ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ
ಭಗವ್ದಗೀತೆಯ ಅಭಿಯಾನವನ್ನು ಮತ್ತೆ ಆರಂಭಿಸುವುದಾಗಿ ಸ್ವರ್ಣವಲ್ಲಿ ಗಂಗಾಧರೇಶ್ವರ ಸ್ವಾಮಿಜಿಗಳು ಹೇಳಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರವರು ರéಾಷ್ಟ್ರೀಯ ಗ್ರಂಥದ ಸ್ಥಾನ ಮಾನ ನೀಡುಬೇಕು ಎನ್ನುವ ಮೂಲಕ ಸಂವಿಧಾನದ ಆಶಯಕ್ಕೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಅದರಲ್ಲೂ ಸ್ವರ್ಣವಲ್ಲಿ ಸ್ವಾಮೀಜಿಯವರು ಪ್ರಾಥಮಿಕ ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಪಠ್ಯವನ್ನಾಗಿಸುವವರೆಗೂ ಭಗವದ್ಗೀತೆ ಅಭಿಯಾನವನ್ನು ನಡೆಸುವುದಾಗಿ ಹೇಳಿರುವುದು ಸಮಾಜದ ಸ್ವಾಸ್ಥಕ್ಕೆ ಅಪಾಯದ ಮುನ್ಸೂಚನೆಯಂತಿದೆ. ಇವರ ನಡೆ ಕೋಮು ಸೌಹಾರ್ಧತೆಗೆ ದಕ್ಕೆ ತರುವುದರ ಜೊತೆಯಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ದವಾಗಿದೆ. 2011 ರಲ್ಲಿ ಇವರ ಅಭಿಯಾನವನ್ನು ವಿರೋಧಿಸಿ ಎಸ್.ಎಫ್.ಐ ವ್ಯಾಪಕವಾಗಿ ಹೋರಾಟವನ್ನು ನಡೆಸಿದ್ದನ್ನು ನೆನಪಿಸಿಕೊಳ್ಳಬೇಕಿದೆ. ಶಾಲೆಗಳಲ್ಲಿ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಆರುವರೆ ದಶಕ ಕಳೆದರು ಶಿಕ್ಷಣದ ಸುಧಾರಣೆ ಇನ್ನು ಸಾದ್ಯವಾಗಿಲ್ಲ. ಗುಣ ಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಕಲಿಕೆಯ ಸುಧಾರಣಗೆ ಅಗತ್ಯವಾಗಿ ಬೇಕಾಗಿರುವ ಶಿಕ್ಷಕರು, ಕೊಠಡಿ ಮೂಲಸೌಲಭ್ಯಗಳ ಬಗ್ಗೆ ಮಾತನಾಡುವ ಬದಲು ಶಿಕ್ಷಣದ ಸುಧಾರಣಗೆ ಭಗವದ್ಗೀತೆ ಅಗತ್ಯ ಎನ್ನುವ ಸ್ವರ್ಣವಲ್ಲಿಯವರ ಕುತಂತ್ರವನ್ನು ಎಲ್ಲರೂ ಅರಿಯಬೇಕಿದೆ. ಭಗವದ್ಗೀತೆ ಬೋಧನೆ ಶಿಕ್ಷಣದ ಸುಧಾರಣೆಯ ಬದಲು ಮೇಲ್ವರ್ಗದವರ ಪ್ರಾತಿನಿಧ್ಯವಾಗಿಬಿಡುತ್ತದೆ. ಸಂವಿಧಾನದ ಕಲಂ 28 ರ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಪ್ರಚಾರ ಅಥವಾ ಬೋಧನೆಯನ್ನು ನಿಷೇದಿಸಲಾಗಿದೆ. ಮಕ್ಕಳ ಹಕ್ಕು ಕಾಯ್ದೆ 2009 ರ ಕಲಂ-5(ಇ) ಧಾರ್ಮಿಕ ತಾರತಮ್ಯವಿಲ್ಲದ ಶಿಕ್ಷಣ ಪಡೆಯಬೇಕಾಗಿರುವುದು ಎಲ್ಲರ ಹಕ್ಕಾಗಿದೆ ಎಂದು ಹೇಳಲಾಗಿದೆ. ಹೀಗಿರುವಾಗ ಜಾತಿ ಧರ್ಮದಗಳ ಹೆಸರಿನಲ್ಲಿ ವಿದ್ಯಾಥರ್ಿಗಳನ್ನು ಪ್ರತ್ಯೇಕಿಸಲು ಮುಂದಾಗಿರುವ ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸ್ವಾಮಿಯರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳಲ್ಲಿರುವ ಐಕ್ಯತೆ, ಮಾನವೀಯತೆಗೆ ಕಲ್ಲು ಹಾಕಲು ಮುಂದಾಗಿರುವ ಸ್ವಾಮಿಜೀಯವರ ಕ್ರಮ ನಿಜಕ್ಕೂ ಖಂಡನಾರ್ಹ. ಮನುಷ್ಯ ವಿರೋಧಿ, ಕ್ರೌರ್ಯವನ್ನು ಬೋಧಿಸುವ ಬಗವದ್ಗೀತೆಯನ್ನು ಶತಮಾನಗಳಿಂದ ಶರಣರು, ದಾಸರು, ಶೈವರು ಸೇರಿದಂತೆ ಬಹುಸಂಖ್ಯಾತರು ವಿರೋಧಿಸುತ್ತಾ ಬಂದಿದ್ದಾರೆ. ಶಾಲೆಗಳಲ್ಲಿ ಜಾತಿ -ಧರ್ಮದ ತಾರತಮ್ಯವಿಲ್ಲದೆ ಐಕ್ಯತೆಯಿಯಿಂದ ಕಲಿಯುವ ಮಕ್ಕಳ ಮನಸ್ಸಿನಲ್ಲಿ ಧರ್ಮದ ವಿಷ ಬೀಜ ಬಿತ್ತುವುದು ಎಷ್ಟು ಸರಿ. ಎಳೆಯ ಮನಸುಗಳ ಮೇಲೆ ಒತ್ತಾಯವಾಗಿ ಧಾಮರ್ಿಕ ವಿಚಾರಗಳನ್ನು ಹೇರುವುದು ಕಾನೂನಿಗೆ ವಿರುದ್ಧವಾಗಿದೆ ಎಂಬುದರ ಅರಿವು ಇವರಿಗಿಲ್ಲವೆ ? ಸ್ವರ್ಣವಲ್ಲಿ ಸ್ವಾಮಿಜಿಗಳಂತಹ ಕುತಂತ್ರ ಮತು ್ತಭಗವದ್ಗೀತೆಗೆ ರಾಷ್ರೀಯ ಗ್ರಂಥದ ಸ್ಥಾನ ಮಾನ ನೀಡಬೇಕೆನ್ನುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರಂತವರು ಭಗವದ್ಗೀತೆಯ ಬ್ರಮೆಯಿಂದ ಹೊರಬರದೆ ಸಮಾಜದ ಸ್ವಾಸ್ಥವನ್ನು ಹಾಳು ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ಸಮಾಜದಲ್ಲಿ ವಿಷಮತೆ ಮತ್ತು ಅವೈಜ್ಞಾನಿಕತೆಯನ್ನು ಬಿತ್ತಲು ಮುಂದಾಗುತ್ತಿದ್ದಾರೆ.
Comments
ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ
ಸ್ವಾಮಿ ನೀವು ಎಂದಾದರು ಭಗವದ್ಗೀತೆ ಓದಿದ್ದೀರಾ...? ಅನ್ಯಕೋಮುವನ್ನು ದ್ವೇಷಿಸುವ ಒಂದು ಪದವನ್ನು ಭಗವದ್ಗೀತೆ ಯಿಂದ ಉಲ್ಲೇಖಿಸಿ ನೋಡೋಣ...ಯಾವ ಶರಣರು ಭಗವದ್ಗೀತೆ ಕ್ರೌರ್ಯವನ್ನು ಬಿಂಬಿಸುತ್ತದೆ ಎಂದು ಹೇಳಿದ್ಥಾರೆ ದಯವಿಟ್ಟು ತಿಳಿಸಿ...ಪೂರ್ವಗ್ರಹ ಪೀಡಿತರಾಗಬೇಡಿ
In reply to ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ by Sunil Kumar
ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ
ದಾಖಲೆಗಳು ಸಟಕಷ್ಟಿವೆ. ಬಸವಣ್ಣ, ಅಂಬೇಡ್ಕರ್, ಶರೀಷರು ಹಲವಾರು ಜನ ವಿರೋಧಿಸಿದ್ದಾರೆ. ಓದಿಯೇ ಅದೊಂದು ಸುಳ್ಳಿನ ಕಂತೆ ಎಂದು ಹೇಳಿದ್ದು
In reply to ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ by GURURAJ DESAI1…
ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ
ದಯವಿಟ್ಟು ಅವರ ಮಾತುಗಳನ್ನು ಉಲ್ಲೇಖಿಸಿ.ಆಧಾರ ಕೊಡಿ ನನಗೆ. ಸುಖಾಸುಮ್ಮನೆ ಹೇಳಬೇಡಿ.ವೇದಗಳಲ್ಲಿ ಬರುವ ಯಜ್ಞ ಯಾಗಗಳನ್ನು ಟೀಕಿಸಿದ್ದಾರೆ.ಆದರೆ ಭಗವದ್ಗೀತೆ ಟೀಕಿಸಿದ್ದಾರೆ ಅಂತ ನಿಮ್ಮಿಂದಲೆ ಕೇಳ್ತಾ ಇರೋದು
In reply to ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ by Sunil Kumar
ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ
http://bit.ly/1we0IuH
ಉ: ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ
ಜಾತಿ ಆಧಾರಿತ ಮೀಸಲಾತಿಗಳೂ ಸಂವಿಧಾನದ ಮೂಲ ಆಶಯಕ್ಕೆ ವಿರೋಧವಾಗಿದೆ. ಸಂವಿಧಾನ ವಿರೋಧಿಯಾದ ಹಲವಾರು ಸಂಗತಿಗಳು ಈಗಾಗಲೇ ಊರ್ಜಿತದಲ್ಲಿವೆ. ಭಗವದ್ಗೀತೆ ಓದಲು ಇಚ್ಛಿಸುವವರು ಓದಲಿ, ಅವಕಾಶ ಕೊಟ್ಟರೆ ತಪ್ಪಿಲ್ಲ. ಕಡ್ಡಾಯ ಮಾಡಬಾರದಷ್ಟೆ.