ನಮ್ಮ ಶಾಲೆಗಳು ಅಪಾಯದಲ್ಲಿವೆ!

ನಮ್ಮ ಶಾಲೆಗಳು ಅಪಾಯದಲ್ಲಿವೆ!

ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಲ್ಲ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಲ್ಲಿ ಕಲಿಕೆಗಿಂತಲೂ ಹೆಚ್ಚು ಪೈಪೋಟಿಯ ಮನೋಭಾವನೆ ಮೂಡುವಂತೆ ಮಾಡುತ್ತಿವೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಶಿಕ್ಷಣವು ಅಪಾಯದಲ್ಲಿದೆ. ಉತ್ತಮ ಗುಣಮಟ್ತದ ಶಿಕ್ಷಣವು ಏನನ್ನು ನಿರೀಕ್ಷಿಸಬಲ್ಲುದು ಎನ್ನುವುದರ ತಿಳುವಳಿಕೆಯ ಸ್ಪಷ್ಟ ಕೊರತೆಯಿಂದಾಗಿಯೂ ಮತ್ತು ಹಿಂದಿನ ದೋಷಪೂರಿತ ಶೈಕ್ಷಣಿಕ ನೀತಿಯಿಂದಾಗಿಯೂ ಇಂದು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

 

ರಾಜಾಸ್ಥಾನ ಸರ್ಕಾರವು ಇತ್ತೀಚೆಗೆ ತನ್ನ ರಾಜ್ಯದಲ್ಲಿನ ೧೭೦೦೦ ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಮಹಾರಾಷ್ಟ್ರ ಸರ್ಕಾರದವರೂ ಸಹ ೧೪೦೦೦ ರಾಜ್ಯ ಸರ್ಕಾರಿ ಶಾಲೆಗಳನ್ನು ಮುಚ್ಚಲಿಕ್ಕೆ ನಿರ್ಧರಿಸಿದ್ದಾರೆ. ಮತ್ತು ಒಡಿಷ್ಯಾ ಸರ್ಕಾರವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಕೊರತೆಯನ್ನು ಮುಂದಾಗಿಟ್ಟುಕೊಂಡು ಒಟ್ಟೂ ೧೯೫ ಶಾಲೆಗಳನ್ನು ಮುಚ್ಚಿದೆ. ಈ ಘಟನೆಗಳು ದೇಶದಲ್ಲಿ ಸಾರ್ವಜನಿಕ ಶಿಕ್ಷಣಾ ವ್ಯವಸ್ಥೆಯು ದಾರಿ ತಪ್ಪುತ್ತಿರುವುದನ್ನೂ, ಅವನತಿಯತ್ತ ಸಾಗುತ್ತಿರುವುದನ್ನೂ ಸೂಚಿಸುತ್ತವೆ.

 

ಖಾಸಗಿ ಶಾಲಾ ವ್ಯವಸ್ಥೆಗಳಲ್ಲಿನ ಸಮಸ್ಯೆಯನ್ನು ವಿವರಿಸಲು ಈ ಒಂದು ಘಟನೆಯನ್ನು ಉದಾಹಣೆಯಾಗಿ ನೋಡಬಹುದಾಗಿದೆ. ಇತ್ತಿಚೆಗೆ ತನ್ನ ಮಗನನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ಓರ್ವ ಪೋಷಕರು ತಮ್ಮ ಮಗನ ಕುರಿತಂತೆ ಶಾಲಾ ಶಿಕ್ಷಕರು ನೀಡಿದ ವಿವರಗಳಾನ್ನು ನನಗೆ ತಿಳಿಸಿದರು. ವಿಜ್ಞಾನ, ಸಮಾಜ ಶಾಸ್ತ್ರ ಹಾಗೂ ಆಂಗ್ಲ ಭಾಷೆಯಲ್ಲಿ ನನ್ನ ಮಗನೌ ಹಿಂದುಳಿದಿದ್ದಾನೆ. ಆ ವಿಚಾರದಲ್ಲಿ ನನ್ನನ್ನು ಶಾಲೆಗೆ ಕರೆಸಿಕೊಂಡ ಶಿಕ್ಷಕರು ನನಗೆ “ನಿಮ್ಮ ಮಗನ ಶಿಕ್ಷಣಾ ಗುಣಮಟ್ಟ ಸುಧಾರಣೆಯಾಗಬೇಕಿದೆ... ಅದಕ್ಕಾಗಿ ನೀವೇನಾದರೂ ಮಾಡಬೇಕು.” ಎಂದರು! “ಶಾಲಾ ಅವಧಿಯಲ್ಲಿ ಮಕ್ಕಳು ಪಠ್ಯ ವಿಷಯಗಳ ಹಿನ್ನೆಡೆಗೆ, ತಪ್ಪು ನಡವಳಿಕೆಗಳಿಗೆ.... ಶಿಕ್ಷಕರೇಕೆ ಜವಾಬ್ದಾರರಾಗುವುದಿಲ್ಲ?” ಮತ್ತೆ ಅವರು ಮುಂದುವರಿದು “ಮನೆಯಲ್ಲಿ ನನ್ನ ಮಗ ಓದಲು, ಬರೆಯಲು ಒಪ್ಪದೆ ತರಲೆ ಮಾಡಿದರೆ ಆ ಜವಾಬ್ದಾರಿಯನ್ನೂ ನಾವೇ ಹೊರಬೇಕು, ಅದನ್ನೂ ಶಿಕ್ಷಕರ ಮೇಲೆ ಹಾಕುವಂತಿಲ್ಲ.. ಏಕೆ ಶಿಕ್ಷಕರು ಇತ್ತೀಚೆಗೆ ಮಗುವಿನ ಕುರಿತ ಎಲ್ಲಾ ಜವಾಬ್ದಾರಿಯನ್ನು ಪೋಷಕರ ಮೇಲೆ ಆರೋಪಿಸುತ್ತಾರೆ? ಮಗುವಿನ ಓದು ಮತ್ತು ಬರವಣಿಗೆಯನ್ನು ಉತ್ತಮಗೊಳಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಪೋಷಕರಾದವರು ಅದಕ್ಕೆ ಬೇಕಾದ ಪರಿಕರಗಳಾನ್ನು ಪುಸ್ತಕ, ಪೆನ್, ಪೆನ್ಸಿಲ್ ಗಳನ್ನು ಒದಗಿಸಿಕೊಡಬಹುದು.

ಇದು ಇಂದಿನ ಪೋಷಕರು ಹಾಗೂ ಮೇಲ್ವರ್ಗದ ಖಾಸಗಿ ಶಾಲೆಗಳ ನಡುವೆ ಇರುವ ಧೋರಣೆಯಾಗಿದ್ದು ಇದೀಗ ಇದೇ ಧೋರಣೆ ಕೆಳ ಮಟ್ಟದ ಶಾಲೆಗಳನ್ನೂ ಆವರಿಸತೊಡಗಿದೆ.

 

ಸಾರ್ವಜನಿಕ ಶಾಲೆಯ ಅವನತಿ

ಸರ್ಕಾರಿ ಸ್ವಾಮ್ಯದ ಶಾಲೆಗಳು ದಿನ ದಿನಕ್ಕೆ ಅವನತಿಯತ್ತ ಮುಖ ಮಾಡುತ್ತಿವೆ, ಕಾರಣವೆಂದರೆ ಆ ಶಾಲೆಗಳಲ್ಲಿ ಸಮರ್ಪಕವಾದ ನಿರ್ವಹಣೆ ಇಲ್ಲದಿರುವುದೇ ಆಗಿದೆ. ೧೯೫೦ ರ ದಶಕದ ಅಂತ್ಯದಲ್ಲಿಯೂ, ೬೦ ನೇ ದಶ್ಕದಲ್ಲಿಯೂ ಸಾರ್ವಜನಿಕ ಶಾಲೆಗಳ ಈ ಪ್ರಕಾರದ ಸಮಸ್ಯೆಯು ಪ್ರಾರಂಭಗೊಂಡಿತು. ಇದಕ್ಕೆ ಕಾರಣವೆಂದರೆ ಆ ಸಂದರ್ಭದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳು ಪ್ರಾರಂಭಗೊಂಡದ್ದು. ಅಂಕೆ ಸಂಖ್ಯೆಗಳ ಲೆಖ್ಖಾಚಾರದಲ್ಲಿ ಬಹಳವೇ ಶಾಲೆಗಳು ಪ್ರಾರಂಭವಾದವಾದರೂ ಮೂಲ ಸೌಕರ್ಯ ಹಾಗೂ ತರಬೇತಿಗಳ ವಿಚಾರಗಳಾಲ್ಲಿ ಆ ಬಹುತೇಕ ಶಾಲೆಗಳು ಗಮನವನ್ನು ಹರಿಸಿರಲಿಲ್ಲ. ಇನ್ನು ಬಹುತೇಕ ರಾಜ್ಯಗಳಾಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಶಾಲೆಗಳಲ್ಲಿ ದುಡಿಯುತ್ತಿದ್ದ ಶಿಕ್ಷಕರಿಗೆ ಅತ್ಯಂತ ಕಡಿಮೆ ವೇತನ ಪಾವತಿಯಾಗುತ್ತಿತ್ತು. ಅಂತಹಾ ಶಾಲೆಗಳ ಆಡಳಿತ ನಿರ್ವಹಣೆಯೂ ಸಹ ಅಸಮರ್ಪಕವಾಗಿದ್ದಿತು. ಇನ್ನು ರಾಜಾಸ್ಥಾನದಂತಹಾ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ ಶಿಕ್ಷಕರಲ್ಲಿ ಬಹುತೇಕರು ಅನನುಭವಿಗಳಾಗಿದ್ದರು. ಈ ಎಲ್ಲಾ ಸನ್ನಿವೇಶವೂ ಸಹ ಶಿಕ್ಷಣ ಗುಣಮಟ್ತದ ಮೇಲೆ ನೇರವಾಗಿ ಪರಿಣಾಮವನ್ನು ಬೀರಿತು. ಶಿಕ್ಷಕ ವರ್ಗವು ಪ್ರೇರಣೆಯನ್ನೇ ಕಳೆದುಕೊಂಡು ಅಸಂತುಷ್ಟವಾಯಿತು.

 

ಇನ್ನು ಕೆಲ ರಾಜ್ಯ ಸರ್ಕಾರಗಳು ೧೯೫೦ ರ ದಶಕದಲ್ಲಿ ತಮ್ಮ ಸರ್ಕಾರದ ಸೇವೆಯಲ್ಲಿದ್ದ ಶಿಕ್ಷರನ್ನು ಪಂಚಾಯತ್ ರಾಜ್ ನ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಆದೇಶಿಸಿದವು. ಈ ಮೂಲಕ ಶಿಕ್ಷರನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಇದರಿಂದಾಗಿ ಶಿಕ್ಷಕರಾದವರು ತಮ್ಮ ಶಾಲೆಯ ಕೆಲಸಗಳ ಜವಾಬ್ದಾರಿಯೊಂದಿಗೇ ಇತರೆ ಸಾರ್ವಜನಿಕ ಕೆಲಸಗಳ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗಿ ಬಂದು ನಿಜಾರ್ಥದಲ್ಲಿ ಅವರ ಕಾರ್ಯದಕ್ಷತೆ ಇಳಿಮುಖವಾಗುತ್ತಾ ಸಾಗಿತು. ಇದರಂತೆ ಇತರೆ ಅಂಶಗಳಾದ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆ, ಕಡಿಮೆ ವೇತನ ಪಾವತಿ, ಇನ್ನಿತರೆ ಕುಂದುಕೊರತೆಗಳ ಕಾರಣದಿಂದಾಗಿ ರಾಜಾಸ್ಥಾನದಂತಹಾ ರಾಜ್ಯಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರಿ ಪ್ರಮಾಣ ಅಧಿಕಗೊಂಡು ಸಮಸ್ಯೆ ತಲೆದೋರಿತು. ಇದುವೇ ಮುಂದುವರಿದು ಶಿಕ್ಷಕರು ತಮ್ಮ ಖಾಸಗಿ ಬದುಕನ್ನು ಉತ್ತಮಪಡಿಸಿಕೊಳ್ಳುವತ್ತ ಹೆಚ್ಚು ಗಮನ ನೀಡಿದರು ಇದಕೆ ಪೂರಕವಾಗಿ ಆಗಷ್ಟೇ ಜನ್ಮತಳೆದ ಶಿಕ್ಷಕರ ಸಂಘಗಳು ಶಿಕ್ಷಕರ ಈ ಪರಿಯ ಧೋರಣೆಯನ್ನು ಬೆಂಬಲಿಸಿದವು. ಶಿಕ್ಷಕರು ಬೆಳೆಸಿಕೊಂಡ ಈ ಬಗೆಯ ಸ್ವಾರ್ಥಪರ ಧೋರಣೆಗೆ ಕಾರಣ ಅವರಿಗೆ ಒದಗಿಬಂದ ಸಂಕಟದ ಪರಿಸ್ಥಿತಿಯೇ ಆಗಿರುವುದರಿಂದ ಶಿಕ್ಷಕರನ್ನು ಯಾರೂ ದೂಷಿಸಲು ಸಾಧ್ಯವಿಲ್ಲ.

 

ನಮ್ಮ ಶೈಕ್ಷಣಿಕ ಸಂಯೋಜಕರು ಹಾಗೂ ನಿರ್ವಾಹಕರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ದನ್ನು ಸರಿಪಡಿಸಲು ಹೆಚ್ಚು ಒತ್ತು ನೀಡುವ ಬದಲಿಗೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಶಿಕ್ಷಣದ ಬೇಡಿಕೆಯನ್ನು ಪರಿಹರಿಸಲು ಅಗ್ಗದ ಉಪಕ್ರಮಗಳಾನ್ನು ರೂಪಿಸಿದರು. ಈ ಬಗೆಯಾದ ಧೋರಣೆಯಿಂದಾಗಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಶಾಲೆಗಳು ಪ್ರಾರಂಭಗೊಂಡ್ವು ಆದರೆ ಅವುಗಳಿಗೆ ಸಾಕಾಗುವಷ್ಟು ಪ್ರಮಾಣದ ಹಣಕಾಸು ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಿಕ್ಕೆ ಈ ವ್ಯವಸ್ಥೆಯ ರೂವಾರಿಗಳಿಂದ ಸಾಧ್ಯವಾಗಲಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿನ ಒತ್ತಡದಿಂದಾಗಿ ಈ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುವಂತೆ ಮಾಡಿತು, ಅಲ್ಲದೆ ಶಿಕ್ಷಣದ ಬಗೆಗಿನ ನೈಜ ಕಾಳಜಿಯ ಕೊರತೆಯು ಕಂಡುಬಂದಿತು ೬೦ನೇ ದಶಕದಲ್ಲಿ ಪ್ರಾರಂಭಗೊಂಡ ಸರ್ಕಾರಿ ಪ್ರಾಯೋಜಿತ ಶೈಕ್ಷಣಿಕ ಯೋಜನೆಗಳಲ್ಲೆಲ್ಲವೂ ಈ ಮೇಲಿನ ಧೋರಣೆಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅನೌಪಚಾರಿಕ ಶಿಕ್ಷಣ, ಶಿಕ್ಷಣ ಕ್ರಾಂತಿ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಾಮ, ಸರ್ವ ಶಿಕ್ಷಾ ಅಭಿಯಾನ  60 ನಂತರ ಚಾಲನೆ ಎಲ್ಲಾ ಕಾರ್ಯಕ್ರಮಗಳಲ್ಲೆಲ್ಲವೂ ಈ ಈ ಮನಸ್ಥಿತಿಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅನೌಪಚಾರಿಕ ಶಿಕ್ಷಣ, ಶಿಕ್ಷಣ ಕ್ರಾಂತಿ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಾಮ, ಸರ್ವ ಶಿಕ್ಷಾ ಅಭಿಯಾನ - ಹೀಗೆ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಅಂದಹಾಗೆ ಈ ಉಪಕ್ರಮಗಳ ಜಾರಿಯ ಪ್ರತಿ ಹಂತಗಳಲ್ಲಿಯೂ ಟೀಕೆಗಳು ಕೇಳಿಬಂದವು. ಆದರೆ ಅದರ ಬೆಂಬಲಿಗರು ತಮ್ಮ ಚತುರ ಮಾತುಗಾರಿಕೆಯಿಂದ ಒಂದು ನಿರ್ದಿಷ್ಠ ಉತ್ತರವನ್ನು ಸಿದ್ದಪಡಿಸಿಟ್ಟುಕೊಂಡಿರುತ್ತಿದ್ದರು.

 

ಶಾಲೆಯ ಕಲ್ಪನೆ

ಈ ಉಪಕ್ರಮಗಳೆಲ್ಲದರ ಒಂದು ಮೂಲಭೂತ ಸಮಸ್ಯೆ ಎಂದರೆ ಅವರು ಶಾಲೆಯ ಪರಿಕಲ್ಪನೆಯನ್ನೇ ಹಾಳು ಮಾಡಿದರು. ಶಾಲೆಗಳು ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಬ್ಬರ ಕಡೆಯಿಂದಲೂ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಕೋರುತ್ತವೆ. ಇದಕ್ಕೊಂದಷ್ಟು ನಿರ್ದಿಷ್ಠ ಸಮಯವ್ನ್ನು ನಿರಂತರ ಹಾಗೂ ಸುಸಂಬದ್ದ ರೀತಿಯಲ್ಲಿ ಪರಿಶೋಧನೆಗಾಗಿ ಮೀಸಲಾಗಿರಿಸುವ ಕಲ್ಪನೆಯನ್ನು ಹೊಂದಿದೆ. ಇಲ್ಲಿ ವಿದ್ಯಾರ್ಥಿಗಳ ಬೌದ್ದಿಕ ಹಾಗೂ ಮಾನಸಿಕ ಶಿಸ್ತಿನ ಅಭಿವೃದ್ದಿಯಾಗಬೇಕಾಗಿರುತ್ತದೆ. ಆದುದರಿಂದಾಗಿ ಒಂದು ಶಾಲೆಯು ಶಿಕ್ಷಕರ ಕಡೆಯಿಂದ ವೃತ್ತಿಪರ ಜ್ಞಾನ, ಮಕ್ಕಳ ಬೌದ್ಧಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸುವ ಸಲುವಾಗಿ ಮಕ್ಕಳ ಬಗ್ಗೆ ಆಳವಾಗಿ ಸಂವೇದನೆ ಯನ್ನು ಕೋರುತ್ತದೆ. ಆದರೆ ಆದರೆ ಇದಾವುದರ ಬಗೆಗೆ ತಿಳುವಳಿಕೆ ಇಲ್ಲದವರಿಂದ ಈ ಬಗೆಯ  ಪರಸ್ಪರ ವಿರುದ್ದದ ಪರಿಕಲ್ಪನೆಗಳು ಬೆಳೆದವೋ ನಿಜವಾದ ಶಾಲೆಯ ಕಲ್ಪನೆಯೇ ವಿಕೃತಗೊಂಡಿತು. ಇದನ್ನೇ ನಮ್ಮ ಶಿಕ್ಷಣ ವ್ಯವಸ್ಥೆಯು ಕಳೆದ ಐದು ದಶಕಗಳಿಂದಲೂ ಪೋಷಿಸಿಕೊಳ್ಲುತ್ತಾ ಬಂದಿದೆ.

 

ಉದಾಹರಣೆಗೆ ಅನೌಪಚಾರಿಕ ಶಿಕ್ಷಣಾ ಯೋಜನೆಯನ್ನು ಕೋಟಿಗಳ ಲೆಖ್ಖದಲ್ಲಿ ಹಣವನ್ನು ವ್ಯಯಿಸಿ ೧೯೬೦ರಿಂದ ೧೯೯೦ ರ ನಡುವೆ ದೇಶದಾದ್ಯಂತ ಜಾರಿಗೆ ತರಲಾಯಿತು. ಈ ಯೋಜನೆಯು ಸುಸಂಬದ್ದ ಬೋಧನೆ, ಶಿಕ್ಷಕರ ತರಬೇತಿ, ಶೈಕ್ಷಣಿಕ ಯೋಜನೆ ಹಾಗೂ ವೃತ್ತಿಪರ ಜ್ಞಾನದ ಆಲೋಚನೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಹೀಗಾಗಿ ಯಾರು ಬೇಕಾದರೂ ಶಿಕ್ಷಕರಾಗಬಹುದು ಎನ್ನುವ ಸಂದೇಶವನ್ನು ಈ ಯೋಜನೆಯು ದೇಶಾದ್ಯಂತ ರವಾನಿಸಿದೆ. ಶಾಲೆಗಳಿಗಾಗಿ ಸುಸಜ್ಜಿತ ಹಾಗೂ ಪ್ರತ್ಯೇಕ ಸ್ಥಳಾವಕಾಶ್ಗಳನ್ನೂ, ಹೆಚ್ಚಿನ ಹಣವನ್ನು ವ್ಯಯಿಸುವಂತಹಾ ಯಾವುದೇ ಮೂಲಭೂತ ಅಗತ್ಯಗಳನ್ನೂ ಸಹ ಈ ಯೋಜನೆಯು ತಿರಸ್ಕರಿಸುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರ ಬೌದ್ದಿಕ ಬೇಡಿಕೆಗಳನ್ನೂ ಇಲ್ಲಿ ನಿರ್ಲಕ್ಷಿಸಲಾಗಿದೆ. ಒಟ್ತಾರೆಯಾಗಿ ಶಿಕ್ಷಣ, ಶಿಕ್ಷಕ, ಶಾಲೆಯ ಮೌಲ್ಯವನ್ನೇ ತಗ್ಗಿಸುತ್ತದೆ.

 

ಶಿಕ್ಷಣ ಸಂಶೋಧಕರು ಈ ದೋಷಪೂರಿತ ಯೋಜನೆಯ ವೈಫ್ಲ್ಯಗಳನ್ನು ಕಂಡುಕೊಳ್ಳುವ ಹೊತ್ತಿಗಾಗಲೇ ಅದೇ ಬಗೆಯ ಇನ್ನಿತರೆ ಯೋಜನೆಗಳು ಜಾರಿಗೆ ಬರಲು ಸಿದ್ದವಾಗಿದ್ದವು. ರಾಜಾಸ್ಥಾನದಲ್ಲಿ ಶಿಕ್ಷಣ ಕ್ರಾಂತಿ ಯೋಜನೆ ಜಾರಿಯಾದರೆ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಾಮ ಜಾರಿಯ ಅಂತಿಮ ಹಂತವನ್ನು ತಲುಪಿದ್ದಿತು. ವೃತ್ತಿಪರ ಜ್ಞಾನ ಹಾಗೂ ಬೌದ್ದಿಕ ತೀವ್ರತೆ, ಮಗುವಿನ ಮೂಲಭೂತ ಅಗತ್ಯ ಸಂವೇದನೆಗಳ ನಡುವಣ ಸಮತೋಲನವನ್ನು ಸರ್ವ ಶಿಕ್ಷಾ ಅಭಿಯಾನ ಸೇರಿದಂತೆ ಈ ಯಾವುದೇ ಕಾರ್ಯಕ್ರಮಗಳು ಪುನಃಸ್ಥಾಪಿಸಲು ಸಾಧ್ಯವಾಗಲಿಲ್ಲ. ಉತ್ತಮ ಗುಣಮಟ್ತದ ಶಿಕ್ಷಣವು ಏನನ್ನು ನಿರೀಕ್ಷಿಸಬಲ್ಲುದು ಎನ್ನುವುದರ ತಿಳುವಳಿಕೆಯ ಸ್ಪಷ್ಟ ಕೊರತೆಯಿಂದಾಗಿಯೂ ಮತ್ತು ಹಿಂದಿನ ದೋಷಪೂರಿತ ಶೈಕ್ಷಣಿಕ ನೀತಿಯಿಂದಾಗಿಯೂ ಇಂದು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

 

ಕಲಿಕೆಯ ವಿಧಾನಗಳು

ಏತನ್ಮಧ್ಯೆ ಖಾಸಗಿ ಶಾಲೆಗಳು ಈಗ ಒಂದು ಅಪೂರ್ವ ದರದಲ್ಲಿ ಬೆಳೆಯುತ್ತಿವೆ. ಕೆಲವು ವಿಶ್ಲೇಷಕರು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿರುವ ಈ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತವೆ ಎಂದು ಭಾವಿಸುತ್ತಾರೆ.

 

ಖಾಸಗಿ ವಲಯದ ಶಾಲೆಗಳು ಲಾಭಕ್ಕಾಗಿ ಕೆಲಸ ಮಾಡುತ್ತಿವೆ ಎನ್ನುವ ತಪ್ಪು ಗ್ರಹಿಕೆ ಹಲವರಲ್ಲಿ ಇದೆ. ಬಹುಷಃ ಈ ತಪ್ಪು ಗ್ರಹಿಕೆಯನ್ನು ಉದ್ದೇಶಪೂರ್ವಕವಾಗಿ ರಚಿಸಲಾಗಿದೆ. ವಾಸ್ತವದಲ್ಲಿ ಸ್ವತ ಮಗುವಿನ ಜ್ಞಾನ, ಬುದ್ದಿಶಕ್ತಿಯ ಅಭಿವೃದ್ದಿಗೆ ಅಲ್ಲಿ ಪೂರಕ ವಾತಾವರಣಾವನ್ನು ಕಾಣಬಹುದಾಗಿದೆ. ಆದರೆ ಇದೇ ವೇಳೆಯಲ್ಲಿ ಖಾಸಗಿ ಶಾಲೆಗಳ ಮಾಲಿಕರು ತಮ್ಮಲ್ಲಿನ ಪೈಪೋಟಿಯ ಕಾರಣವಾಗಿ ಮಕ್ಕಳಲ್ಲಿ ನೈಜ ಕಲಿಕೆಯ ಮನೋಭಾವನೆ ಬೆಳೆಸುವ ಬದಲಿಗೆ ಅವರಲ್ಲಿ ಪರಸ್ಪರ ಪೈಪೋಟಿ ಒತ್ತಡವನ್ನು ಮೂಡಿಸುತ್ತವೆ. ಖಾಸಗಿ ಶಾಲೆಗಳಲ್ಲಿ ಮಕ್ಳಲ್ಲಿ ಇರಬಹುದಾದ ಆಸಕ್ತಿ ಹಾಗೂ ಆಮುಖೇನ ಅವರ ತಿಳುವಳಿಕೆಯ ಮೌಲ್ಯಗಳನ್ನು ಅಲ್ಲಗೆಳೆಯುತ್ತವೆ ನಿಜವಾದ ಕಲಿಕೆಯು ಪರಿಕಲ್ಪನಾ ಸ್ಪಷ್ಟತೆ, ಕಠೀಣ ಪರ್ಶ್ರಮ ಹಾಗೂ ಹೆಚ್ಚಿನ ಸಮಯವನ್ನು ಅಪೇಕ್ಷಿಸುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಖಾಸಗಿ ಶಾಲೆಗಳು ಬಹುತೇಕ ವಿಫಲವಾಗಿವೆ ಎಂದು ಹೇಳಬೇಕು. ಅದನ್ನೇ ಇನ್ನೊಂದು ಬಗೆಯಲ್ಲಿ ನೋಡುವುದಾದಲ್ಲಿ ಖಾಸಗಿ ಶಾಲೆಗಳು ಉತ್ತಮ ಶಾಲೆಗಳಿಗಿದ್ದ ಬೇಡಿಕೆಗಳನ್ನು ಸಾಕಷ್ಟು ಕಡಿಮೆಗೊಳಿಸಲು ಶಕ್ತವಾಗಿವೆ.

 

ಖಾಸಗಿ ಶಾಲೆ ಹಾಗೂ ಕಾಲೇಜುಗಳಾಲ್ಲಿ ಇರುವ ಇನ್ನೊಂದು ಪ್ರಮುಖ ದೋಷವೆಂದರೆ ಇವುಗಳು ಮಕ್ಕಳ ನೈತಿಕ ಬೆಳವಣಿಗೆಯ ಜವಾಬ್ದಾರಿಯನ್ನು ಯಾವ ಕಾರಣಕ್ಕೂ ತಾವು ವಹಿಸಿಕೊಳ್ಳಲು ಬಯಸುವುದಿಲ್ಲ. ಯಾವುದೇ ಮಗುವು ಅಂತಹಾ ನೈತಿಕ ಸಮಸ್ಯೆಯನು ಹೊಂದಿದ್ದಾದರೆ ಅಂಥಹಾ ಸಮಯದಲ್ಲಿ ಆ ಮಗುವಿನ ಪೋಷಕರನ್ನು ಶಾಲೆಗೆ ಕರೆ ಕಳಿಸಲಾಗುತ್ತದೆ. ಮತ್ತು ಅವರಿಗೆ ಈ ಸಮಸ್ಯೆಯನ್ನು ನಿವಾರಿಸುವಂತೆ ಹೇಳಲಾಗುತ್ತದೆ. ಇನ್ನು ವಿದ್ಯಾರ್ಥಿಯ ಪಠ್ಯ ವಿಷಯಗಳಲ್ಲಿನ ಹಿಂದುಳಿದಿರುವಿಕೆಯ ವಿಚಾರದಲ್ಲಿ ಸಹ ಶಾಲೆಗಳು ಮಕ್ಕಳಿಗೆ ಖಾಸಗಿಯಾಗಿ ಶಿಕ್ಷಣ(ಟ್ಯೂಷನ್) ಕೊಡಿಸುವಂತೆ ಸಲಹೆ ಮಾಡುತ್ತವೆ. ಈ ಮೂಲಕ ಅವರು ಮಗುವಿಗೆ ಉತ್ತಮ ರೀತಿಯ ಶಿಕ್ಷಣ ಕೊಡಬೇಕಾದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಹೀಗಾದಾಗ ಉತ್ತಮ ಶಿಕ್ಷಣ ನೀಡುವ ದರ ಹೊರತಾಗಿ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಸ್ವಾರ್ಥಪರತೆಯತ್ತ ಸಾಗುತ್ತವೆ.

 

ಒಂದೆಡೆ ಸರಕಾರಿ ಶಾಲೆಗಳು ಮಕ್ಕಳನ್ನು ತಮ್ಮಲ್ಲಿಗೆ ಆಕರ್ಶಿಸಲು ವಿಫಲವಾದರೆ ಖಾಸಗಿ ಶಾಲೆಗಳು ತಾವು ಉತ್ತಮ ಬೋಧನೆಗಳನ್ನು ನೀಡುವ ಉದ್ದೇಶದಿಂದ ಹಿಂದೆ ಸರಿದು ವಿದ್ಯಾಭಾಸವನ್ನೂ ಸಹ ಒಂದು ಲಾಭದಾಯಕ ಉದ್ಯಮದಂತೆ ನಡೆಸಿಕೊಂಡು ಬರುತ್ತಿರುವುದರಿಂದ ಇಂದು ನಮ್ಮ ಶಾಲೆಗಳು ಅಪಾಯದಂಚಿಗೆ ಬಂದು ತಲಿಉಪಿವೆ. ನಾವು ಹಿಂದಿನಿಂದಲೂ ತಿಳಿದು ಬಂದಿರುವಂತೆ ಒಂದು ಸಮಾಜದಲ್ಲಿ ನಾಗರೀಕತೆಯು ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನೇ ಅವಲಂಬಿಸಿರುತ್ತದೆ. ಶಾಲೆಗಳು ಶಿಕ್ಷಣ ನೀಡುವ ಪ್ರಾಥಮಿಕ ತಾಣಗಳೆಂದು ಭಾವಿಸಲಾಗುತ್ತದೆ. ಒಂದು ವೇಳೆ ಶಾಲೆಗಳ್ ವ್ಯವಸ್ಥೆ ಹಾಳಾದಲ್ಲಿ ಶಾಲೆಗಳು ನಾಗರೀಕತೆಯೂ ಸಹ ಕೆಟ್ಟುಹೋಗುತ್ತದೆ. ಇನ್ನಾದರೂ ನಾವುಗಳುಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಯತ್ತ ಗಮನಹರಿಸದಿದ್ದಲ್ಲಿ, ಶಿಕ್ಷಣದಲ್ಲಿ ನೈತಿಕತೆ ಹಾಗೂ ಮೌಲ್ಯಾಧರಿತ ಗುಣಗಳ ಅಳವಡಿಕೆಯ ತೀವ್ರತೆಯನ್ನು ಅರಿಯದಿದ್ದಲ್ಲಿ ಶಾಲೆಯ್ಗಳ ಮುಚ್ಚುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಮತ್ತು ಮುಂದಿನ ದಿನಗಳಾಲ್ಲಿ ನಮ್ಮ ಶಾಲೆಗಳು ಕೇವಲ ಶಿಕ್ಷಣದ ವ್ಯಾಪಾರೀ ಕೇಂದ್ರಗಳಾಗಿ ಬದಲಾಗುತ್ತವೆ. ಇದಕ್ಕಾಗಿ ಇಂದಿನಿಂದಲೇ ಸೂಕ್ತ ಬಗೆಯ ರಾಜಕೀಯ ಹಾಗೂ ಆರ್ಥಿಕ ನಿಲುವುಗಳನ್ನು ತಾಳುವ ಅವಶ್ಯಕತೆಯಿದೆ.  

Comments

Submitted by H A Patil Sat, 11/01/2014 - 20:05

ರಾಘವೇಂದ್ರ ಅಡಿಗರಿಗೆ ವಂದನೆಗಳು
ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಇಟ್ಟಿದ್ದೀರಿ. ನೀವು ವ್ಯಕ್ತ ಪಡಿಸಿದ ಅಭಿಪ್ರಾಯ ಅಕ್ಷರಶಃ ಸತ್ಯ. ಒಂದೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿದ್ದರೆ ಖಾಸಗಿ ಶಾಲೆಗಳು ಶಿಕ್ಷಣದ ಗುಣ ಮಟ್ಟಕ್ಕಿಂತ ವ್ಯಾಪಾರಿಕರಣದಲ್ಲಿ ತೊಡಗಿವೆ. ಸಕಾಲಿಕ ಜೊತೆಗೆ ಎನ್ನರ ಕಣ್ಣು ತೆರೆಸುವಂತಹ ಲೇಖನ ನೀಡಿದ್ದೀರಿ ಧನ್ಯವಾದಗಳು.