Lost my love(Cycle)..! ಕಳ್ಳರ ಪಾಲಾದ ನನ್ನ ಪ್ರೀತಿಯ ಸೈಕಲ್

Lost my love(Cycle)..! ಕಳ್ಳರ ಪಾಲಾದ ನನ್ನ ಪ್ರೀತಿಯ ಸೈಕಲ್

ಇಲ್ಲಿ ಕಾಣುತ್ತಿರುವ  ನನ್ನ ಪ್ರೀತಿಯ ಸೈಕಲ್ ಕಾಣೆಯಾಗಿದೆ .. ಅಲ್ಲಾ ಅಲ್ಲ ಕದ್ದುಕೊಂಡು ಹೋಗಿದ್ದಾರೆ  ಎಂದು ಹೇಳುವಾಗ ನನ್ನ ಮನಸ್ಸಿನಲ್ಲಿ ಯಾರನ್ನೋ ಕಳೆದುಕೊಂಡ ಭಾವನೆ ಗಟ್ಟಿಯಾಗಿ ಮೂಡುತ್ತಿದೆ.

ನನ್ನ ಎಷ್ಟೋ ದಿನಗಳ ಆಸೆಯ ಮೇರೆಗೆ ವಾಲ್ಮಾರ್ಟ್ ನಲ್ಲಿ ನನ್ನ ಆಫೀಸ್ ನ  ಗೆಳೆಯನೊಟ್ಟಿಗೆ, ಒಂದು ಶುಭ ಮಂಗಳವಾರದ  ಸಂಜೆಯಲ್ಲಿ  ಖರೀದಿ ಮಾಡಿದ್ದೆ..  ಎಲ್ಲರ ರೀತಿಯಲ್ಲಿ ನನಗೂ ಕೂಡ ಫೇಸ್ಬುಕ್ ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡುವ ಯೋಚನೆ ಇತ್ತು, ಆದ್ರೆ  ಯಾಕೋ ಆಮೇಲೆ ಮಾಡಿದರೆ ಆಯಿತು  ಎಂದು ಸುಮ್ಮನಾದೆ.

ಸಿಯಾಟಲ್ (ವಾಷಿಂಗ್ಟನ್ ), ಬೇಸಿಗೆ ಕಾಲ ಬಂತೆಂದರೆ ಇಲ್ಲಿಯವ್ರಿಗೆಲ್ಲಾ ಖುಷಿಯೋ ಖುಷಿ ,ಕಾರಣ ಈ ಬೇಸಿಗೆ ಕಳೆದರೆ ಇನ್ನಾರು ತಿಂಗಳು ಜಿಟಿಜಿಟಿ ಮಳೆ ಮತ್ತು ಚಳಿಯ ಕಾರಣ ಹೊರಗಡೆ ಓಡಾಡುವುದೆ ಒಂದು ರೀತಿಯ ಕಷ್ಟ. ಇಂತಹ ಹತ್ತು ಹಲವು ಕಾರಣಗಳಿಂದ ನನಗೂ ಕೂಡ ಈ ಬೇಸಿಗೆಯಲ್ಲಿ ಏನಾದರೂ ಮಾಡುವ ಅಂದುಕೊಂಡು- ಕೊಂಡುಕೊಂಡಿದ್ದ ಸೈಕಲ್ ಮೇಲೆ ವಿಪರೀತ ಪ್ರೀತಿ ಶುರುವಾಗಿತ್ತು.

ನನ್ನ ಅಪಾರ್ಟ್ ಮೆಂಟ್ ಮತ್ತು ನನ್ನ ಆಫೀಸ್ ಗೆ ೩ ಕಿಲೋಮೀಟರ್ ದೂರವಷ್ಟೇ , ನನ್ನ ಲ್ಯಾಪ್ಟಾಪ್ ಮತ್ತು ಲಂಚ್ ಬಾಕ್ಸ್ ನ್ನು   ಗೆಳೆಯನ ಕಾರಿನ ಡಿಕ್ಕಿಯಲ್ಲಿ ಇಟ್ಟು - ನಾನು ನನ್ನ ಸೈಕಲ್ ಏರಿಕೊಂಡು ಹೊರಟೆನೆಂದರೆ ೧೦ ನಿಮಿಷದಲ್ಲಿ ತಲುಪುತಿದ್ದೆ, ಇದೆ ರೀತಿ ಕಳೆದ ಒಂದು ತಿಂಗಳಿಂದ ಇದುವೆಯೇ ಅಭ್ಯಾಸವಾಗಿಬಿಟ್ಟಿತ್ತು.  ಸ್ಪೀಡೋ-ಮೀಟರ್ ಇದ್ದರೆ ಚೆನ್ನಾಗಿ ಇರಬಹುದೆಂದು ಇ-ಬೇ ನಲ್ಲಿ ಆರ್ಡರ್ ಮಾಡಿ ತರಿಸಿಕೊಂಡಿದ್ದೆ . ಹೀಗೆ ನನ್ನ ಮತ್ತು ಸೈಕಲ್ ನಡುವೆ ಒಂದು ರೀತಿಯ ಅನುಬಂದ ದಿನೇ ದಿನೇ ಹೆಚ್ಚಾಗುತ್ತಿತ್ತು ...!

 ಒಂದು ಬಾರಿ ಸೈಕಲ್-ನ್ನು ಲಾಕ್ ಮಾಡಿ ಹೊರಗಡೆ ನಿಲ್ಲಿಸಿದ್ದೆ, ಗೆಳೆಯನೊಬ್ಬ ಎಚ್ಚರಿಕೆ ಕೊಟ್ಟ- ದರ್ಶನ್ "ನೀನು ಹೊರಗಡೆ ಟೈರ್- ಗಷ್ಟೇ ಬೀಗ ಹಾಕಿದರೆ ಅದನ್ನು ಆರಾಮಾಗಿ ಎತ್ತುಕೊಂಡು ಹೋಗಬಹುದು, ಬಹಳ ಹಗುರವಾಗಿದೆ - ಅದಕ್ಕೆ ಇದನ್ನು ನಾಯಿಯನ್ನು ಕಟ್ಟು ಹಾಕುವ ಹಾಗೆ ಯಾವದದ್ರು ಒಂದು ಮರಕ್ಕೋ ಅಥವಾ ಕಂಬಕ್ಕೆ ಸೇರಿಸಿ ಬೀಗ ಹಾಕು ಎಂದ ". ನಾನು ಬಹಳ ನಂಬಿಕೆಯಿಂದ ಅವನಿಗೆ ಹೀಗೆ ಹೇಳಿದೆ - ಅಲ್ಲಪ್ಪಾ ಕಳ್ಳರು ಸಣ್ಣ ಪುಟ್ಟ ವಸ್ತುಗಳನ್ನು ಯಾಕೆ ಮುಟ್ಟುತ್ತಾರೆ  ಅನ್ನುವ ಮಾತುಗಳನ್ನು ಉಡಾಫೆಯಿಂದ ಹೇಳಿದೆ ".
ಆಮೇಲೆ ಒಂದೆರೆಡು ದಿನ  ಏನು ಆಗಲಿಲ್ಲ, ಆದ್ದರಿಂದ ಸ್ವಲ್ಪ ಧೈರ್ಯದಿಂದ ಸೋಮವಾರ( 14th July) ರಾತ್ರಿಯೂ ಕೂಡ ನಿಲ್ಲಿಸಿದೆ. ಅಂದು ರಾತ್ರಿ ಊಟ ಮಾಡಿ ಆದ್ಮೇಲೆ ,ಸುಮಾರು 11.50 PM ಕ್ಕೆ ಹೊರಬಂದಾಗ ಪ್ರೀತಿಯಿಂದ ಸೀಟನ್ನು ಮುಟ್ಟಿ ನೇವರಿಸುತ್ತ ಹಾಗೆಯೇ ನನ್ನ ಹೊಟ್ಟೆಯ ಮೇಲೇನೂ ಕೈ ಆಡಿಸಿದಾಗ ನಂಗೆ ಗೊತ್ತಾಗಿದ್ದು ಏನಂದರೆ, ಸುಮಾರು ೫ ವರ್ಷಗಳಿಂದ,  ಡ್ಯಾಮ್ಗಳಲ್ಲಿ ನೀರು ನಿಲ್ಲುವ ರೀತಿಯಲ್ಲಿ  ಕೊಬ್ಬು  ಶೇಕರಕೊಂಡಿದ್ದು -ನಮ್ಮ ಕಾವೇರಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ  ತಮಿಳುನಾಡಿಗೆ ಹರಿಯುವ ಹಾಗೆ  ಕರಗತೊಡಗಿತ್ತು..!  ಇಂತಹ ಬದಲಾವಣೆಯನ್ನು ಕಂಡು ನನ್ನಲ್ಲಿ ಪ್ರೀತಿ ಹೆಚ್ಚಾಗ ತೊಡಗಿತ್ತು.

ಅಂದು ಮಂಗಳವಾರ ಬೆಳಿಗ್ಗೆ ಸುಮಾರು 7 ಘಂಟೆ, ನನ್ನ ಕಪ್ಪು laptap ಬ್ಯಾಗ್ ನ್ನು  ಎಂದಿನಂತೆ ತೆಗೆದುಕೊಂಡು, ಸ್ನೇಹಿತನ ಕಾರನಲ್ಲಿಡಲು  ಮೊದಲ ಮಹಡಿಯಿಂದ ಇಳಿದು ಬರುವಾಗ, ಅಲ್ಲಿ ವಿಶಾಲವಾದ ಗ್ಲಾಸಿನ ಕಿಟಕಿಯಿಂದ ನಿಧಾನವಾಗಿ  ಎಂದಿನಂತೆ ಭಯದಿಂದ ಕಿರುಗಣ್ಣಿನಲ್ಲಿ ನೋಡಿದಾಗಲೇ ಗೊತ್ತಾಗಿದ್ದು, ನನ್ನ ಪ್ರೀತಿಗೆ ಪಾತ್ರವಾಗಿದ್ದು ಸೈಕಲ್ ನ್ನು ಬಲವಂತದಿಂದ ಕದ್ದುಕೊಂಡು ಹೋಗಿದ್ದಾರೆಂದು ...
ನನಗಂತೂ ನನ್ನವರನ್ನೇ ಕಳೆದುಕೊಂಡಂತೆ ದುಃಖವಾಗಿ ನೋಡಿದಾಗ - ಕಳ್ಳರ ಬೂಟಿನ ಗುರುತುಗಳನ್ನು ಮಾತ್ರವೇ ಉಳಿಸಿ ಹೋಗಿದ್ದರು.

ಈ ಘಟನೆಯನ್ನು ನನ್ನ ಗೆಳೆಯನಿಗೆ ಹೇಳಲು ಸಂಕೋಚವಾಗಿ, ನನ್ನ I- ಫೋನ್ ನಲ್ಲಿ  "RUNKEEPER" ಆಪ್ ನಲ್ಲಿದ್ದ  "GO -Cycling" ಎಂಬದನ್ನು "WALKING" ಎಂದು ಬದಲಾಯಿಸಿ ಆಫೀಸಿಗೆ ನಡೆದುಕೊಂಡು ಹೋದೆ...!

ನನ್ನನ್ನು ಬದಲಾಯಿಸದ್ದ ಸೈಕಲ್, ಕೊನೆಗೂ ನನ್ನ ಜೊತೆ ಬಹಳ ದಿನವಿರಲಿಲ್ಲ ಎಂಬ ಕೊರಗನ್ನು ನನ್ನಲ್ಲಿಯೇ ಉಳಿಸಿ ಹೋದೆಯಲ್ಲಾ !

Comments

Submitted by ಗಣೇಶ Sun, 07/20/2014 - 21:55

>>ಕೊಬ್ಬು ಶೇಕರಕೊಂಡಿದ್ದು -ನಮ್ಮ ಕಾವೇರಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ತಮಿಳುನಾಡಿಗೆ ಹರಿಯುವ ಹಾಗೆ ಕರಗತೊಡಗಿತ್ತು..! :)
>>ಕಳ್ಳರ ಬೂಟಿನ ಗುರುತುಗಳನ್ನು ಮಾತ್ರವೇ ಉಳಿಸಿ ಹೋಗಿದ್ದರು
-ಇಷ್ಟು ನಿಶಾನಿಯಿದ್ದರೆ ಸಾಕು. ನಮ್ಮ ಪೋಲೀಸರು ಕ್ಷಮಿಸಿ, ನಮ್ಮ ಟಿ.ವಿ ಕ್ರೈಂ ವರದಿಗಾರರು ಕದ್ದವರನ್ನು ಪತ್ತೆಹಚ್ಚುತ್ತಾರೆ. ಬೇಕಿದ್ದರೆ ಹೇಳಿ..:)

Submitted by Darshan Kumar Tue, 07/22/2014 - 00:06

In reply to by ಗಣೇಶ

ನಮ್ಮವರಂತೆ ಚಾಣಕ್ಷರಲ್ಲ ಬಿಡಿ :) ...
-ವರದಿಗಾರರ ವಿಳಾಸ ತಿಳಿಸಿ, TV-9 ಅವರಿಗೆನಾದರು ಈ ಕಥೆ ಸಿಕ್ಕರೆ ಒಂದು ದಿನ ಅವರಿಗೆ ಬೇರೆ ವಿಚಾರಗಳೇ ಬೇಡ :P

Submitted by venkatb83 Thu, 07/24/2014 - 17:50

In reply to by Darshan Kumar

ನಿಮ್ಮ ಬರಹ ಓದಿದ ಮೇಲೆ ಥಟ್ಟನೆ ನನಗೆ ನೆನಪಿಗೆ ಬಂದಿದ್ದು ಆಂಗ್ಲ ಚಿತ್ರ 'ಬೈಸಿಕಲ್ ಥೀವ್ಸ್'
www.youtube.com/watch?v=hjsl_Co36mk

http://www.imdb.com/title/tt0040522/

http://en.wikipedia.org/wiki/Bicycle_Thieves
ಮತ್ತು ಅದರ ಪ್ರೇರಣೆಯ ತಮಿಳು ಚಿತ್ರ 'ಪೊಲ್ಲಾದವನ್ '
http://en.wikipedia.org/wiki/Polladhavan_(2007_film)
ಹಾಗೂ ಅದರ ರೀಮೇಕ್ ಕನ್ನಡ ಚಿತ್ರ ಯೋಗೇಶ್ ಅಭಿನಯದ 'ಪುಂಡ' .....
http://en.wikipedia.org/wiki/Punda_(film)
www.youtube.com/watch?v=Yg6B6oCIr5Y

ಆಂಗ್ಲ ಚಿತ್ರದಲ್ಲಿ ಬೈಸಿಕಲ್ ಕಳ್ಳತನದ ಬಗ್ಗೆ ಇಲ್ಲಿ ಬಹುಶ ಸೈಕಲ್ ಕಥೆ ಜನ ಒಪ್ಪೊಲ್ಲ ಅಂತ ಬೈಕ್ ಸೇರಿಸಿರುವರು ...!! ಕಳೆದು ಹೋದ ಸೈಕಲ್ಲು ಬೈಕು ಹುಡುಕುತ್ತಾ ನಾಯಕರು ಪಡುವ ಪಾಡು ಒಮ್ಮೆ ನೀವು ನೋಡಬೇಕು . ಹಾಗೆಯೇ ಈ ಬೈಕು ಕಳ್ಳತನದ ಆ ಆಂಗ್ಲ ಚಿತ್ರ ಜಗತ್ತಿನ ಹಲವು ಮುಖ್ಯ ಪ್ರಾದೇಶಿಕ ಭಾಷೆಗಳಿಗೆ ರೀಮೇಕ್ ಆಗಿ ಹಿಟ್ ಆಗಿದೆ .. ಕಾಳ ದಂಧೆ ಜಗತ್ತು ಅಬ್ಬಬಾ ಅಚ್ಚರಿ ಹುಟ್ಟಿಸುವುದು ..ನಿಮಮ ಬೈಕು ಕಾರು ನೀವೇ ಕಂಡು ಹಿಡಿಯಲು ಆಗದೆ ಇರುವುದು ಅವರ ಕೈ ಚಳಕ...!! ...ಈ ಜಗತ್ತಿನಲ್ಲಿ ಎಸ್ಟೇ ಭದ್ರತೆ ಇದ್ದರೂ ಸೈಕಲ್ಲು ಬೈಕು ಕಾರು ಅದಿರಲಿ ಬೀ ಎಂ ಟಿ ಸಿ ಬಸ್ಸೇ ಕದ್ದೊಯ್ವಾರು....:())))) .. ಪ್ರೀತಿ ಪಾತ್ರ ವಸ್ತು ಪ್ರಾಣಿ ಪಕ್ಷಿ ಇತ್ಯಾದಿ ಕಳೆದುಹೋದಾಗ ಆಗುವ ನೋವು ಅದು ಅನುಭವಿಸ್ದವ್ರಿಗೆ ಮಾತ್ರ ಗೊತ್ತಾಗುತ್ತೆ ...ಸಿನೆಮಾಗಳ ಲಿಂಕ್ ನೋಡಿ ..
ನಿಮ್ಮ ದುಖದಲ್ಲಿ ನಾನೂ ಭಾಗಿ ..
ಶುಭವಾಗಲಿ

\|/

Submitted by Darshan Kumar Fri, 07/25/2014 - 22:10

In reply to by venkatb83

ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ ಮತ್ತು ನೀವು ಕೊಟ್ಟ ಎಲ್ಲ ಲಿಂಕ್ ಗಳಿಗೆ ಧನ್ಯವಾದಗಳು ... ನನ್ನ ದುಃಖದಲ್ಲಿ ಬಾಗಿಯಾಗಿದ್ದಕ್ಕೆ ನಮಸ್ಕಾರಗಳು