ಕಥೆಯೂ ಹೌದು, ಘಟನೆಯೂ ಹೌದು

ಕಥೆಯೂ ಹೌದು, ಘಟನೆಯೂ ಹೌದು

ಕಥೆಯು ಹೌದು,ಘಟನೆಯೂ ಹೌದು

ಹುಡುಗನೊಬ್ಬ ಐಸ್ ಕ್ರೀಂ ತಿನ್ನಲೆಂದು ಪಾರ್ಲರ್ ಗೆ ಹೋಗ್ತಾನೆ.ಪಾರ್ಲರ್ ಒಳಗಿನ ಟೇಬಲ್ ಎದುರು ಕುಳಿತು ಅಲ್ಲಿದ್ದ ಪರಿಚಾರಕನನ್ನು ಕರೆಯುತ್ತಾನೆ.ದೊಡ್ಡ ಕಪ್ ಐಸ್ಕ್ರೀಂ ನ್ನು ತೋರಿಸಿ ಅದಕ್ಕೆಷ್ಟೆಂದು ಕೇಳುತ್ತಾನೆ.ಪರಿಚಾರಕ 15 ರೂಪಾಯಿ ಅನ್ನುತ್ತಾನೆ.ಹುಡುಗ ತನ್ನ ಜೇಬಲ್ಲಿದ್ದ ಚಿಲ್ಲರೆ ಹಣವನ್ನು ತೆಗೆದು ಎಣಿಸುತ್ತಾನೆ.ಅದರಲ್ಲಿ ಭರ್ತಿ 15 ರೂಪಾಯಿ ಇತ್ತು.ಹುಡುಗ ಪರಿಚಾರಕನಿಗೆ ದೊಡ್ಡ ಐಸ್ಕ್ರೀಂ ಕಪ್ ನ ಪಕ್ಕದಲ್ಲಿದ್ದ ಮಧ್ಯಮ ಗಾತ್ರದ ಕಪ್ ನ್ನು ತೋರಿಸಿ ಅದಕ್ಕೆಷ್ಟೆಂದು ಕೇಳುತ್ತಾನೆ.ಪರಿಚಾರಕ ಹುಡುಗನ ಕಡೆ ಅಸಹನೆಯ ನೋಟ ಬೀರಿ ಗಡುಸಾದ ಧ್ವನಿಯಲ್ಲಿ 13 ರೂಪಾಯಿ ಅಂದ.ಹುಡುಗ ಹಾಗಾದರೆ ಅದನ್ನೆ ಕೊಡಿ ಅನ್ನುತ್ತಾನೆ.ಹುಡುಗ ಐಸ್ಕ್ರೀಂ ತಿಂದು ಬಿಲ್ ಪಾವತಿ ಮಾಡಿ ಹೊರ ನಡೆಯುತ್ತಾನೆ.ಪರಿಚಾರಕ ಟೇಬಲ್ ಕ್ಲೀನ್ ಮಾಡಲೆಂದು ಹೋದಾಗ ಅವನಿಗೆ ಅಚ್ಚರಿ ಕಾದಿತ್ತು.ಕಪ್ ಅಡಿಯಲ್ಲಿ ಒಂದೊಂದು ರೂಪಾಯಿಯ ಎರಡು ನಾಣ್ಯಗಳಿದ್ದವು.ಹುಡುಗ ಪರಿಚಾರಕನಿಗೆ ಅದನ್ನು ಭಕ್ಷಿಸು ಅಂತ ಇಟ್ಟು ಹೋಗಿದ್ದ.

-@ಯೆಸ್ಕೆ

Comments