ಗೂಂಡಾ ಗಣೇಶ.. ಫೇಸ್ ಬುಕ್ ಲಾಯರ್:)

Submitted by ಗಣೇಶ on Sat, 08/09/2014 - 00:03

ಈ ಬರಹದಲ್ಲಿ ಬರುವ ಪಾತ್ರಗಳೆಲ್ಲಾ ಕಾಲ್ಪನಿಕ. ಇದು ನೈಜ ಘಟನೆಯಲ್ಲ.
ಪ್ರತೀ ವರ್ಷ ಗಣೇಶ ಹಬ್ಬವನ್ನು ಭಕ್ತಿಯಿಂದ ಆಚರಿಸುವ ನಾನು ಮಹಾನ್ ದೈವಭಕ್ತ-ಇಲ್ಲಿ ಗಣೇಶ ದೇವರನ್ನು ಗೂಂಡಾ ಎಂದು ಹೇಳಿಲ್ಲ.
ಹುಟ್ಟಿನಿಂದ ಇದುವರೆಗೂ ನಾನು, ಯಾರೊಬ್ಬರನ್ನೂ "ನಿಮ್ಮ ಜಾತಿ ಯಾವುದೆಂದು?" ಸಹ ಕೇಳಿಲ್ಲ. ಆದ್ದರಿಂದ ಈ ಲೇಖನದಲ್ಲಿ ಎಲ್ಲಾದರೂ ಜಾತಿ/ಧರ್ಮದ ಬಗ್ಗೆ ವಿಷಯ ಏನಾದರೂ ಬಂದಲ್ಲಿ, ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಹೊಟ್ಟೆಗೆ ಹಾಕಿಕೊಳ್ಳಿ.
ಹೆಣ್ಣಿನ ಬಗ್ಗೆ ಅಪಾರ ಗೌರವವಿದೆ. ಕೆಟ್ಟ ಗುಣದ ಹೆಣ್ಣನ್ನೂ ಸಹ ನಾನು ತೆಗಳುವುದಿಲ್ಲ.
ಈ ಬ್ಲಾಗಲ್ಲಿ ಬೇರೇನಾದರೂ ತಮ್ಮ ಮನಸ್ಸಿಗೆ ನೋವಾಗುವಂತಹ ವಿಷಯವಿದ್ದರೆ...ದಯವಿಟ್ಟು ಕೋರ್ಟಲ್ಲಿ ಕೇಸು ಹಾಕುವ ಬದಲು, ನನ್ನ ಪತ್ನಿಗೆ ತಿಳಿಸಿಬಿಡಿ- ತತ್‌ಕ್ಷಣ ಕೋರ್ಟ್ ನೀಡುವ ಶಿಕ್ಷೆಗಿಂತ ಕಠಿಣ ಶಿಕ್ಷೆ ನೀಡುವಳು. ಇನ್ನು ಕಾಲ್ಪನಿಕ ಪ್ರಸಂಗ ಓದಿ-
ಸ್ಥಳ : ಹಾಸನ
ಅಕ್ಕಪಕ್ಕದಲ್ಲಿ ಪೋಲೀಸ್ ಪಡೆಯೊಂದಿಗೆ ನಡೆದು ಬರುತ್ತಿದ್ದ ಗಣೇಶರನ್ನು ಕಂಡು ಪಾರ್ಥರು, "ಏನು ಗಣೇಶರೆ! ರಾಜಕೀಯಕ್ಕೆ ಇಳಿದಿದ್ದೀರಾ?" ಅಂದರು.
"ಹಲೋ.." ಎಂದ ಗಣೇಶರು ಪೋಲೀಸರ ಬಳಿ ಪರ್ಮಿಶನ್ ತೆಗೆದುಕೊಂಡು, "ಪಾರ್ಥರೆ, ಗೂಂಡಾ ಕೇಸು ಮಾರಾಯ್ರೆ...ನನ್ನ ಲೇಖನದಲ್ಲಿ 'ರಾಮ .ಟ್ಟರು ಹೆಂಡತಿಯ ಜುಟ್ಟು ಹಿಡಿದು ಬೆನ್ನಿಗೆ ಎರಡು ಗುದ್ದಿದರು' ಎಂದು ಬರೆದಿದ್ದೆಯಲ್ಲಾ...ಹೆಂಡತಿಯ ಮೇಲೆ ದೌರ್ಜನ್ಯ ಎಂದು ಕೇಸು  ಹಾಕಿರುವರು. ಕತೆಯಲ್ಲೇ ಹೀಗೆ ಬರೆದವರು, ನಿಜ ಜೀವನದಲ್ಲಿ ಹೆಂಡತಿಗೆ ಎಷ್ಟು ಚಿತ್ರಹಿಂಸೆ ಕೊಟ್ಟಿರಬಹುದು, ಅವರನ್ನು ಹೆಂಡತಿಯ ಜತೆ ಇರಲು ಬಿಡಬೇಡಿ ಎಂದು ಹೇಳಿ ೮-೧೦ ಕೇಸು ಬೇರೆ ಬೇರೆ ಸೆಕ್ಷನ್ ಅಡಿಯಲ್ಲಿ, ಬೇರೆ ಬೇರೆ ಊರಲ್ಲಿ ನನ್ನ ಮೇಲೆ ಜಡಿದಿರುವರು. ಇದಲ್ಲದೇ '.ಟ್ಟ'ರ ಜಾತಿಯವರು-ನಮ್ಮ ಜಾತಿಯವರು ಹೆಂಡತಿಯ ಮೇಲೆ ದೌರ್ಜನ್ಯ ಮಾಡುವರು ಎಂಬರ್ಥ ಬರುವ ಲೇಖನ ಬರೆದು ನಮಗೆಲ್ಲಾ ನೋವುಂಟು ಮಾಡಿರುವರು ಎಂದೂ ಕೇಸು ಹಾಕಿರುವರು. ಹಾಗೆ ಪೋಲೀಸರ ಜತೆ ಕರ್ನಾಟಕ ಟೂರ್ ಮಾಡುತ್ತಿರುವೆ. ಅಂದ ಹಾಗೆ ನೀವು ಏನಿಲ್ಲಿ?"
"ನನ್ನದೂ ಹೆಚ್ಚುಕಮ್ಮಿ ನಿಮ್ಮ ತರಹವೇ..ಕಳೆದ ಬಾರಿ ಬರೆದ ದೆವ್ವದ ಕತೆಯಲ್ಲಿ ೨ ಕೊಲೆ ಆಗಿತ್ತು ಅಲ್ವಾ?"
 "ಹೌದು ಪಾರ್ಥರೆ ಕತೆ ಬಹಳ ಚೆನ್ನಾಗಿತ್ತು."
" ಅಲ್ಲಿ ನಾನು ಎರಡು ಕೊಲೆ ಮಾಡಬಾರದಿತ್ತು. ಈಗ ಆ ಕೇಸು ಕುತ್ತಿಗೆಗೆ ಸುತ್ತಿಕೊಂಡಿದೆ. ಅದರ ಜತೆ ದೆವ್ವದ ಕತೆ ಬರೆದು ಮೂಢನಂಬಿಕೆಗೆ  ಪ್ರೋತ್ಸಾಹ ನೀಡುವವ ಎಂದು ಬೇರೆ ಮನೆಯೆದುರು ಗಲಾಟೆ ನಡೆಯುತ್ತಿದೆ. ಅವರನ್ನೆಲ್ಲಾ ತಪ್ಪಿಸಿ ನಾಗರಾಜರನ್ನು ಭೇಟಿಯಾಗಲು ಬಂದರೆ ಅವರ ಮೇಲೂ ಪ್ರತೀ ಕವನದಲ್ಲಿ ಮೂಢ ಎಂದು ಬರೆದ ಆಪಾದನೆಗೆ ಆ ರೂಮಲ್ಲಿ  ಕೇಸು ನಡೆಯುತ್ತಿದೆ. ಅಲ್ಲಾ..ಗಣೇಶರೆ, ಈ ಸಮಯದಲ್ಲೂ ನಿಮ್ಮ ಕೈಯಲ್ಲೇನದು ಪುಸ್ತಕ?"
"ಅದಾ...ಎಲ್ ಎಲ್ ಬಿ ಪರೀಕ್ಷೆಗೆ ಕಟ್ಟಿದ್ದೇನೆ. ಅದಕ್ಕೆ ಸಮಯ ಸಿಕ್ಕಾಗಲೆಲ್ಲಾ ಓದುತ್ತಿರುವೆ. ಕ್ರಿಮಿನಲ್ ಲಾಯರ್, ಡೈವೊರ್ಸ್ ಲಾಯರ್... ತರಹ 'ಫೇಸ್ ಬುಕ್ ಲಾಯರ್' ಆಗಬೇಕೆಂದಿದ್ದೇನೆ. ಸಂಪದಿಗರಿಗೆ ಬೇಕಿದ್ದರೆ ಲಾಯರ್ ಫೀಸಲ್ಲಿ ೫೦% ರಿಯಾಯಿತಿ ಕೊಡುವೆ.."
"!!"
 

Rating
No votes yet

Comments

nageshamysore

Sat, 08/09/2014 - 02:25

ಗಣೇಶ್ ಜಿ, ನಿಮ್ಮ ಫೇಸ್ ಬುಕ್ ಲಾಯರಗಿರಿಗೆ ಒಳ್ಳೆ ಬಿಸಿನೆಸ್ ಗ್ಯಾರಂಟಿ... ಬರೆದವರನ್ನ ಹಿಡಿದು ಕೇಸು ಹಾಕುತ್ತಿರುವ ಹಾಗೆ ಅಂತಹ ಬರಹಗಳನ್ನು ಓದಿದ್ದು ಇನ್ನೂ ದೊಡ್ಡ ಅಪರಾಧ ಅಂತ ಪರಿಗಣಿಸಿ ಅವರ ಮೇಲೂ ಕೇಸು ಹಾಕುತ್ತಿದ್ದಾರಂತೆ! ಅವರನ್ನೆಲ್ಲ ನಿಮ್ಮ ಲಾಯರಗಿರಿಯೆ ಕಾಪಾಡಬೇಕು - ಕೇಸ್ ಗೆಲ್ಲಲಿ ಬಿಡಲಿ ಕನಿಷ್ಠ 50 ಪರ್ಸೆಂಟ್ ಡಿಸ್ಕೌಂಟ್ - ಉಳಿತಾಯವಂತೂ ಗಟ್ಟಿ! 

:‍))
ಅಷ್ಟೇ ಅಲ್ಲ‌ ಗಣೇಶರೆ ನಿಮ್ಮ‌ ಹಾಗೇ ಮತ್ತೊಬ್ಬನನ್ನು ಅರೆಷ್ಟೆ ಮಾಡಿದ್ದರು ಎಂದು ಪೇಸ್ ಬುಕ್ ನ‌ ಒಂದು ಬರಹ‌ ಇದೆ,
ಅವನು ಪಾಪ‌ ನಿರೂಪದ್ರವ‌ ಪ್ರಾಣಿ, ದಿನಕ್ಕೆ ಎರಡು ಬಾರಿ ಗುಡ್ ಮಾರ್ನಿಂಗ್, ಗುಡ್ ನೈಟ್ ಅಂತ‌ ಎರಡು ಸಾಲು ಹಾಗಿ ಎಲ್ಲ‌ ಸ್ನೇಹಿತರಿಂದ‌ ಸಾಕಷ್ಟು ಲೈಕ್ ಪೀಕಿಸುತ್ತಿದ್ದ‌ ಕಿಲಾಡಿ.
'ನಿಮ್ಮನ್ನು ಏಕ್ರಿ ಅರೆಸ್ಟ್ ಮಾಡಿದರು' ಎಂದು ಕೇಳಿದರೆ, ಅಳು ಮುಖ‌
'ಇಲ್ಲ‌ ಸಾರ್ ಈ ದಿನ‌ 'good day' ಅಂತ‌ ಹಾಕಿದ್ದೆ "
ಅದರಲ್ಲೇನು ತಪ್ಪು!!! ನನಗೆ ಅಚ್ಚರಿ !
'ಸಾರ್ ಗುಡ್ ಡೇ ಅಂದರೆ , ಹಿಂದೀಯಲ್ಲಿ 'ಅಚ್ಚೇ ದಿನ್ ' ಎಂದು ಅರ್ಥವಂತೆ ಅದಕ್ಕೆ ನೀನು ಮೋದಿಯವರನ್ನು ಆಡಿಕೊಳ್ತೀಯ‌ ಅಂತ‌ ಒಂದಿಷ್ಟು ಕೇಸ್ ಗಳು, ನೀನು ಮೋದಿ ಹಿಂಬಾಲಕ‌, ಆರ್ ಎಸ್ ಎಸ್ ಇರಬೇಕು ಅಂತ‌ ಕೆಲವು ಗುಂಡಾ ಕಾಯ್ದೇ ಮೇಲೆ ಬುಕ್ ಮಾಡಿದ್ದಾರೆ '
!!!!!!!!!!!!!!!!!!!!!!!!!!!!!!!!!!!!!!!!!!

:) :) ಪಾರ್ಥರೆ, ನಿಮ್ಮಲ್ಲಿ ಹೇಗೋ ಏನೋ ಗೊತ್ತಿಲ್ಲ. ನಮ್ಮಲ್ಲಿ ಸುಗ್ರೀವಾಜ್ಞೆ ಜಾರಿಯಾಗಿದೆ- ಏನೇ ಬರಹ ಬರೆಯುವುದಾದರೂ ಮನೆಯಾಕೆಯ ಒಪ್ಪಿಗೆ ಇಲ್ಲದೇ ಪ್ರಕಟಿಸಬಾರದು- ಹೀಗಾಗಿ ಬರಹಗಳು ಬಿಡಿ ಪ್ರತಿಕ್ರಿಯೆಗಳಿಗೂ ಸಮ್ಮತಿ ಸಿಗುತ್ತಿಲ್ಲ...:(

>>ಕೇಸ್ ಗೆಲ್ಲಲಿ ಬಿಡಲಿ ಕನಿಷ್ಠ 50 ಪರ್ಸೆಂಟ್ ಡಿಸ್ಕೌಂಟ್ - ಉಳಿತಾಯವಂತೂ ಗಟ್ಟಿ! :)
ನಾಗೇಶರೆ, ಬಿಲ್ಡರ್ ವಿರುದ್ಧ ನಮ್ಮ ಕೇಸಿನ ಬಗ್ಗೆ ಹಿಂದೆ ಬರೆದಿದ್ದೆ. ನಮ್ಮ ಲಾಯರ್ ವರ್ತಿಸುವ ರೀತಿ ನೋಡಿದಾಗ ಕೇಸು-ಹಣ ಗೋವಿಂದ ಅನಿಸುತ್ತಿದೆ. :( ನಿಮ್ಮ ಮೇಲಿನ ಉತ್ತರ ನೋಡಿ ಖುಷಿಯಾಯಿತು. ಸೋತರೇನಾಯಿತು ೨-೩ ಲೇಖನ ಬರೆಯುವಷ್ಟು ವಿಷಯ ಸಿಕ್ಕಿತು ಅಂತ ಸಮಾಧಾನಪಟ್ಟುಕೊಳ್ಳುವೆ.:)

kavinagaraj

Sat, 08/09/2014 - 09:57

ಹೀಗಾದರೂ, ಕೋರ್ಟು ಕೇಸು ಸಲುವಾಗಿಯಾದರೂ ಹಾಸನಕ್ಕೆ ಬಂದಿರಲ್ಲಾ! ನನಗೆ ಕೋರ್ಟು ಕೇಸುಗಳು ಹೊಸದಲ್ಲ ಬಿಡಿ! ಲಾಯರುಗಳಿಗೇ ಪಾಠ ಹೇಳಿಕೊಡುವಷ್ಟು ಅನುಭವ ಜಗತ್ತು ಕೊಟ್ಟುಬಿಟ್ಟಿದೆ. ನೀವು ಲಾಯರ್ ಆದರೆ ನನ್ನ ಸಲಹೆ ಉಚಿತವಾಗಿ ಸಿಗುತ್ತದೆ. ನನ್ನನ್ನು ಮೂಢನೆಂದು ಕಡೆಗಣಿಸುವಂತಿಲ್ಲ!

ಥ್ಯಾಂಕ್ಸ್ ಕವಿನಾಗರಾಜರೆ, ತುಂಬಾ ತುಂಬಾ...
ಫೇಸ್ ಬುಕ್ ಲಾಯರ್ ಎಂದು ಕೊಚ್ಚಿಕೊಂಡೆ, ಯಾರಾದರೂ ಕೇಸು ತಂದರೆ ಏನು ಮಾಡುವುದು ಅಂತ ಇದ್ದೆ. ಇನ್ನು ಧೈರ್ಯವಾಗಿ "ಫೀಸು ಕೊಟ್ಟು ಹೋಗಿ, ಮುಂದಿನ ವಾರ ಬನ್ನಿ" ಎನ್ನುವೆ. ಮತ್ತೆ... ನಿಮ್ಮ ಸಲಹೆ"ಉಚಿತ"ವಾಗಿ ಎರಡು ದಿನದೊಳಗೇ ಕೊಡಬೇಕು.:)

ಹೌದಲ್ವಾ...! "ಸೃಷ್ಟಿ" ಒಂದೇ ಕೇಸು ಸಾಕು ನಿಮ್ಮನ್ನು ಒಳಹಾಕಲು.. ಇನ್ನು ಸಿ.ಎಮ್ಮು... ತುಂಬಾ ಸೀರಿಯಸ್ ಪ್ರಾಬ್ಲಮ್ಮು.. :(
ಬೇಲ್ ತರಹ ನೀವೂ ಆಂಟಿಸಿಪೇಟರಿ ವಕೀಲ್ ಹಣ ಕಳುಹಿಸಿ.....:) ನಮ್ಮ ಕೈಗೆ ಸಿಕ್ಕಿದ ಮೇಲೆ ನೀವು ಎಸ್ಕೇಪ್ ಆಗುವುದು.. \|/