ವಿಪರ್ಯಾಸ
ಇಳಿ ಸಂಜೆ ಭಾನುವಾರದ ಸಮಯ. ಮನೆಯ ಬಾಲ್ಕನಿ ಕಿಟಕಿಯ ಹತ್ತಿರ ಕುಳಿತ ಮೋಹನ ಕಾಫೀ ಹೀರುತ್ತಾ ಕುಳಿತಿದ್ದ. 'ರೀ.. ಕಾಫಿಗೆ ಸಕ್ಕರೆ ಸರಿ ಇದೆಯಾ ?' ಅಂತ ಅಡಿಗೆ ಮನೆ ಕಡೆ ಇಂದ ಧ್ವನಿ ಬಂತು ಹೆಂಡತಿಯದ್ದು. ನೆನಪಿನ ಉಗಿಬಂಡಿಗೆ ಯಾರೋ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದಂತೆ ಆಯಿತು ಮೋಹನನಿಗೆ. ತನ್ನ ಹಳೆ ಶಾಲೆ ಕಾಲೇಜು ಮಿತ್ರರನ್ನು ನೆನಪಿಸಿ ಕೊಳ್ಳುತಿದ್ದ. ಆ ದಿನಗಳು ಎಷ್ಟು ಚೆನ್ನಾಗಿದ್ದವು. ಗೆಳೆಯರ ಜೊತೆ ಕಳೆದ ಆ ದಿನಗಳು ಮತ್ತೆ ಹಿಂತಿರುಗಿ ಬರಲಾರವು. ಗೆಳೆಯರಿಗೋಸ್ಕರ ಏನು ಬೇಕಾದರು ಮಾಡುವ ಹುಮ್ಮಸ್ಸು ಎಲ್ಲರಿಗೂ. ತಾನು ಇಂಜಿನಿಯರಿಂಗ್ ನಲ್ಲಿ ಎರಡನೆ ಸೆಮಿಸ್ಟರ್ ನಲ್ಲಿ ಫೇಲ್ ಆದಾಗ ಗೆಳೆಯ ರ ಸಹಾಯ ಇಲ್ಲದೆ ಇದ್ದಲಿ ತಾನು ಫೇಲ್ ಆದ ವಿಶಯಗಳ ನ್ನು ಪಾಸ್ ಮಾಡಲು ಆಗುತ್ತಿರಲಿಲ್ಲ. ' ಸಕ್ಕರೆ ಸರಿ ಇದೆ' ಅಂತ ಅಂದ ಮೋಹನ. ಮರುದಿನ ಆಫೀಸಿನಿಂದ ವಾಪಸ್ಸು ಬಂದ ಮೋಹನನಿಗೆ ಅರ್ಜೆಂಟಾಗಿ ಮೊಬೈಲ್ ಫೋನ್ ಸರ್ವಿಸ್ ಅಂಗಡಿಗೆ ಹೋಗ ಬೇಕಾದ ಸಂದರ್ಭ ಬಂತು. ಯಾಕೋ ಅವನ ಫೋನು ಪದೆ ಪದೆ ಆಫ್ ಆಗಿಬಿಡುತಿತ್ತು. ದಿನ ಬಸ್ ನಲ್ಲಿ ಆಫೀಸ್ ಗೆ ಓಡಾಡುವ ಮೋಹನನಿಗೆ ಅಂದು ತನ್ನ ಬೈಕಿನ ಅವಶ್ಯಕತೆ ಬಂತು. 'ಶ್ರುಂಗಾ... ಇದೇನೇ ಇದು.. ನನ್ನ ಬೈಕು ಕಾಣಿಸ್ತಾನೇ ಇಲ್ಲ !!
ಯಾರು ತಗೂಂಡು ಹೋದ್ರು ?' ಅಂತ ಕೇಳಿದ ಮೋಹನ. ಅದು ನಿಮ್ಮ ಗೆಳೆಯ ಅಮಿತ್ ಗಾಡಿ ಟೈರು ಪಂಚರ್ ಆಗಿ ಹೋಯಿತಂತೆ. ಅವರು ಅರ್ಜೆಂಟಾಗಿ ಅವರ ತಾಯಿಗೆ ಔಷಧಿ ತರಬೇಕಾಗಿತ್ತು. ಅದಕ್ಕೇ ನಿಮ್ಮ ಗಾಡಿ ಕೀ ಈಸ್ಕೂಂಡ್ರು. 'ಓ.. ಹೌದಾ.. ಆಯ್ತು ಬಿಡು' ಆಂತ ಅಂದವನು ಮನಸ್ಸಿನೂಳಗೆ ಮಂಡಿಗೆ ಹಾಕತೂಡಗಿದ. ಒಂದು ಕಡೆಯ ಒಳ ಮನಸ್ಸು 'ಹೋಗಲಿ ಬಿಡು.. ಅವನ ತಾಯಿಗೆ ಔಷಧಿ ತರಬೇಕಿತ್ತಂತೆ' ಅಂತ ಅನಿಸಿತು. ಆದರೆ ಆತನ ಮನಸ್ಸಿನ ಇನ್ನೊಂದು ಕಡೆ 'ಅಯ್ಯೋ ಇವನು ಇವತ್ತೇ ನನ್ನ ಗಾಡಿ ತಗೂಂಡು ಹೋಗಬೇಕಾ...' ಅಂತ ಮರುಗಿದ. ಒಂದು ಕ್ಷಣ ಮತ್ತೆ ಯೋಚನೆ ಮಾಡಿದಾಗ ಮೋಹನ ನಿಗೆ ಅನಿಸಿತು. 'ಇದೇನಿದು.. ಅಮಿತ್ ನನಗೆ ಹಿಂದೆ ಹಲವಾರು ವರ್ಷಗಗಳಿಂದ ಎಂಥಹ ಆಪ್ತ ಗೆಳೆಯ. ಕಾಲೇಜಿನಲ್ಲಿ ಅವನ ಸಹಾಯವಿಲೢದೆ ಇದ್ದಿದರೆ ನಾನು ಕೆಲವು ವಿಶಯಗಳಲ್ಲಿ ಪಾಸ್ ಮಾಡಲು ಆಗುತ್ತಲೇ ಇರಲಿಲ್ಲ.' ಅಂಥ ಆಪ್ತ ಮಿತ್ರ ಯಾವಾಗ ನನ್ನ ಜೀವನ ದಲ್ಲಿ ತನ್ನ ಪ್ರಾಮುಖ್ಯತೆ ಕಳೆದುಕೊಂಡ ಅಂತ ನೆನೆಸಿಕೊಂಡಾಗ ಅವನಿಗೆ ಅನಿಸಿತು. ಕಾಲಕ್ಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ಸ್ನೇಹಿತರ ಮತ್ತು ಬಂಧುಗಳ ಪ್ರಾಮುಖ್ಯತೆ ನಮ್ಮ ಜೀವನದಲ್ಲಿ ಹೆಚ್ಚು ಕಮ್ಮಿಯಾಗುತ್ತದೆ. ಕಾಲೇಜಿನಲ್ಲಿ ದಿನಾ ಸಿಗುತ್ತಿದ್ದ ಆ ಆಪ್ತ ಗೆಳೆಯರು ಇಂದು ಒಂದೇ ಊರಿನಲ್ಲಿ ಇದ್ದರೂ ತಿಂಗಳುಗಟ್ಟಳೆ ಸಿಗುವುದಿಲ್ಲ. ನನ್ನನ್ನೂ ಸೇರಿ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ವ್ಯಸ್ತರಾಗಿದ್ದೇವೆ. :-( ಅಮಿತ್ ವಾಪಸ್ ಬಂದ ಮೇಲೆ ಆತನ ಜೊತೆ ಕೆಲವು ಕ್ಷಣಗಳನ್ನು ಕಳೆಯಬೇಕು ಅಂತ ಮೋಹನನಿಗೆ ಅನಿಸಿತು. ಅಷ್ಟರಲ್ಲಿ ಆಗಾಗ ಆಫ್ ಆಗುತ್ತಿದ್ದ ಮೋಹನನ ಮೊಬೈಲಿಗೆ ಒಂದು ಕರೆ ಬಂತು. 'ಸಾರ್.. ಮೋಹನ್ ಅವರಾ... ಇಲ್ಲಿ ನಿಮ್ಮ ಮಿತ್ರರೊಬ್ಬರು ಗಾಡಿ ಅಪಘಾತದಲ್ಲಿ ಮೃತರಾಗಿದ್ದಾರೆ. ಗಾಡಿ ಬ್ರೇಕ್ ಫೇಲ್ ಆದ ಕಾರಣ ಆಯ ತಪ್ಪಿ ಮರಕ್ಕೆ ಡಿಕ್ಕಿ ಹೂಡೆದು ಹೀಗಾಯಿತು. ಅವರ ಜೇಬಿನಲ್ಲಿದ್ದ ಮೊಬೈಲ್ನಲ್ಲಿದ್ನದ ನಿಮ್ಮ ನಂಬರ್ ಸಿಕ್ಕ ಮೇಲೆ ನಿಮಗೆ ತಿಳಿನಡೆಸುತ್ತಿದ್ದೇವೆ.' ಮೋಹನ ಅಂತರ್ಮುಖಿಯಾದ.
Comments
ಉ: ವಿಪರ್ಯಾಸ
ಕಥೆ ಇಷ್ತವಾಗಿದ್ದಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಇಲ್ಲಿ ತಿಳಿಸಿ :)
In reply to ಉ: ವಿಪರ್ಯಾಸ by krmadhukar
ಉ: ವಿಪರ್ಯಾಸ
ಈ ಸಣ್ಣ ಕಥೆಯನ್ನು ನಾನು ಕಿರು ಚಿತ್ರನಾಗಿ ಚಿತ್ರೀಕರಿಸಿದ್ದೆನೆ. ನೊಡಿ ಆನಂದಿಸಿ...
https://www.youtube.com/watch?v=S04hSwSfrAU