ಗಗನಕೆ ಏಣಿ - ಲಕ್ಷ್ಮೀಕಾಂತ ಇಟ್ನಾಳ

ಗಗನಕೆ ಏಣಿ - ಲಕ್ಷ್ಮೀಕಾಂತ ಇಟ್ನಾಳ

ಗಗನಕೆ ಏಣಿ

ಒಂದು ಹೆಜ್ಜೆ ನೆಲದ ಮೇಲೆ,
ಇನ್ನೊಂದು ಚಂದ್ರನ ಮೇಲೆ,
ಮೂರನೆಯದು, ಎದೆ ಅಂಗಳದಲ್ಲೋ,
ಮಂಗಳನಲ್ಲೋ ಅರಿಯೆ,
ಕವಿಯಾದರೆ, ಎದೆಯಂಗಳದಲ್ಲಿ,
ಶೋಧಕನಾದರೆ ಮಂಗಳನಲ್ಲಿ
ಸಾಮಾನ್ಯನಾದರೆ ಕನಸಂಗಳದಲ್ಲಿ
ಅರಿಯೆ ನಾನಾರು, ತೇಲುತಿರುವವು ಹೆಜ್ಜೆಗಳು
ಹಾರುತಿವೆ ಎಲ್ಲೊ, ಅರಿಯೆ ಈ ಹೆಜ್ಜೆಗಳು

ಅದು ಎಲ್ಲಿ ಊರಿದರೂ, ನೆಲಹುಡುಕಿ ಅದರಲ್ಲಿ
ಬೀಜ ಬಿತ್ತಿ ಬೆಳೆಯುವಾಸೆ ಹೂ ಹಣ್ಣಗಳನ್ನು
ಚಿಟ್ಟೆಗಳ ಸಾಗರಕೆ ಮಧುವ ಪೂರೈಸಿ,
ರೆಕ್ಕೆ ಗಟ್ಟಿಗೊಳ್ಳುವದ ನೋಡುವಾಸೆ
ಚಿಟ್ಟೆಗಳ ಗೂಡಲ್ಲಿ ಕನಸು ಮೂಡಿಸಿ
ಗುಂಪೊಡನೆ ಹಾರುತ್ತ ಹಾಡುತ್ತ
ಪರಿಮಳವ ಹಂಚುತ್ತ, ಬಿತ್ತುತ್ತ
ಗಗನಕೆ ಏಣಿಯಲಿ ಏರುವಾಸೆ

ಬರುವಿರಾ ಚಿಟ್ಟೆಗಳೇ ನನ್ನೊಡನೆ
ಅದು ಇದು ಬಿಟ್ಟು, ಕನಸಿನೂರಿಗೆ
ಮುಳ್ಳಿರದ ಪರಿಮಳದ  ಹೂವಿನೂರಿಗೆ!

Rating
No votes yet

Comments

Submitted by lpitnal Tue, 07/01/2014 - 22:40

In reply to by nageshamysore

ನಾಗೇಶ ಜೀ, ನಮಸ್ಕಾರಗಳು. ತಾವು ಬಲು ಬ್ಯೂಜಿಯಾಗಿದ್ದೀರಿ ತಮ್ಮ ಕಥೆಯಲ್ಲಿ. ನನಗೆ ಎಲ್ಲ ಕಥೆಗಳ ಎಪಿಸೋಡ್ ಗಳನ್ನು ನನ್ನ ಕೆಲಸದ ಒತ್ತಡದಲ್ಲಿ ನೋಡುವ ಅದೃಷ್ಟ ಒದಗದು. ಹೀಗಾಗಿ ತಮ್ಮ ಬಿಟ್ಟುಬಿಡದೇ ಓದುತ್ತಿರುವ ಶ್ರೋತೃಗಳ ಸಂಖ್ಯೆಯಿಂದ ಅಳೆಯುವೆ. ಬಹಳ ಜನ ಓದುತ್ತಿದ್ದಾರೆಂದರೆ ಗುಣಮಟ್ಟ ತುಂಬ ಚನ್ನಾಗಿ ಇರಲೇಬೇಕು ತಾನೆ. ಸಂಪದಿಗರು ಗುಣಮಟ್ಟವನ್ನು ಗುರುತಿಸುವಲ್ಲಿ ಅಗ್ರಣಿಗರು. ಹೀಗಾಗಿ ಕಥೆ ಚನ್ನಾಗಿದೆ ಎಂದೇ ನಿಖರವಾಗಿ ಹೇಳಬಲ್ಲೆ. ತಾವು ಎಂದಿನಂತೆ ಸಹಜ ಪ್ರೀತಿಯಿಂದ ಬೆನ್ನು ಚಪ್ಪರಿಸಿದ್ದುದಕ್ಕೆ ಮತ್ತೊಮ್ಮೆ ವಂದನೆಗಳು ಸರ್. ಬರೆಯುತ್ತಿರಿ. ಪುಸ್ತಕ ಬಿಡುಗಡೆ ಏನಾದರೂ ಇದ್ದರೆ ನೆನಪು ಮಾಡಿ, ಖಂಡಿತ ನಾವೆಲ್ಲ ಸೇರೋಣ. ಓ ಕೆ ಸರ್. ಧನ್ಯವಾದಗಳು.

Submitted by nageshamysore Wed, 07/02/2014 - 16:41

In reply to by lpitnal

ಇಟ್ನಾಳರೆ ನಮಸ್ಕಾರ. ನಿಜ - ಸದ್ಯಕ್ಕೆ ಪರಿಭ್ರಮಣದಿಂದಾಗಿ ಎಲ್ಲವನ್ನು ಓದಿ ಪ್ರತಿಕ್ರಿಯಿಸಲು ಆಗುತ್ತಿಲ್ಲ. ಸಂಪದಿಗರ ಸತತ ಮತ್ತು ಉದಾರ ಪ್ರೋತ್ಸಾಹದಿಂದ ಪರಿಭ್ರಮಣ ಮೂವತ್ತನೆ ಕಂತಿನವರೆಗೂ ಮುಟ್ಟಿದೆ. ಇನ್ನು ಪುಸ್ತಕ ರೂಪವಾಗುವ ಗುಣಮಟ್ಟ, ಯೋಗ್ಯತೆ ಅದಕ್ಕಿದೆಯೊ ಇಲ್ಲವೊ ಗೊತ್ತಿಲ್ಲ ಮತ್ತು ಆ ಅನುಭವ ಮತ್ತು ಯಾವುದೆ ಪುಸ್ತಕ ಪ್ರಕಾಶನದ ಸಂಪರ್ಕವೂ ನನಗಿಲ್ಲ. ಕಥೆ ಅಂತಿಮವಾಗಿ ಮುಗಿದ ಮೇಲೆ ಸಹೃದಯಿ ಸಂಪದಿಗರು ಪುಸ್ತಕವಾಗಬಹುದು ಎಂದು ಅಭಿಪ್ರಾಯ ಪಟ್ಟರೆ, ಆಮೇಲೆ ಆ ಕುರಿತು ಯೋಚಿಸಬಹುದೇನೊ! :-)
 

Submitted by lpitnal Tue, 07/01/2014 - 22:42

In reply to by kavinagaraj

ಗುರುಗಳೇ, ತಮ್ಮ ಮಾತು ನಿಜ. ಸುಂದರ ಸ್ವಚ್ಛ ಮನದವರಿಗೆ ಇರುವ ವಾತಾವರಣವೇ 'ಯುಟೋಪಿಯಾ' ತಾನೇ ಸರ್. ಚನ್ನಾಗಿದೆ ಕವಿನಾ ಸರ್ ನಿಮ್ಮ ಕಮೆಂಟು. ವಂದನೆಗಳು ಸರ್.