ಬಸ್ ನಿಲ್ದಾಣ
ಬಸ್ ನಿಲ್ದಾಣ
ನಾನು ಹೊರ ಹೊರಟೆ ನನ್ನ ಕಾರ್ಯಕೆ
ಹೆಜ್ಜೆ ಹಾಕ ತೊಡಗಿದೆ ಬಸ್ ನಿಲ್ದಾಣಕೆ
ತಲುಪಿದೆ ಮನೆ ಹತ್ತಿರದ ಬಸ್ ನಿಲ್ದಾಣವ
ಅಲ್ಲಿ ಕಂಡೆ ಬಸ್ಸಿಗೆ ಕಾದು ಸುಸ್ತಾದ ಮುಖವ
ನಾನು ಅರಿತೆ ಬಸ್ಸು ಬಾರದೆ ಆಗಿದೆ ಹೊತ್ತು
ನನಗೂ ಬರಬಹುದೇನೋ ಕಾಯುವ ಆಪತ್ತು
ಬಸ್ಸುಗಳು ಬಂದವು ಒಂದರ ಹಿಂದೆ ಒಂದು
ಬೇರೆ ಊರಿಗೆ ಹೊರಟ್ಟಿದ್ದವು ಪ್ರತಿಯೊಂದು
ನಮ್ಮ ಊರಿನದೇಕೆ ಬರುತ್ತಿಲ್ಲವೆಂಬ ಚಿಂತೆ
ಪಕ್ಕದಲ್ಲಿದ್ದವನ ತಲೆಗೂ ಅದೇ ಪ್ರಶ್ನೆಯಂತೆ
ಕಾದು ಕಾದು ನಮ್ಮ ಬಸ್ಸು ಬಂತು ಕೊನೆಗೂ
ಹತ್ತಿದರೆ ಆಸನದ ಅಲಭ್ಯತೆ ಕಾಡಿತು ನಮಗೂ
ಬಸ್ಸಿನಲ್ಲಿ ಶುರುವಾಯಿತು ಸ್ಪರ್ಧೆ ಆಸನಕೆ
ಮೈಯೆಲ್ಲಾ ಕಣ್ಣಾಯಿತು ಒಳಗಿನ ಸ್ಪರ್ಧೆಗೆ
ಅರ್ಧ ದಾರಿ ಸವೆಸಿದೆ ನಿಂತಲ್ಲೇ ಕುಲುಕುತ
ಕೊನೆಗೂ ಸಿಕ್ಕತು ಆಸನ ಸ್ಪರ್ಧೆಯ ಗೆಲ್ಲುತ
ಕೊನೆಗೂ ಮುಗಿಸಿದೆ ಪ್ರಯಾಸದ ಪ್ರಯಾಣ
ಇಳಿಯುತ್ತಲೇ ಅನುಭವಿಸಿದೆ ನೆಮ್ಮದಿಯ ಕ್ಷಣ
- ತೇಜಸ್ವಿ.ಎ.ಸಿ
Rating
Comments
ಉ: ಬಸ್ ನಿಲ್ದಾಣ
:)
In reply to ಉ: ಬಸ್ ನಿಲ್ದಾಣ by kavinagaraj
ಉ: ಬಸ್ ನಿಲ್ದಾಣ
ಇದು ಎಲ್ಲ ಬಸ್ ಪ್ರಯಾಣಿಕರ ಅನುಭವ .. :-)
ಉ: ಬಸ್ ನಿಲ್ದಾಣ
ನಿಮ್ಮ ಮಾತು ನಿಜ, ನಾವು ಯಾವ ಮಾರ್ಗದ ಬಸ್ಸಿಗೆ ಕಾಯುತ್ತೇವೋ ಆ ಮಾರ್ಗದ ಬಸ್ಸು ಆ ಸಮಯಕ್ಕೆ ಬರುವುದೇ ಇಲ್ಲ, ಬಸ್ಸಿಗಾಗಿ ಒದ್ದಾಡುವವರ ಕಷ್ಟ ಅವರಿಗೇ ಗೊತ್ತು. :):):)
ಧನ್ಯವಾದಗಳು
In reply to ಉ: ಬಸ್ ನಿಲ್ದಾಣ by ravindra n angadi
ಉ: ಬಸ್ ನಿಲ್ದಾಣ
ಹೌದು ರವೀಂದ್ರ ರೇ, ಎಲ್ಲರಿಗು ಆಗಿರುವ ಅನುಭವ ಇದು.
ಉ: ಬಸ್ ನಿಲ್ದಾಣ
>>>ನಮ್ಮ ಊರಿನದೇಕೆ ಬರುತ್ತಿಲ್ಲವೆಂಬ ಚಿಂತೆ
- ಮನೆ ಹತ್ತಿರದ ಬಸ್ ನಿಲ್ದಾಣವ ತಲುಪಿ, ನಿಮ್ಮ ಊರಿಗೇ ಹೋಗುತ್ತೀರಾ.. ಬೇರೆ ಊರಿಗಾ.. :)
ಕವನ ಚೆನ್ನಾಗಿದೆ.
In reply to ಉ: ಬಸ್ ನಿಲ್ದಾಣ by ಗಣೇಶ
ಉ: ಬಸ್ ನಿಲ್ದಾಣ
ಇಲ್ಲಿ ಬೇರೆ ಊರಿಗೆ, ಆದರೆ ನಾನು ಹೊರಡ ಬೇಕಿರುವ ಊರಿಗೆ ನಾನು ನಮ್ಮೂರು ಎಂದು ಬರೆದಿದ್ದೇನೆ. ಧನ್ಯವಾದಗಳು.