ಪ್ರೀತಿ ಅಂದರೆ ಇದೆ ಅಲ್ಲವೇ. .?
ಪ್ರೀತಿ ಅಂದರೆ ಇದೆ ಅಲ್ಲವೇ..?
ಉತ್ತರ ಕರ್ನಾಟಕ ಭಾಗದ ಸರಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ.ಅದು ಮಧ್ಯಾಹ್ನದ ಹೊತ್ತು.ಮಕ್ಕಳೆಲ್ಲರು ತಟ್ಟೆ ಹಿಡಿದು ಊಟಕ್ಕೆಂದು ಬಯಲಲ್ಲಿ ಸಾಲಾಗಿ ನಿಂತಿದ್ದರು.ಅ ಸಾಲಿನಲ್ಲಿ ಒಬ್ಬಳು ಹುಡುಗಿ ಒಂದು ಕೈಯಲ್ಲಿ ತಟ್ಟೆ ಇನ್ನೊಂದು ಕೈಯಲ್ಲಿ ಕಂಕುಳಲ್ಲಿ ಇದ್ದ ಮಗುವನ್ನು ಬಳಸಿಕೊಂಡು ನಿಂತಿದ್ದಳು.ಕಂಕುಳಲ್ಲಿದ್ದ ಮಗು ಅ ಹುಡುಗಿಯ ತಂಗಿಯಾಗಿರಬಹುದೆಂದು ನಾನು ಊಹಿಸಿದೆ.ಅ ಮಗುವಿಗೆ ಸುಮಾರು ಎರಡುವರೆ ವರ್ಷ ವಯಸ್ಸು.ನಡೆದಾಡುವಷ್ಟು ದೊಡ್ಡದಾಗಿತ್ತು.ಅ ಹುಡುಗಿ ಅನ್ನ ನೀಡಿಸಿಕೊಳ್ಳಲು ಸರತಿ ಸಾಲಿನಲ್ಲಿ ಮುಂದೆ ಬರುತ್ತಿರಬೇಕಾದರೆ ನಾನು ಅವಳತ್ತ ನೋಡಿ,'ಅಮ್ಮಿ,ಮಗುವನ್ನು ಕೆಳಗೆ ಇಳಿಸು ತಟ್ಟೆಯನ್ನು ಎರಡು ಕೈಯಲ್ಲಿ ಹಿಡಿದು ಆರಾಮಾಗಿ ಅನ್ನ ಹಾಕಿಸ್ಕೋ ಯಾಕ್ ಕಷ್ಟಪಡ್ತೀಯಾ..? ಅಂತ ಅಂದೆ.ಅದಕ್ಕೆ ಅವಳು...'ಸಾರ್...ಕೆಳಗೆ ಇಳಿಸಿದರೆ ನನ್ನ ತಂಗಿಯ ಕಾಲು ಸುಡುತ್ತದೆ.ನೆಲ ಬಿಸಿಯಾಗಿದೆ.ಅವಳಿಗೆ ನೋವಾಗುತ್ತದೆ ಸಾರ್...'ಅಂದಳು.ಅಷ್ಟು ಪುಟ್ಟ ವಯಸ್ಸಿನ ಹುಡುಗಿಯ ಜಾಗೃತ ಮನಸ್ಸನ್ನು ನೋಡಿ ನನಗೆ ಆಶ್ಚರ್ಯವಾಯಿತು.ಜೊತೆಗೆ ಪ್ರೀತಿ ಅಂದರೆ ಇದೆ ಅಲ್ಲವೇ ಎಂದೆನಿಸಿತು.
-@ಯೆಸ್ಕೆ
Comments
ಉ: ಪ್ರೀತಿ ಅಂದರೆ ಇದೆ ಅಲ್ಲವೇ. .?
ನಿಜ.