ಹುಡುಕಾಟದ ಹಾದಿಯಲ್ಲಿ ಆಟೋ ಚಾಲಕ

ಹುಡುಕಾಟದ ಹಾದಿಯಲ್ಲಿ ಆಟೋ ಚಾಲಕ

ಆಟೋ.... ಅಂತ ಕೈ ಚಪ್ಪಾಳೆ ತಟ್ಟಿ ಕರೆಯದೆ ಇರುವವರಂತು ಇಲ್ಲ ಬಿಡಿ. ಅದು ಬೆಂಗಳೂರಿನಂತ ನಗರದಲ್ಲಿ ಬಸ್ ಸ್ಟಾಂಡ್, ರೈಲ್ವೆ ಸ್ಟೇಷನ್ ಎಲ್ಲಿ ನೋಡಿದರು ಹೇರಾಳವಾದ ಆಟೋಗಳು ಕಾಣುತ್ತದೆ.

ಈ ಆಟೋ ಎಂಬ ತ್ರಿಚಕ್ರ ವಾಹನವನ್ನ ಮೊಟ್ಟ ಮೊದಲು 1947 ರಲ್ಲಿ, ಇಟಲಿ ದೇಶದ ಕೊರಡಿನೊ ಎಂಬಾತ ಸೃಷ್ಟಿಸಿದ. ಎರಡನೇ ಮಹಾಯುದ್ದದ ಸಮಯದಲ್ಲಿ ಪೆಟ್ರೋಲ್ ನ ಕೊರತೆ ಎಲ್ಲ ಐರೊಪ್ಯ ದೇಶಗಳಲ್ಲು ಶುರುವಾಗಿತ್ತು. ಆದ್ದರಿಂದ ಕಡಿಮೆ ಪೆಟ್ರೋಲ್ ಬಳಸುವ ಅಥವಾ ಗ್ಯಾಸ್ ನಿಂದ ಚಲಿಸುವ ಯಾವುದಾದರು ವಾಹನ ಬೇಕಿತ್ತು, ಆಗ ಸೃಷ್ಟಿಗೊಂಡಿದ್ದೆ ಈ ಆಟೋ. ಇದು ನಮ್ಮ ಏಷಿಯಾಗೆ ಬರಲು 10 ವರ್ಷಗಳ ಕಾಲವೇ ಬೇಕಾಯಿತು. 1957ರಲ್ಲಿ ಇದು ಜಪಾನ್ ನಲ್ಲಿ ಕಾಣಿಸಿಕೊಂಡಿತು. ಆ ಕಾಲದಲ್ಲಿ ನಮ್ಮ ದೇಶದಲ್ಲಿ ಸೈಕಲ್ ರಿಕ್ಷಗಳದ್ದೆ ಕಾರುಬಾರು. ನಂತರ ಬಾಂಗ್ಲಾದೇಶದಲ್ಲಿ ಆಟೋಗಳು ತುಂಬ ಪ್ರಸಿದ್ದಿಯಾಗಿ ಬೆಳೆಯ ತೊಡಗಿತು. ಕೊನೆಗೂ ಆಟೋ ಭಾರತದ ರಸ್ತೆಗಿಳಿಯಲು 1963ರಾಗಿತ್ತು.

ಕೆಲವು ದಿನಗಳು ಇದನ್ನ ಅಚ್ಚರಿಯಿಂದ ಕಂಡರೂ 1980ರ ವೇಳೆಗೆ ಇದು ತುಂಬ ಪ್ರಸಿದ್ದಿಯಾಗಿತ್ತು. ಈ ಆಟೋಗಳು ಅದು ಯಾವ ಎತ್ತರಕ್ಕೊಯಿತು ಎಂದರೆ ಭಾರತದಲ್ಲಿನ ಎಲ್ಲ ಭಾಷೆಯ ಟಾಪ್ ನಟರು ಆಟೋ ಚಾಲಕನ ವೇಷಕ್ಕೆ ಇಳಿದರು. ಇಂದಿಗೂ ಆ ಪಾತ್ರದಲ್ಲೆ ಗುರುತಿಸಿಕೊಳ್ಳುತ್ತಾರೆ ಎಂದರೆ ಅದರ ಕ್ರೇಜ್ ಅದೇಷ್ಟಿತ್ತೆಂದು ನೀವೆ ಊಹಿಸಿ.

ಈ ಆಟೋ ನಡೆದಾಡುವ ಒಂದು ಪ್ರಪಂಚ, ದಿನ ಬೆಳಗ್ಗೆ ಎದ್ದು ಆಟೋದೊಂದಿಗೆ ಹೊರಡುವ ಚಾಲಕನ ಜೀವನ ನಮ್ಮೆಲರಿಗಿಂತ ಕುತೂಹಲ, ಆಕರ್ಷಕ ಮತ್ತು ವಿಭಿನ್ನ ಆದ್ದರಿಂದಲೆ ಇವರ ಬಗ್ಗೆ ಬರೆಯಲು ಕೂತೆ.

ಪ್ರತಿ ದಿನ ಸಾವಿರಾರು ಮಂದಿಯನ್ನ, ನೊರಾರು ಗಿರಾಕಿಗಳನ್ನ ಬೇಕಾದ ಸ್ಥಳಕ್ಕೆ ಕೊಂಡೊಯ್ಯುವ ಇವರು ನಾನಾ ತರದ ಜನರನ್ನ ಬೇಟಿಯಾಗುತ್ತಾರೆ. ಖುಷಿಯಿಂದ ಹೊಸ ಹುಡುಪು ತೊಟ್ಟು ಸಮಾರಂಭಕ್ಕೆ ಹೊರಟಿರುವ ಕುಟುಂಬ, ಪ್ರೀಯೆಯೊಂದಿಗೆ ನಾಚಿಕೆಯಿಂದ ಸಿನಿಮಾಕೆ ಹೊರಟಿರುವ ಯುವಕ, ಯಾವುದೊ ಗಾಬರಿಯಿಂದ ತರಾತುರಿಯಲ್ಲಿರುವ ವೃದ್ಧೆ...ಹೀಗೆ ಒಂದೆ ದಿನದಲ್ಲಿ ಎಲ್ಲ ರೀತಿಯ ಬದುಕನ್ನು ಈ ಆಟೋ ಚಾಲಕ ನೋಡುತ್ತ, ಅವರ ಖುಷಿಯಲ್ಲಿ ಪಾಲ್ಗೊಳುತ್ತ, ಅವರ ದುಃಖಕ್ಕೆ ಮೌನಿಯಾಗುತ್ತ ತನ್ನದೊಂದು ಬದುಕಿದೆಯೆಂದು ಮರೆತೆ ಹೋಗುತ್ತಾನೆ.

ಪ್ರತಿಯೊಂದಕ್ಕೂ ಸ್ಪಂದಿಸುವ ಮನೋಭಾವ ಈ ಆಟೋ ಚಾಲಕರದ್ದು. ಹಬ್ಬ ಬಂದರೆ ಹಸಿರು ತೊರಣ, ರಾಜ್ಯೋತ್ಸವಕ್ಕೆ ನಾಡ ಬಾವುಟ, ಪ್ರತಿಭಟನೆಗೆ, ಬಂದ್ ಗಳಿಗೆ ಹೀಗೆ ತಮ್ಮನ್ನ ಸಮಾಜಕ್ಕೆ ತೊಡಗಿಸಿಕೊಳ್ಳುತ್ತಾರೆ. ಇವರ ಇನ್ನೊಂದು ಇಂಟರೆಸ್ಟಿಂಗ್ ವಿಷಯವೆಂದರೆ ಇವರು ಗಮ್ಮ ಆಟೋಗಳ ಮೇಲೆ ಬರೆದುಕೊಳ್ಳುವ ಸಾಲುಗಳು, ಕೆಲವೊಮ್ಮೆ ಜೀವನವನ್ನ ಸಮರ್ಥವಾಗಿ ಅರ್ಥೈಸಿಕೊಂಡ ಡಿ.ವಿ.ಜಿ ಯಂತೆ ಭಾಸವಾಗುತ್ತದೆ.

ಇಷ್ಟೆಲ್ಲ ಅಂದ್ರು ಇವರಿಗೂ ಅಂತ ಸ್ವಂತ ಜೀವನ ಇರುತ್ತೆ ಅಲ್ಲವೆ? ಕೆಲವೊಂದು ದಿನ ಗಿರಾಕಿಗಳನ್ನ ಅಲ್ಲಿ ಇಲ್ಲಿ ಕೊಂಡೊಯ್ಯ್ದು ತುಂಬ ಬ್ಯುಸಿ ಅನ್ನಿಸುವ ಇವರು, ಕೆಲವೊಂದು ದಿನ ಗಿರಾಕಿಗಳೆ ಇಲ್ಲದೆ ಪೆಚ್ಚು ಮುಖ ಮಾಡಿ ನ್ಯೂಸ್ ಪೇಪರ್ ಒದುತ್ತ ಕೊತಿರುತ್ತಾರೆ.
ನಮ್ಮಂತಯೇ ಇವರಿಗೂ ಗೊಲ್ ಅನ್ನೊದು ಇರುತ್ತೆ, ಪ್ರತಿಯೊಬ್ಬ ಆಟೋ ಚಾಲಕನಿಗೂ ತಾನೊಂದು ದಿನ ಕಾರು, ಲಾರಿ ಅಥವಾ ಬಸ್ ಚಾಲಕನಾಗುವ ಆಶೆಯ ಇದ್ದೆ ಇರುತ್ತೆ. ಅದಕ್ಕಾಗಿ ಕೆಲವೊಮ್ಮೆ ರಾತ್ರಿ, ಬೆಳಗ್ಗೆ ನೋಡದೆ ಬಸ್ ಸ್ಟಾಂಡ್ ಗಳಲ್ಲಿ ಗಿರಾಕಿಗಾಗಿ ಹುಡುಕುತ್ತ ಕೂರುತ್ತಾರೆ.
ಮಕ್ಕಳನ್ನು ಓದಿಸುವ ಆಸೆ, ಬೆಳೆಯುತ್ತಿರುವ ವಾಹನಗಳ, ಮೆಟ್ರೊ ರೈಲುಗಳಿಂದ ಗಿರಾಕಿಗಳು ಸಿಗುತ್ತಿಲ್ಲವೆಂಬ ಚಿಂತೆ, ದಿನೆ ದಿನೆ ಇದೇ ಪೊಲ್ಯೂಶನ್ ನಲ್ಲಿ ಹದಗೆಟ್ಟಿರುವ ಆರೋಗ್ಯ, ಇಷ್ಟೆಲ್ಲ ಇದ್ದರೂ ಅಪರಿಚಿತರೊಂದಿಗೆ ಕೆಲವೇ ಕ್ಷಣಗಳಲ್ಲಿ ಪರಿಚಿತರಾಗಿ ಹೊಂದಿಕೊಳ್ಳುವ ಇವರ ಮನೋಭಾವ ನನಗೆ ನಿಜವಾಗಿಯು ನಿಗೂಢವೆನ್ನಿಸುತ್ತದೆ.

ಪ್ರತಿಯೊಂದು ದಾರಿಯು ತಿಳಿದು ಸಂದಿ ಬಂದಿಗಳಿಂದ ಗಿರಾಕಿಗಳನ್ನ ಕ್ಷೇಮವಾಗಿ ಸ್ಠಳ ತಲುಪಿಸುವ ಈ ಚಾಲಕ. ತನ್ನ ಜೀವನದ ದಾರಿಯನ್ನು ಹುಡುಕುತ್ತ ಹೊರಡುತ್ತಾನೆ, ಈ ಹುಡುಕಾಟದ ಹಾದಿಯಲ್ಲಿ ಆಟೋ ಚಾಲಕ...

- ನಿಮ್ಮ ಗೆಳೆಯ ಮುರಳಿ

Comments