ದೇಶಾಭಿಮಾನದ ಕಿಚ್ಚು ಹಚ್ಚುವ RSS ಎಂಬ ಸಂಘ ..!!

ದೇಶಾಭಿಮಾನದ ಕಿಚ್ಚು ಹಚ್ಚುವ RSS ಎಂಬ ಸಂಘ ..!!

 

ಇಂದು ಕೆಲವರ ಕಣ್ಣಿಗೆ "RSS" ಅಂದ್ರೆ  ಕೋಮು ದ್ವೇಷ ಹಚ್ಚಿಸುವ , ಹಿಂದು ಭಯೋತ್ಪಾದಕರನ್ನ ತಯಾರಿಸುವ ,ಮಸೀದಿಗಳ ಮೇಲೆ ದಾಳಿ ಮಾಡುವ , ಇನ್ನು ಕೆಲವರಿಗೆ ಇದೊಂದು ಪಕ್ಕಾ ಗೂಂಡಾಗಳಿರುವ, ಮತ್ತು ಇನ್ನೆನೆನೋ ಬೇರೆಯವರು ತಪ್ಪು ತಿಳಿದಂತೆ   - ಅಂತಹ ಒಂದು ಸಂಘವೇ  "RSS"...?

ಮೇಲೆ ಹೇಳಿದ್ದೆಲ್ಲಾ ನಿಜನಾ ?, ಇದೆಲ್ಲನು ಅವರ ಸ್ವಂತ ಅಭಿಪ್ರಾಯನ ಅಥವಾ ಬೇರೆಯವರ ಗಾಳಿ ಮಾತಿಗೆ ನಮ್ಮ ಜನಗಳಲ್ಲಿ ಮೂಡಿದ್ದ ? ಹೀಗೆ ಹತ್ತು ಹಲವು  ಪ್ರಶ್ನೆಗಳು ಈಗ ನಿಮ್ಮಲ್ಲಿಯೂ ಮೂಡುತ್ತಿರಬಹುದು..!. ಹಾಗಿದ್ದರೆ  ಸಾಮಾನ್ಯ ನನ್ನಂತ ಯುವಕ ಕಂಡಂತೆ  "RSS" ಅಂದರೆ ಹೀಗೆ ..

 ಅಂದು ನಮ್ಮ ಹಳ್ಳಿಯಲ್ಲಿಯೇ(ಹಾಸನ ಜಿಲ್ಲೆ, ಅರಸೀಕೆರೆಯಲ್ಲಿರುವ ಒಂದು ಪುಟ್ಟ ಹಳ್ಳಿ )  ಇದ್ದ  ಪ್ರಾಥಮಿಕ ಶಾಲೆಯ ಘಂಟೆ ಢಣ-ಢಣ ಅಂತ ಬಾರಿಸಿದ್ದೆ ತಡ , ಅಣ್ಣನೊಂದಿಗೆ ಮನೆಗೆ ಓಡೋಡಿ ಬಂದೆ ,ಯಾಕೆಂದರೆ ಅಪ್ಪ ಸೋಮವಾರದ ಸಂತೆ ಮುಗಿಸಿ ಏನಾದ್ರೂ ತಿನ್ನಲು ತಂದಿರುತ್ತಾರೆ ಅಂತ.  ಆಗ ನನಗೆ ಸುಮಾರು 8 -9 ವರ್ಷ, ಆ ದಿನ ನಮ್ಮ ತಂದೆಯ ಸ್ನೇಹಿತರು ಯಾರೋ ಹೇಳಿದರಂತೆ "RSS" ಶಾಲೆಯಲ್ಲಿ ಒಳ್ಳೆ ಶಿಸ್ತಿನ ಶಿಕ್ಷಣ ಸಿಗುತ್ತೆ ಅಂಥ, ನಮ್ಮ ತಂದೆಗೆ ಏನು ಅನ್ನಿಸಿತೋ ಏನೋ ನನ್ನ ಸುಮಾರು 350-400 km ದೂರದಲ್ಲಿರುವ ಬಳ್ಳಾರಿ ಜಿಲ್ಲೆ , ಹಗರಿಬ್ಹೊಮ್ಮನ ಹಳ್ಳಿಯಲ್ಲಿದ್ದ "RSS" ವಸತಿ & ಶಾಲೆಗೆ ಸೇರಿಸುವ ನಿರ್ಧಾರ ಮಾಡಿ ಆಗಿತ್ತು.

ಮೊದಲನೇ ದಿನ  ಶಾಲೆಯಲ್ಲಿ , ಹಾಜರಾತಿ ಹಾಕುವ ಸಂದರ್ಭ  ಎಲ್ಲರೂ ಅವರ ಹೆಸರು ಕೂಗಿದೊಡನೆ "ಉಪಸ್ತಿತ್ " ಅಂತ ಎದ್ದು ಹೇಳತೊಡಗಿದರು.. ನಂಗೆ ಇದೇನಪ್ಪ ನಮ್ಮ ಸ್ಕೂಲ್-ಲ್ಲಿ "yes/ಪ್ರೆಸೆಂಟ್-ಸರ್/ಮ್ಯಾಡಂ " ಅಂತ ಹೇಳಿಕೊಟ್ತಿದ್ರು ಅಂತ ಗಾಬರಿಯಿಂದ,ಎಲ್ಲರಂತೆ  ನಾನು ಕೂಡ "ಉಪಾಸ್ತಿತ್ " ಅಂದೆ.   ಹೀಗೆ ಶುರು ಆಯಿತು ದೇಶೀ ಸಂಸ್ಕೃತಿಯ ಪರಿಚಯ.

ಅಲ್ಲಿಯವರಗೆ  ಬರಿ ಅಕ್ಷರದ ಬಗ್ಗೆ ಅರಿವು ಇತ್ತೇ ವಿನಹ ದೇಶ ಭಕ್ತಿಯಾಗಲಿ & ಬೇರೇನು ಅರಿವು ಇಲ್ಲದ ವಯಸ್ಸು. ಪ್ರತಿ ರಾತ್ರಿ ಅಮ್ಮ -ಅಜ್ಜಿ  ಮಲಗುವಾಗ ಹೇಳುತ್ತಿದ್ದ ಕಥೆಗಳಿಂದ, ನಂಗೆ ಕಥೆಗಳನ್ನು ಕೇಳೋದ್ರಲ್ಲಿ ತುಂಬಾ ಆಸಕ್ತಿ - ಆದರೆ ನಾ ವಸತಿ ಶಾಲೆಯಲ್ಲಿ ಇದ್ದರಿಂದ ಅದು ಸಾಧ್ಯವಿರಲಿಲ್ಲ . ಅಂಥ ಸಂಧರ್ಭ -ಗ್ರಂಥಾಲಯದಲ್ಲಿ ಎಲ್ಲಿ ನೋಡಿದರೆ ಅಲ್ಲಿ ಬರಿ ಸ್ವಾಮಿ ವಿವೇಕಾನಂದ ,ಆಜಾದ್ ,ಭಗತ್ ಸಿಂಗ್  ಇನ್ನು ಹಲವು ದೇಶ ಭಕ್ತರ ಪುಸ್ತಕಗಳು ಕಣ್ನಿಗೆ ಕುಕ್ಕೋ ತೊಡಗಿದ್ದು . ಈ ಪುಸ್ತಕಗಳು ಸಾಕಲ್ಲವೇ ನಿಮಗೆ ದೇಶಾಭಿಮಾನದ ಕಿಚ್ಚು ಹಚ್ಚಲು...?.  ಇದು ಮಾತ್ರ ಆಗಿದ್ರೆ "RSS" ಇಷ್ಟು ದೊಡ್ಡ ಸಂಘಟನೇ  ಆಗ್ತಿರ್ಲಿಲ್ಲ.

ಒಮ್ಮೆ ಸ್ವದೇಶಿ ವಸ್ತುಗಳ ಬಗ್ಗೆ RSS ನ ಕಡೆಯಿಂದ ಭಾಷಣ ಆಯೋಜಿಸಿದ್ದರು, ಆ ಭಾಷಣದ ವ್ಯೆಕರಿ ಹೇಗಿತ್ತು ಅಂದರೆ, ರಾತ್ರಿ ಊಟ ಆದ ನಂತರ  ಗೆಳೆಯರೆಲ್ಲರೂ ಸೇರಿ  ವಿದೇಶಿ ಸೋಪ್, ಟೂತ್ ಪೇಸ್ಟ್ ಅನ್ನು ಎಲ್ಲ ವಿದ್ಯಾರ್ಥಿಗಳ ಕೊಟಡಿಗೆ ತೆರಳಿ ಸಂಗ್ರಹಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಆ ಚಿಕ್ಕ ವಯಸ್ಸಿನ್ನಲ್ಲಿ ಸ್ವದೇಶಾಭಿಮಾನ  ಮೂಡಿಸಿದ್ದ ಕಾರಣದಿಂದ. ಈ ರೀತಿಯ ಅಭಿಮಾನ ಮೂಡಿಸಿದ್ದು ತಪ್ಪೇ ?.

ಪ್ರತಿ ದಿನ ಮುಂಜಾನೆ  ಶಾಖೆ - ಅಲ್ಲಿ ಇಷ್ಟ ಆಗೋ ಅಂತಹ ಎಷ್ಟೊಂದು ದೇಶಿಯ ಆಟಗಳು !, ಕಾರ್ಗಿಲ್ ಯುದ್ದ  ನಡೀತಾ ಇತ್ತು, ಹಾಗೆ ಒಮ್ಮೆ ಕಬಡ್ಡಿ ಆಟ ಆಡುತಿದ್ದ ಸಂಧರ್ಭ , ಆ ಆಟವನ್ನು "RSS" ನ  ಶಾಖೆಯಲ್ಲಿ ಹೇಳಿಕೊಟ್ಟಿದ್ದು ಹೀಗೆ - ಎದುರಾಳಿಗಳು ನಮ್ಮ ದೇಶದ ಮೇಲೆ ಯುದ್ದ ಮಾಡುವವರು - ಅವರ ಕಬಡ್ಡಿ ಅಂಗಳದಲ್ಲಿ "Baulk line"  ಇದೆಯಲ್ಲ  ಅಲ್ಲಿ ನಮ್ಮ ಸೈನಿಕರು ಇರುತ್ತಾರೆ ಅವರಿಗೆ ಇವ್ರುನೆಲ್ಲ ಕಣ್ಣು ತಪ್ಪಿಸಿ ನೀವು ಅವರಿಗೆ ಊಟ,ನೀರು & ಇತ್ಯಾದಿ ಕೊಡಬೇಕು , ಯಾರಾದರು ಅಡ್ಡ ಬಂದರೆ ಅವರನ್ನ ಹಿಮ್ಮೆಟ್ಟಿಸುವ ಸಾಮರ್ಥ್ಯ ಕೂಡ ನಿಮ್ಮಲ್ಲಿ ಇರಬೇಕು  ಎಂದು ದೇಶಾಭಿಮಾನದ ಕಿಚ್ಚನ್ನು ಆಟದ ಮೂಲಕವೂ ಹಚ್ಚಿದ್ದು "RSS" ನ ತಪ್ಪೇ ?

ಈ ಎಲ್ಲಾ ಆಟದ ನಂತರ  ಒಂದು ದೇಶಕ್ಕಾಗಿ ಹೋರಾಟ ಮಾಡಿದವರ ಕಥೆ , ಆ ಕಥೆಗಳನ್ನ ಕೇಳೋ ಸಂದರ್ಭದಲ್ಲಿ  ನಾನು ಕೂಡ , ಸ್ವಾತಂತ್ರಕ್ಕೋಸ್ಕರ ಹೊರಾಡಬೇಕಿತ್ತು ಅಂತಹ ಸಮಯದಲ್ಲಿ ನಾ ಯಾಕೆ ಹುಟ್ಟಲಿಲ್ಲ ಅನ್ನೋ ಪ್ರಶ್ನೆ ನನ್ನಂತ ಎಷ್ಟೊಂದು ಯುವಕರಲ್ಲಿ ಮೂಡಿದ್ದು "RSS" ನ ತಪ್ಪಾ ?. ಈಗ ಅಂತಹ ಸಂದರ್ಭ ಮತ್ತೊಮ್ಮೆ ಬಂದಿದೆ, ಭ್ರಷ್ಟಾಚಾರ,ಜಾತಿ-ಮತ,ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ಅನುಕರಣೆಯ   ವಿರುದ್ದ ಹೋರಾಡುವಂತ ಸನ್ನಿವೇಶ ಸನ್ನಿಹಿತವಾಗಿದೆ.  ಅಂದು ನರೇಂದ್ರ(ಸ್ವಾಮಿ ವಿವೇಕಾನಂದ) ಯುವಕರಲ್ಲಿ ಕಿಚ್ಚು ಹಚ್ಚಿ ಹೋಗಿದ್ದರು, ಇಂದೂ ಕೂಡ ಆ ನರೇಂದ್ರ ನಮ್ಮ ಮುಂದೆ ಇದ್ದಾರೆ  & ನಮ್ಮೆಲ್ಲರಲ್ಲೂ ಕಿಚ್ಚು ಹಚ್ಚಿದ್ದಾರೆ "ದೇಶ ಮೊದಲು ಎಂದು".  ಅದು  ಜ್ವಾಲೆಯಾಗಿ ಹರಡಬೇಕಿದೆ.. ಅಷ್ಟೇ.

ಇಂದು ಕೆಲವರು ಭಾರತದಿಂದ ಎಲ್ಲ ಪಡೆದರು ಭಾರತವನ್ನೇ ಜರಿಯುವಂತಹ  ಜನ ಇರುವ ಸಂದರ್ಭದಲ್ಲಿ, ದೇಶಾಭಿಮಾನದ ಕಿಚ್ಚು ಹಚ್ಚುವ "RSS" ನ ಪಾತ್ರ ಮಹತ್ವ & ಅದರ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಅನಿವಾರ್ಯತೆ ಅತಿ ಹೆಚ್ಚು ಇದೆ .
 

ದನ್ಯವಾದಗಳು,

http://gnanadarshu.blogspot.com/ 

 

Comments

Submitted by kavinagaraj Sat, 06/21/2014 - 08:51

ನಿಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿರುವಿರಿ. ಚೆನ್ನಾಗಿದೆ. ದೇಶದ ಬಗ್ಗೆ ಅಭಿಮಾನವಿರಲಿ ಎಂದು ಪ್ರೇರಿಸುವ ಯಾರೇ ಆಗಲಿ, ಯಾವುದೇ ಸಂಘಟನೆಯಾಗಲಿ ಒಳ್ಳೆಯದೇ.