸೂಚಿಸುವಂತೆ ಕಥಾನಾಯಕ. ಅವನ ತಂದೆಯ ಕೊಲೆಯ ಸೇಡೇ ಕಥೆಯ ಮೂಲ. ಐಶ್ವರ್ಯ ಮತ್ತು ಹೆಣ್ಣಿನ ಆಸೆಯಿಂದ ಅಣ್ಣನನ್ನೇ ಕೊಲೆಗೈದು ಅಧಿಕಾರವನ್ನೂ, ಅಣ್ಣನ ಹೆಂಡತಿಯನ್ನೂ ದೋಚಿಕೊಂಡು ಮೈಮರೆಯುತ್ತಿದ್ದಾಗ ಭೂತದಂತೆ ಸತ್ತ ಹಾಮ್ಲೆಟ್ ನ ತಂದೆ ಪ್ರತ್ಯಕ್ಷವಾಗಿ ತಮ್ಮನ ನಿಜರೂಪವನ್ನು ಬಯಲುಮಾಡಿಕೊಡುತ್ತದೆ. ಇದು ಹಾಮ್ಲೆಟ್ ನ ಮನಸ್ಸಿಗೆ ಬಲು ಪ್ರಯೋಗ ಬೀರಿ ತನ್ನ ಸೇಡನ್ನು ತೀರಿಸಿದ. ತಾಯಿಯನ್ನು ಚುಚ್ಚು ಮಾತುಗಳಿಂದಲೇ ಸಾಯುವಂತೆ ಮಾಡಿದ. ಅದರ ವರ್ಣನೆಗಳು ತೀರಾ ಭಾವನೆಗೆ ನಿಲುಕದ್ದೇ ಸರಿ. ಇದರಲ್ಲಿ ಲಾರ್ಟೆಸ್, ಫುಲೋನಿಯಸ್ ಎಲ್ಲರೂ ಬಲಿಯಾಗಬೇಕಾಯಿತು. ನಂತರ ಹಾಮ್ಲೆಟ್ ತನ್ನ ಪ್ರಿಯತಮೆ `ಒಫೀಲಿಯ' ಳನ್ನು ಕಳೆದುಕೊಂಡ. ಇದರೊಳಗೆ ಹಲವು ನಿರಪರಾಧಿಗಳೂ ಬಲಿಯಾದರು. ಎಲ್ಲವೂ ನಾಟಕದ ರಂಗಮಂಟಪದಂತಾಗಿ ಹೋಯಿತು. ಹೊಸ ಪೀಳಿಗೆಗೆ ಆವತ್ತಿನ ಚಾರಿತ್ರ್ಯವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಳ್ಳಲು ಹಾಮ್ಲೆಟ್ ಗೆ ಪ್ರತೀ ವಿಷಯದಲ್ಲಿ ಸಹಕರಿಸಿದ ಹಿರೋಷಿಯೋ ಉಳಿದುಕೊಂಡು ಬಿಟ್ಟ.

`ಕಿಂಗ್ ಲಿಯರ್' ಒಂದು ತತ್ವದ ಮೇಲಿನ ನಾಟಕ. ಲಿಯರ್ ಮಹಾರಾಜ ತನ್ನ ಇಬ್ಬರು ಮಕ್ಕಳಿಗೆ ಅಧಿಕಾರವನ್ನು ಹಂಚಿ ಮೂರನೆಯವಳನ್ನು ಮನೆಯಿಂದ ನೂಕಿ ಬಿಟ್ಟ. ಆದರೆ ಆ ಇಬ್ಬರೂ ಮಕ್ಕಳು ತಂದೆಯನ್ನು ಇಷ್ಟಪಡುವುದಕ್ಕಿಂತ ಹೆಚ್ಚಾಗಿ ಮೂರನೆಯವಳು ಇಷ್ಟಪಡುತ್ತಿದ್ದಳು. ಸಾಮ್ರಾಜ್ಯವನ್ನೇ ಇಬ್ಬರು ಮಕ್ಕಳಿಗೆ ಹಂಚಿ ಅವರಿಂದಲೇ ತಿರಸ್ಕ್ರತಗೊಂಡು ಬೀದಿಯಲ್ಲಿ ಅಳೆಯಲಾರಂಭಿಸಿದಾಗ ಅವನಿಂದ ತಿರಸ್ಕ್ರಿತಗೊಂಡ ಮೂರನೇ ಮಗಳೇ ಆಸರೆಯಾಗಿ ನಿಂತು ಅವನನ್ನು ಪೋಷಿಸಿದಳು. ತನ್ನ ತಪ್ಪಿನ ಅರಿವಾಗಿ ಇಬ್ಬರು ಮಕ್ಕಳಿಗೆ ಸರಿಯಾದ ಶಿಕ್ಷೆಯನ್ನು ನೀಡಿದ.

`ಜೂಲಿಯಸ್ ಸೀಸರ್' ರೋಮಿನ ಪ್ರಬಲ ಚಕ್ರವರ್ತಿ. ಅವನ ಹೆಸರೇ ಸೂಚಿಸುವಂತೆ ಕಥೆಯ ಕೇಂದ್ರಬಿಂದು. ಅವನು ಸರ್ವಾಧಿಕಾರಿಯೆಂದು ಬ್ರೂಟಸ್, ಕ್ಯಾಸಿಯಸ್, ಸಿನ್ನ, ಕ್ಯಾಸ್ಕ ಹಾಗೂ ಫಿತೂರಿಗಾರರು ಸೇರಿ ಅವನನ್ನು ಸಂಸತ್ ಭವನದಲ್ಲೇ ಹಾಡು-ಹಗಲೇ ಕೊಂದು ಹಾಕಿದರು. ಅದರ ನೈಜತೆಯ ಬಗ್ಗೆ ಬ್ರೂಟಸ್ ರೋಮಿನ ಜನತೆಗೆ ತಿಳಿಸಿದಾಗ ಅದು ಸರಿ ಕಂಡರೂ ಸೀಸರನ ರೋಮಿನ ಪವಿತ್ರ ಕನಸಿನ ಬಗ್ಗೆ `ಅಂತೋನಿ' ಓದಿ ಹೇಳಿದಾಗ ರೋಮಿನ ಜನರೆಲ್ಲಾ ಫಿತೂರಿಗಾರರ ವಿರುದ್ದ ಎದ್ದು ನಿಂತರು. ನಂತರ ಇಬ್ಬಾಗವಾಗಿ ಫಿತೂರಿಗಾರರ ಒಂದು ಗುಂಪು ಮತ್ತು ಅಂತೋನಿಯನ್ನೊಳಗೊಂಡ ಸೀಸರನ ಬೆಂಬಲಿಗರ ಒಂದು ಗುಂಪು ಸೇರಿ ಯುದ್ದವಾಗಿ ಫಿತೂರಿಗಾರರೆಲ್ಲಾ ಸಾವಿಗೀಡಾಗಬೇಕಾಗಿ ಬಂತು.

`ರೋಮಿಯೋ-ಜೂಲಿಯಟ್' ಇಬ್ಬರ ಪ್ರೇಮ ಕಥನ. ನಂತರ ಒಂದು ದುರಂತವಾಗಿ ಅಂತ್ಯಗೊಳ್ಳುತ್ತದೆ. ರೋಮಿನ ಒಂದು ಪಾರ್ಟಿಯಲ್ಲಿ ರೋಮಿಯೋ-ಜೂಲಿಯೆಟ್ ರ ಮಿಲನವಾಗುತ್ತದೆ. ಆದರೆ ಇಬ್ಬರ ತಂದೆಯೂ ಪರಸ್ಪರ ವೈರಿಗಳಾಗಿರುತ್ತಾರೆ. ಇದನ್ನು ಲೆಕ್ಕಿಸದೇ ಪರಸ್ಪರ ಒಬ್ಬರನ್ನೊಬ್ಬರು ಗಾಢವಾಗಿ ಆಕರ್ಷಿತಗೊಳ್ಳುತ್ತಾರೆ. ರೋಮಿಯೋ ಗೆ ಸೈಂಟ್ ಪೀಟರ್ಸ್ ಚರ್ಚ್ ನ ಪಾದ್ರಿಯು ಸಹಾಯ ಮಾಡುತ್ತಾನೆ. ಈ ವಿಷಯ ತಿಳಿದ ಜೂಲಿಯೆಟ್ ನ ಸೋದರ ಸಂಭಂಧಿ ರೋಮಿಯೋನೊಂದಿಗೆ ಜಗಳವಾಡುತ್ತಾನೆ. ಜಗಳದಲ್ಲಿ ಅವನು ಮರಣಹೊಂದುತ್ತಾನೆ. ವಿಷಯ ತಿಳಿದ ರಾಜನು ರೋಮಿಯೋಗೆ ರಾಷ್ಟ್ರಬಹಿಷ್ಕಾರವನ್ನು ಹಾಕುತ್ತಾನೆ. ಆದರೆ ಚರ್ಚ್ ನ ಪಾದ್ರಿಯು ರೋಮಿಯೋನ ಸಹಾಯಕ್ಕೆ ಬಂದು ಅವನನ್ನು ಚರ್ಚ್ ನಲ್ಲೇ ವಾಸಿಸಲು ಆಜ್ಣಾಪಿಸುತ್ತಾನೆ. ಇದೇ ಸಂದರ್ಭದಲ್ಲಿ ಜೂಲಿಯೆಟ್ ಗೆ ಬೇರೆಯವರೊಡನೆ ಮದುವೆ ನಿರ್ಣಯವಾಗುತ್ತದೆ. ಪಾದ್ರಿಯು ಜೂಲಿಯೆಟ್ ಗೆ ಮೂರ್ಚೆ ತಪ್ಪುವ ಔಷಧಿಯನ್ನು ನೀಡುತ್ತಾನೆ ಮತ್ತು ರೋಮಿಯೋಗೆ ಪತ್ರ ಬರೆದು ಅದರ ಬಗ್ಗೆ ತಿಳಿಸಿ ಅವರಿಬ್ಬರನ್ನು ಒಂದುಗೂಡುವಂತೆ ಮಾಡುತ್ತೇನೆಂಬ ಆಶ್ವಾಸನೆಯನ್ನು ನೀಡುತ್ತಾನೆ. ಪಾದ್ರಿಯ ಆಜ್ನಾಪಣೆಯಂತೆ ಔಷಧಿ ಸೇವಿಸಿ ಮೂರ್ಚೆ ತಪ್ಪಿದ ಜೂಲಿಯೆಟ್ ಳನ್ನು ಸತ್ತಳೆಂದು ಭಾವಿಸಿ ಅವರು ಗೋರಿಯಲ್ಲಿ ತಂದಿಡುತ್ತಾರೆ. ಪಾದ್ರಿಯು ವಿಷಯವನ್ನೆಲ್ಲಾ ನಿಖರವಾಗಿ ಬರೆದು ತನ್ನ ಆಳಿನ ಬಲಿ ರೋಮಿಯೋಗೆ ಕಾಗದವನ್ನು ಕಳಿಸುತ್ತಾನೆ. ಆದರೆ ರೋಮಿಯೋಗೆ ಜೂಲಿಯೆಟ್ ಸತ್ತಳೆಂಬ ವಿಷಯ ತಿಳಿದು ಅವಳ ಗೋರಿಯ ಕಡೆಗೆ ಬಂದು ಅವಳ ಶವವನ್ನು ನೋಡಿ ಅಲ್ಲಿಯೇ ಇದ್ದ ಚೂರಿಯಿಂದ ತಾನೇ ಇರಿದುಕೊಳ್ಳುತ್ತಾನೆ. ಇತ್ತ ಕಡೆ ಪತ್ರ ರೋಮಿಯೋಗೆ ತಲುಪದೇ ಆಳು ಹಿಂದೆ ಬಂದು ಪಾದ್ರಿಯಲ್ಲಿ ತಿಳಿಸುತ್ತಾನೆ. ಇದರಿಂದ ವ್ಯಾಕುಲಗೊಂಡ ಪಾದ್ರಿಯು ಕಾರ್ಯ ಕೈಮೀರಿ ಹೋಗುತ್ತಿದೆಯೆಂದು ಅವಳ ಗೋರಿಯ ಕಡೆಗೆ ದೌಡಾಯಿಸಿ ಬರುತ್ತಾನೆ. ಆದರೆ ಅಷ್ಟರಲ್ಲಿಯೇ ಎಚ್ಚರಗೊಂಡ ಜೂಲಿಯೆಟ್ ತನ್ನ ಹತ್ತಿರದಲ್ಲಿಯೇ ಸತ್ತು ಬಿದ್ದಿರುವ ರೋಮಿಯೋನ ಶವವನ್ನು ನೋಡಿ ದುಃಖಿಸುತ್ತಾ ಅದೇ ಕತ್ತಿಯಿಂದ ತಾನೂ ಇರಿಯುತ್ತಾಳೆ. ಪಾದ್ರಿ ಗೋರಿಗೆ ಮುಟ್ಟುವ ಸಂದರ್ಭದಲ್ಲಿ ಇಬ್ಬರೂ ಶವವಾಗಿ ಬಿದ್ದಿರುತ್ತಾರೆ. ಇವರ ಸಾವಿಗೆ ತನ್ನ ನಿರ್ಲಕ್ಷವೇ ಕಾರಣವೆಂದು ಪಾದ್ರಿ ತುಂಬಾ ದುಃಖಗೊಳ್ಳುತ್ತಾನೆ. ಈ ವಿಷಯ ತಿಳಿದ ಇಬ್ಬರ ಕುಟುಂಬಿಕರೂ ಇದಕ್ಕೆಲ್ಲಾ ತಮ್ಮ ಹಗೆತನವೇ ಕಾರಣವೆಂದು ತಿಳಿದು ಕೊನೆಯಲ್ಲಿ ಇಬ್ಬರೂ ಪರಸ್ಪರ ಒಂದಾಗುತ್ತಾರೆ. ಹೀಗೆ ಪ್ರಪಂಚದ ಅತೀ ಮಧುರವೆನಿಸಿದ ಪ್ರೇಮ ಕತೆಗಳಲ್ಲಿ ರೋಮಿಯೋ-ಜೂಲಿಯೆಟ್ ರ ದುರಂತ ಪ್ರೇಮಕಥೆಯು ಮುಗಿಲೆತ್ತರದಲ್ಲಿ ಬಂದು ನಿಲ್ಲುತ್ತದೆ. ಶೇಕ್ಸ್-ಪಿಯರ್ ನಿಜಕ್ಕೂ ತನ್ನ ಅಗಾಧವಾದ ಚಾತುರ್ಯ ಹಾಗೂ ಲಿಖಿತತೆಯ ಕೌಶಲ್ಯದಿಂದಾಗಿ ಬಹಳ ಪ್ರಭಾವವನ್ನು ಹೊಂದಿದ್ದಾನೆ. 

(ಪ್ರಕಟಣೆ: ಚಿತ್ರವನ್ನು ಅಂತರ್ಜಾಲ ತಾಣದಿಂದ ತೆಗೆದಿರುವೆ)

Comments

ಜೀ ಕೇ ನವೀನ್ ಇವರಿಗೆ ಧನ್ಯವಾದಗಳು. ನಿಮ್ಮ‌ ಪ್ರತಿಕ್ರಿಯೆ ನನ್ನ‌ ಬರವಣಿಗೆಯ‌ ದಾಟಿಗೆ ಇನ್ನಷ್ಟು ಪ್ರೇರಣೆ ನೀಡಿದೆ.

ಜೀ ಕೇ ನವೀನ್ ಇವರಿಗೆ ಧನ್ಯವಾದಗಳು. ನಿಜವಾಗಿ ಹೇಳಬೇಕೆಂದರೆ ಶೇಕ್ಸ್_ಪಿಯರ್ ನ‌ ಕ್ರಿತಿಗಳೇ ನನ್ನ‌ ಬರವಣಿಗೆಗೆ ಎಲ್ಲಾ ಕಾರಣ‌. ಶೇಕ್ಸ್_ಪಿಯರ್ ನ‌ ನಾಟಕ‌ ಓದುವುದೆಂದರೆ ಮನಸ್ಸಿಗೆ ತುಂಬಾ ಮುದ‌ ನೀಡುವ‌ ವಿಷಯ‌. ಅದರ‌ ಬಗ್ಗೆ ವರ್ಣಿಸುವುದು ತುಂಬಾ ಇದೆ... ಶೇಕ್ಸ್_ಪಿಯರ್ ಜನರನ್ನು ಪರಿಚಯಿಸುವುದಕ್ಕಿಂತ‌ ಹೆಚ್ಚಾಗಿ ಅವರ‌ ಗುಣವನ್ನು ನೋಡುತ್ತಾನೆ.