" ಕನ್ನಡ ನಾಡು"
ಚಿತ್ರ
ಕನ್ನಡ ನಾಡು ಬಲು ಸುಂದರ
ಕನ್ನಡ ನುಡಿ ಅತಿ ಸುಮಧುರ
ಕನ್ನಡಿಗರ ಮನಸ್ಸು ಮಧುರ
ಕನ್ನಡ ನಾಡು ಹೊನ್ನಿನ ನಾಡು
ಇದುವೆ ನನ್ನಯ ಹೆಮ್ಮಯ ನಾಡು
ಶಿಲ್ಪಕಲೆ ಸಾಹಿತ್ಯದ ತವರಿನ ಬೀಡು
ಕನಕ,ಪುರಂದರರು ನೆಲೆಸಿದ ನಾಡು
ವಚನಕಾರರು ಜನಿಸಿದ ನಾಡು
ಅಷ್ಟಜ್ಞಾನಪೀಠವ ಗಳಿಸಿದ ನಾಡು
ಇದುವೆ ನನ್ನಯ ಹೆಮ್ಮಯ ನಾಡು
ಕೈ ಬೀಸಿ ಕರೆಯುತ್ತಿದೆ ಜೋಗದ ಸಿರಿ
ಕನ್ನಡ ನಾಡಿನ ಚಂದದ ವನಸಿರಿ
ನೋಡಬೇಕು ಕಾರವಾರದ ಕಡಲ ತೆರೆ
ಬೇಲೂರು ಹಳೆಬೀಡಿನ ಕುಸುರಿಯ ಕಲೆ
ಇದುವೆ ನನ್ನಯ ಹೆಮ್ಮಯ ನಾಡು
ಕವಿ ವರೇಣ್ಯರು ಜನಿಸಿದ ಈ ನಾಡು
ವೀರ ಶೂರ ಗಂಡುಗಲಿಗಳ ಬೀಡು
ತುಂಗೆ ಕೃಷ್ಣೆ ಕಾವೇರಿ ಹರಿಯುವರು ಇಲ್ಲಿ
ಕನ್ನಡ ನಾಡು ಸುವರ್ಣದ ಬೀಡು
ಇದುವೆ ನನ್ನಯ ಹೆಮ್ಮೆಯ ನಾಡು.
Rating
Comments
ಉ: " ಕನ್ನಡ ನಾಡು"
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಕನ್ನಡ ನಾಡು ಕುರಿತ ಕವನ ಚೆನ್ನಾಗಿದೆ. ಕನ್ನಡ ನಾಡಿನ ಸಮಗ್ರ ಪರಿಚಯ ಮಾಡಿ ಕೊಡಲು ಪ್ರಯತ್ನ ಮಾಡಿದ್ದೀರಿ ಮತ್ತು ಅದರಲ್ಲಿ ಯಶಸ್ವಿಯಾಗಿದ್ದೀರಿ ಕೂಡ. ಬರಲಿರುವ ಕನ್ನಡ ರಾಜ್ಯೋತ್ಸವಕ್ಕೆ ಈ ಕವನದ ಮೂಲಕ ಸ್ವಾಗತ ಕೋರಿದ್ದೀರಿ,ಧನ್ಯವಾದಗಳು.
In reply to ಉ: " ಕನ್ನಡ ನಾಡು" by H A Patil
ಉ: " ಕನ್ನಡ ನಾಡು"
ನಮಸ್ಕಾರಗಳು ಸರ್,
ನಿಮ್ಮ ಪ್ರೋತ್ಸಾಹಕ್ಕೆ ನನ್ನ ಅನಂತ ಧನ್ಯವಾದಗಳು ಸರ್, ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆ ಇರಲಿ .