ಬುದ್ದ‌ ನಕ್ಕಾಗ‌ ನನ್ನೊರಿನಲ್ಲಿ ಸೊರ್ಯೋದಯ‌

ಬುದ್ದ‌ ನಕ್ಕಾಗ‌ ನನ್ನೊರಿನಲ್ಲಿ ಸೊರ್ಯೋದಯ‌

ಕವನ

ಬುದ್ದ‌ನೊಡನೆ ಒಮ್ಮೊಮ್ಮೆ

ಸಂವಾದಕ್ಕಿಳಿಯುತ್ತೇನೆ

ಮುಗುಳ್ನಕ್ಕು

ಮರೆಯಾಗುತ್ತಾನೆ

 

ಮಾರ್ಕ್ಸ್ ನೊಡನೆ

ವಾದಕ್ಕಿಳಿದಾಗಲೆಲ್ಲ‌

ತಂಪು ಹವೆಯಲ್ಲೊ

ನಿಗಿ ನಿಗಿ ಉರಿಯುವ‌ ಕೆಂಡವಾಗುತ್ತಾನೆ

 

ಗುಡಿಸಿಲಿನ‌ಲ್ಲಿ ಹೊಚ್ಚಿಟ್ಟ‌

ಬುಡ್ಡಿಯಲ್ಲಿ ಬುದ್ದ‌ ಬೆಳೆಕಾದರೆ

ಮಾರ್ಕ್ಸ್ ಬೆಂಕಿಯಾಗಿ

ನರಳುತ್ತಾನೆ, ಬುಡ್ಡಿಯ‌ ಬುಡದ‌

ನೆರಳಾಗಿ ಕಾಡುತ್ತಾನೆ

 

ಹಸಿದೊಟ್ಟೆಗೆ ಬುದ್ದ‌

ಅನ್ನವಾಗಿ ತಂಪನ್ನೆರೆದರೆ

ಹೊಡಲೊಳಗಣ‌ ಕಿಚ್ಚಾಗಿ ಮಾರ್ಕ್ಸ್

ಬುದ್ದಿಯ‌ ಬೆನ್ನೇರಿ ಬಾವನ‌ ಲೋಕಕ್ಕಿಳಿದು

ಏಚ್ಚರಿಸುತ್ತಾನೆ, ಮತ್ತೆ ಹಸಿವಾಗಿ ಕಾಡುತ್ತಾನೆ

 

ಮುಗ್ಧ‌ ಮೊಗುವೆನ‌ ಮೊಗದಲ್ಲಿ

ಬುದ್ದ‌ ನಗುವಾಗಿ ನಸುನಕ್ಕರೆ

 ಒಂದರೆಕ್ಷಣದಲ್ಲಿ ಮಾರ್ಕ್ಸ್

ಕೈ ಕಾಲು ನರ‌ ನಾಡಿಗಳಲ್ಲಿ

ರಕ್ತವಾಗಿ ಮಾಂಸಗಳಾಗಿ

ನರಳಾಡುತ್ತಾನೆ

 

ಬುದ್ದನ‌ ದಾರಿಯಲ್ಲಿ

ಬಸವ‌, ಅಂಬೇಡ್ಕರ್ , ಗಾಂಧಿ

ಸರ್ವಘ್ನ‌ರು

ಅಲ್ಲಲ್ಲಿ ಬಂದು ಹೋಗುತ್ತರೆ

 

ಮಾರ್ಕ್ಸ್ ನ‌ ಹಾದಿಯಲ್ಲಿ

ಭಗತ್, ನೇತಾಜಿ, ತ್ಯಾಗಿಗಳು ನೆಡೆದಾಡಿದರೊ

ಗರಿಕೆಗಳುಟ್ಟಿ, ಮುಳ್ಳ ಬೇಲಿಗಳೆದ್ದು

ದಾರಿ ಮಸುಕಾಗಿದೆ

ಬುದ್ದನ‌ ನಗುವಿನೆಡೆಗೆ ನೆಡೆಯಲು

ಮಾರ್ಕ್ಸ್ ನ‌ ಹಾದಿಯಲ್ಲದೆ

ಬೇರೆ ಇನ್ನೇನಿದೆ?

ಬುದ್ದ‌ ನಕ್ಕಾಗ‌ ನನ್ನೊರಿನಲಿ

ಸೊರ್ಯೋದಯ

 

 

 

Comments