ಕಿಸ್ ಆಫ್ ಲವ್ ನ ಕಥೆ

ಕಿಸ್ ಆಫ್ ಲವ್ ನ ಕಥೆ

ಕಿಸ್ ಆಫ್ ಲವ್ ಕಥೆ

ಅದೊಂದು ಕಲಬೆರಕೆ ಸಂಸ್ಕೃತಿಯ ಆಧುನಿಕ ಕುಟುಂಬ.ಒಂದರ್ಥದಲ್ಲಿ ಪ್ರಗತಿಪರ ಕುಟುಂಬ ಎನ್ನಬಹುದು...!ಅ ಕುಟುಂಬದಲ್ಲಿ ಒಬ್ಬಳು ವಯಸ್ಸಿಗೆ ಬಂದ ಮಗಳು ಮತ್ತು ವಯಸ್ಸಾದರು ಅದು ಗೊತ್ತಾಗದ ಅವಳ ಅಪ್ಪಅಮ್ಮ ಇದ್ದರು.ಒಮ್ಮೆ ಪತ್ರಿಕೆ ಓದುತ್ತಿರಬೇಕಾದರೆ 'ಕಿಸ್ ಆಫ್ ಲವ್' ಹೆಸರಿನಲ್ಲಿ ನಡೆಯುವ ಪ್ರತಿಭಟನೆಯ ಸುದ್ದಿ ಈ ಕುಟುಂಬದ ಕಣ್ಣಿಗೆ ಬೀಳುತ್ತದೆ.ಈಗಾಗಲೇ ಸಮಾಜದಲ್ಲಿ ಮುಂದುವರೆದಿದ್ದೇವೆ ಅಂತ ತೋರಿಸಿಕೊಂಡಿರುವ ನಮಗೆ,ಈ ಕಿಸ್ ಆಫ್ ಲವ್ ಎಂಬ ಆಧುನಿಕ ಶೈಲಿಯ ಪ್ರತಿಭಟನೆ ಮುಂದುವರಿಯಲು ಮತ್ತೊಂದು ಅವಕಾಶವೆಂದು ಅ ಕುಟುಂಬ ಪರಸ್ಪರ ಮಾತಾನಾಡಿಕೊಳ್ಳುತ್ತದೆ.ಪ್ರತಿಭಟನೆಯಲ್ಲಿ ಭಾಗವಹಿಸುದಾಗಿಯು ತೀರ್ಮಾನ ಕೈಗೊಳ್ಳುತ್ತದೆ.ಅ ದಿನ ಬಂದೇ ಬಿಟ್ಟಿತು.ಅಂದು ಸೂರ್ಯ ಸಮಯಕ್ಕಿಂತ ಮೊದಲೆ ಪಶ್ಚಿಮದ ದಿಗಂತದಲ್ಲಿ ಕಣ್ಮರೆಯಾಗಿದ್ದ.ಆಗಸದಲ್ಲಿ ಕಾಣಿಸಬೇಕಿದ್ದ ಚಂದ್ರ ಮೋಡದೊಳಗೆ ಅವಿತು ಕೂತಿದ್ದ.ಇನ್ನು ಯಾವಾಗಲೂ ನಗರದ ರಸ್ತೆ ತುಂಬ ಓಡಾಡುತಿದ್ದ ಬೀದಿನಾಯಿಗಳು ಈ ಪ್ರತಿಭಟನೆಯನ್ನು ಸಹಿಸಲಾಗದೆ ನಗರದಿಂದ ಮುಂಚಿನ ದಿನವೇ ಕಾಲ್ಕಿತ್ತಿದ್ದವು.ವೀಕೆಂಡ್ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿಯೇ ಚುಂಬಕರು ನಗರದ ಬೀದಿಯಲ್ಲಿ ಜಮಾಯಿಸಿದ್ದರು.ಅದೊಂದು ರೀತಿಯ ಕಿಕ್ಕೇರಿಸುವ ಪ್ರತಿಭಟನೆಯಾಗಿದ್ದರಿಂದ ಎಲ್ಲರು ಸ್ವಲ್ಪ ಸ್ವಲ್ಪ ಕಿಕ್ಕೇರಿಸಿಕೊಂಡೆ ಅಲ್ಲಿಗೆ ಬಂದಿದ್ದರು.ಕೆಲವರು ಪ್ರತಿಭಟನೆಗೆ ಬಂದಿದ್ದರೆ,ಹಲವರು ಪ್ರತಿಭಟನೆಯ ಹೆಸರಿನಲ್ಲಿ ತಮ್ಮ ತೆವಲು ತೀರಿಸಿಕೊಳ್ಳಲು ಬಂದಿದ್ದರು.ಆಯೋಜಕನೊಬ್ಬ ಪಕ್ಕದಲ್ಲಿದ್ದವನಿಗೆ ಚುಂಬಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ.ಮುಂದಿನ ಒಂದು ಗಂಟೆ ಅಲ್ಲಿ ನಡೆದದ್ದು ಅಕ್ಷರಶಃ ಚುಂಬಕಜಾತ್ರೆ.ಮಾಧ್ಯಮಗಳು ಅ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಮಗ್ನವಾಗಿದ್ದರೆ,ಬೆಂಬಲ ಕೊಟ್ಟ ಪ್ರಗತಿಪರ ಗುಂಪಿನವರಿಗೆ ಯಾವುದೋ ಸೈಟಿನಲ್ಲಿ ಕದ್ದು ನೋಡಬೇಕಾದದ್ದನ್ನು ಖುದ್ದು ನೋಡುತ್ತಿದ್ದೇವಲ್ಲ ಎಂಬ ಖುಷಿ.ಇನ್ನು ಖಾಕಿ ಪೋಲಿಸರು ಕೈ ಎತ್ತಿ ರಕ್ಷಣೆಗೆ ನಿಂತಿದ್ದರಿಂದ ನೈತಿಕ ಪೊಲೀಸರು ಏನೂ ಮಾಡಲಾಗದೆ ಕೈ ಕಟ್ಟಿ ಕೂತಿದ್ದರು.ಅಂತೂ ಚುಂಬಕ ಜಾತ್ರೆ ಮುಗಿಯಿತು.ಅಷ್ಟೊತ್ತಿಗೆ, ಬಂದಿದ್ದ ಪ್ರಗತಿಪರ ಕುಟುಂಬದ ಏರಿದ ನಶೆ ಇಳಿದಿತ್ತು.ಹೀಗಾಗಿ ಮತ್ತೆ ನಶೆ ಏರಿಸಲು ಅಲ್ಲೇ ಪಕ್ಕದಲ್ಲಿದ್ದ ಪಬ್ ಕಡೆಗೆ ಹೆಜ್ಜೆ ಹಾಕಿತ್ತು ಅ ಕುಟುಂಬ.ಮರುದಿನ ಪತ್ರಿಕೆಗಳಲ್ಲಿ ಕಿಸ್ ಆಫ್ ಲವ್ವಿದ್ದೆ ಸುದ್ದಿ.ಮುಖಪುಟದಲ್ಲಿ ನಾಲ್ವರು ಚುಂಬಕರ ಫೋಟೋಗಳಿದ್ದವು.ಅದರ ಕೆಳಗೆ, ಪ್ರತಿಭಟನೆಯಲ್ಲಿ ಪರಸ್ಪರ ಮುತ್ತಿಡುತ್ತಿರುವ ಪ್ರೇಮಿಗಳು ಎಂಬ ಸಾಲುಗಳನ್ನು ಬರೆಯಾಲಾಗಿತ್ತು.ಅಸಲಿಗೆ ಫೋಟೋದಲ್ಲಿದ್ದ ನಾಲ್ವರಲ್ಲಿ ಮೂವರು ಪ್ರಗತಿಪರ ಕುಟುಂಬದವರಾಗಿದ್ದರು.ನಶೆಯಲ್ಲಿದ್ದ ತಂದೆ ಅಂದು ತನ್ನ ಮಗಳನ್ನೇ ಚುಂಬಿಸಿದ್ದರೆ,ನಶೆಯಲ್ಲಿದ್ದ ತಾಯಿ ಇನ್ಯಾವನದ್ದೋ ಎಂಜಲನ್ನು ನುಂಗಿಕೊಂಡಿದ್ದಳು.ಪತ್ರಿಕೆ ತಂದೆ ಮಗಳನ್ನು ಪ್ರೇಮಿಗಳನ್ನಾಗಿ ಮಾಡಿತ್ತು.ಕಾರಣ ಅವರು ಕೊಟ್ಟಿದ್ದ ಚುಂಬನದ ಶೈಲಿ ಪ್ರೇಮಿಗಳ ರೀತಿಯದ್ದೇ ಆಗಿತ್ತು.ಪತ್ರಿಕೆ ಅ ಸೂಕ್ಷ್ಮವನ್ನು ಗಮನಿಸುವಲ್ಲಿ ಎಡವಿತ್ತು.ಪ್ರತಿಭಟನೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದ ನೈತಿಕ ಪೊಲೀಸರಿಗೆ ಹೇಗೋ ಈ ಅಚಾತುರ್ಯ ಗೊತ್ತಾಗಿ ಬಿಡುತ್ತದೆ.ತಂದೆ ಮಗಳ ಸಂಬಂಧಕ್ಕೆ ಮಸಿ ಬಳಿದ ಪತ್ರಿಕೆ,ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡ ಪ್ರಗತಿಪರ ಕುಟುಂಬ ಮತ್ತು ಇಂತಹ ಘಟನೆಗೆ ಮೂಲ ಕಾರಣರಾದ ಕಿಸ್ ಆಫ್ ಲವ್ ಪ್ರತಿಭಟನೆಯ ಆಯೋಜಕರ ವಿರುದ್ಧ ವಿವಿಧ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ.ಈ ಬಾರಿ ಸರ್ಕಾರವು ಎಚ್ಚೆತ್ತುಕೊಂಡಿತ್ತು.ಇಂತಹ ಆಧುನಿಕ ಪ್ರತಿಭಟನೆಗಳಿಂದ ಆಗಬಹುದಾದ ನೈತಿಕ ಸಮಸ್ಯೆಗಳು ರಾಜ್ಯದ ಜನರಿಗೂ ಅರ್ಥವಾಗಿ ಹೋಗಿತ್ತು.ಪ್ರಗತಿಪರ ಕುಟುಂಬ ಮತ್ತು ಆಯೋಜಕರು ರಾಜ್ಯದಿಂದ ಕಾಣದಂತೆ ಮಾಯವಾಗಿ ಹೋಗಿದ್ದರು.ನೈತಿಕ ಪೊಲೀಸರು ವಿಜಯದ ನಗು ಬೀರಿದರು.

-@ಯೆಸ್ಕೆ

Comments

Submitted by kavinagaraj Fri, 11/21/2014 - 20:40

ಮೌಲ್ಯ, ನೈತಿಕತೆಗೆ ಬೆಲೆ ಕೊಡದ ಸರ್ಕಾರಗಳಿದ್ದರೆ ವಿಕೃತವಾದಿಗಳ ನರ್ತನಕ್ಕೆ ಕೊನೆಯಿರುವುದಿಲ್ಲ.