ಇಡ್ಲಿ ಅಮ್ಮ!
ಎಲ್ಲರ ಮನೆಯಾಗೂ ಕೋಡುಬಳೆ
ಅಮ್ಮನ ಕೈಗೆ ಮಾತ್ರ ಕೈಬಳೆ !
----
ಆಯ್ತಂತೆ ಜೈಲುವಾಸ ಇಡ್ಲಿ ಅಮ್ಮನಿಗೆ
ಆಗುವುದೆಂದೋ ಜೈಲುವಾಸ ಇಟಲಿ ಅಮ್ಮನಿಗೆ
------
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು !
ಕದ್ದು ನೀರು ಕುಡಿದಮೇಲೆ ಮುದ್ದೆ ಉಣ್ಣಲೇಬೇಕು !!
------
ನಕ್ಷತ್ರಗಳು ಮಿನುಗುತ್ತಿವೆಯಂತೆ ಜೈಲಿನಾ ಹೊರಗೆ
ನಕ್ಷತ್ರಗಳು ಗೊಣಗುತ್ತಿವೆಯಂತೆ ಜೈಲಿನಾ ಒಳಗೆ
------
ಹರ ಕೊಲ್ಲಲ್ ಪರ ಕಾಯ್ವನೇ?
ಪರರ ಕೊಲ್ಲಲ್ ಪರಪ್ಪ ಬಿಡುವನೇ?
------
ಕಣ್ ಕಟ್ಟಿದ ದೇವತೆ ನ್ಯಾಯದ ಕಣ್ ಬೀರಿಹಳು
ಕಣ್ ಬಿಟ್ಟ ದೆವ್ವಗಳು ಹೊರಗೆ ಕಲ್ಲುಗಳ ಬೀರಿಹರು
Comments
ಉ: ಇಡ್ಲಿ ಅಮ್ಮ!
ನಮಸ್ಕಾರ್ ಸರ್
ತುಂಬಾ ಚನ್ನಾಗಿದೆ ನಿಮ್ಮ ಕಲ್ಪನೆಯ ಕವನ.
ತಪ್ಪು ಮಾಡಿದ ಮೇಲೆ ಶಿಕ್ಷೆಯಾಗಲೆ ಬೇಕು ಅದುವೆ ತಾನೆ ಧರ್ಮ.
In reply to ಉ: ಇಡ್ಲಿ ಅಮ್ಮ! by ravindra n angadi
ಉ: ಇಡ್ಲಿ ಅಮ್ಮ!
ರವೀ೦ದ್ರ ಅವರಿಗೆ ನಮಸ್ಕಾರಗಳು
ತಪ್ಪು ಮಾಡಿವರಿಗೆ ಶಿಕ್ಷೆ ಆಗಬೇಕು ನಿಜ ... ಅದನ್ನು ಅರಿತೂ ಅವರ ಪರವಾಗಿ ಹೋರಾಡುತ್ತ ಕಣ್ಣೀರು ಸುರಿಸಿಕೊಂಡು, ಪ್ರಾಣಗಳ ಕಳೆದುಕೊಳ್ಳುವ ಮುಟ್ಠಾಳ ಜನರೂ ತಪ್ಪಿತಸ್ತರೇ ಅಲ್ಲವೇ?
In reply to ಉ: ಇಡ್ಲಿ ಅಮ್ಮ! by bhalle
ಉ: ಇಡ್ಲಿ ಅಮ್ಮ!
>>ಪ್ರಾಣಗಳ ಕಳೆದುಕೊಳ್ಳುವ ಮುಟ್ಠಾಳ ಜನರೂ ತಪ್ಪಿತಸ್ತರೇ ಅಲ್ಲವೇ? :)
-ಕಾಲ ಕೆಟ್ಟೋಯ್ತು ಭಲ್ಲೇಜಿ...
ಭಗವಂತನಿಗೆ ವಜ್ರದ ಕಿರೀಟ ಕೊಟ್ಟರೂ ಜೈಲು ತಪ್ಪಲಿಲ್ಲ, ಬಡಜನರಿಗೆ ಟಿ.ವಿ, ಮಿಕ್ಸಿ, ಗ್ರೈಂಡರ್ ಏನೆಲ್ಲಾ ಕೊಟ್ಟರೂ ಜೈಲು ತಪ್ಪಲಿಲ್ಲ..
ಕೊಲೆಗಾರರಿಗೆ ಮರಣ ದಂಡನೆ ಶಿಕ್ಷೆ, ರಾಜಕಾರಣಿಗಳಿಗೆ ಜೈಲು ಶಿಕ್ಷೆ ಕೊಡುವುದನ್ನು ನಿಲ್ಲಿಸಬೇಕು. :)
ಇಟಲಿಯಮ್ಮನ್ನ ಜನ ಮರೀತಿದ್ದಾರೆ. ಜೈಲಾದರೆ ಮುಂದಿನ ಎಲೆಕ್ಷನ್ನಲ್ಲಿ ಗೆದ್ದು ಬರುವರು. ಈಗಿನ ಶಿಕ್ಷೆಯೇ ಸಾಕು.
In reply to ಉ: ಇಡ್ಲಿ ಅಮ್ಮ! by ಗಣೇಶ
ಉ: ಇಡ್ಲಿ ಅಮ್ಮ!
ನಿಜ ಗಣೇಶ್'ಜಿ ... ಜೈಲುವಾಸವಾದರೆ ಈ ಕೆಟ್ಟ ಜನ ಮತ್ತೆ ಬೆಳಕಿಗೆ ಬಂದು, ಸಿಂಪತಿ ಓಟುಗಿಟ್ಟಿಸಿ ಗದ್ದುಗೆ ಏರುತ್ತಾರೆ ... ಕಡೆಗಾಣಿಸುವುದೇ ಉತ್ತಮ ಆದರೆ ಹಾಗಾಗುವುದೇ?
ಉ: ಇಡ್ಲಿ ಅಮ್ಮ!
ಜಯಲಲಿತರವರ ಈಚಿನ ಶಿಕ್ಷೆಯ ಪ್ರಕರಣದಿಂದ ನ್ಯಾಯ ನಿಂತಿತೆಂದು ಉನ್ನತ ಅಧಿಕಾರದಲ್ಲಿರುವವರು ಸಹ ಶಿಕ್ಷೆಗೆ ಒಳಪಡುವರೆಂದು ನಮ್ಮ ವ್ಯವಸ್ಥೆಯ ಬಗ್ಗೆ ಹೆಮ್ಮೆ ಪಡುವರು ಕೆಲವರು. ನೋಡಿದಿರಾ ಎನ್ನುವಂತೆ ....
ಆದರೆ ನೆನಪಿಡಿ ಜಯಲಲಿತರ ವಿರುದ್ದ ಹಗರಣದ ವ್ಯಾಜ್ಯ ಹೂಡಿದ್ದು ಯಾವುದೆ ಸರ್ಕಾರವಲ್ಲ, ಸ್ವಚ್ಚತೆಯ ಬಗ್ಗೆ ಮಾತನಾಡುವ ಯಾವುದೆ ಕಾಂಗ್ರೆಸ್ ಅಥವ ಬೀಜೆಪಿ ಅಥವ ಮತ್ಯಾವುದೇ ಪಕ್ಷಗಳಲ್ಲ. ಶ್ರೀಸಾಮಾನ್ಯನನ್ನು ಸತಾಯಿಸುವ ಸರ್ಕಾರಿ ಇಲಾಖೆಗಳಲ್ಲ.
.
ಸುಬ್ರಮಣ್ಯಸ್ವಾಮಿ ಎಂಬುವ ಒಬ್ಬ ವ್ಯಕ್ತಿ. ಅಷ್ಟೆ. ಅವರು ಹೂಡಿರುವ ವ್ಯಾಜ್ಯಕ್ಕೆ ದೊರೆತ ಜಯವದು.
ಇನ್ನೂ ಸಹ ಭ್ರಷ್ಟಾಚರ ಮುಕ್ತವ್ಯವಸ್ಥೆ ವಿರುದ್ದ ಮತ್ತೆ ಮಾತನಾಡುವಿರಾ ???
In reply to ಉ: ಇಡ್ಲಿ ಅಮ್ಮ! by partha1059
ಉ: ಇಡ್ಲಿ ಅಮ್ಮ!
ಸಾಮಾನ್ಯ ಜನತೆಗೆ ಸಿಕ್ಕ ಒಂದು ಪುಟ್ಟ ವಿಜಯ ಎಂದು ಅಂದುಕೊಳ್ಳಬಹುದು ... ಆಕೆ ಇನ್ನೆಷ್ಟು ದಿನ ಒಳಗೆ ಇರಬಹುದು ಎಂಬುದು ದೊಡ್ಡ ಪ್ರಶ್ನೆ. ಅಧಿಕಾರದಲ್ಲಿದ್ದಾಗ ಏನೂ ಕಾಯಿಲೆ ತೋರದ ಇವರು ಜೈಲ್'ಎಂದ ಕೂಡಲೆ ಮೊದಲು ಆಸ್ಪತೆಗೆ ಓಡುತ್ತಾರೆ.