ಕನ್ನಡಿಯ ನೈತಿಕತೆ
ಕನ್ನಡಿ ಎದುರಿಸಿದ ಸಾಲುಗಳು,,,
"ಒಮ್ಮೆ ಸುಳ್ಳು ಹೇಳಿಬಿಡು ಕನ್ನಡಿಯೇ
ನೆರಿಗೆ-ಗಟ್ಟಿಲ್ಲ ನನ್ನ ಮುಖ ಎಂದು"
(ಯವ್ವನದಿಂದಾ ವೃದ್ದಾಪ್ಯಕ್ಕೆ ಕಾಲಿಡುವಾಗ
ಕನ್ನಡಿಗೆ ಹೇಳಿದ್ದು -- ಯಯಾತಿಯಲ್ಲ)
************************************
"ಒಮ್ಮೆ ಸುಳ್ಳು ಹೇಳಿಬಿಡು ಕನ್ನಡಿಯೇ
ಕಪ್ಪು-ಗಟ್ಟಿಲ್ಲ ನನ್ನ ಮುಖ ಎಂದು "
(ಭಾವಗಳಲ್ಲೆ ಬಣ್ಣ ಬಣ್ಣದ ಕನಸು ಹೊತ್ತ
ಕಪ್ಪು ಚರ್ಮದ ಹುಡುಗಿ ಕನ್ನಡಿಗೆ ಹೇಳಿದ್ದು)
***********************************
ತುಂಬು ಯವ್ವನದ ತರುಣಿಯ
ಕನಸುಗಳ ಹೊರುವುದು
ಅವಳ ಗೋಡೆಯ ಕನ್ನಡಿ,
ಮುಂದೆ ಆಕೆಯ ಬದುಕಲ್ಲಿ
ಬರುವ ತರುಣನ ಬಗೆಗಿನ
ತರ-ತರ ದ ಕನಸುಗಳು
ದಿನವೂ ಅರಳಿ, ಲೀನವಾಗುವುದು
ಕನ್ನಡಿಯ ಅಂಚಿನಲಿ,,,,,,,
ಕಪ್ಪು ಕಾಡಿಗೆಯ ಅಂದ ;
ತುಟಿಗೆ ಹಚ್ಚಿದ ಕೆಂಪು ;
ಸೀರೆಯ ಉದ್ದ ನೆರಿಗೆ ;
ಎಲ್ಲವೂ ಕನ್ನಡಿಯ ಎದುರು ನಗ್ನ,,,
ಕಳೆದು ಹೋಗಬಾರದೆಂಬ
ಹಣೆ ಬೊಟ್ಟು,
ಅಂಟಿ ನಿಲ್ಲುವುದು ಕನ್ನಡಿಯ
ಬದಿಯಲ್ಲಿ,,,
ತಟಸ್ಥ ಸ್ಥಿತಿಯಲ್ಲೇ
ತರುಣಿಯ ಅಂದವನು
ಅರಳಿಸುವ ಹೊಣೆ,
ಕನ್ನಡಿಯ ಮೇಲೆ,,,
ಆ ಅಂದವನು ಕಂಡಮೇಲು
ಕನ್ನಡಿಯ ನೈತಿಕತೆ !
ಅಬ್ಬಾ,,,,,, ಸರಿಸಾಟಿ ಇಲ್ಲ,,,,
--ಜೀ ಕೇ ನ
Comments
ಉ: ಕನ್ನಡಿಯ ನೈತಿಕತೆ
ಸೊಗಸಾಗಿದೆ.