ಬೆಂಡೆಕಾಯಿ ಕಾಯಿರಸ

ಬೆಂಡೆಕಾಯಿ ಕಾಯಿರಸ

ಬೇಕಿರುವ ಸಾಮಗ್ರಿ

ಬೇಕಾಗುವ ಪಧಾರ್ಥಗಳು: ಬೆಂಡೆಕಾಯಿ-೧೦,೧೫ ಕಡ್ಲೆಬೇಳೆ-೨ಚಮಚ ಉದ್ದಿನಬೇಳೆ-೪ಚಮಚ ಹಸಿಮೆಣಸು-೨ ತೆಂಗಿನತುರಿ-೧ಕಪ್ ಲಿಂಬೆರಸ-೨ಚಮಚ ಉಪ್ಪು- ರುಚಿಗೆತಕ್ಕಷ್ಟು

ಒಗ್ಗರಣೆಗೆ: ಕರಿಬೇವು-೧೦ಎಸಳು ಸಾಸಿವೆ-೧ಚಮಚ ಎಣ್ಣೆ- ೧ಚಮಚ ಒಣಮೆಣಸು-೨

ತಯಾರಿಸುವ ವಿಧಾನ

ಮಾಡುವ ವಿಧಾನ: ಮೊಧಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಧು ಹೆಚ್ಚಿಕೊಳ್ಳಿ.(ಸಾಂಬಾರಿಗೆ ಹೆಚ್ಚೋ ಹಾಗೆ) ಬಾಣಲೆಗೆ ಉದ್ದಿನಬೇಳೆ, ಕಡ್ಲೆಬೇಳೆ, ಹಸಿಮೆಣಸು, ಹಾಕಿ ಸ್ವಲ್ಪ ಎಣ್ಣೆ ಹಾಕಿ ಕೆಂಪಾಗುವ ವರೆಗೆ ಹುರಿಧುಕೊಳ್ಳಿ. ನಂತರ ತೆಂಗಿನತುರಿ ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕರಿಬೇವು, ಸಾಸಿವೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಹಾಕಿಕೊಂಡು ಅದಕ್ಕೆ ಹೆಚ್ಚಿಧ ಬೆಂಡೆಕಾಯಿ ಹಾಕಿ ಉಪ್ಪು ಸೇರಿಸಿ ಬಾಡಿಸಿಕೊಳ್ಳಿ. ನಂತರ ರುಬ್ಬಿಧ ಮಿಶ್ರಣ ಸೇರಿಸಿ ಲಿಂಬೆಹುಳಿ ರಸ ಹಿಂಡಿ.

Comments

Submitted by ಸುಮ ನಾಡಿಗ್ Mon, 08/11/2014 - 03:08

ಚೆನ್ನಾಗಿದೆ. :-)

‍ಸ್ವಲ್ಪ ವ್ಯತ್ಯಾಸದಲ್ಲಿ, ಮಜ್ಜಿಗೆ ಸೇರಿಸಿ ಮಾಡಿದರೆ, ಮಜ್ಜಿಗೆ ಹುಳಿ ಆಗುವುದು.