ಇತಿಹಾಸದ ಪುಟಗಳಿಂದ

ಇತಿಹಾಸದ ಪುಟಗಳಿಂದ

ಇತಿಹಾಸದ ಪುಟದಿಂದ. ..

ಅದು 1757 ರ ಪ್ಲಾಸಿಕದನ.ರಾಬರ್ಟ್ ಕ್ಲೈವ್ ಮೀರ್ ಜಾಫರನಿಗೆ ಸಿಂಹಾಸನದ ಆಸೆ ತೋರಿಸಿ ಕುತಂತ್ರದಿಂದ ನವಾಬ ಸಿರಾಜುದ್ದೌಲನನ್ನು ಯುದ್ಧದಲ್ಲಿ ಸೋಲಿಸುತ್ತಾನೆ.ವಿಜಯದ ಸಂಭ್ರಮಾಚರಣೆಗಾಗಿ ರಾಬರ್ಟ್ ಕ್ಲೈವ್ ಮುರ್ಷಿದಾಬಾದ್ ಗೆ ಬರಬೇಕೆದರೆ ದಾರಿಯ ಇಕ್ಕೆಲಗಳಲ್ಲಿ ನಿಂತಿದ್ದ ಅಲ್ಲಿನ ಸಾವಿರಾರು ಜನರು ಅವನ ಮೇಲೆ ಹೂವಿನ ಎಸಲುಗಳನ್ನು ಎಸೆದು ಸ್ವಾಗತಿಸಿದರಂತೆ.ಈ ಘಟನೆಯನ್ನು ಉಲ್ಲೇಖಿಸಿ ಕಾಲಿನ್ ಅನ್ನುವ ಬ್ರಿಟಿಷ್ ಲೇಖಕ ತನ್ನ ಪುಸ್ತಕದಲ್ಲಿ ಹೀಗೆ ಬರೆಯುತ್ತಾನೆ...ಅಂದು ಅಲ್ಲಿ ನೆರೆದಿದ್ದ ಸಾವಿರಾರು ಜನರು ರಾಬರ್ಟ್ ಕ್ಲೈವನ ಮೇಲೆ ಹೂವಿನ ಎಸಲಿನ ಬದಲು ಒಂದೊಂದು ಕಲ್ಲುಗಳನ್ನು ಎತ್ತಿ ಅವನ ಮೇಲೆ ಎಸೆದಿದ್ದರೆ ಬ್ರಿಟಿಷರು ಅಂದೆ ಗಂಟುಮೂಟೆ ಕಟ್ಟಿ ತಮ್ಮ ತವರಿಗೆ ಪಲಾಯನ ಮಾಡುತ್ತಿದ್ದರು.200 ವರ್ಷಗಳ ಕಾಲ ನಮ್ಮವರ ಗುಲಾಮರಾಗಿರುವುದು ತಪ್ಪುತಿತ್ತೆಂದು.

ಕಾಲಿನ್ ನ ಈ ಮಾತು ನಿಜ ಅನ್ನಿಸುದಿಲ್ಲವೇ.. ?

-@ಯೆಸ್ಕೆ

Comments