ಪಾರ್ಕಿಂಗ್ ಪ್ಲೇಸಲ್ಲಿದ್ದ ಪೇಪರ್ ಪೀಸ್

Submitted by ಗಣೇಶ on Wed, 07/02/2014 - 23:45
ಚಿತ್ರ

"ಕನ್ನಡ ಎಂದು ಟೈಪು ಮಾಡುವುದು ಹೇಗೆ?" ಎಂದು ನನ್ನ ಗೆಳೆಯನೊಬ್ಬ ಆತನ ಆಂಡ್ರಾಯಿಡ್ ಫೋನಲ್ಲಿ ಟೈಪ್ ಮಾಡುತ್ತಾ ಕೇಳಿದನು.
"ಸಿಂಪ್‌ಲ್, ಇಲ್ಲಿ ಕೊಡು" ಎಂದು ಆತನಿಂದ ಮೊಬೈಲ್ ಕಸಿದು ಟೈಪ್ ಮಾಡಿದೆ :-"ಕನ್‌ನ್‌ಡ"! ಹೇಗೆ ಪ್ರಯತ್ನಿಸಿದರೂ ಕಸ್ತೂರಿ ಕನ್ನಡ ಬರದೇ ಕತ್ತರಿಸಿ ಕನ್ನಡ ಬರುತ್ತಿತ್ತು. ಆಗ ಸಂಪದದ ನೆನಪಾಯಿತು. ಹೇಗೆ ಅಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಬಳಸುವುದು ಎಂದು ವಿವರವಾಗಿ ಬರೆದಿದ್ದಾಗ, ನನ್ನ ಫೋನ್‌ಗೆ ಅದರ ಅಗತ್ಯವಿಲ್ಲ ಎಂದು ಅದರ ಕಡೆ ಗಮನ ಕೊಡಲಿಲ್ಲ...ಈಗ...,
"ನಾಳೆ ಹೇಳುವೆ" ಎಂದು ಫೋನ್ ಹಿಂದಿರುಗಿಸಿದೆ. ನಾಲ್ಕು ನಾಳೆಗಳು ಕಳೆದವು.(ಈ ದಿನಗಳಲ್ಲಿ ಸಂಪದನೂ ನೋಡಲಾಗಿರಲಿಲ್ಲ)
 ಈವತ್ತು ಒಂದು ಕಡೆ ಬೈಕ್ ಪಾರ್ಕ್ ಮಾಡುವಾಗ, ಕೆಳಗೊಂದು ಕನ್ನಡದ ಹಳೇ ಪೇಪರ್ ಬಿದ್ದಿದ್ದು ಕಾಣಿಸಿತು. "ಟೀ ಪುರಾಣ" ಎಂಬ ಶೀರ್ಷಿಕೆ ನೋಡಿದಾಗ ನಮ್ಮ ಸಂಪದಿಗ ಸುಮಂತ್ ಶಾನ್‌ಬಾಗ್ ನೆನಪಾಯಿತು. ಬಗ್ಗಿ ಹಳೇ ಪೇಪರ್ ತೆಗೆದು ಓದಿದರೆ ಸುತ್ತಮುತ್ತಲಿನವರು ಹಾಸ್ಯ ಮಾಡಿಯಾರು.  ಅದಕ್ಕೆ-ಗಾಳಿಗೆ ಹಾರದಂತೆ ಪೇಪರನ್ನು ಶೂನಲ್ಲಿ ಒತ್ತಿಹಿಡಿದು, ಸ್ಟೈಲಾಗಿ ಮೊಬೈಲ್ ತೆಗೆದು, ಸದ್ದು ಮಾಡದೇ ಅದರ ಕ್ಯಾಮರಾದಲ್ಲಿ ಫೋಟೋ ತೆಗೆದೆ. ಇನ್ನೊಂದು ಬದಿಯಲ್ಲಿ ಪವನಜರ " ಆಂಡ್ರಾಯಿಡ್‌ನಲ್ಲಿ ಕನ್ನಡ" http://www.prajavani.net/columns/%E0%B2%86%E0%B2%82%E0%B2%A1%E0%B3%8D%E0... ಲೇಖನವೂ ಇತ್ತು!
 ಮನೆಗೆ ಬಂದು ಫೋಟೋ ನೋಡಿದರೆ ನಮ್ಮ ಸಂಪದಿಗ ಸುಮಂತ್ ಬರೆದ - " ಚಾಯ್ ಗರಮ್!!!!!!!!!!!!!! "( http://sampada.net/article/20280 )  ಲೇಖನವೇ ಅದು -http://www.prajavani.net/article/%E0%B2%9F%E0%B3%80-%E0%B2%AA%E0%B3%81%E... ಬರಹಗಾರರ ಹೆಸರಿನ ಬದಲು "ವಾಟ್ಸ್‌ಆಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ" ಎಂದಿತ್ತು.:( ಹಿಂದೆಯೂ ಈ ಹಾಸ್ಯ ಬರಹ ಮಿಂಚಂಚೆಯಲ್ಲಿ ಲೇಖಕರ ಹೆಸರಿಲ್ಲದೇ ಓಡಾಡಿತ್ತು.
ನಿಮಗೇನಾದರೂ ಈ ಲೇಖನ ಫಾರ್ವರ್ಡ್ ಆಗಿ ವಾಟ್ಸ್ ಅಪ್‌ನಲ್ಲಿ ಬಂದರೆ ಲೇಖಕರ ಹೆಸರು ಸೇರಿಸಿ ಫಾರ್ವರ್ಡ್ ಮಾಡಿ.
 

Rating
No votes yet

Comments

ಗಣೇಶ್‌ಜಿ ಇದು ವದನಪುಸ್ತಕದಲ್ಲಿ ಹರಿದಾಡುತ್ತಿತ್ತು, ಆಗ ನಾನು ಸಂಪದದ ಕೊಂಡಿಯನ್ನು ಕೊಟ್ಟಿದ್ದೆ ಮತ್ತೆ ಅದು ವಾಟ್ಸ್‌ಪ್‌ನಲ್ಲಿ ಬಂದಾಗ ಅದರ ಕೊಂಡಿಯನ್ನು ಹಂಸಾನಂದಿಯವರು ಕೊಟ್ಟು ಅದನ್ನು ಶೇರ್ ಮಾಡುತ್ತಿದ್ದವರಿಗೆ ತಿಳಿಸಿರುತ್ತಾರೆ.

ಇಟ್ನಾಳರೆ, ಸಂಪದಿಗರ ಸದ್ದಿಲ್ಲದ ಸೇವೆ ಇದೇ. ಶ್ರೀಧರ್‌ಜಿ ಹಾಗೂ ಹಂಸಾನಂದಿಯವರಿಗೂ ಧನ್ಯವಾದಗಳು.