'ನೀ ಹಾಡಾದರೆ ನಾ ಶ್ರುತಿಯಾಗುವೆ' ಹೊಸ ಕಾದಂಬರಿಯ ಬಿಡುಗಡೆಯ ಬಗ್ಗೆ.
ನನ್ನ ಸಹಪಾಠಿ ರಚಿಸಿದ ಕಾದಂಬರಿ'ನೀ ಹಾಡಾದರೆ ನಾ ಶ್ರುತಿಯಾಗುವೆ' ಇದೇ 14/09/2014 ಆದಿತ್ಯವಾರದಂದು ಮಂಗಳೂರು
ಗರೋಡಿ ಹಾಲ್ ನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದುಸಾಹಿತ್ಯ ಲೋಕಕ್ಕೊಂದು ಹೊಸ ಚೈತನ್ಯ ದಾಪುಗಾಲುಇಡುತ್ತಿದೆ.
ಈ ಕಾದಂಬರಿ ಓದುಗರ ಮನಸ್ಸಿಗೆ ಉತ್ತಮ ಮುದವನ್ನು ನೀಡುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಈ ಕಾದಂಬರಿಯ ಬರಹಗಾರ
'ಗೌತಮ್ ಕುತ್ತೆತ್ತೂರು' ರವರೊಂದಿಗೆ ಕಾಲೇಜಿನ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರತಿಯೊಂದು ಬರವಣಿಗೆಯನ್ನು
ಲೇಖನದೆಡೆಗೆ, ಕಥೆಯೆಡೆಗೆ,ನಾಟಕದೆಡೆಗೆ ಓದುಗರನ್ನು ಆಕರ್ಷಿಸುವ ಅವರ ಬರವಣಿಗೆಯ ಲಹರಿ ಅಷ್ಟೊಂದು ಮನೋಹರವಾಗಿರುತ್ತಿತ್ತು.
ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಸಂದರ್ಭ ಕಾಲೇಜು ಪತ್ರಿಕೆಯ ಸಂಪಾದಕ. ಆಗಲೇ ಅತ್ಯುತ್ತಮ ಬರಹಗಾರ.
ಅವರ ಬರವಣಿಗೆಯ ದಾಟಿ,ಕಥೆ,ಕಾದಂಬರಿಯಲ್ಲಿನ ಕುತೂಹಲ, ಲೇಖನದಲ್ಲಿನ ಗಾಂಭೀರ್ಯತೆ, ಎಲ್ಲವನ್ನು ಸರಾಸಗಟಾಗಿ ಓದುತ್ತಿದ್ದರೆ
ಕಣ್ಣುಗಳುಅದರಿಂದ ಆಚಗೆ ಸರಿಯಲಾರವು. ಅಂತಹ ರಸದೌತನವನ್ನು ನೀಡುತ್ತದೆ. ಅಂತಹ ಪ್ರತಿಭೆ ಅವರಲ್ಲಿದೆ,ಅಂತಹ ಇಂಪು ತರಿಸುವ,
ಸಾಹಿತ್ಯ ಲೋಕದ ವೈಶಿಷ್ಟ್ಯವನ್ನು ಎತ್ತಿ ಹಿಡಿಯುವಂತಹಾ ಬರವಣಿಗೆಯ ಶೈಲಿ ನಿಮ್ಮನ್ನ ಅತೀ ಶೀಘ್ರದಲ್ಲಿ ತಲುಪಲಿದೆ. ಸಾಹಿತ್ಯ ಲೋಕಕ್ಕೆ
ಹೊಸತೊಂದು ಕೊಡುಗೆ'ನೀ ಹಾಡಾದರೆ ನಾ ಶ್ರುತಿಯಾಗುವೆ' ಎಂಬ ಶೀರ್ಷಿಕೆಯ ಕಾದಂಬರಿಯೊಂದಿಗೆ ನಿಮ್ಮನ್ನು ತಲುಪಲಿದೆ.ಎಲ್ಲರೂ
ಅದರ ಪ್ರತಿಗಳನ್ನು ಪಡೆದುಕೊಂಡು ಆ ಕಾದಂಬರಿಯನ್ನೊಮ್ಮೆ ಓದಿದರೆ ಖಂಡಿತಾ ನಿಮ್ಮಮನಸ್ಸುಗಳು ಹೊಸತೊಂದು ಅಧ್ಯಾಯದೆಡೆಗೆ
ಚಲಿಸುವುದರಲ್ಲಿ ಸಂಶಯವಿಲ್ಲ. ತಮ್ಮ ಕಾದಂಬರಿಗೆ ಓದುಗರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿ ಎಂದು ಆಶಿಸುತ್ತೇನೆ.
Comments
ಉ: 'ನೀ ಹಾಡಾದರೆ ನಾ ಶ್ರುತಿಯಾಗುವೆ' ಹೊಸ ಕಾದಂಬರಿಯ ಬಿಡುಗಡೆಯ ಬಗ್ಗೆ.
ಈ ಮೊದಲು ಅಪ್ಲೋಡ್ ಆದ ಶೀರ್ಷಿಕೆಯ formatting ಸರಿಯಾಗಿ ಸೆಟ್ ಆಗಿರಲಿಲ್ಲ.ಇದನ್ನು ಉಳಿಸಿಕೊಳ್ಳಬೇಕಾಗಿ ಸಂಪಾದಕ ಮಂಡಳಿಯಲ್ಲಿ ವಿನಂತಿ.