Its never too late

Its never too late

ಮೊನ್ನೆ ನಮ್ಮ ಅತ್ತೆ ಮಗ ಸಂದೀಪ ಮನೆಗೆ ಬಂದಿದ್ದ . ರಾತ್ರಿ ಊಟದ ನಂತರ ಈಗೆ ಮಾತಾಡುತ್ತಾ ,ನಾನು ಅವನಿಗೆ ಕೇಳಿದೆ 'ಎನ್ನಯ್ಯ ಹೇಗಿದೆ ಕೆಲ್ಸ ? ' ಅದಕ್ಕವನು 'ಇನ್ನೋದು ಆರು ದಿನ ಇದೆ ಅಷ್ಟೆ ಅಂದ' ,'ಆರ್ ದಿನ ಇದೆ ಅಷ್ಟೇ ಅಂದ್ರೆ ಎನ್ನಯ್ಯ ಅರ್ಥ ಅಂದೆ ' ಅವನು ಎಲ್ಲವನೂ ವಿವರಿಸಿದ ಮೇಲಷ್ಟೇ ನನಗೆ ತಿಳಿದಿದ್ದೂ ಅವನು ,ಅವನ ಕೆಲ್ಸಕ್ಕೆ ರಾಜೀನಾಮೆ ಮಾಡಿದ್ದನೇ ಅಂಥ!!. ಹೌದು ಅವನು ಅವನ ಕೆಲ್ಸಕ್ಕೆ ರಾಜೀನಾಮೆ ಕೊಟ್ಟು ,ಅವನ ಕನಸಿನ ಹುದ್ದೆಯ ತಯಾರಿಗಾಗಿ ಹೈದರಾಬಾದ್ಗೆ ಹೋರಾಡ್ತಾ ಇದ್ದಾನೆ . ಕೆಲಸಕ್ಕೆ ಸೇರಿ ಇನ್ನೂ ಸರಿಯಾಗಿ ಎರಡು ವರ್ಷವೂ ಹಾಗಿಲ್ಲ ,ಈ ಸ್ವಲ್ಪ ಅವಧಿಯಲ್ಲೇ ಅವನು ಕೆಲಸ ಮಾಡುವ ಕಂಪನಿಯಲ್ಲಿ ಒಳ್ಳೆ ಹೆಸರು ತೆಗೆದು ಕೊಂಡಿದ್ದಾನೆ ,ಸಾಲದಕ್ಕೆ 25,000 ರೂ ರಿಂದ 35,000 ರೂ ಸಂಬಳಕ್ಕೆ ಅರ್ಹನಾಗಿದ್ದಾನೆ. ಐ ಟಿ ಕಂಪನಿಯೇ ಅದರೂ ಕೆಲಸದ ವೇಳೆ ಮಾತ್ರ ಬೆಳ್ಳಿಗೆ 10 ರಿಂದ ಸಂಜೆ 5:30 ರ ವರೆಗೆ ಮಾತ್ರ. ಸಾಲದೆಂಬಂತೆ ಬೇರೆ ಪ್ರಾಜೆಕ್ಟ್ಗಳಲ್ಲಿ ಇರುವಂತೆ ಯಾವುದೇ ಡೆಡ್ ಲೈನ್ ಇಲ್ಲ ,ಯಾಕಂದರೆ ಇವನು ಕೆಲಸ ಮಾಡುವುದು ಸಂಶೋಧನೆ ವಿಭಾಗದಲ್ಲಿ . ಇಷ್ಟೆಲ್ಲಾ ಸವಲತ್ತುಗಳನ್ನು ಬಿಟ್ಟು ಆತ ತಾನು ಗೇಟ್ ಪರೀಕ್ಷೆ ಬರೆದು ಪಾಸಾಗಿ ಐಐಟಿ ನಲ್ಲಿ ಎಮ್ ಟೆಕ್ ಮಾಡಿ ಒಬ್ಬ ಒಳ್ಳೆ ವಿಜ್ಞಾನಿಯಾಗಬೇಕೆಂಬ ಒಂದೇ ಆಸೆ,ಗುರಿ ಇಂದ ಈ ಎಲ್ಲಾ ಸವಲತ್ತುಗಳನ್ನೂ ಬದಿಗೊತ್ತಿ,ತನ್ನ ಕನಸನ್ನು ಹಿಂಬಾಲಿಸಿ ಹೊರಟ್ಟಿದ್ದಾನೆ !! ಈ ವಿಷಯ ತಿಳಿದ ನನಗೆ ಆಶ್ಚರ್ಯದ ಜೊತೆ ಅವನ ಧೈರ್ಯ ನೋಡಿ ಖುಷಿ ಅನ್ನಿಸಿದಂತ್ತು ನಿಜ.

ನಮ್ಮಲ್ಲಿ ಎಷ್ಟು ಜನ ಈರೀತೀ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದಾರೆ ಹೇಳಿ ?ನಮ್ಮಲಿ ತುಂಬಾ ಜನ , ಯಾವುದೋ ಒಂದು ಡಿಗ್ರೀ ಮಾಡಿ , ಒಂಧು MNC ನಲ್ಲಿ ಕೆಲಸ ಗಿಟ್ಟಿಸಿಕೊಂಡಿ ಬಿಟ್ಟರೆ ,ಸಾಕೆ ಸಾಕು . ನಂತರ ವರ್ಕ್ ಎಕ್ಸ್‌ಪೀರಿಯೆನ್ಸ್ ಅಂಥ ಬೇರೆ ಬೇರೆ ಕಂಪನಿಗಳಿಗೆ ಜಿಗಿಯುತ್ತ ,ಕಡೆಗೆ ಒಂದು ದಿನ ರಿಟೈರ್ ಹಾಗಿ ಬಿಡ್ತೀವಿ .ಇನ್ನೂ ಕೆಲವರು ತಮ್ಮ ಕುಟುಂಬದ ಸಮಸ್ಯೇಗಳಿಗೊ,ಸಮಾಜದ ಬಲವಂತಕ್ಕೋ ಹೆದರಿ,ತಮ್ಮೆಲ್ಲ ಕನಸುಗಳನ್ನು ಸಾಯಿಸಿ ಸಮಾಧಿ ಮಾಡಿ, ಅದೇ ಸಮಾಧಿಯ ಮೇಲೆ ಕೂತು ತಮಗಿಷ್ಟವಿಲ್ಲದ ಕೆಲಸ ಮಾಡುತ್ತಿರುತ್ತಾರೆ. ಮತ್ತೂ ಕೆಲವರು ಇವಾಗ ಎಲ್ಲವೂ ಸರಿಯಾಗಿದೆ , ನನ್ನ ಕನಸನ್ನು ಹಿಂಬಾಲಿಸ ಹೋದರೆ ಏನೆಲ್ಲಾ ಅನಾಹುತ ಹಾಗಬಹುದು ಅಂತ ಹೆದರಿ ,ಅ ಕನಸನ್ನೇ ಕೊಲೆಮಾಡಿಬಿಟ್ಟಿರುತ್ತಾರೆ , ಅಲ್ಲದೆ ಕಮ್‌ಫ್ಪರ್ಟ್ ಜ಼ೋನ್ ಬಿಟ್ಟು ಹೊರಗೆ ಬಂದರೆ ಎಲ್ಲಿ ಸೋತು ಬಿಡುತ್ತೇವೆ ಎಂಬ ಅಂಜಿಕೆ. ಸೋಲು ಗೆಲುವು ಎಂಬುದು ಒಂದೇ ನಾಣ್ಯದ ಎರಡು ಮುಖ ಅನ್ನೋ ವಿಷ್ಯ ತೀರಾ ಹೊಸದೇನಲ್ಲ. ರಿಸ್ಕ್ ತೆಗೆದುಕೊಳ್ಳಲು ತಯ್ಯಾರಿರುವ ಕೆಲ ಪಾಸಿಟಿವ್ ಮನೋಭಾವದವರು ಈ ನಾಣ್ಯವನ್ನು ತಮ್ಮ ತಮ್ಮ ಜೀಬಿನಲ್ಲೇ ಇಟ್ಟುಕೊಂಡು ಸಾಹಸಕ್ಕೆ ಇಳಿದಿರುತ್ತಾರೆ.

ಈ ರೀತಿ ಈಗಾಗಲೇ ಇರುವ ಕಂಫರ್ಟ್ ಜ಼ೋನ್ ಅನ್ನು ಬಿಟ್ಟು ತಮ್ಮ ಕನಸನ್ನು ,ಹೃದಯ ಬಯಸಿದ್ದನ್ನು ಹಿಂಬಾಲಿಸಲು ಆಸಕ್ತಿ ಜೊತೆಗೆ ತುಂಬಾನೇ ಧೈರ್ಯ ಇರಬೇಕು . ಇಂಡಿಯನ್ ಆರ್ಮೀನಲ್ಲಿ ಕ್ಯಾಪ್ಟನ್ ಹಾಗಿದ್ದ ಗೋಪಿನಾಥ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ವ್ಯವಸಾಯ ಮಾಡಲು ಪ್ರಾರಂಭಿಸಲು ನಾವು ಅಂದುಕೊಂಡಿದಕ್ಕಿಂತ ತುಸು ಹೆಚ್ಚೇ ಧೈರ್ಯ ಬೇಕು ಬಿಡಿ . ಅವತ್ತು ಅವರು ಆ ನಿರ್ಧಾರ ತೆಗೆದು ಕೊಂಡಿರಲಿಲ್ಲ ಅಂದರೆ ಇಂಡಿಯನ್ ಏವಿಯೇಶನ್ನಲ್ಲಿ  ಕಡಿಮೆ ದರದ ವಿಮಾನಯಾನದ ಬೀಜ ಬಿತ್ತುವವರು ಯಾರು ಇರಲಿಲ್ಲ. ವಿದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿ ,ಅಲ್ಲಿಯೇ ಕೈ ತುಂಬಾ ಸಂಬಳ ಬರುವ ಕೆಲಸ ಹುಡುಕಿ ,ಎರಡು ವರ್ಷದ ನಂತರ ತನ್ನ ಹಳ್ಳಿಗೆ ವಾಪಸ್ಸಾಗಿ ವ್ಯವಸಾಯ ಮಾಡುವ ಯುವಕನ ಆಸಕ್ತಿ ,ಧೈರ್ಯವನ್ನು ಪದಗಳಲ್ಲಿ ಕಟ್ಟಲು ಸಾಧ್ಯವಿಲ್ಲ . 80 ರ ದಶಕದಲ್ಲೇ ಐ ಐ ಟಿ ಮದ್ರಾಸ್ ನಲ್ಲಿ ವ್ಯಾಸಂಗ ಮಾಡಿ, ONGC ನಲ್ಲಿ ಕೈತುಂಬಾ ಸಂಬಳ ಪಡೆಯುತಿದ್ದ ಆರ್. ಮಾದವನ್ ಅವರು ,ಆ ಕೆಲಸಕ್ಕೆ ಗುಡ್ ಬೈ ಹೇಳಿ ವ್ಯವಸಾಯ ಮಾಡುತ್ತಾರೆ ಅಂದರೆ ,ಅವರ ಧೈರ್ಯ ಎಂತದ್ಧು ಯೋಚಿಸಿ . ಮಣಿಪಾಲ್ ಮಹಾ ವಿದ್ಯಾಲಯದಲ್ಲಿ MBBS ಮುಗಿಸಿ ,ಇಂದು ತಮ್ಮ ಸ್ವಂತ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ , ರೋಗಿಗಳಿಗೆ ಕೇವಲ 5. ರೂಗಳಿಗೆ ಉಪಚರಿಸುವ ಡಾಕ್ಟರ್ ಶಂಕರೇ ಗೌಡರಿಗೂ ಇದದ್ದು ಅದೇ ಧೈರ್ಯ . ಅಷ್ಟೇ ಏಕೆ ವಿದೇಶದಲ್ಲೇ ಹುಟ್ಟಿ ಬೆಳೆದು ,ಕರ್ನಾಟಕದಲ್ಲಿ ಹೀರೊ ಆದ ಚೇತನ ಅವರು ,ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಅಷ್ಟೇ ಏಕೆ ನನ್ನದೇ ಒಬ್ಬ ಸ್ನೇಹಿತ ನಾವೆಲ್ಲ ಡಿಗ್ರೀ ಮುಗಿಸಿ ,ರೆಸ್ಯೂಮೆ ರೆಡೀ ಮಾಡಿಕೊಂಡು MNC ಯ ಕೆಲಸಕ್ಕೆ ಗಾಳ ಹಾಕಿ ಕೂತಿದ್ದರೆ ,ಈತ ಮಾತ್ರ ಡಿಗ್ರೀ ಮುಗಿದ ಮರುದಿನವೇ ದೆಹಲಿಯ ಐ ಏ ಎಸ್ ತರಬೇತಿ ಕೇಂದ್ರ ಸೇರುತ್ತಾನೆ. ಮನೆಯಲ್ಲಿ ಇಬ್ಬರು ತಂಗಿಯರ ಮದುವೆ ,ತಂದೆ ತಾಯಿ ಯೋಗೊಪಚಾರವ್ನೆಲ್ಲ ಮನಸ್ಸಿಗೆ ಅಚ್ಚಿಕೊಳ್ಳದೆ ,ತನ್ನ ಗುರಿ ಸಾಧನೆಗೆ ಹೊರಡುತ್ತಾನೆ. ತನ್ನ ಜೊತೆ ಓದಿದ ಹುಡುಗರು MNC ಸೇರಿ,ಕೈತುಂಬ ಸಂಬಳ ತೆಗೆದುಕೊಂಡು ,ಕಾರ್ ,ಬೈಕ್ ಮೋಜು ಮಸ್ತಿ ಅಂತ ಇವನ ಮುಂದೆ ಹೊಡಾಡುತಿದ್ದರೆ ,ಅದನೆಲ್ಲಾ ಕಂಡು ಕಾಣಾದಂತೆ ತನ್ನ ಗುರಿ ತಲುಪಲು ಬೇಕಾದ ಸಿದ್ದತೆ ಮಾಡಿಕೊಳ್ಳುತ್ತಾ ಕುರುತ್ತಾನೆ ಅಂದರೆ ಅವನ ಆಸಕ್ತಿ ,ಧೈರ್ಯ ,ಛಲವನ್ನು ಮೆಚ್ಚುವಂತ್ತದ್ದೆ.

ಇವರಷ್ಟೇ ಅಲ್ಲ,ಇಂಥಾ ಅದೆಷ್ಟೋ ಮಂದಿ ನಮಗೆ ಸಿಗುತ್ತಾರೆ. ಇವರಿಗೆಲ್ಲ ಕಾಣುವುದು ಸೋಲು ಗೆಲುವಿನ ಲೆಕ್ಕಾಚಾರವಲ್ಲ ,ಹಣ ಎಂಬ ವ್ಯಾಮೋಹವಲ್ಲ . ಇವರಿಗೆ ಕಾಣುವುದು ಗುರಿ ಮತ್ತು ಅದನ್ನು ಹಿಂಬಾಲಿಸುವಾಗ ಸಿಗುವ ಖುಷಿ ಅಷ್ಟೇ . ಅದಕ್ಕೆ ಬ್ರಜ಼ಿಲ್ ಲೇಖನಕಾರ Paulo Coelho ಹೇಳಿದ್ದು " Remember that wherever your heart is, there you will find your treasure" ಅಂತ.

ಪ್ರಿಯಾ ಮಿತ್ರರೇ ,ನಿಮ್ಗನಿಸ್ಸಿದ್ದನ ಯಾರಾ ಮುಲಾಜು ಇಲ್ಲದೆ ಮಾಡಿ ಬಿಡಿ,ಯಾಕಂದರೆ ಹೃದಯದ ಮಾತು ಕೇಳಿ ಹಾಳಾದವರು ಯಾರು ಇಲ್ಲ .ಅದಕ್ಕೆ ಹೇಳಿದ್ದು ಇಟ್ಸ್ ನೆವರ್ ಟೂ ಲೇಟ್ ಅಂತ. ಇನ್ನೂ ಸಾಕಷ್ಟು ಸಮಯವಿದೆ,ಸಾದಿಸುವ ಆಸೆ ,ಶಕ್ತಿ ಇದ್ದೇ ಇದೆ . ನಮಗೆ ಈ ಕ್ಷಣಕ್ಕೆ ಬೇಕಾಗಿರುವುದು ಸಮಾಧಿಯಾದ ಕನಸುಗಳನ್ನು ಹೊರಗೆ ತೆಗಿಯುವ ತಾಕತ್ತು ಅಷ್ಟೇ. ಗುಡ್ ಲಕ್.

ಕಿರಣ್ ಕುಮಾರ್ ಎಸ್ ಪಿ

Comments

Submitted by vidyakumargv Fri, 08/22/2014 - 20:33

ಅದು ನಿಜ ಆದರೆ ಹಲವರಿಗೆ ಮನೆಗಳಲ್ಲಿ ಕಷ್ಟ ಹೀಗಿರುವಾಗ ಇಷ್ಟ ಪಟ್ಟ ಕೆಲಸ ಗಿಟ್ಟುವವರೆಗೆ ಕಷ್ಟವಾದರೂ ದುಡಿಯಬೇಕಲ್ಲ,, ತಮ್ಮನ್ನು ಅವಲಂಭಿಸಿರುವವರಿಗೊಸ್ಕರ ದುಡಿಯುತ್ತಾರೆ ನೋಡಿ.. ಇದೇ ಬಿಡಿಸಲಾಗದ ಸಮಸ್ಯೆಗಳು